Kotee Movie Review: ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾ ಹೇಗಿದೆ? ಪಕ್ಕಾ ಪೈಸಾ ವಸೂಲ್ ಅಂದ್ರು ವೀಕ್ಷಕರು, ಇಲ್ಲಿದೆ ಪಬ್ಲಿಕ್ ರಿವ್ಯೂ
Kotee Kannada Movie Public Review: ಡಾಲಿ ಧನಂಜಯ್ ನಟನೆಯ, ಪರಮ್ ನಿರ್ದೇಶನದ ಕೋಟಿ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ. ಡಾಲಿ ಧನಂಜಯ್, ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು ಮುಂತಾದವರು ನಟಿಸಿದ ಈ ಸಿನಿಮಾ ಪಕ್ಕಾ ಪೈಸಾ ವಸೂಲ್ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
Kotee Movie Review: ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಪ್ರೀಮಿಯರ್ ಶೋಗಳಲ್ಲಿ ಈ ಸಿನಿಮಾವನ್ನು ಸಾಕಷ್ಟು ಜನರು ನೋಡಿದ್ದಾರೆ. ಕೋಟಿ ಸಿನಿಮಾ ಕಣ್ತುಂಬಿಕೊಳ್ಳಲು ಡಾಲಿ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಪ್ರೇಮಿಗಳು ಚಿತ್ರಮಂದಿರಗಳತ್ತ ಮುಖ ಮಾಡಿದ್ದಾರೆ. ಪರಮ್ ನಿರ್ದೇಶನದ ಈ ಸಿನಿಮಾ ಹೇಗಿದೆ? ನೋಡಬಹುದೇ? ಪೈಸಾ ವಸೂಲ್ ಸಿನಿಮಾವೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವಂತಹ ಟ್ವಿಟ್ಟರ್ ರಿವ್ಯೂ, ಪಬ್ಲಿಕ್ ರಿವ್ಯೂ ಇಲ್ಲಿದೆ. ಕೋಟಿ ಸಿನಿಮಾದ ಟಿಕೆಟ್ ಬುಕ್ಕಿಂಗ್‌ಗೆ ಜೂನ್ 11ರಿಂದ ಅವಕಾಶ ನೀಡಲಾಗಿತ್ತು. ಕಲರ್ಸ್ ಕನ್ನಡ ವಾಹಿನಿ ತಂಡವನ್ನು ದಶಕಗಳ ಕಾಲ ಮುನ್ನಡೆಸಿದಿ ಪರಮ್ (ಪರಮೇಶ್ವರ್ ಗುಂಡ್ಕಲ್) ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದರಿಂದ ಈ ಸಿನಿಮಾದ ಕಂಟೆಂಟ್ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಪ್ರಚಾರವೂ ಜೋರಾಗಿದೆ.
ಕೋಟಿ ಸಿನಿಮಾದ ಕುರಿತು
ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದಲ್ಲಿ ನಾಯಕಿಯಾಗಿ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಖಳನಾಯಕನಾಗಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಪ್ರೇಕ್ಷಕರ ಗಮನ ಸೆಳೆದ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ನಟಿಸಿದ್ದಾರೆ. ಕೋಟಿ ಸಿನಿಮಾದಲ್ಲಿ ಐದು ಹಾಡುಗಳಿವೆ. ಈ ಹಾಡುಗಳಿಗೆ ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಮಾಡಿದ್ದಾರೆ. ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿ ಕೋಟಿಯ ಸಂಕಲನಕಾರರು. ಖ್ಯಾತ ಟೆಲಿವಿಷನ್ ಛಾಯಾಗ್ರಾಹಕ ಅರುಣ್ ಈ ಸಿನಿಮಾದ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದಾರೆ.
ಕೋಟಿ ಸಿನಿಮಾದ ವಿಮರ್ಶೆ (ಪಬ್ಲಿಕ್ ರಿವ್ಯೂ)
ಪಕ್ಕಾ ಪೈಸಾ ವಸೂಲ್ ಸಿನಿಮಾ
"ಕೋಟಿ ಸಿನಿಮಾ ನೋಡಿದೆ. ಒಂದೊಳ್ಳೆ ಕನ್ನಡ ಸಿನಿಮಾ. ಧನಂಜಯ್ ಅವರು ಬಡವ ರಾಸ್ಕಲ್ ಸಿನಿಮಾದಲ್ಲಿ ಹೇಗೆ ಒಬ್ಬ ಪಕ್ಕಾ ಮಿಡಲ್ ಕ್ಲಾಸ್ ಹುಡುಗನಾಗಿ ಕಾಣಿಸ್ತಾರೋ, ಅದೇ ರೀತಿ ಈ ಚಿತ್ರದಲ್ಲೂ ಕಾಣಿಸಿದ್ದಾರೆ. ಒಂದೊಳ್ಳೆ ಸಂದೇಶ ಇರುವ ಚಿತ್ರ. ಪಕ್ಕ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಇರುವ ಚಿತ್ರ. ಯಾರು ಯಾರು ಒಳ್ಳೆ ಕಂಟೆಂಟ್ ಇರುವ ಸಿನಿಮಾ ಬರ್ಲಿ ಅಂತ ಕೇಳ್ತಿದ್ರಲ್ಲ, ದಯವಿಟ್ಟು ಚಿತ್ರಮಂದಿರಕ್ಕೆ ಕುಟುಂಬ ಸಮೇತರಾಗಿ ಹೋಗಿ ನೋಡಿ. ಪಕ್ಕಾ ಪೈಸಾ ವಸೂಲ್ ಸಿನಿಮಾ" ಎಂದು ಲಿಖಿತ್ ಎಂಬವರು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಅತಿಥಿಪಾತ್ರದಲ್ಲಿ ದುನಿಯಾ ವಿಜಯ್
ಕೋಟಿ ಚಂದದ ಸಿನಿಮಾ. ಈ ಸಿನಿಮಾದ ಕೊರತೆಗಳ ಕುರಿತು ಮಾತನಾಡುವುದಿಲ್ಲ. ಆದರೆ, ದುನಿಯಾ ವಿಜಯ್ ಅವರ ಅತಿಥಿ ಪಾತ್ರ ಅದ್ಭುತ. ದುನಿಯಾ ವಿಜಯ್ ಅವರ ಸಿನಿಮಾಕ್ಕಾಗಿ ಕಾಯುತ್ತಿದ್ದೇನೆ ಎಂದು ವಿನಯ್ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಪಬ್ಲಿಕ್ ವಿಮರ್ಶೆ ಅಪ್‌ಡೇಟ್ ಆಗುತ್ತಿದೆ
ಕೋಟಿ ಸಿನಿಮಾ ಥಿಯೇಟರ್ ಲಿಸ್ಟ್
ಕೋಟಿ ಸಿನಿಮಾವನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ಈ ಮುಂದಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು.
ಬುಕ್‌ಮೈ ಶೋದಲ್ಲಿ ಬುಕ್ಕಿಂಗ್‌ನಲ್ಲಿ ಮೇಲುಗೈ
ಕೋಟಿ ಸಿನಿಮಾದ ಬುಕ್ಕಿಂಗ್ ಬುಕ್‌ಮೈ ಶೋನಲ್ಲಿ ಮೇಲುಗೈ ಸಾಧಿಸಿದೆ. ಮಹಾರಾಜ, ಚಂದು ಚಾಂಪಿಯನ್, ಇನ್‌ಸೈಡ್ ಔಟ್2, ಲವ್‌ಲೀ ಸಿನಿಮಾಗಳ ಥಿಯೇಟರ್ ಸೀಟ್ ಬುಕ್ಕಿಂಗ್ ಹೋಲಿಸಿದರೆ ಕೋಟಿ ಸಿನಿಮಾದ ಬಾಕ್ಸ್ ಆಫೀಸ್ ಟಿಕೆಟ್ ಬುಕ್ಕಿಂಗ್ ಈ ಮುಂದಿನಂತೆ ಇದೆ.