ಜಿಮ್‌ ಟ್ರೈನರ್‌ ಮೇಲಿನ ಹಲ್ಲೆ ಪ್ರಕರಣ, ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ; ಆಕ್ಷನ್‌ ಪ್ರಿನ್ಸ್‌ ಜೊತೆಗಿನ ಆಪ್ತತೆಯೇ ಹಲ್ಲೆಗೆ ಕಾರಣ?-sandalwood news dhurva sarja manager arrested in case of assault on a gym trainer kannada film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜಿಮ್‌ ಟ್ರೈನರ್‌ ಮೇಲಿನ ಹಲ್ಲೆ ಪ್ರಕರಣ, ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ; ಆಕ್ಷನ್‌ ಪ್ರಿನ್ಸ್‌ ಜೊತೆಗಿನ ಆಪ್ತತೆಯೇ ಹಲ್ಲೆಗೆ ಕಾರಣ?

ಜಿಮ್‌ ಟ್ರೈನರ್‌ ಮೇಲಿನ ಹಲ್ಲೆ ಪ್ರಕರಣ, ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ; ಆಕ್ಷನ್‌ ಪ್ರಿನ್ಸ್‌ ಜೊತೆಗಿನ ಆಪ್ತತೆಯೇ ಹಲ್ಲೆಗೆ ಕಾರಣ?

ಜಿಮ್‌ ಟ್ರೈನರ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಮ್ಯಾನೇಜರ್‌ ಅಶ್ವಿನ್‌ ಎಂಬಾತನನ್ನು ಬನಶಂಕರಿ ಪೋಲೀಸರು ಬಂಧಿಸಿದ್ದಾರೆ. ಧ್ರುವಗೆ ಪ್ರಶಾಂತ್‌ ಪೂಜಾರಿ ಜಿಮ್‌ನಲ್ಲಿ ತರಬೇತಿ ನೀಡುತ್ತಿದ್ದು ಇವರ ನಡುವಿನ ಆಪ್ತತೆಯೇ ಈ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ.

ಜಿಮ್‌ ಟ್ರೈನರ್‌ ಮೇಲಿನ ಹಲ್ಲೆ ಪ್ರಕರಣ, ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ; ಆಕ್ಷನ್‌ ಪ್ರಿನ್ಸ್‌ ಜೊತೆಗಿನ ಆಪ್ತತೆಯೇ ಹಲ್ಲೆಗೆ ಕಾರಣ?
ಜಿಮ್‌ ಟ್ರೈನರ್‌ ಮೇಲಿನ ಹಲ್ಲೆ ಪ್ರಕರಣ, ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ; ಆಕ್ಷನ್‌ ಪ್ರಿನ್ಸ್‌ ಜೊತೆಗಿನ ಆಪ್ತತೆಯೇ ಹಲ್ಲೆಗೆ ಕಾರಣ?

ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್‌ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ದರ್ಶನ್‌ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಇತೀಚೆಗೆ ಪೊಲೀಸರು ಚಾರ್ಜ್‌ಶೀಟ್‌ ಕೂಡಾ ಸಲ್ಲಿಸಿದ್ದಾರೆ. ಇದರ ನಡುವೆ ಧ್ರುವ ಸರ್ಜಾ ಮ್ಯಾನೇಜರ್‌ ಬಂಧನವಾಗಿದ್ದಾರೆ.

ಅಶ್ವಿನ್‌, ನಾಗೇಂದ್ರ ರೂಪಿಸಿದ್ದ ಪ್ಲ್ಯಾನ್‌

ಜಿಮ್‌ ಟ್ರೈನರ್‌ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಧ್ರುವ ಸರ್ಜಾ ಮ್ಯಾನೇಜರ್‌ ಅಶ್ವಿನ್‌ನನ್ನು ಬನಶಂಕರಿ ಪೊಲೀಸರು ಬಂಧಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಶ್ವಿನ್‌ ಕೆಲವು ದಿನಗಳ ಕಾಲ ವಿಚಾರಣೆ ಕೂಡಾ ಎದುರಿಸಿದ್ದರು ಎನ್ನಲಾಗಿದೆ. ಕಳೆದ ಮೇ ನಲ್ಲಿ ಜಿಮ್‌ ಟ್ರೈನರ್‌ ಪ್ರಶಾಂತ್‌ ಪೂಜಾರಿ ಎಂಬುವರ ಮೇಲೆ ಹಲ್ಲೆ ನಡೆದಿತ್ತು. ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ಸುಭಾಷ್‌ ಹಾಗೂ ಆತನ ಸಹಚರ ಹರ್ಷ ಎನ್ನುವವರು ಪ್ರಶಾಂತ್‌ ಮೇಲೆ ಹಲ್ಲೆ ನಡೆಸಿದ್ದರು. ಇವರಿಗೆ ಧ್ರುವ ಸರ್ಜಾ ಮ್ಯಾನೇಜರ್‌ ಅಶ್ವಿನ್‌ ಕೂಡಾ ಸಹಾಯ ಮಾಡಿದ್ದರು ಎಂಬ ಕಾರಣಕ್ಕೆ ಎಲ್ಲರ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್‌ ಹಾಗೂ ಇನ್ನಿತರರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಪ್ರಶಾಂತ್‌ ಪೂಜಾರಿ ಧ್ರುವಾ ಆಪ್ತತೆಯೇ ಹಲ್ಲೆಗೆ ಕಾರಣ?

ಧ್ರುವ ಸರ್ಜಾ ಹಾಗೂ ಪ್ರಶಾಂತ್‌ ಪೂಜಾರಿ ಬಹಳ ಆಪ್ತರು. ಜಿಮ್‌ನಲ್ಲಿ ಧ್ರುವ ಸರ್ಜಾಗೆ ಪ್ರಶಾಂತ್‌ ಪೂಜಾರಿ ಟ್ರೈನಿಂಗ್‌ ಕೊಡುತ್ತಿದ್ದರು. ಆದರೆ ಇವರಿಬ್ಬರೂ ಬಹಳ ಆತ್ಮೀಯರಾಗಿರುವುದು ನಾಗೇಂದ್ರ, ಅಶ್ವಿನ್‌ ಇಬ್ಬರಿಗೂ ಸಹಿಸಿಕೊಳ್ಳಲು ಆಗಲಿಲ್ಲ. ಇದೇ ಕಾರಣಕ್ಕೆ ಇಬ್ಬರೂ ಸೇರಿ ಪ್ರಶಾಂತ್‌ ಮೇಲೆ ಹಲ್ಲೆ ಮಾಡಲು ನಿರ್ಧರಿಸಿದ್ದರು. ತಾವೇ ಹಲ್ಲೆ ಮಾಡಿದರೆ ಸಿಕ್ಕಿಬೀಳಬಹುದು ಎಂಬ ಕಾರಣಕ್ಕೆ ಹಣ ನೀಡಿ ಬೇರೆಯವರು ಮುಖಾಂತರ ಹಲ್ಲೆ ಮಾಡಿಸಿದ್ದರು. ಪೊಲೀಸ್‌ ತನಿಖೆಯಲ್ಲಿ ಈ ಹಲ್ಲೆ ಹಿಂದೆ ನಾಗೇಂದ್ರ ಹಾಗೂ ಅಶ್ವಿನ್‌ ಪಾತ್ರವಿದೆ ಎಂದು ತಿಳಿದು ಅವರನ್ನೂ ಅರೆಸ್ಟ್‌ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಧ್ರುವ ಸರ್ಜಾ ಏನು ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕು.

3 ಸಿನಿಮಾಗಳಲ್ಲಿ ಧ್ರುವ ಸರ್ಜಾ ಬ್ಯುಸಿ

ಧ್ರುವ ಸರ್ಜಾ ಸಿನಿಮಾಗಳ ವಿಚಾರಕ್ಕೆ ಬರುವುದಾರೆ ಸದ್ಯಕ್ಕೆ ಅವರು ಮೂರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮಾರ್ಟಿನ್‌ ಸಿನಿಮಾ ಚಿತ್ರೀಕರಣ ಮುಗಿದಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವಷ್ಟೇ ಬಾಕಿ ಉಳಿದಿದೆ. ಚಿತ್ರವನ್ನು ಎಪಿ ಅರ್ಜುನ್‌ ನಿರ್ದೇಶಿಸಿದ್ದಾರೆ. ಇದರ ಜೊತೆಗೆ ಪ್ರೇಮ್‌ ನಿರ್ದೇಶನದ ಕೆಡಿ-ದಿ ಡೆವಿಲ್‌ ಸಿನಿಮಾದಲ್ಲಿ ಧ್ರುವ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕೆವಿನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಪ್ರೇಮ್‌ ನಿರ್ದೇಶಿಸುತ್ತಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ರೀಷ್ಮಾ ನಾಣಯ್ಯ, ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ, ರವಿಚಂದ್ರನ್‌, ರಮೇಶ್‌ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಮತೊಂದು ಹೊಸ ಚಿತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ.

 

mysore-dasara_Entry_Point