ರಿಲೀಸ್‌ಗೂ ಮುನ್ನ ಕೋಟಿಗಟ್ಟಲೆ ಲಾಭ ಮಾಡಿ ದಾಖಲೆ ಬರೆದ ದೇವರ; ಆರ್‌ಆರ್‌ಆರ್‌, ಕೆಜಿಎಫ್‌ ಕಲೆಕ್ಷನ್‌ ಮೀರಿಸುತ್ತಾ ಜ್ಯೂ ಎನ್‌ಟಿಆರ್‌ ಸಿನಿಮಾ?-tollywood news jr ntr starring devara movie set new record by 20k pre booking tickets in usa telugu film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಿಲೀಸ್‌ಗೂ ಮುನ್ನ ಕೋಟಿಗಟ್ಟಲೆ ಲಾಭ ಮಾಡಿ ದಾಖಲೆ ಬರೆದ ದೇವರ; ಆರ್‌ಆರ್‌ಆರ್‌, ಕೆಜಿಎಫ್‌ ಕಲೆಕ್ಷನ್‌ ಮೀರಿಸುತ್ತಾ ಜ್ಯೂ ಎನ್‌ಟಿಆರ್‌ ಸಿನಿಮಾ?

ರಿಲೀಸ್‌ಗೂ ಮುನ್ನ ಕೋಟಿಗಟ್ಟಲೆ ಲಾಭ ಮಾಡಿ ದಾಖಲೆ ಬರೆದ ದೇವರ; ಆರ್‌ಆರ್‌ಆರ್‌, ಕೆಜಿಎಫ್‌ ಕಲೆಕ್ಷನ್‌ ಮೀರಿಸುತ್ತಾ ಜ್ಯೂ ಎನ್‌ಟಿಆರ್‌ ಸಿನಿಮಾ?

ಜ್ಯೂ ಎನ್‌ಟಿಆರ್‌ ಜಾನ್ವಿ ಕಪೂರ್‌ ಅಭಿನಯದ ದೇವರ ಸಿನಿಮಾ ಇದೇ ತಿಂಗಳ 27 ರಂದು ತೆರೆ ಕಾಣುತ್ತಿದೆ. ಟ್ರೇಲರ್‌ ಸೆಪ್ಟೆಂಬರ್‌ 10 ರಂದು ಬಿಡುಗಡೆಯಾಗುತ್ತಿದೆ. ಆದರೆ ಸಿನಿಮಾ ಈಗಾಗಲೇ ಪ್ರೀ ಬುಕಿಂಗ್‌ ಆರಂಭವಾಗಿದ್ದು ಯುಎಸ್‌ನಲ್ಲಿ 20 ಸಾವಿರ ಟಿಕೆಟ್‌ಗಳು ಮಾರಾಟವಾಗಿದೆ.

ರಿಲೀಸ್‌ಗೂ ಮುನ್ನ ಕೋಟಿಗಟ್ಟಲೆ ಲಾಭ ಮಾಡಿ ದಾಖಲೆ ಬರೆದ ದೇವರ; ಆರ್‌ಆರ್‌ಆರ್‌, ಕೆಜಿಎಫ್‌ ಕಲೆಕ್ಷನ್‌ ಮೀರಿಸುತ್ತಾ ಜ್ಯೂ ಎನ್‌ಟಿಆರ್‌ ಸಿನಿಮಾ?
ರಿಲೀಸ್‌ಗೂ ಮುನ್ನ ಕೋಟಿಗಟ್ಟಲೆ ಲಾಭ ಮಾಡಿ ದಾಖಲೆ ಬರೆದ ದೇವರ; ಆರ್‌ಆರ್‌ಆರ್‌, ಕೆಜಿಎಫ್‌ ಕಲೆಕ್ಷನ್‌ ಮೀರಿಸುತ್ತಾ ಜ್ಯೂ ಎನ್‌ಟಿಆರ್‌ ಸಿನಿಮಾ?

ಆರ್‌ಆರ್‌ಆರ್‌ ಸಿನಿಮಾ ನಂತರ ಎಲ್ಲೆಲ್ಲೂ ಜ್ಯೂನಿಯರ್‌ ಎನ್‌ಟಿಆರ್‌ ಕ್ರೇಜ್‌ ಹೆಚ್ಚಾಗಿದೆ. ಸದ್ಯಕ್ಕೆ ಟಾಲಿವುಡ್‌ನಲ್ಲಿ ದೇವರ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಇಂದು ಸಂಜೆ ( ಸೆ.10) ಚಿತ್ರದ ಟ್ರೇಲರ್‌ ಬಿಡುಗಡೆ ಆಗುತ್ತಿದೆ. ಆದರೆ ಸಿನಿಮಾ ಬಿಡುಗಡೆ ಮುನ್ನವೇ ರೆಕಾರ್ಡ್‌ ಬರೆದಿದೆ. ಇದೇ ತಿಂಗಳ 27 ರಂದು ಸಿನಿಮಾ ರಿಲೀಸ್‌ ಆಗುತ್ತಿದೆ.

ಮೊದಲ ಬಾರಿಗೆ ತೆಲುಗಿಗೆ ಎಂಟ್ರಿ ಕೊಟ್ಟ ಜಾನ್ವಿ ಕಪೂರ್

ದೇವರ ಚಿತ್ರದ ಮೂಲಕ ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸೈಫ್‌ ಅಲಿ ಖಾನ್‌, ಈ ಚಿತ್ರದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎನ್‌ಟಿಆರ್‌ ಹಾಗೂ ಸೈಫ್‌ ಅಲಿ ಖಾನ್‌ ಕಾಂಬಿನೇಶನ್‌ ದೃಶ್ಯಗಳು ಈ ಚಿತ್ರದ ಹೈಲೈಟ್ಸ್‌ ಎನ್ನಲಾಗುತ್ತಿದೆ. ಇದುವರೆಗೂ ದೇವರ ಚಿತ್ರತಂಡ ಹೊರ ತಂದಿರುವ ಹಾಡುಗಳು, ಪೋಸ್ಟರ್‌ಗಳು ಸಿನಿಮಾ ಕ್ರೇಜ್‌ ಹೆಚ್ಚಿಸಿದೆ. ಚಿತ್ರತಂಡ ಪ್ರಚಾರದ ಕೆಲಸದಲ್ಲಿ ಬ್ಯುಸಿ ಇದೆ. ಸದ್ಯಕ್ಕೆ ಚಿತ್ರತಂಡ ಮುಂಬೈನಲ್ಲಿ ಬೀಡುಬಿಟ್ಟಿದೆ. ಈಗಾಗಲೇ ಚಿತ್ರದ ಅಡ್ವಾನ್ಸ್‌ ಬುಕಿಂಗ್‌ ಆರಂಭವಾಗಿದ್ದು ಸಿನಿಮಾ ರಿಲೀಸ್‌ಗೂ ಮುನ್ನವೇ ಅಮೆರಿಕಾದಲ್ಲಿ ರೆಕಾರ್ಡ್‌ ಸೃಷ್ಟಿಸಿದೆ.‌

ರಿಲೀಸ್‌ಗೂ ಮುನ್ನ 20 ಸಾವಿರ ಟಿಕೆಟ್‌ ಮಾರಾಟ

ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಯಾವ ಸಿನಿಮಾ ಮಾಡದ ದಾಖಲೆಯನ್ನು ದೇವರ ಮಾಡುತ್ತಿದೆ. ಟ್ರೇಲರ್‌ ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ ಒಟ್ಟು 20 ಸಾವಿರ ಟಿಕೆಟ್‌ಗಳು ಮಾರಾಟವಾಗಿದೆ. ಇದರಿಂದಲೇ ಸಿನಿಮಾ ಮಿಲಿಯನ್‌ ಡಾಲರ್‌ ಕಲೆಕ್ಷನ್‌ ಮಾಡಿದೆಯಂತೆ. ತೆಲುಗು ವರ್ಷನ್‌ ಮಾತ್ರವಲ್ಲದೆ, ಇತರ ಭಾಷೆಗಳಲ್ಲಿ ಕೂಡಾ ಸಿನಿಪ್ರಿಯರು ದೇವರ ಚಿತ್ರದ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಬಿಡುಗಡೆಗೂ ಮುನ್ನ ಇಷ್ಟು ದಾಖಲೆ ಬರೆದಿರುವ ಸಿನಿಮಾ ಇನ್ನು ಬಿಡುಗಡೆ ನಂತರ ಬಾಕ್ಸ್‌ ಆಫೀಸಿನಲ್ಲಿ ಯಾವ ರೀತಿ ಕಲೆಕ್ಷನ್‌ ಮಾಡಲಿದೆ ಅನ್ನೋದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಬಹುಶ: ಸಿನಿಮಾ ಆರ್‌ಆರ್‌ಆರ್‌, ಕೆಜಿಎಫ್‌, ಬಾಹುಬಲಿ ಕಲೆಕ್ಷನ್‌ ದಾಖಲೆ ಮುರಿಯಬಹುದು ಎಂಬ ಮಾತು ಕೇಳಿಬರುತ್ತಿದೆ.

ಆರ್‌ಆರ್‌ಆರ್‌ ಸಿನಿಮಾ ನಂತರ ಜ್ಯೂನಿಯರ್‌ ಎನ್‌ಟಿಆರ್‌, ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜ್ಯೂ ಎನ್‌ಟಿಆರ್‌ ಮಾಡಿದ್ದ ಕೊಮುರಂ ಭೀಮ ಪಾತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಜೊತೆಗೆ ಉತ್ತರ ಭಾರತದಲ್ಲೂ ಫ್ಯಾನ್‌ ಫಾಲೋಯಿಂಗ್‌ ಹೆಚ್ಚಾಗಿದೆ. ಯುಎಸ್‌ನಲ್ಲಿ ಕೂಡಾ ಅವರ ಅಭಿಮಾನಿ ಬಳಗ ಹೆಚ್ಚಾಗಿದೆ. ಇದೇ ಕಾರಣಕ್ಕೆ ಈಗ ದೇವರ ಸಿನಿಮಾ ಕ್ರೇಜ್‌ ಕೂಡಾ ಹೆಚ್ಚಾಗಿದೆ.

ಕೊರಟಾಲ ಶಿವ ನಿರ್ದೇಶನದ ದೇವರ

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ತೆಲುಗು ಚಿತ್ರರಂಗಕ್ಕೆ ಬರಬೇಕು ಎನ್ನುವುದು ಟಾಲಿವುಡ್‌ ಜನರ ಆಸೆಯಾಗಿತ್ತು. ಇದೀಗ ದೇವರ ಚಿತ್ರದ ಮೂಲಕ ಅಭಿಮಾನಿಗಳ ಆಸೆ ನೆರವೇರುತ್ತಿದೆ. ಸಿನಿಮಾ ಬಿಡುಗಡೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ದೇವರ ಸಿನಿಮಾ 2 ಭಾಗಗಳಾಗಿ ತಯಾರಾಗುತ್ತಿದೆ. ಚಿತ್ರವನ್ನು ಯುವಸುಧಾ ಆರ್ಟ್ಸ್‌, ಎನ್‌ಟಿಆರ್‌ ಆರ್ಟ್ಸ್‌ ಬ್ಯಾನರ್‌ ಅಡಿ, ಸುಧಾಕರ್‌ ಮಿಕ್ಕಿಲಿನೇನಿ, ಕೋಸರಾಜು ಹರಿಕೃಷ್ಣ , ನಂದಮುರಿ ಕಲ್ಯಾಣ್‌ ರಾಮ್‌ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಕಥೆ ಬರೆದು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ. ಜ್ಯೂ ಎನ್‌ಟಿಆರ್‌, ಸೈಫ್‌ ಅಲಿ ಖಾನ್‌, ಜಾನ್ವಿ ಕಪೂರ್‌ ಜೊತೆಗೆ ಚಿತ್ರದಲ್ಲಿ ಪ್ರಕಾಶ್‌ ರಾಜ್‌, ಶ್ರೀಕಾಂತ್‌, ಮುರಳಿ ಶರ್ಮಾ ಹಾಗೂ ಇನ್ನಿತರರು ನಟಿಸಿದ್ದಾರೆ. ಕರ್ನಾಟಕದಲ್ಲಿ ಕೆವಿಎನ್‌ ಪ್ರೊಡಕ್ಷನ್ಸ್‌ ಈ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ.

mysore-dasara_Entry_Point