ಕನ್ನಡ ಸುದ್ದಿ  /  ಮನರಂಜನೆ  /  ಯಕ್ಷಗಾನ ವೇಷಧಾರಿಯಾದ ಪ್ರಜ್ವಲ್‌ ದೇವರಾಜ್‌; ಯುಗಾದಿಗೆ ಕರಾವಳಿ ಸಿನಿಮಾದ ವಿಡಿಯೋ ಹಂಚಿಕೊಂಡ ಡೈನಾಮಿಕ್‌ ಪ್ರಿನ್ಸ್‌

ಯಕ್ಷಗಾನ ವೇಷಧಾರಿಯಾದ ಪ್ರಜ್ವಲ್‌ ದೇವರಾಜ್‌; ಯುಗಾದಿಗೆ ಕರಾವಳಿ ಸಿನಿಮಾದ ವಿಡಿಯೋ ಹಂಚಿಕೊಂಡ ಡೈನಾಮಿಕ್‌ ಪ್ರಿನ್ಸ್‌

Karavali Movie: ಪ್ರಜ್ವಲ್‌ ದೇವರಾಜ್‌ ನಟನೆಯ ಕರಾವಳಿ ಸಿನಿಮಾ ತಂಡವು ಯುಗಾದಿ ಹಬ್ಬದಂದು ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಪ್ರಜ್ವಲ್‌ ದೇವರಾಜ್‌ ಯಕ್ಷಗಾನದ ವೇಷ ಹಾಕುವಂತಹ ವಿಡಿಯೋ ಇದಾಗಿದೆ.

ಯಕ್ಷಗಾನ ವೇಷಧಾರಿಯಾದ ಪ್ರಜ್ವಲ್‌ ದೇವರಾಜ್‌
ಯಕ್ಷಗಾನ ವೇಷಧಾರಿಯಾದ ಪ್ರಜ್ವಲ್‌ ದೇವರಾಜ್‌

ಪ್ರಜ್ವಲ್‌ ದೇವರಾಜ್‌ ನಟನೆಯ ಕರಾವಳಿ ಸಿನಿಮಾ ತಂಡವು ಯುಗಾದಿ ಹಬ್ಬದಂದು ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಪ್ರಜ್ವಲ್‌ ದೇವರಾಜ್‌ ಯಕ್ಷಗಾನದ ವೇಷ ಹಾಕುವಂತಹ ದೃಶ್ಯ ಇದಾಗಿದೆ. ಈ ಸಿನಿಮಾದಲ್ಲಿ ಕರಾವಳಿಯ ಕಂಬಳ ಮಾತ್ರವಲ್ಲದೆ ಯಕ್ಷಗಾನವೂ ಇರುವ ಸೂಚನೆ ಈ ಮೂಲಕ ದೊರಕಿದೆ. ಗುರುದತ್‌ ಗಾಣಿಗ ನಿರ್ದೇಶನದ ಕರಾವಳಿ ಸಿನಿಮಾ ನಾನಾ ಕಾರಣಗಳಿಂದ ಕಳೆದ ಹಲವು ತಿಂಗಳುಗಳಿಂದ ನಿರೀಕ್ಷೆ ಹೆಚ್ಚಿಸಿದೆ.

ಟ್ರೆಂಡಿಂಗ್​ ಸುದ್ದಿ

ಯಕ್ಷಗಾನ ವೇಷಧಾರಿಯಾದ ಪ್ರಜ್ವಲ್‌

ಸದ್ಯ ಕರಾವಳಿ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಯಕ್ಷಗಾನ ದೃಶ್ಯವೊಂದಕ್ಕೆ ಪ್ರಜ್ವಲ್‌ ದೇವರಾಜ್‌ ಕುಣಿಯುವ ಸಾಧ್ಯತೆಯಿದೆ. ಯಕ್ಷಗಾನ ವೇಷ ಹಾಕುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪ್ರಜ್ವಲ್‌ ದೇವರಾಜ್‌ ಗಡ್ಡದದ ಮೇಲೆಯೇ ಬಣ್ಣ ಹಚ್ಚುವುದನ್ನು ಕಾಣಬಹುದು. ಈ ಮೂಲಕ ಪ್ರಜ್ವಲ್‌ ದೇವರಾಜ್‌ ಅವರ ಹೊಸ ಮುಖವನ್ನೊಂದನ್ನು ತೋರಿಸಲಾಗಿದೆ. ಈ ವೇಷ ಧರಿಸಲು ಸುಮಾರು ಅರ್ಧ ಗಂಟೆ ಬೇಕಾಯಿತೆಂದು ಚಿತ್ರತಂಡ ಮಾಹಿತಿ ನೀಡಿದೆ.

ಈ ವರ್ಷದ ಆರಂಭದಲ್ಲಿ ಪ್ರಜ್ವಲ್‌ ದೇವರಾಜ್‌ ಅವರ 40ನೇ ಸಿನಿಮಾ ಕರಾವಳಿಯ ಕುರಿತು ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು. ಕಂಬಳ ಕೋಣನ ಜತೆ ಪ್ರಜ್ವಲ್‌ ದೇವರಾಜ್‌ ಕಾಣಿಸಿಕೊಂಡಿದ್ದರು. ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಟೀಸರ್ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಈ ವಿಡಿಯೋದಲ್ಲಿ ಯಕ್ಷಗಾನದ ಬಣ್ಣಹಚ್ಚುವ ಪ್ರಕ್ರಿಯೆ ಮತ್ತು ವೇಷಧರಿಸುವ ಪ್ರಕ್ರಿಯೆಯನ್ನು ವೇಗವಾಗಿ ತೋರಿಸಲಾಗಿದೆ. ಅಂತಿಮವಾಗಿ ಪ್ರಜ್ವಲ್‌ ದೇವರಾಜ್‌ ಅವರ ಯಕ್ಷಗಾನದ ಮುಖವನ್ನು ತೋರಿಸಲಾಗಿದೆ. ಸದ್ಯ ಯಕ್ಷಗಾನದ ಬಣ್ಣ ಹಚ್ಚುವ ವೀಡಿಯೋಗೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. "ನಾನು ಈ ಸಿನಿಮಾಕ್ಕಾಗಿ ಕಾಯುತ್ತಿದ್ದೇನೆ" "ಈ ಸಿನಿಮಾ ಎಲ್ಲಾ ದಾಖಲೆಗಳನ್ನು ಪುಡಿ ಮಾಡಲಿ" "ಮತ್ತೊಂದು ಬ್ಲಾಕ್‌ಬಸ್ಟರ್‌ ಸಿನಿಮಾ ಶೀಘ್ರದಲ್ಲಿ ಬರಲಿದೆ" ಎಂದೆಲ್ಲ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಬಗ್ಗೆ

ಕನ್ನಡ ಚಿತ್ರರಂಗದಲ್ಲಿ ಪ್ರಜ್ವಲ್‌ ದೇವರಾಜ್‌ ಡೈನಾಮಿಕ್‌ ಪ್ರಿನ್ಸ್‌ ಎಂದೇ ಫೇಂಸ್‌. ಸಿಕ್ಸರ್‌ ಸಿನಿಮಾದ ಮೂಲಕ 2007ರಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಅತ್ಯುತ್ತಮ ಹೊಸ ನಟ ಎಂಬ ಸುವರ್ಣ ಫಿಲ್ಮ್‌ ಅವಾರ್ಡ್‌ ಪಡೆದರು. ಇದಾದ ಬಳಿಕ ಗೆಳೆಯ ಎಂಬ ಸಿನಿಮಾದಲ್ಲಿ ನಟಿಸಿದರು. ಇದು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಯಶಸ್ಸು ಪಡೆಯಿತು. ಚೌಕ, ಇನ್‌ಸ್ಪೆಕ್ಟರ್‌ ವಿಕ್ರಮ್‌, ಮೆರವಣಿಗೆ, ಗುಲಾಮ, ಮುರಳಿ ಮೀಟ್ಸ್‌ ಮೀರಾ, ಸೂಪರ್‌ ಶಾಸ್ತ್ರಿ, ಗಲಾಟೆಯಂತಹ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ತತ್ಸಮ ತದ್ಬವ, ವಿರಾಮ, ಅಬ್ಬರ, ಅರ್ಜುನ್‌ ಗೌಡ, ಜಂಟಲ್‌ಮೆನ್‌, ಚೌಕ, ಭುಜಂಗ, ಮೃಗಶಿರ, ಜಂಬೂ ಸವಾರಿ, ಸವಾಲ್‌, ಅಂಗಾರಕ, ಝಿದಿ ಇವರು ನಟಿಸಿದ ಇನ್ನಿತರ ಸಿನಿಮಾಗಳು. ಕನ್ನಡದ ಜನಪ್ರಿಯ ನಟ ದೇವರಾಜ್‌ ಅವರ ಪುತ್ರರಾಗಿರುವ ಪ್ರಜ್ವಲ್‌ ಬೆಂಗಳೂರಿನ ಜೈನ್‌ ಯೂನಿವರ್ಸಿಟಿಯ ಸೆಂಟರ್‌ ಫಾರ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಪದವಿ ಪಡೆದಿದ್ದಾರೆ.

IPL_Entry_Point