ಕನ್ನಡ ಸುದ್ದಿ  /  ಮನರಂಜನೆ  /  ಕಾನ್‌ ಚಿತ್ರೋತ್ಸವಕ್ಕೆ ಅಜ್ಜಿ ಕದ್ದ ಹುಂಜದ ಕಥೆ ಕನ್ನಡ ಕಿರುಚಿತ್ರ ಆಯ್ಕೆ; ಬಂಜಾರ ಸಮುದಾಯಕ್ಕೆ ಹೆಮ್ಮೆ ತಂದ ಚಿದಾನಂದ

ಕಾನ್‌ ಚಿತ್ರೋತ್ಸವಕ್ಕೆ ಅಜ್ಜಿ ಕದ್ದ ಹುಂಜದ ಕಥೆ ಕನ್ನಡ ಕಿರುಚಿತ್ರ ಆಯ್ಕೆ; ಬಂಜಾರ ಸಮುದಾಯಕ್ಕೆ ಹೆಮ್ಮೆ ತಂದ ಚಿದಾನಂದ

Cannes Film Festival 2024: ಮೈಸೂರಿನ ಚಿದಾನಂದ ಎಸ್‌ ನಾಯಕ್‌ ನಿರ್ದೇಶನದ ಶಾರ್ಟ್‌ ಮೂವಿ "ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು" ಕಾನ್‌ ಫಿಲ್ಮ್‌ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಬಂಜಾರ ಸಮುದಾಯದ ಜನಪ್ರಿಯ ಜನಪದ ಕಥೆ ಅಜ್ಜಿ ಹುಂಜ ಕದ್ದ ಕಥೆಯನ್ನು ಆಧರಿಸಿ ಈ ಶಾರ್ಟ್‌ ಮೂವಿ ತಯಾರಿಸಲಾಗಿದೆ.

ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಅಜ್ಜಿ ಕದ್ದ ಹುಂಜದ ಕಥೆ ಕನ್ನಡ ಶಾರ್ಟ್‌ ಮೂವಿ ಆಯ್ಕೆ
ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಅಜ್ಜಿ ಕದ್ದ ಹುಂಜದ ಕಥೆ ಕನ್ನಡ ಶಾರ್ಟ್‌ ಮೂವಿ ಆಯ್ಕೆ

Cannes Film Festival 2024: ಕನ್ನಡದ ಅತ್ಯಂತ ಹಳೆಯ ಜಾನಪದ ಕಥೆಗಳಲ್ಲಿ ಒಂದಾದ ಕಥೆಯೊಂದನ್ನು ಆಧರಿಸಿದ ಮೈಸೂರಿನ ಚಿದಾನಂದ ಎಸ್‌ ನಾಯ್ಕ್‌ ನಿರ್ದೇಶನದ ಶಾರ್ಟ್‌ ಮೂವಿ ಕಾನ್‌ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದ ಜತೆ ವೃದ್ಧ ಮಹಿಳೆ ಓಡಿಹೋದ ಬಳಿಕ ಹಳ್ಳಿಯೊಂದು ಕತ್ತಲೆಯಲ್ಲಿ ಮುಳುಗಿ ಹೋಗುವ ಜನಪದ ಕಥೆ ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

"ನಮ್ಮ ಸಮುದಾಯದಲ್ಲಿ ಕದ್ದ ಹುಂಜದ ಬಗ್ಗೆ ಇರುವ ಸಾಮಾನ್ಯ ಜನಪದ ಕಥೆ ಎಲ್ಲರಿಗೂ ತಿಳಿದಿದೆ" ಎಂದು ಮೈಸೂರು ಮೂಲದ ಚಲನಚಿತ್ರ ನಿರ್ಮಾಪಕ ಮತ್ತು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್‌ಟಿಐಐ) ಹಳೆಯ ವಿದ್ಯಾರ್ಥಿ ಚಿದಾನಂದ ಎಸ್ ನಾಯಕ್ ಹೇಳಿದ್ದಾರೆ. ಬಾಯ್ಮಾತಿನಲ್ಲೇ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತಲುಪಿರುವ ಈ "ಕರ್ನಾಟಕದ ಕದ್ದ ಹುಂಜದ ಆಕರ್ಷಕ ಕಥೆ"ಯು ಶತಮಾನಗಳ ನಂತರ ಪ್ರಪಂಚದ ಉಳಿದ ಭಾಗಗಳಿಗೂ ತಲುಪಲಿದೆ.

ಕಿರುಚಿತ್ರದ ಹೆಸರು: ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು

ಕದ್ದ ಹುಂಜದ ಕಥೆಯನ್ನು ಆಧರಿಸಿದ ನಾಯಕ್ ಅವರ ಕನ್ನಡ ಭಾಷೆಯ ಚೊಚ್ಚಲ ಕಿರುಚಿತ್ರದ ಹೆಸರು ಸನ್‌ಫ್ಲವರ್‌ ಎಂದಲ್ಲ. ಈ ಶಾರ್ಟ್‌ ಮೂವಿ ಹೆಸರು "ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು" ಎಂದಾಗಿದೆ. ಈ ಶಾರ್ಟ್‌ ಮೂವಿ ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸ್ಪರ್ಧಿಸಲಿದೆ.

"ನಾನು ಕರ್ನಾಟಕದ ಬಂಜಾರ ಸಮುದಾಯಕ್ಕೆ ಸೇರಿದವನು" ಎಂದು ಶಿವಮೊಗ್ಗ ಜಿಲ್ಲೆಯ ಪಾಂಡಾ (ಬಂಜಾರ ಕುಗ್ರಾಮ) ದಲ್ಲಿ ಜನಿಸಿದ ನಾಯಕ್ ಹೇಳಿದ್ದಾರೆ. 28 ವರ್ಷ ವಯಸ್ಸಿನ ಈ ಯುವ ನಿರ್ದೇಶಕರು ಸುಮಾರು ನಾಲ್ಕು ವರ್ಷಗಳ ಹಿಂದೆ ತಮ್ಮ ಸಮುದಾಯದಿಂದ ಜಾನಪದ ಕಥೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು. ನಮ್ಮ ಸಮುದಾಯದಲ್ಲಿ ಈ ರೀತಿ ಕಥೆ ಹೇಳಲು ಹೆಚ್ಚು ಜನರು ಇಲ್ಲ. ಇಂತಹ ಜನಪದ ಕಥೆ ಹೇಳುವ ಹತ್ತು ಹಿರಿಯ ವಯಸ್ಕರು ಮಾತ್ರ ಇದ್ದಾರೆ ಎಂದು ಅವರು ಹೇಳಿದ್ದಾರೆ..

ಕರ್ನಾಟಕವು ಭಾರತದ ಬಂಜಾರ ಅಥವಾ ಜಿಪ್ಸಿ ಸಮುದಾಯದ ಕುರಿಗಾಹಿಗಳ ನೆಲೆಯಾಗಿದೆ. ಇಂದು ಈ ಸಮುದಾಯ ಹೆಚ್ಚಾಗಿ ರಾಜಸ್ಥಾನ, ಪಂಜಾಬ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ವಾಸಿಸುತ್ತಿದ್ದಾರೆ. ಮೇ 14 ರಿಂದ 25 ರವರೆಗೆ ನಡೆಯಲಿರುವ ಕೇನ್ಸ್‌ ಚಲನಚಿತ್ರೋತ್ಸವಕ್ಕೆ ತಮ್ಮ ಬಂಜಾರ ಸಂಸ್ಕೃತಿಯನ್ನು ಆಧರಿಸಿದ ಸಿನಿಮಾವನ್ನು ಕೊಂಡೊಯ್ದ ಸಮುದಾಯದ ಮೊದಲಿಗರಾಗಿದ್ದಾರೆ.

"ನಮ್ಮದು ಮೌಖಿಕ ಸಂಸ್ಕೃತಿ. ಎಲ್ಲವೂ ಬಾಯಿ ಮಾತಿನಲ್ಲೇ ಹರಡುತ್ತದೆ. ಆದರೆ ಇಂದು ಜಾನಪದ ಕ್ಷೀಣಿಸುತ್ತಿದೆ. ಹೊಸ ಪೀಳಿಗೆಗೆ ಸಮುದಾಯದ ಯಾವುದೇ ಜಾನಪದ ಕಥೆಗಳು ತಿಳಿದಿಲ್ಲ" ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಜಾನಪದ ಕಥೆಗಳು ಸಾಂಸ್ಕೃತಿಕ ವಿಷಯಗಳನ್ನು ಕೊಂಡೊಯ್ಯುವ ಕಾವ್ಯಾತ್ಮಕ ಪಠ್ಯವಾಗಿದೆ. ಇದೊಂದು ಪ್ರಯಾಣದ ರೂಪಕ. ಪ್ರತಿಯೊಂದು ಕಥೆಯಲ್ಲಿ ಹೊಸ ಅರ್ಥಗಳಿರುತ್ತವೆ" ಎಂದು ಅವರು ಹೇಳಿದ್ದಾರೆ.

ಈ ರೀತಿ ಬಂಜಾರ ಸಮುದಾಯದ ಜಾನಪದ ಕಥೆಗಳನ್ನು ಸಂಗ್ರಹಿಸಲು ಆರಂಭಿಸಿದ್ದ ಇವರು "ಒಂದು ಕದ್ದ ಹುಂಜದ ಕಥೆ" ಎಂಬ ಕಥೆಯನ್ನು ಶಾರ್ಟ್‌ ಮೂವಿ ಮಾಡಿದ್ದಾರೆ. ಹಳ್ಳಿಯ ಹುಂಜವನ್ನು ಕದ್ದ ನಂತರ ಸೂರ್ಯ ಉದಯಿಸುವುದನ್ನು ನಿಲ್ಲಿಸುತ್ತದೆ. ಈ ಮೂಲಕ ಹಳ್ಳಿ ಕತ್ತಲಲ್ಲಿ ಇರುತ್ತದೆ. ಸಮುದಾಯದಿಂದ ಗಡೀಪಾರು ಮಾಡಲ್ಪಟ್ಟ ವೃದ್ಧ ಮಹಿಳೆಯ ಕಥೆಯನ್ನು ಇವರು ಶಾರ್ಟ್‌ ಮೂವಿ ಮಾಡಿದ್ದು, ಇದೀಗ ಜಗತ್ತಿನ ಸಿನಿಮಾಸಕ್ತರು ಈ ಕಥೆ ಕೇಳಲಿದ್ದಾರೆ.

"ನಾನು ಚಿಕ್ಕವನಾಗಿದ್ದಾಗ ಈ ಎಲ್ಲಾ ಜಾನಪದ ಕಥೆಗಳು ನಿಜವೆಂದು ಭಾವಿಸಿದ್ದೆ" ಎಂದು ನಾಯಕ್ ಹೇಳಿದ್ದಾರೆ. "ಮನೆಯ ಹುಂಜ ಕೊಕ್ಕೊಕ್ಕೊ ಎಂದು ಕೂಗುವ ಧ್ವನಿಯಿಂದಲೇ ಸೂರ್ಯ ಉದಯಿಸುತ್ತಾನೆ ಎಂದು ಭಾವಿಸುತ್ತಿದ್ದೇವು. ಮಾತನಾಡುವ ಹುಲಿಯ ಕಥೆಯೂ ನನಗೆ ಇಷ್ಟವಾಗಿತ್ತು" ಎಂದು ಅವರು ನೆನಪಿಸಿಕೊಂಡಿದ್ದಾರೆ.

ಅಜ್ಜಿ ಕೋಳಿ ಕದ್ದ ಕಥೆ
ಅಜ್ಜಿ ಕೋಳಿ ಕದ್ದ ಕಥೆ

ಪುಣೆಯ ಎಫ್‌ಟಿಐಐಗೆ ಒಂದು ವರ್ಷದ ನಿರ್ದೇಶನದ ಕೋರ್ಸ್‌ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಕೋರ್ಸ್‌ನ ಭಾಗವಾಗಿ ನಾಲ್ಕು ದಿನದಲ್ಲಿ ಒಂದು ಚಲನಚಿತ್ರ ಮಾಡಲು ನಾಯಕ್‌ಗೆ ತಿಳಿಸಲಾಗಿತ್ತು. ಅವರು ಕದ್ದ ಹುಂಜದ ಕಥೆ ಆಯ್ಕೆ ಮಾಡಿಕೊಂಡರು. "ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಿಂದ ಹೊರಬರಬೇಕಾದರೆ ಕೋರ್ಸ್‌ನ ಕೊನೆಗೆ ನಾವು ಈ ಸಿನಿಮಾವನ್ನು ಸಲ್ಲಿಸಬೇಕಿತ್ತು. ಒಂದು ಲಕ್ಷ ರೂಪಾಯಿ ಬಜೆಟ್‌ನಲ್ಲಿ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಿಂದ 50 ಕಿ.ಮೀ. ವ್ಯಾಪ್ತಿಯೊಳಗೆ ಶೂಟಿಂಗ್‌ ಮಾಡಬೇಕಾಗಿತ್ತು" ಎಂದು ಅವರು ಹೇಳದಿದಾರೆ.

ಆರಂಭದಲ್ಲಿ ದೂರದರ್ಶನ ಉದ್ಯೋಗಿಗಳಿಗೆ ತರಬೇತಿ ನೀಡುವ ಗುರಿಯನ್ನು ಪುಣೆಯ ಎಫ್‌ಟಿಐಐ ಹೊಂದಿತ್ತು. ಬಳಿಕ 2008ರಲ್ಲಿ ಎಲ್ಲರಿಗೂ ಒಂದು ವರ್ಷದ ಸರ್ಟಿಫಿಕೇಷನ್‌ ಕೋರ್ಸ್‌ ಆರಂಭಿಸಿತ್ತು. ಇದು ವಿದ್ಯಾರ್ಥಿಗಳಿಗೆ ನಿರ್ದೇಶನ, ಛಾಯಾಗ್ರಹಣ, ಸಂಪಾದನೆ ಮತ್ತು ಧ್ವನಿಯನ್ನು ಅಧ್ಯಯನ ಮಾಡಲು ಅನುವು ಮಾಡಿಕೊಟ್ಟಿತು.

ನಾಯಕ್ ಆಗಷ್ಟೇ ವೈದ್ಯಕೀಯ ಪದವಿ ಮುಗಿಸಿ ಮೈಸೂರಿನ ಕೃಷ್ಣ ರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೇ ಸಮಯದಲ್ಲಿ ಪುಣೆಯ ಎಫ್‌ಟಿಐಐನಲ್ಲಿ ಒಂದು ವರ್ಷದ ನಿರ್ದೇಶನ ಕೋರ್ಸ್‌ ಮಾಡಲು ಬಯಸಿದರು.

"ನಾನು 2020ರಲ್ಲಿ ಪ್ರವೇಶ ಪರೀಕ್ಷೆಯನ್ನು ಬರೆದಿದ್ದೇನೆ. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕೋರ್ಸ್ ಪ್ರಾರಂಭವಾಗಲು ಇನ್ನೂ ಎರಡು ವರ್ಷ ಕಾಯಬೇಕಾಯಿತು" ಎಂದು ಅವರು ಹೇಳಿದ್ದಾರೆ. "ನಾವು ಎರಡು ವರ್ಷಗಳನ್ನು ಕಳೆದುಕೊಂಡರೂ, ನಮ್ಮನ್ನು ಇನ್ನೂ ಎಫ್‌ಟಿಐಐ 2020 ಬ್ಯಾಚ್ ಎಂದು ಕರೆಯಲಾಗುತ್ತದೆ." ಎಂದು ಅವರು ವಿವರಿಸಿದ್ದಾರೆ. ಸಿನಿಮಾ ಪ್ರೀತಿ ಬೆಳಸಿಕೊಂಡ ಇವರು ಡೈರೆಕ್ಟರ್‌ ಆಗುವ ಕನಸನ್ನು ಹೆತ್ತವರಿಗೆ ತಿಳಿಸಲು ಕಷ್ಟಪಟ್ಟಿದ್ದರು. ಮನೆಯಲ್ಲಿ ಒಪ್ಪಿಗೆ ದೊರಕಿದ ಬಳಿಕ ಹಿಂತಿರುಗಿ ನೋಡಲಿಲ್ಲ. "ನಾನು ಕಥೆಗಳನ್ನು ಹೇಳಲು ಬಯಸಿದ್ದೆ. ವಿಶೇಷವಾಗಿ ನನ್ನ ಸಮುದಾಯದ, ನಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸುತ್ತಲೂ ನಾನು ನೋಡುತ್ತಿದ್ದ ಕಥೆಗಳನ್ನು ಹೇಳಲು ಬಯಸಿದ್ದೆ" ಎಂದು ಅವರು ಹೇಳಿದ್ದಾರೆ.

ಬಂಜಾರ ಸಮುದಾಯಕ್ಕೆ ಹೆಮ್ಮೆ ತಂದ ಚಿದಾನಂದ ನಾಯಕ್‌
ಬಂಜಾರ ಸಮುದಾಯಕ್ಕೆ ಹೆಮ್ಮೆ ತಂದ ಚಿದಾನಂದ ನಾಯಕ್‌

ಪುಣೆಯಿಂದ ಕೇನ್ಸ್‌ವರೆಗೆ

ನಾಯಕ್ ಕಳೆದ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಪುಣೆಯಿಂದ 48 ಕಿ.ಮೀ ದೂರದಲ್ಲಿರುವ ಪನ್ಶೆಡ್ ನಲ್ಲಿ ನಾಲ್ಕು ದಿನಗಳ ಕಾಲ ಸನ್‌ಫ್ಲವರ್‌ ಸಿನಿಮಾ ಶೂಟಿಂಗ್‌ ಮಾಡಿದರು. ಜುಲೈ 2023ರಲ್ಲಿ ಅವರ ಬ್ಯಾಚ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಿಂದ ಹೊರಬಂದಾಗ ಮೊದಲ ಕಟ್ ಪೂರ್ಣಗೊಂಡಿತು. "ನಾನು ನಿರ್ಮಿಸಿದ ಸಿನಿಮಾವನ್ನು ಪುಣೆ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಕೇನ್ಸ್‌ ಚಲನಚಿತ್ರೋತ್ಸವದ ಲಾ ಸಿನೆಫ್‌ ಸ್ಪರ್ಧೆಗೆ ಕಳುಹಿಸಿತ್ತು. ಇವರು ಈ ರೀತಿ ಸಲ್ಲಿಸಿರುವ ಸಂಗತಿ ಕಾನ್‌ ಚಿತ್ರೋತ್ಸವ ಸ್ಪರ್ಧೆಗೆ ಆಯ್ಕೆಯಾಗುವವರೆಗೆ ನನಗೆ ತಿಳಿದಿರಲಿಲ್ಲ" ಎಂದು ಅವರು ಹೇಳಿದ್ದಾರೆ.

ಈ ವರ್ಷ ಜಗತ್ತಿನ ವಿವಿಧ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗಳು ಸಲ್ಲಿಸಿದ 2,263 ಶಾರ್ಟ್‌ ಮೂವಿಗಳಲ್ಲಿ 18 ಕಿರುಚಿತ್ರಗಳು ಲಾ ಸಿನೆಫ್ ಗೆ ಆಯ್ಕೆಯಾದವು. ಅವುಗಳಲ್ಲಿ ಸನ್‌ಫ್ಲವರ್‌ ಮೊದಲನೆಯದು. ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಕೂಡ ನಟಿಸಿದ್ದಾರೆ. ಕಿರುಚಿತ್ರದಲ್ಲಿ ಅಜ್ಜನ ಪಾತ್ರಕ್ಕ ಅವರು ಯಾವುದೇ ಶುಲ್ಕ ಪಡೆದಿಲ್ಲ ಎಂದು ಅವರು ಹೇಳದಿದಾರೆ.

ಬೀಜಿಂಗ್ ಫಿಲ್ಮ್ ಅಕಾಡೆಮಿಯ ಬನಿಷ್ಡ್ ಲವ್, ಲಂಡನ್ ಫಿಲ್ಮ್ ಸ್ಕೂಲ್‌ನ ಇಟ್ ವಿಲ್ ಪಾಸ್, ಗ್ವಾಡಲಜರ ವಿಶ್ವವಿದ್ಯಾಲಯ ಮೆಕ್ಸಿಕೊದ ಎಲಿವೇಸಿಯನ್, ದಾರ್-ಅಲ್ ಕಲಿಮಾ ವಿಶ್ವವಿದ್ಯಾಲಯದ ಕಿರುಚಿತ್ರ ಮತ್ತು ಥೆಸಲೊನಿಕಿಯ ಅರಿಸ್ಟಾಟಲ್ ವಿಶ್ವವಿದ್ಯಾಲಯದ ದಿ ಕ್ಯಾಯೋಸ್ ಶೀ ಲೆಫ್ಟ್ ಬಿಹೈಂಡ್ ಕೇನ್ಸ್‌ ಚಲನಚಿತ್ರೋತ್ಸವದ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿವೆ.

IPL_Entry_Point