Neha Hiremath Murder Case: ನೇಹಾ ಹಿರೇಮಠ ಹಂತಕನಿಗೆ ಉಗ್ರ ಶಿಕ್ಷೆ ಆಗಲೇಬೇಕು; ಸಿನಿಮಾ ತಾರೆಯರ ಒಕ್ಕೊರಲ ಆಗ್ರಹ
ನೇಹಾ ಹಿರೇಮಠ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದೇಶವ್ಯಾಪಿ ವ್ಯಾಪಕ ಖಂಡನೆಯೂ ವ್ಯಕ್ತವಾಗುತ್ತಿದೆ. ಅಲ್ಲಲ್ಲಿ ಪ್ರತಿಭಟನೆಯ ಕಾವು ಜೋರಾದರೆ, ಚಂದನವನದ ತಾರೆಯರೂ ಈ ಸಾವಿಗೆ ಮರುಕ ವ್ಯಕ್ತಪಡಿಸಿ, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
Neha Murder Case: ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಹಾಡಹಗಲೇ ನಡೆದ ನೇಹಾ ಹಿರೇಮಠ ಹತ್ಯ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಬರೀ ಕರ್ನಾಟಕ ಮಾತ್ರವಲ್ಲ, ದೇಶವ್ಯಾಪಿ ವಿರೋಧ ವ್ಯಕ್ತವಾಗಿದೆ. ಲವ್ ಜಿಹಾದ್ ಎಂಬ ಆರೋಪದ ನಡುವೆ ವ್ಯಾಪಕ ಪ್ರತಿಭಟನೆಗಳೂ ನಡೆಯುತ್ತಿವೆ. ಬಂಧಿತ ಫಯಾಜ್‌ನಿಗೆ ಅತ್ಯುಗ್ರ ಶಿಕ್ಷೆಯಾಗಬೇಕು ಎಂದು ಸಂಘಟನೆಗಳು ಆಗ್ರಹಿಸುತ್ತಿವೆ. ಈ ನಡುವೆ ಫಯಾಜ್ ತಂದೆಯೂ, ಆತನಿಗೆ ಉಗ್ರ ಶಿಕ್ಷೆಯನ್ನೇ ನೀಡಿ ಎಂದಿದ್ದಾರೆ. ಸ್ಯಾಂಡಲ್‌ವುಡ್ ಚಿತ್ರರಂಗದಿಂದಲೂ ಖಂಡನೆ ವ್ಯಕ್ತವಾಗಿದೆ.
ಹೀನ ಕೃತ್ಯ ನಿಜಕ್ಕೂ ಆತಂಕಕಾರಿ; ಧ್ರುವ ಸರ್ಜಾ
ಸೋಷಿಯಲ್ ಮೀಡಿಯಾ Xನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಧ್ರುವ ಸರ್ಜಾ, "ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ" ಎಂದು ಟ್ವಿಟ್ ಮಾಡಿದ್ದಾರೆ.
ಎಲ್ಲರಿಗೂ ಇದು ಪಾಠವಾಗಬೇಕು; ಕಾವ್ಯಾ ಶಾಸ್ತ್ರಿ
ಅದೇ ರೀತಿ ಕನ್ನಡದ ನಟಿ ಕಾವ್ಯಾ ಶಾಸ್ತ್ರಿ ಸಹ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ನೇಹಾ ಹಿರೇಮಠ ಕೊಲೆ ಖಂಡನೀಯ. ಕೊಲೆಗಾರನಿಗೆ ಸಿಗುವ ಶಿಕ್ಷೆ ಎಲ್ಲರಿಗೂ ಪಾಠವಾಗಬೇಕು. ಕರ್ನಾಟಕ ಮತ್ತೆ ಸುರಕ್ಷಿತ ರಾಜ್ಯವಾಗಬೇಕು. ನೇಹಾ ಹಿರೇಮಠಗೆ ನ್ಯಾಯ ಸಿಗಬೇಕು" ಎಂದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಅಕ್ಷಮ್ಯ ಅಪರಾಧ
ನೀನು ನನ್ನನ್ನೇ ಪ್ರೀತಿಸು ಅಂತ ಒಬ್ಬರನ್ನು ಅದು ಹೇಗೆ ಒತ್ತಾಯ ಮಾಡ್ತೀರಿ? ಯಾವಾಗ ಅವಳು ಅದನ್ನು ತಿರಸ್ಕರಿಸಿದಳೋ ಆಕೆ ಕಾಲೇಜು ಕ್ಯಾಂಪಸ್‌ನಲ್ಲಿ ಭೀಕರವಾಗಿ ಕೊಲೆಯಾದಳು. ಈ ವಯಸ್ಸಿನಲ್ಲಿ ಆ ಹುಡುಗರ ಮನಸ್ಥಿತಿ ಅದ್ಯಾವ ರೀತಿ ಇರುತ್ತೆ? ಪೋಷಕರಾದ ನಾವು ನಮ್ಮ ಮಕ್ಕಳಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಸಿದ್ದನ್ನೇ ನಮ್ಮ ಮನೆಗಳಲ್ಲೂ ಹೇಳಿಕೊಡಬೇಕಿದೆ. ಇದು ಅಕ್ಷಮ್ಯ, ಕ್ಷಮಿಸಲಾರ್ಹ ತಪ್ಪು. ನೇಹಾ ಹೆತ್ತವರನ್ನು ನೋಡಿ ಹೃದಯ ಛಿದ್ರವಾಗಿದೆ ಎಂದು ರಕ್ಷಿತಾ ಪ್ರೇಮ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ತಮ್ಮ ಮನೆಯ ಹೆಣ್ಮಕ್ಕಳನ್ನ ಮುಚ್ಚಿಡ್ತಾರೆ: ಪ್ರಿಯಾ ಸವದಿ
ಧಮ್ ಅನ್ನೋದು ಇದ್ರೆ, ತಮ್ಮ ಮನೆಯಲ್ಲಿನ ಹೆಣ್ಣು ಮಕ್ಕಳನ್ನು ಕರೆಸಿ ಚುಚ್ಚಲಿ. ಕೊಲೆ ಮಾಡಿದವನಿಗೆ ಯಾರು ಶಿಕ್ಷೆ ಕೊಡ್ತಾರೆ. ಆತ 10 ವರ್ಷ ಜೈಲಲ್ಲಿ ಇರ್ತಾನೆ. 15 ವರ್ಷ ಇರ್ತಾನೆ. 50 ವರ್ಷ ಇರಬಹುದು. ಆದರೆ, ಈಕೆಯ ಜೀವ ಕೊಡಲು ಹೇಳಿ. ತಮ್ಮ ಮನೆಯಲ್ಲಿನ ಹೆಣ್ಣುಮಕ್ಕಳು ಇವನಿಗೆ ಸಿಗಲಿಲ್ಲವಾ? ಅವ್ರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಹೀಗೆ ಬೀದಿಗೆ ಬಿಡ್ತಾರಾ? ಅವರಿಗೆ ಚೆನ್ನಾಗಿರೋ ಹುಡುಗೀರೇ ಬೇಕು. ನಮ್ಮ ಹಿಂದೂ ಹುಡುಗೀರೇ ಬೇಕಾ? ಅವರ ಮನೆ ಹೆಣ್ಣು ಮಕ್ಕಳನ್ನು ಬುರ್ಖಾದಲ್ಲಿ ಮುಚ್ಚಿಡ್ತಾರೆ. ಇನ್ನೇನು ಮಣ್ಣು ಆಯ್ತು ಅಂದ್ರೆ, ಈ ಟಾಪಿಕ್ ಮುಚ್ಚಿ ಹಾಕ್ತಾರೆ. ಎಲೆಕ್ಷನ್ ಕೆಲಸದಲ್ಲಿ ಮುಂದುವರೀತಾರೆ" ಎಂದು ಕೊಂಚ ಬಿರುಸಾಗಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಕಿರುಚಿತ್ರಗಳ ನಟಿ ಪ್ರಿಯಾ ಸವದಿ.