ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಹೆಂಡತಿ ಹೊಸ ಅವತಾರಕ್ಕೆ ಬೆಚ್ಚಿದ ತಾಂಡವ್‌, ಭಾಗ್ಯಾ ಹಾಕಿದ ಸವಾಲ್‌ ಆದ್ರೂ ಏನು?; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಹೆಂಡತಿ ಹೊಸ ಅವತಾರಕ್ಕೆ ಬೆಚ್ಚಿದ ತಾಂಡವ್‌, ಭಾಗ್ಯಾ ಹಾಕಿದ ಸವಾಲ್‌ ಆದ್ರೂ ಏನು?; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌19ರ ಎಪಿಸೋಡ್‌. ನಾನು ಪರೀಕ್ಷೆ ಬರೆಯಬಾರದು ಎಂಬ ಕಾರಣಕ್ಕೆ ತಾಂಡವ್‌ ಹಾಲ್‌ ಟಿಕೆಟ್‌ ಕದ್ದಿರುವುದು ಎಂದು ತಿಳಿದ ಭಾಗ್ಯಾ ಆಕ್ರೋಶ ವ್ಯಕ್ತಪಡಿಸುತ್ತಾಳೆ. ನಾನು ಪರೀಕ್ಷೆ ಬರೆದೇ ಬರೆಯುತ್ತೇನೆ ಎಂದು ತಾಂಡವ್‌ ಮುಂದೆ ಚಾಲೆಂಜ್‌ ಮಾಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 19ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್‌ 19ರ ಎಪಿಸೋಡ್‌ (PC: Colors Kannada)

Bhagyalakshmi Serial: ತಾಂಡವ್‌ ವರ್ತನೆ ಮಿತಿ ಮೀರುತ್ತಿದೆ. ಮಕ್ಕಳು, ತಂದೆ ತಾಯಿ ಮೇಲಿನ ಪ್ರೀತಿಗಿಂತ ನಾನು, ನನ್ನದು ಎಂಬ ಸ್ವಾರ್ಥ, ದುರಹಂಕಾರದಿಂದ ಮೆರೆಯುತ್ತಿದ್ಧಾನೆ. ಮನೆ ಬಿಟ್ಟು ಹೋಗುವಂತೆ ಎಷ್ಟೇ ಹಿಂಸೆ ಕೊಡುತ್ತಿದ್ದರೂ ಭಾಗ್ಯಾ ಮಾತ್ರ ಕದಲುತ್ತಿಲ್ಲ. ನಾನು ಸುಖವಾಗಿರುವುದು ನನ್ನ ಕುಟುಂಬದ ಜೊತೆ ಮಾತ್ರ, ಕುಟುಂಬ ಚೆನ್ನಾಗಿದ್ದರೆ ನಾನು ಖುಷಿಯಾಗಿರುತ್ತೇನೆ ಅದನ್ನು ಉಳಿಸಿಕೊಳ್ಳಲು ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಭಾಗ್ಯಾ ಕೂಡಾ ಪಣ ತೊಟ್ಟಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

ಭಾಗ್ಯಾ ಮುಖದ ಮೇಲೆ ದುಡ್ಡು ಎಸೆಯುವ ತಾಂಡವ್‌, ನನ್ನ ಜೀವನದಿಂದ ಹೊರ ಹೋಗಲು ಇನ್ನೂ ನಿನಗೆ ಏನು ಬೇಕು ಹೇಳು ಕೊಡುತ್ತೇನೆ? ಎಂದು ಅರಚಾಡುತ್ತಾನೆ. ಆದರೆ ದರ್ಪ ತೋರುವ ಭರದಲ್ಲಿ ತಾಂಡವ್‌, ಪರ್ಸ್‌ನಲ್ಲಿದ್ದ ಹಾಲ್‌ ಟಿಕೆಟ್‌ ಕೆಳಬೀಳುತ್ತದೆ. ಅದನ್ನು ನೋಡುವ ಭಾಗ್ಯಾ ಹಾಗೂ ಮನೆಯವರಿಗೆ ಶಾಕ್‌ ಆಗುತ್ತದೆ. ಇದು ನಿಮ್ಮ ಬಳಿ ಹೇಗೆ ಬಂದು ಎಂದು ಭಾಗ್ಯಾ ಪ್ರಶ್ನಿಸುತ್ತಾಳೆ. ನೀವು ಪರೀಕ್ಷೆ ಬರೆಯಬಾರದು ಎಂಬ ಕಾರಣಕ್ಕೆ ಅಪ್ಪ ಇದನ್ನು ಕದ್ದಿರುತ್ತಾರೆ ಎಂದು ತನ್ವಿ ಹೇಳುತ್ತಾಳೆ. ತಾಂಡವ್‌ ಮಾತನಾಡುವವರೆಗೂ ಭಾಗ್ಯಾ ಸುಮ್ಮನಿರುವುದಿಲ್ಲ. ಅವತ್ತು ನಾನು ಒಂದು ಹೊಸ ಹಾಲ್‌ ಟಿಕೆಟ್‌ಗಾಗಿ ಎಷ್ಟು ಕಷ್ಟ ಪಟ್ಟೆ. ಆದರೆ ನೀವು ಇದನ್ನು ಕದ್ದು ಅದರ ಮೇಲೆ ಪೆನ್‌ನಲ್ಲಿ ಗೀಚಿದ್ದೀರ. ಏಕೆ ರೀತಿ ಮಾಡಿದಿರಿ ಎಂದು ಏರುದನಿಯಲ್ಲಿ ಪ್ರಶ್ನಿಸುತ್ತಾಳೆ. ಆದರೆ ಭಾಗ್ಯಾ ಮುಂದೆ ಸೋಲಲು ಇಷ್ಟವಿಲ್ಲದ ತಾಂಡವ್‌ ಹೌದು ನಾನೇ ಕದ್ದದ್ದು ಏನೀಗ? ನೀನು ಪರೀಕ್ಷೆ ಬರೆಯುವುದು ನನಗೆ ಇಷ್ಟವಿರಲಿಲ್ಲ ಅದಕ್ಕೆ ಕದ್ದೆ ಎನ್ನುತ್ತಾನೆ.

ತಾಂಡವ್‌ಗೆ ಚಳಿ ಬಿಡಿಸಿದ ಭಾಗ್ಯಾ

ತಾಂಡವ್‌ ವರ್ತನೆಗೆ ಅಸಹ್ಯ ವ್ಯಕ್ತಪಡಿಸುವ ಭಾಗ್ಯಾ, ಅವನೊಂದಿಗೆ ಮಾತನಾಡಲು ರೂಮ್‌ಗೆ ಬರಲು ಹೇಳುತ್ತಾಳೆ. ಆದರೆ ತಾಂಡವ್‌ ಅದಕ್ಕೆ ಒಪ್ಪುವುದಿಲ್ಲ. ಕೋಪಗೊಳ್ಳುವ ಭಾಗ್ಯಾ, ತಾಂಡವ್‌ ಕೈ ಹಿಡಿದು ರೂಮ್‌ಗೆ ಎಳೆದೊಯ್ಯುತ್ತಾಳೆ. ಮಕ್ಕಳ ಮುಂದೆ ನಿಮ್ಮ ಮರ್ಯಾದೆ ಹೋಗಬಾರದು ಎಂಬ ಕಾರಣಕ್ಕೆ ನಾನು ನಿಮ್ಮ ಜೊತೆ ಮಾತನಾಡಲು ಇಲ್ಲಿಗೆ ಕರೆ ತಂದೆ. ನೀವು ಮಕ್ಕಳ ಮುಂದೆ ನಿಮ್ಮ ಬೆಲೆ ಕಳೆದುಕೊಳ್ಳುತ್ತಿದ್ದೀರ. ಅಪ್ಪನೇ ಸುಳ್ಳು ಹೇಳುತ್ತಾರೆ. ಅಪ್ಪನೇ ಕದಿಯುತ್ತಾರೆ ನಾವೇಕೆ ಮಾಡಬಾರದು ಎಂಬ ಯೋಚನೆ ಮಕ್ಕಳ ಮನಸ್ಸಿನಲ್ಲಿ ಬಂದರೆ ಬಹಳ ಕಷ್ಟ. ಆ ರೀತಿ ಆದರೆ ಮುಂದಿನ ಪರಿಣಾಮ ಚೆನ್ನಾಗಿರುವುದಿಲ್ಲ. ನಿಮಗೆ ಹೆದರುವ ಭಾಗ್ಯಾ ಸತ್ತು ಎಷ್ಟೋ ದಿನಗಳಾಯ್ತು. ನೀವು ಎಷ್ಟೇ ತಡೆದರೂ ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದೇ ಬರೆಯುತ್ತೇನೆ. ಪಾಸ್‌ ಆಗೇ ಆಗುತ್ತೇನೆ ಎಂದು ಗಂಡನಿಗೆ ಚಾಲೆಂಜ್‌ ಮಾಡುತ್ತಾಳೆ.

ತಾಂಡವ್‌ ತಲೆ ತುಂಬಾ ಭಾಗ್ಯಾ ಮಾತುಗಳೇ ಗಿರಕಿ ಹೊಡೆಯುತ್ತಿದೆ. ರಾತ್ರಿ ನಿದ್ರೆ ಇಲ್ಲದ ತಾಂಡವ್‌ ಮರುದಿನ ಕನ್ನಡಿ ಮುಂದೆ ನಿಂತು ಏನೋ ಯೋಚಿಸುತ್ತಿರುತ್ತಾನೆ. ಭಾಗ್ಯಾ ತನ್ನ ಹಿಂದೆ ಬಂದು ನಿಂತಂತೆ ಆಗುತ್ತದೆ. ಇನ್ಮುಂದೆ ನನ್ನನ್ನು ತಡೆಯೋರು ಯಾರೂ ಇಲ್ಲ, ನಾನು ಹೇಳಿದ್ದೇ ಮಾತು, ನಾನು ಹೇಳಿದಂತೆ ನೀವು ಕೇಳಬೇಕು ಎಂದು ಹೇಳಿಕೊಂಡು ಗಹಿ ಗಹಿ ನಕ್ಕಂತೆ ಭಾಸವಾಗುತ್ತದೆ. ಆ ಕೋಪದಿಂದ ತಾಂಡವ್‌ ಕೈಯಿಂದ ಕನ್ನಡಿ ಒಡೆಯುತ್ತಾನೆ. ಆ ಸದ್ದು ಕೇಳಿ ಎಲ್ಲರೂ ರೂಮ್‌ ಬಳಿ ಬರುತ್ತಾರೆ. ತಾಂಡವ್‌ ಕೈಯಲ್ಲಿ ರಕ್ತ ಸುರಿಯುತ್ತಿರುವುದನ್ನು ನೋಡಿ ಎಲ್ಲರೂ ಗಾಬರಿ ಆಗುತ್ತಾರೆ.

ತಾಂಡವ್‌ ಕೈನಲ್ಲಿ ರಕ್ತ ಸುರಿಯುತ್ತಿದ್ದರೂ ಕೇರ್‌ ಮಾಡದ ಕುಸುಮಾ

ಕನ್ನಡಿ ಏಕೆ ಒಡೆದೆ? ಏಕೆ ಹುಚ್ಚನ ನೀರಿ ವರ್ತಿಸುತ್ತಿದ್ದೀಯ ಎಂದು ಕುಸುಮಾ ಪ್ರಶ್ನಿಸುತ್ತಾಳೆ. ನನ್ನ ಪಾಲಿನ ಮನೆಯ ಕನ್ನಡಿ ನಾನು ಏನಾದರೂ ಮಾಡುತ್ತೇನೆ. ಬೇಕಿದ್ದರೆ ನನ್ನ ಪಾಲಿನ ಮನೆಯನ್ನೂ ಒಡೆದುಹಾಕುತ್ತೇನೆ. ದನ ನುಗ್ಗಿದ ಹಾಗೆ ನನ್ನ ಭಾಗಕ್ಕೆ ಏಕೆ ನುಗ್ಗುತ್ತಿದ್ದೀರಿ ಹೊರಗೆ ಹೋಗಿ ಎನ್ನುತ್ತಾನೆ. ತಾಂಡವ್‌ ಅವತಾರ ನೋಡಿದ ಸುನಂದಾ ಈ ಗಾಜುಗಳನ್ನು ನೀನೇ ಕ್ಲೀನ್‌ ಮಾಡು ಭಾಗ್ಯಾ, ಯಾರ ಕಾಲಿಗಾದರೂ ಚುಚ್ಚೀತು ಎನ್ನುತ್ತಾಳೆ. ಆದರೆ ಭಾಗ್ಯಾಳನ್ನು ಕುಸುಮಾ ತಡೆಯುತ್ತಾಳೆ. ಯಾರು ಒಡೆದಿದ್ದಾರೋ ಅವರೇ ತೆಗೆಯಲಿ, ಬೇಕಿದ್ದರೆ ಅದು ಅವನ ಕಾಲಿಗೇ ಚುಚ್ಚಲಿ ಎನ್ನುತ್ತಾಳೆ.

ಕೈಯಲ್ಲಿ ರಕ್ತ ಬರುತ್ತಿದ್ದರೂ ಕುಸುಮಾ ತಡೆಯಲಿಲ್ಲ ಎಂಬ ಕಾರಣಕ್ಕೆ ತಾಂಡವ್‌ ಇನ್ನಷ್ಟು ಕೋಪಗೊಳ್ಳುತ್ತಾನೆ. ಇವರಿಗೆ ಹೇಗೆ ಬುದ್ಧಿ ಕಲಿಸುವುದು ಎಂದು ಯೋಚಿಸುತ್ತಾನೆ. ಕಡೆಗೆ ಏನೂ ಹೊಳೆದವನಂತೆ ಸುಮ್ಮನಾಗುತ್ತಾನೆ. ಭಾಗ್ಯಾಗೆ ಹಿಂಸೆ ಕೊಡಲು ತಾಂಡವ್‌ ಮತ್ತೇನು ಪ್ಲ್ಯಾನ್‌ ಮಾಡುತ್ತಾನೆ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

 

IPL_Entry_Point