ಕನ್ನಡ ಸುದ್ದಿ  /  ಮನರಂಜನೆ  /  May Kdrama 2024: ಕೊರಿಯನ್‌ ಡ್ರಾಮಾ ಪ್ರೇಮಿಗಳೇ ಇಲ್ನೋಡಿ; ಮೇ ತಿಂಗಳಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ 13 ಹೊಸ ಕೆ-ಡ್ರಾಮಾ

May Kdrama 2024: ಕೊರಿಯನ್‌ ಡ್ರಾಮಾ ಪ್ರೇಮಿಗಳೇ ಇಲ್ನೋಡಿ; ಮೇ ತಿಂಗಳಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ 13 ಹೊಸ ಕೆ-ಡ್ರಾಮಾ

May K-drama releases : ಕೊರಿಯನ್‌ ಡ್ರಾಮಾ ಪ್ರೇಮಿಗಳಿಗೆ ಮೇ ತಿಂಗಳಲ್ಲಿ ಹಲವು ಹೊಸ ಕೆ-ಡ್ರಾಮಾಗಳ ರಸದೌತಣ ಇರಲಿದೆ. ಫ್ರಾಂಕ್‌ಲಿ ಸ್ಪೀಕಿಂಗ್‌/ ನೋ ಸಿಕ್ರೇಟ್ಸ್‌ , ದಿ ಅಟೈಪಿಕಲ್‌ ಫ್ಯಾಮಿಲಿ ಸೇರಿದಂತೆ ರಿಲೀಸ್‌ ಆಗಲಿರುವ ಕೊರಿಯನ್‌ ಡ್ರಾಮಾಗಳ ಸಮಗ್ರ ಪಟ್ಟಿ ಇಲ್ಲಿದೆ.

May Kdrama 2024: ಮೇ ತಿಂಗಳಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ 13 ಹೊಸ ಕೆ-ಡ್ರಾಮಾ
May Kdrama 2024: ಮೇ ತಿಂಗಳಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ 13 ಹೊಸ ಕೆ-ಡ್ರಾಮಾ

ಬೆಂಗಳೂರು: ಮೇ ತಿಂಗಳಲ್ಲಿ ಹಲವು ಕೊರಿಯನ್‌ ಡ್ರಾಮಾಗಳು (May K-drama releases) ರಿಲೀಸ್‌ ಆಗಲಿವೆ. ಅದ್ಭುತವಾದ ಪ್ರೇಮಕಥೆಗಳು, ಹಾಸ್ಯ, ರೋಮ್ಯಾಂಟಿಕ್‌ ತಿರುವುಗಳು, ಸಸ್ಪೆನ್ಸ್‌ ಒಳಗೊಂಡ ಕೊರಿಯನ್‌ ಡ್ರಾಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಭಾರತದ ಯುವ ಜನತೆಗೆ ಕೊರಿಯನ್‌ ಡ್ರಾಮಾಗಳು ಅಚ್ಚುಮೆಚ್ಚು. ಕಾಲೇಜು ತರುಣಿ ತರುಣರಿಗಂತೂ ಕೊರಿಯನ್‌ ಡ್ರಾಮಾಗಳು, ಕೊರಿಯನ್‌ ಹೀರೋ ಹೀರೋಯಿನ್‌ಗಳೆಂದರೆ ವಿಶೇಷ ಆಸಕ್ತಿ ಇದೆ. ಪ್ರಪಂಚಾದ್ಯಂತ ಕೊರಿಯನ್‌ ಡ್ರಾಮಾಗಳಿಗೆ ದೊಡ್ಡ ಮಟ್ಟದ ಪ್ರೇಕ್ಷಕರಿದ್ದಾರೆ. ಮುಂದಿನ ತಿಂಗಳಲ್ಲಿ ರಿಲೀಸ್‌ ಆಗಲಿರುವ ಕೆಲವು ಕೊರಿಯನ್‌ ಡ್ರಾಮಾಗಳ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

1. ಫ್ರಾಂಕ್‌ಲಿ ಸ್ಪೀಕಿಂಗ್‌/ ನೋ ಸಿಕ್ರೇಟ್ಸ್‌ (Frankly Speaking / No Secrets)

ಬಿಡುಗಡೆ ದಿನಾಂಕ: ಮೇ 1

ತಾರಾಗಣ: ಕೋ ಕ್ಯೂಂಗ್ ಪಿಯೋ, ಕಾಂಗ್ ಹಾನ್ ನಾ ಮತ್ತು ಜೂ ಜಾಂಗ್ ಹ್ಯುಕ್

ಎಪಿಸೋಡ್‌ಗಳು: 12

ಎಲ್ಲಿ ನೋಡಬಹುದು: ಜೆಟಿಬಿಸಿಯಲ್ಲಿ ಬುಧವಾರ-ಗುರುವಾರ , ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

2. ದಿ ಅಟೈಪಿಕಲ್‌ ಫ್ಯಾಮಿಲಿ

ಬಿಡುಗಡೆಯ ದಿನಾಂಕ: ಮೇ 4

ತಾರಾಗಣ: ಜಂಗ್ ಕಿ ಯೋಂಗ್, ಚುನ್ ವೂ ಹೀ, ಗೋ ದೂ ಶಿಮ್ ಮತ್ತು ಕ್ಲೌಡಿಯಾ ಕಿಮ್

ಎಪಿಸೋಡ್‌ಗಳು: 12

ಎಲ್ಲಿ ನೋಡಬಹುದು: ಶನಿವಾರ-ಭಾನುವಾರಜೆಟಿಬಿಸಿಯಲ್ಲಿ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಕಥೆ ಏನು: ನೆಟ್‌ಫ್ಲಿಕ್ಸ್‌ನಲ್ಲಿ ಈ ರೀತಿ ವಿವರಣೆ ನೀಡಲಾಗಿದೆ. ಆಧುನಿಕ ಸಮಸ್ಯೆಯಿಂದ ಕುಟುಂಬವು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದೆಲ್ಲವನ್ನೂ ನಿಗೂಢ ಮಹಿಳೆ ಬದಲಾಯಿಸುತ್ತಾಳೆ ಎಂದು ನೆಟ್‌ಫ್ಲಿಕ್ಸ್‌ ಎಕ್ಸ್‌ನಲ್ಲಿ ಬರೆದಿದೆ.

3. ದಿ ಬ್ರೇವ್ ಯಾಂಗ್ ಸೂ ಜಂಗ್

ಬಿಡುಗಡೆ ದಿನಾಂಕ: ಮೇ 6

ತಾರಾಗಣ: ಉಹ್ಮ್ ಹ್ಯುನ್ ಕ್ಯೂಂಗ್, ಸಿಯೊ ಜುನ್ ಯಂಗ್, ಕ್ವಾನ್ ಹ್ವಾ ವೂನ್ ಮತ್ತು ಲಿಮ್ ಜು ಯುನ್.

ಎಲ್ಲಿ ನೋಡಬಹುದು?: ಎಂಬಿಸಿ ಟಿವಿಯಲ್ಲಿ ಸೋಮವಾರ-ಶುಕ್ರವಾರ

ಇದು ಯಾಂಗ್ ಸೂ ಜಂಗ್ ಕಥೆ. ಮನೆ ಶಾಪಿಂಗ್‌ ಹೋಸ್ಟ್‌ ಆಗಿ ಜನಪ್ರಿಯತೆ ಪಡೆಯುತ್ತಾಳೆ. ಮಹಿಳೆಯರು ಮತ್ತು ಹುಡುಗಿಯರಿಗೆ ಸ್ಪೂರ್ತಿದಾಯಕವಾಗುತ್ತಿರುವ ಇವರು ಎಲ್ಲರ ಗಮನ ಸೆಳೆಯುತ್ತಾರೆ. ಆದರೆ, ವೈಯಕ್ತಿಜ ಜೀವನದಲ್ಲಿ ವೈತಿರಿಕ್ತ ದೃಷ್ಟಿಕೋನದಿಂದ ತೊಂದರೆಯಾಗುತ್ತದೆ. ಪುರುಷನೊಬ್ಬನ ಸಾಂಗತ್ಯ ಪಡೆಯಲು ಈಕೆಗೆ ಹಳೆಯ ಪ್ರಣಯ ಜೀವನ ತೊಂದರೆ ನೀಡುತ್ತದೆ. ಮಸಂಗ್ ಗ್ರೂಪ್‌ನ ಹೆಮ್ಮೆಯ ಉತ್ತರಾಧಿಕಾರಿ ಜೂ ವೂ ಜಿನ್ ಆನ್ ಮೇಲೆ ಆರಂಭಿಕ ಆಕರ್ಷಣೆ ಇರುತ್ತದೆ. ಆದರೆ, ಯೆಯೊ ಯುಯಿ ಜೂ (ಉದ್ಯಮಿ ಮಸಂಗ್ ಗ್ರೂಪ್‌ನ ಎರಡನೇ ಮೊಮ್ಮಗತನ್ನ ನಿಜವಾದ ಗುರುತನ್ನು ತಿಳಿಯದೆ ನಿರ್ಗತಿಕ ಹಿನ್ನೆಲೆಯಲ್ಲಿ ಇರುವ ವ್ಯಕ್ತಿ) ಜತೆಗೆ ಪ್ರೀತಿ ಬೆಳೆದಾಗ ಇಡೀ ಡ್ರಾಮಾದ ಸನ್ನಿವೇಶವು ಬೇರೆ ಕಡೆಗೆ ತಿರುಗುತ್ತದೆ

4. ಬಿಗಿನ್ಸ್‌ ಯೂತ್‌

ಬಿಡುಗಡೆಯ ದಿನಾಂಕ: ಮೇ 7 ರಂದು ಭಾಗ 2, ಮೇ 14 ರಂದು ಭಾಗ 3

ತಾರಾಗಣ: ಸಿಯೋ ಜಿ ಹೂನ್, ನೋಹ್ ಜಾಂಗ್ ಹ್ಯುನ್, ಅಹ್ನ್ ಜಿ ಹೋ, ಸಿಯೋ ಯಂಗ್ ಜೂ, ಕಿಮ್ ಯೂನ್ ವೂ, ಜಂಗ್ ವೂ ಜಿನ್, ಜಿಯಾನ್ ಜಿನ್ ಸಿಯೊ

ಎಪಿಸೋಡ್‌ಗಳು: 4

ಎಲ್ಲಿ ನೋಡಬಹುದು?: ವೆಬ್ 3.0 ತಂತ್ರಜ್ಞಾನದಿಂದ ಚಾಲಿತವಾಗಿರುವ ಫಿಂಗರ್ ಲ್ಯಾಬ್ಸ್‌ನ ಹೊಸ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ - ಎಕ್ಸ್‌ಕ್ಲೂಸಿವ್‌

ಕಥಾವಸ್ತು: ಮ್ಯೂಸಿಕ್ ವೀಡಿಯೊಗಳು, ಸೇವ್ ಮಿ ವೆಬ್ಟೂನ್, ನೋಟ್ಸ್ ಇತ್ಯಾದಿ ಹೊಂದಿರುವ ಬಿಟಿಎಸ್‌ನ ಕಾಲ್ಪನಿಕ ಲೋಕವನ್ನು ಇದು ಹೊಂದಿದೆ. ಬಿಗಿನ್ಸ್‌ ಯೂತ್‌ ಎಂಬ ಯುವ ಫ್ಯಾಂಟಸಿ ಸರಣಿಯು ಮೊದಲ ಬಾರಿಗೆ ಏಪ್ರಿಲ್‌ 30ರಂದು ಪ್ರದರ್ಶನಗೊಳ್ಳಲಿದೆ. ಏಳು ಹುಡುಗರು ತಮ್ಮ ವೈಯಕ್ತಿಕ ಕಷ್ಟಗಳ ನಡುವೆ ಬದುಕಿನಲ್ಲಿ ಸಾಧನೆ ಮಾಡುವ ಪ್ರಯತ್ನವನ್ನು ಇದರಲ್ಲಿ ನೋಡಬಹುದು.

5. ದಿ ಮ ಇಡ್‌ನೈಟ್‌ ರೋಮಾನ್ಸ್‌ ಅಟ್‌ ಹ್ಯಾಗ್‌ವನ್‌

ಬಿಡುಗಡೆ ದಿನಾಂಕ: ಮೇ 11

ತಾರಾಗಣ: ಜಂಗ್ ರಿಯೊ ವೊನ್ ಮತ್ತು ವಿ ಹಾ ಜೂನ್

ಎಪಿಸೋಡ್‌ಗಳು: 16

ಎಲ್ಲಿ ನೋಡಬಹುದು?: ಶನಿವಾರ-ಭಾನುವಾರ ಟಿವಿಎನ್‌ನಲ್ಲಿ(tvN), ಸ್ಥಳೀಯ ಒಟಿಟಿ ಪ್ಲಾಟ್ಫಾರ್ಮ್ ಟಿವಿಂಗ್‌ನಲ್ಲಿ (TVING) ಸ್ಟ್ರೀಮಿಂಗ್ ಆಗಲಿದೆ.

6. ಡೇರ್‌ ಟು ಲವ್‌ ಮಿ

ಬಿಡುಗಡೆ ದಿನಾಂಕ: ಮೇ 13

ತಾರಾಗಣ: ಕಿಮ್ ಮ್ಯುಂಗ್ ಸೂ ಮತ್ತು ಲೀ ಯೂ ಯಂಗ್

ಎಪಿಸೋಡ್‌ಗಳು: 16

ಎಲ್ಲಿ ನೋಡಬಹುದು?: ಕೆಬಿಎಸ್ 2 ನಲ್ಲಿ ಸೋಮವಾರ-ಮಂಗಳವಾರ, ವಿಕಿ / ವಿಯುನಲ್ಲಿ ಪ್ರಸಾರವಾಗಬಹುದು.

7. ಕ್ರ್ಯಾಶ್‌

ಬಿಡುಗಡೆ ದಿನಾಂಕ: ಮೇ 13

ತಾರಾಗಣ: ಲೀ ಮಿನ್ ಕಿ, ಕ್ವಾಕ್ ಸನ್ ಯಂಗ್, ಹಿಯೋ ಸಂಗ್ ಟೇ, ಲೀ ಹೋ ಚುಲ್ ಮತ್ತು ಚೋಯ್ ಮೂನ್ ಹೀ

ಎಪಿಸೋಡ್‌ಗಳು: 12

ಎಲ್ಲಿ ನೋಡಬಹುದು?: ಇಎನ್ಎ

8. ಅಂಕಲ್‌ ಸಂಸಿಕ್‌

ಬಿಡುಗಡೆ ದಿನಾಂಕ: ಮೇ 15

ತಾರಾಗಣ: ಸಾಂಗ್ ಕಾಂಗ್ ಹೋ, ಬ್ಯುನ್ ಯೋ ಹಾನ್, ಲೀ ಕ್ಯೂ ಹ್ಯುಂಗ್, ಜಿನ್ ಕಿ ಜೂ ಮತ್ತು ಸಿಯೊ ಹ್ಯುನ್ ವೂ

ಎಪಿಸೋಡ್‌ಗಳು: 16

ಎಲ್ಲಿ ನೋಡಬೇಕು: ಡಿಸ್ನಿ + ಹಾಟ್‌ಸ್ಟಾರ್‌

ಕಥಾವಸ್ತು: ಈ ನಾಟಕ ಸರಣಿಯ ಮೂಲಕ ಕೊರಿಯಾದ ಪ್ರಸಿದ್ಧ ನಟ ಸಾಂಗ್ ಕಾಂಗ್ ಹೋ ಅವರು ಟಿವಿ ಸರಣಿಗೆ ಮೊದಲ ಬಾರಿಗೆ ಪ್ರವೇಶಿಸುತ್ತಾರೆ. 1960 ರ ದಶಕದ ಆರಂಭದಲ್ಲಿ ದಕ್ಷಿಣ ಕೊರಿಯಾದ ಹಿನ್ನೆಲೆಯ ಕಥೆ ಹೊಂದಿದೆ. ಜತೆಗೆ ಇಬ್ಬರು ಯುವಕರ ಬದುಕಿನ ಕಥೆಯನ್ನು ಹೊಂದಿದೆ.

9. ದಿ 8 ಶೋ

ಬಿಡುಗಡೆಯ ದಿನಾಂಕ: ಮೇ 17

ತಾರಾಗಣ: ರ್ಯು ಜುನ್ ಯೆಯೋಲ್, ಚುನ್ ವೂ ಹೀ, ಪಾರ್ಕ್ ಜಿಯೊಂಗ್ ಮಿನ್, ಲೀ ಯೋಲ್ ಯುಮ್, ಪಾರ್ಕ್ ಹೇ ಜೂನ್ ಮತ್ತು ಲೀ ಜೂ ಯಂಗ್

ಎಪಿಸೋಡ್‌ಗಳು: 8

ಎಲ್ಲಿ ನೋಡಬಹುದು?: ನೆಟ್‌ಫ್ಲಿಕ್ಸ್‌

10. ನಾಟ್‌ ಸ್ಟ್ರಾಂಗ್‌, ಬಟ್‌ ಅಟ್ರಾಕ್ಟಿವ್‌ ಹೋಮಿಸೈಡ್‌ ಸ್ಕ್ವಾಡ್‌/ ನಾಟ್‌ ವೆರಿ ಪವರ್‌ಫುಲ್‌, ಬಟ್‌ ಅಟ್ರಾಕ್ಟಿವ್‌

ಬಿಡುಗಡೆ ದಿನಾಂಕ: ಮೇ 22

ತಾರಾಗಣ: ಕಿಮ್ ಡಾಂಗ್ ವೂಕ್, ಪಾರ್ಕ್ ಜಿ ಹ್ವಾನ್, ಸಿಯೊ ಹ್ಯುನ್ ವೂ, ಪಾರ್ಕ್ ಸೆ ವಾನ್ ಮತ್ತು ಲೀ ಸೆಯುಂಗ್ ವೂ

ಎಪಿಸೋಡ್‌ಗಳು: 12

ಎಲ್ಲಿ ನೋಡಬಹುದು?: ಎಸ್‌ಬಿಎಸ್‌ ಪ್ಲಾಟ್‌ನಲ್ಲಿ ಬುಧವಾರ-ಗುರುವಾರ ವಿಕ್ಷಿಸಬಹುದು.

11. ಕನೆಕ್ಷನ್‌

ಬಿಡುಗಡೆ ದಿನಾಂಕ: ಮೇ 24

ತಾರಾಗಣ: ಜಿ ಸಂಗ್, ಜಿಯಾನ್ ಮಿ ಡೊ, ಕ್ವಾನ್ ಯುಲ್, ಜಂಗ್ ಯೂ ಮಿನ್, ಕಿಮ್ ಕ್ಯೂಂಗ್ ನಾಮ್ ಮತ್ತು ಜಂಗ್ ಜೇ ಕ್ವಾಂಗ್

ಎಪಿಸೋಡ್‌ಗಳು: 16

ಎಲ್ಲಿ ನೋಡಬಹುದು?: ಎಸ್‌ಬಿಎಸ್‌ ಟಿವಿ

12. ಬಿಟ್ಟರ್‌ ಸ್ವೀಟ್‌ ಹೆಲ್‌

ಬಿಡುಗಡೆ ದಿನಾಂಕ: ಮೇ 24

ಪಾತ್ರವರ್ಗ: ಕಿಮ್ ಹೀ ಸನ್ ಮತ್ತು ಲೀ ಹೈ ಯಂಗ್

ಎಪಿಸೋಡ್‌ಗಳು: 12

ಎಲ್ಲ ನೋಡಬಹುದು?: ಎಂಬಿಸಿ ಟಿವಿಯಲ್ಲಿ ಶುಕ್ರವಾರ-ಶನಿವಾರ ನೋಡಬಹುದು.

13. ಡ್ರೀಮಿಂಗ್ ಆಫ್ ಸಿಂಡೆ ಫಿಕ್ಸಿಂಗ್ ರೆಲ್ಲಾ

ಬಿಡುಗಡೆ ದಿನಾಂಕ: ಮೇ 2024

ತಾರಾಗಣ: ಪಿಯೋ ಯೆ ಜಿನ್ ಮತ್ತು ಲೀ ಜುನ್ ಯಂಗ್

ಎಪಿಸೋಡ್‌ಗಳು: 10

ಎಲ್ಲಿ ನೋಡಬಹುದು?: ಟಿವಿಂಗ್

IPL_Entry_Point