ಕನ್ನಡ ಸುದ್ದಿ  /  Entertainment  /  Sandalwood News Kantara Fame Manasi Sudhir Starrer Jugalbandi Movie Official Trailer Released Mnk

Jugalbandi Trailer: ಕಾಂತಾರ ಕಮಲಾಳ ಜುಗಲ್‌ಬಂದಿ ಸಿನಿಮಾ ಟ್ರೇಲರ್‌ ರಿಲೀಸ್; ಮತ್ತೆ ತಾಯಿ ಪಾತ್ರದಲ್ಲಿ ಮಾನಸಿ ಸುಧೀರ್‌

ಕಾಂತಾರ ಸಿನಿಮಾದಲ್ಲಿ ಶಿವನ ತಾಯಿಯ ಪಾತ್ರ ಮಾಡಿದ್ದ ಮಾನಸಿ ಸುಧೀರ್‌, ಇದೀಗ ಜುಗಲ್‌ಬಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್‌ ಇದೀಗ ಬಿಡುಗಡೆಯಾಗಿದೆ. ಇನ್ನೇನು ಮಾರ್ಚ್‌ 1ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

Jugalbandi Trailer: ಕಾಂತಾರ ಕಮಲಾಳ ಜುಗಲ್‌ಬಂದಿ ಸಿನಿಮಾ ಟ್ರೇಲರ್‌ ರಿಲೀಸ್; ಇಲ್ಲಿಯೂ ತಾಯಿಯಾದ ಮಾನಸಿ ಸುಧೀರ್‌
Jugalbandi Trailer: ಕಾಂತಾರ ಕಮಲಾಳ ಜುಗಲ್‌ಬಂದಿ ಸಿನಿಮಾ ಟ್ರೇಲರ್‌ ರಿಲೀಸ್; ಇಲ್ಲಿಯೂ ತಾಯಿಯಾದ ಮಾನಸಿ ಸುಧೀರ್‌

Jugalbandi Trailer: ಜುಗಲ್ ಬಂದಿ.. ಭಗವದ್ಗೀತೆ, ಕುರಾನ್, ಬೈಬಲ್ನಲ್ಲೂ ಬರ್ದಿಲ್ಲ ದುಡ್ಮಾಡದೆಂಗತ! ಎಂಬ ಟ್ಯಾಗ್‌ಲೈನ್ ಮೂಲಕ ಕುತೂಹಲ ದುಪ್ಪಟ್ಟು ಮಾಡಿರುವ ಸಿನಿಮಾ. ಈಗ ಇದೇ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ವಿಶೇಷ ಏನೆಂದರೆ, ಸಹಾಯಕ ನಿರ್ದೇಶಕರ ಕೈಯಿಂದ ಟ್ರೇಲರ್‌ ಬಿಡುಗಡೆಯಾಗಿದೆ. ನಿರ್ದೇಶಕ ದಿವಾಕರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಇನ್ನೇನು ಇದೇ ಮಾರ್ಚ್‌ 1ರಂದು ಬಿಡುಗಡೆ ಆಗಲಿದೆ. ಈ ನಿಮಿತ್ತ ಸಿನಿಮಾ ಬಗ್ಗೆ ಮಾಹಿತಿ ನೀಡಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು.

ಸ್ಕೂಲ್‌ಗೆ ಹೋಗುವಾಗ ಅಮ್ಮ ಕೈ ಹಿಡಿದು ಕರೆದುಕೊಂಡು ಹೋಗಿದ್ದರು, ಆದ್ರೆ ಚಿತ್ರರಂಗಕ್ಕೆ ಒಬ್ಬನೇ ನಡೆದುಕೊಂಡು ಬಂದಿದ್ದೇನೆ. ದಯವಿಟ್ಟು ತಪ್ಪುಗಳು ಇದ್ದರೆ, ನಮ್ಮಿಂದ ಸಮಸ್ಯೆ ಆಗಿದ್ದರೆ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಜುಗಲ್ ಬಂದಿ ಸಿನಿಮಾ ವೈಯಕ್ತಿಕವಾಗಿ ಗೆಲ್ಲಲು ಮಾಡಿರುವ ಸಿನಿಮಾವಲ್ಲ. ಚಿತ್ರರಂಗಕ್ಕೆ ಬಂದಿದ್ದೇವೆ 10 ಅಭಿಮಾನಿಗಳನ್ನಾದರು ಚಿತ್ರರಂಗಕ್ಕೆ ಕೊಡೋಣಾ. ನಮ್ಮ ಸಿನಿಮಾದಿಂದ ಚಿತ್ರರಂಗಕ್ಕೆ ಕನ್ನಡ ಸಿನಿಮಾ ಪ್ರೇಮಿಗಳನ್ನು ಕೊಡೋಣಾ ಎಂಬ ಉದ್ದೇಶದಿಂದ ಮಾಡಿದ್ದೇವೆ ಎಂಬುದು ನಿರ್ದೇಶಕ ದಿವಾಕರ್ ಡಿಂಡಿಮ ಅವರ ಮಾತು.

ಜುಗಲ್ ಬಂದಿ ಸಿನಿಮಾವನ್ನು ತುಂಬಾ ಅರ್ಗ್ಯಾನಿಕ್ ಆಗಿ ಮಾಡಿದ್ದೇನೆ. ಯಾವ ಚಿತ್ರದ ರೆಪ್ರೆನ್ಸ್ ಸಿಗಲ್ಲ.. ಈ ಚಿತ್ರ ನಿಮ್ಮೊಳಗಿನ ಪ್ರೇಕ್ಷಕರನ್ನು ಟಚ್ ಮಾಡುವುದರಲ್ಲಿ ಡೌಟ್ ಇಲ್ಲ. ಎಲ್ಲರೂ ಚಿತ್ರದಲ್ಲಿ ಎರಡು ಎರಡು ನಾಲ್ಕು ನಾಲ್ಕು ಕೆಲಸ ಮಾಡಿದ್ದೇವೆ ಎಂದೂ ಹೇಳಿಕೊಂಡರು ನಿರ್ದೇಶಕರು.

ಇಲ್ಲೂ ಅಮ್ಮನಾದ ಕಾಂತಾರ ಕಮಲ

ಅದೇ ರೀತಿ ಕಾಂತಾರ ಸಿನಿಮಾದಲ್ಲೂ ಅಮ್ಮನ ಪಾತ್ರ ಮಾಡಿದ್ದ ಮಾನಸಿ ಸುಧೀರ್ ಇಲ್ಲೂ ಅಮ್ಮನಾಗಿದ್ದಾರೆ. "ಇದೊಂದು ವಿನೂತನ ಪ್ರಯತ್ನ. ಜುಗಲ್ ಬಂಧಿ ಒಂದು ಕ್ರಿಯೇಟಿವ್ ಟೀಮ್. ಈ ತಂಡದಲ್ಲಿ ನನಗೊಂದು ಪಾತ್ರ ಮಾಡಲು ಅವಕಾಶ ನೀಡಿದ ಡಿಂಡಿಮ ಅವರಿಗೆ ಧನ್ಯವಾದ. ನನ್ನ ಪಾತ್ರ ಯಶೋಧ. ಯಶೋಧ ಅಂದತಕ್ಷಣ ಕೃಷ್ಣ ನೆನಪು ಆಗುತ್ತಾನೆ. ತಾಯಿಯ ಪ್ರೀತಿ, ನೆನಪು ವಾತ್ಸಲ್ಯ ಎಲ್ಲವೂ ನೆನಪು ಆಗುತ್ತದೆ. ಇಲ್ಲಿರುವ ಯಶೋಧಗೆ ಮಗುವಿಲ್ಲ. ಅಮ್ಮ ಎನಿಸಿಕೊಳ್ಳಲು ಕಾಯುತ್ತಿದ್ದಾಳೆ. ಅಂತಹ ಪಾತ್ರ. ಕಾಂತಾರದ ಕಮಲ ಒಂದು ರೇಂಜಾದರೆ. ಯಶೋಧ ಮತ್ತೊಂದು ರೇಂಜ್. ಕಂಪ್ಲೀಟ್ ವಿಭಿನ್ನ ಪಾತ್ರಗಳು. ಎಂದರು.

ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಯಾವುದೇ ಒಂದು ಸಿನಿಮಾದ ಘಟ್ಟವನ್ನು ದೊಡ್ಡವರಿಂದ ಉದ್ಘಾಟನೆ ಮಾಡಿಸಬೇಕೆಂದು ಆಸೆಪಟ್ಟಿರುತ್ತಾರೆ. ಆದರೆ ಈ ತಂಡ ಅಸಿಸ್ಟೆಂಟ್ ಡೈರೆಕ್ಟರ್ ಗಳಿಂದ ಟ್ರೇಲರ್ ಲಾಂಚ್ ಮಾಡಿಸಿದ್ದು ಖುಷಿ ಕೊಟ್ಟಿತು. ಅಸಿಸ್ಟೆಂಟ್ ಡೈರೆಕ್ಟರ್ ಚಿತ್ರದ ನಿಜವಾದ ಹೀರೋಗಳು. ಯಾವಾಗಲೂ ಕಥೆ ಬರೆಯುವಾಗ ಹೀರೋ ತ್ಯಾಗ ಮಾಡಿಕೊಳ್ತಾರೆ ಅಂತಾ ಬರೆಯುತ್ತೇವೆ. ಆದರೆ ನಿಜವಾದ ತ್ಯಾಗ ಮಾಡಿಕೊಳ್ಳುವವರು ಅಸಿಸ್ಟೆಂಟ್ ಡೈರೆಕ್ಟರ್. ಅವರು ಸಿನಿಮಾ ಕನಸು ಹೊತ್ತು ಊರುಬಿಟ್ಟು ಬೇರೆ ಊರಿಗೆ ಬಂದಿರ್ತಾರೆ. ಅವರೊಳಗಡೆ ಒಂದು ಹಸಿವಿರುತ್ತದೆ. ಜುಗಲ್ ಬಂಧಿ ಚೆನ್ನಾಗಿದೆ ಎಂಬುದು ಕಿವಿಗೆ ಬಿದ್ದರೆ ಹೋಗಿ ಸಿನಿಮಾ ನೋಡಿ. ತುಂಬಾ ಭರವಸೆ ಇಟ್ಟು ಬಂದಿರುವ ಚಿತ್ರ. ಕಂಟೆಂಟ್ ಚೆನ್ನಾಗಿದೆ. ಟ್ರೇಲರ್ ಚೆನ್ನಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

‘ಜುಗಲ್ ಬಂದಿ' ಒಂದೇ ಕತೆಯ ಸಿನಿಮಾ ಅಲ್ಲ. ಇದು ಹಲವು ಕಥೆಗಳ ಸಂಗಮ. ಹೀಗಾಗಿ ಕುತೂಹಲ ದುಪ್ಪಟ್ಟು ಮಾಡಿದೆ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆಯನ್ನು ಈ ಟ್ರೈಲರ್ ಒಳಗೊಂಡಿದೆ. ಅಲ್ಲದೆ ಕಾಮಿಡಿ ಸನ್ನಿವೇಶಗಳು ಸಾಕಷ್ಟಿವೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಎಲ್ಲಾ ಎಲಿಮೆಂಟ್ಸ್ ಕೂಡ ಟ್ರೇಲರ್ ನಲ್ಲಿ ಹೈಲೆಟ್ ಆಗಿದೆ. ದಿವಾಕರ್ ಡಿಂಡಿಮ ಈ ಚಿತ್ರದ ಸಾರಥಿ. ಅವರಿಗಿದು ಮೊದಲ ಪ್ರಯತ್ನ.

'ಕಾಂತಾರ' ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ತಾಯಿ ಪಾತ್ರದಲ್ಲಿ ನಟಿಸಿದ್ದ ಮಾನಸಿ ಸುಧೀರ್ ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳು. ಹಾಗೇ ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ 'ಜುಗಲ್ ಬಂದಿ' ಸಿನಿಮಾದಲ್ಲಿ ನಟಿಸಿದ್ದಾರೆ. ದಿವಾಕರ ಡಿಂಡಿಮ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಇವರದ್ದೇ. ಪ್ರದ್ಯೋತ್ತನ್ ಸಂಗೀತ ನೀಡಿದ್ರೆ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಅವರೇ ಸಾಹಿತ್ಯ ರಚಿಸಿದ್ದಾರೆ. ಟ್ರೇಲರ್ ಮೂಲಕ ಪ್ರಚಾರದ ಕಹಳೆ ಮೊಳಗಿಸಿರುವ ಚಿತ್ರತಂಡ ಮಾರ್ಚ್ 1ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಎದುರು ತರ್ತಿದೆ.