ಕನ್ನಡ ಸುದ್ದಿ  /  Entertainment  /  Kannada Television News Bigg Boss Kannada Season 10 Runner Up Drone Prathap Talks About His Dream Girl Mnk

Drone Prathap: ನಾನು ಮದುವೆ ಆಗೋ ಹುಡುಗಿ ಹೇಗಿರಬೇಕು ಅಂದ್ರೆ..; ಡ್ರೀಮ್‌ ಗರ್ಲ್‌ ಬಗ್ಗೆ ಡ್ರೋಣ್ ಪ್ರತಾಪ್‌ ಮಾತು

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರನ್ನರ್‌ ಅಪ್‌ ಆಗಿದ್ದ ಡ್ರೋನ್‌ ಪ್ರತಾಪ್‌, ಹೊಸಪೇಟೆ ಜನರ ಎದುರು ಪ್ರತ್ಯಕ್ಷರಾಗಿದ್ದಾರೆ. ಕೆಂಡಸಂಪಿಗೆ ಸೀರಿಯಲ್‌ ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಖತ್‌ ಡಾನ್ಸ್‌ ಮಾಡಿದ್ದಾರೆ. ಇದೇ ವೇಳೆ ತಾನು ಮದುವೆ ಆಗೋ ಹುಡುಗಿ ಹೇಗಿರಬೇಕು ಎಂದೂ ಹೇಳಿಕೊಂಡಿದ್ದಾರೆ.

Drone Prathap: ನಾನು ಮದುವೆ ಆಗೋ ಹುಡುಗಿ ಹೇಗಿರಬೇಕು ಅಂದ್ರೆ..; ಡ್ರೀಮ್‌ ಗರ್ಲ್‌ ಬಗ್ಗೆ ಡ್ರೋಣ್ ಪ್ರತಾಪ್‌ ಮಾತು
Drone Prathap: ನಾನು ಮದುವೆ ಆಗೋ ಹುಡುಗಿ ಹೇಗಿರಬೇಕು ಅಂದ್ರೆ..; ಡ್ರೀಮ್‌ ಗರ್ಲ್‌ ಬಗ್ಗೆ ಡ್ರೋಣ್ ಪ್ರತಾಪ್‌ ಮಾತು

Drone Prathap: ಕಾಂಟ್ರವರ್ಸಿಯ ಮೂಲಕವೇ ಕೆಲ ವರ್ಷ ಸುದ್ದಿಯಲ್ಲಿದ್ದ ಡ್ರೋಣ್ ಪ್ರತಾಪ್‌, ಬಿಗ್‌ ಬಾಸ್‌ಗೆ ಹೋಗಿ ಬಂದ ಮೇಲೆ ಅವರ ಚಹರೆಯೇ ಬದಲಾಯ್ತು. ಬಿಗ್‌ ಮನೆಯಲ್ಲಿ ಅವರ ನಿಜ ಸ್ವಭಾವ ಅವರನ್ನು ಫಿನಾಲೆ ವರೆಗೂ ಕರೆದುಕೊಂಡು ಬಂದಿತು. ಅಷ್ಟೇ ಅಲ್ಲ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ರನ್ನರ್‌ ಅಪ್‌ ಆಗಿ ಮಿಂಚಿದರು ಡ್ರೋಣ್‌ ಪ್ರತಾಪ್.‌ ಶೋ ಮುಗಿದ ಬಳಿಕ ಪ್ರತಾಪ್‌ಗೆ ಪುನರ್ಜನವೇ ಸಿಕ್ಕಂತಾಗಿತ್ತು. ಅವಮಾನವಾದ ಕಡೆಯಲ್ಲಿ ಸನ್ಮಾನ ಸಿಕ್ಕವು. ಅಪ್ಪ ಅಮ್ಮ ಹತ್ತಿರವಾದರು. ಈಗ ತನ್ನ ಹುಡುಗಿ ಬಗ್ಗೆಯೂ ಹೇಳಿಕೊಂಡಿದ್ದಾರೆ ಪ್ರತಾಪ್.

ಪ್ರತಿಯೊಬ್ಬರಿಗೂ ಅವನು/ಅವಳು ಮದುವೆಯಾಗೋ ಹುಡುಗ ಅಥವಾ ಹುಡುಗಿ ಹೇಗಿರಬೇಕು ಎಂಬ ನೂರಾರು ಕನಸುಗಳಿರುತ್ತವೆ. ಆ ಕನಸಿನ ಬಗ್ಗೆಯೇ ಇದೀಗ ಡ್ರೋಣ್‌ ಪ್ರತಾಪ್‌, ವೇದಿಕೆ ಮೇಲೆ ನೆರೆದಿದ್ದ ಸಾವಿರಾರು ಜನರ ಮುಂದೆ ಹೇಳಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಕೆಂಡಸಂಪಿಗೆ ಸೀರಿಯಲ್‌ ಸಂತೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ನ ಬಹುತೇಕರು ಭಾಗವಹಿಸಿದ್ದರು. ಪ್ರತಾಪ್‌ ಸಹ ಭಾಗವಹಿಸಿ ಡಾನ್ಸ್‌ ಮಾಡಿ ಸಂಭ್ರಮಿಸಿದ್ದಾರೆ.

ಹೀಗೆ ಡಾನ್ಸ್‌ ಬಳಿಕ, ನಿರೂಪಕ ನಿರಂಜನ್‌ ದೇಶಪಾಂಡೆ ಪ್ರತಾಪ್‌ ಜತೆ ಒಂದಷ್ಟು ಹೊತ್ತು ವೇದಿಕೆ ಮೇಲೆಯೇ ಮಾತಿಗಿಳಿದಿದ್ದಾರೆ. ತಮಗಿದ್ದ ಒಂದಷ್ಟು ಅನುಮಾನಗಳನ್ನೂ ಕ್ಲಿಯರ್‌ ಮಾಡಿಕೊಂಡಿದ್ದಾರೆ.

ನಿರಂಜನ್‌ ದೇಶಪಾಂಡೆ: ಬಿಗ್‌ ಬಾಸ್‌ ಮನೆಯಲ್ಲಿ ಇದ್ದವರೆಲ್ಲ ದೀದಿಯರೇ, ಮನೆ ಆಚೆಗೆ ಎಷ್ಟು ದೀದಿಯರಿದ್ದಾರೆ?

ಡ್ರೋಣ್‌ ಪ್ರತಾಪ್:‌ ನನ್ನ ತಂದೆ ತೋರಿಸೋ ಹುಡುಗಿಯನ್ನ ಬಿಟ್ಟರೆ, ಉಳಿದವರನ್ನು ನಾನು ದೀದಿ ಸ್ವರೂಪದಲ್ಲಿಯೇ ನೋಡ್ತಿನಿ.

ಡ್ರೋಣ್‌ ಪ್ರತಾಪ್: ಸರ್‌ ತೋರಿಕೆಗೆ ಹೇಳ್ತಿಲ್ಲ. ನಮ್ಮ ತಂದೆ ಜೀವನದಲ್ಲಿ ತುಂಬ ಕಷ್ಟಪಟ್ಟಿದ್ದಾರೆ. ನಮ್ಮ ತಂದೆ ಇಂಥವ್ರನ್ನ ನೋಡಿ ಮದುವೆ ಆಗು ಅಂದ್ರೆ, ಅಂಥವ್ರನ್ನೇ ಆಗ್ತಿನಿ.

ನಿರಂಜನ್‌ ದೇಶಪಾಂಡೆ: ನಿಮ್ಮ ದೀದಿ ಹೇಗಿರಬೇಕು ಅಂತ ಎಲ್ಲರೂ ನೋಡಿದ್ದಾರೆ. ಆದ್ರೆ ಪ್ರತಾಪ್‌ ಬೀವಿ ಹೇಗಿರಬೇಕು ಅಂತ ಯಾರೂ ನೋಡಿಲ್ಲ. ಈಗ ಆ ಸಮಯ ಬಂದಿದೆ. ಪ್ರತಾಪ್‌ ಮದುವೆ ಆಗೋ ಹುಡುಗಿ ಹೇಗಿರಬೇಕು?

ಡ್ರೋಣ್‌ ಪ್ರತಾಪ್: ನೋಡೋಕೆ ಕಪ್ಪಗಿದ್ದರೂ ಪರವಾಗಿಲ್ಲ. ಯಾವ್‌ ಕಲರ್‌ ಇದ್ದರೂ ಪರವಾಗಿಲ್ಲ

ನಿರಂಜನ್‌ ದೇಶಪಾಂಡೆ: ಇರೋದೇ ಎರಡು ಕಲರ್‌ ಒಂದು ಕಪ್ಪು ಮತ್ತೊಂದು ಬಿಳಿ. ಮತ್ಯಾರಾದರೂ ಇಲ್ಲಿ ಹಸಿರು ಬಣ್ಣದವರಿದ್ದೀರಾ?

ಡ್ರೋಣ್‌ ಪ್ರತಾಪ್: ನೋಡಿದ ತಕ್ಷಣ ಒಳ್ಳೆಯ ಹುಡುಗಿ ಅಂತ ಅನಿಸಬೇಕು

ನಿರಂಜನ್‌ ದೇಶಪಾಂಡೆ: ಎಲ್ಲಾನ ಆ ಥರ ಹುಡುಗಿ ಇದ್ದರೆ ತೋರಿಸಿಬಿಡ್ರಪ್ಪ. ನೋಡಿದ ತಕ್ಷಣ ಒಳ್ಳೆಯ ಹುಡುಗಿ ಅಂತ ಹೇಗೆ ಗೊತ್ತಾಗುತ್ತೆ.

ಡ್ರೋಣ್‌ ಪ್ರತಾಪ್: ಉದ್ದ ಜಡೆಯಿರಬೇಕು, ಆಗಾಗ ಜಡೆ ಹಾಕುತ್ತಿರಬೇಕು

ನಿರಂಜನ್‌ ದೇಶಪಾಂಡೆ: ನೋಡ್ರಪ್ಪ ಕರ್ನಾಟಕ ನೀವು ಪ್ರತಾಪ್‌ನ ಇಷ್ಟ ಪಡೋದಾದ್ರೆ, ಆ ಹುಡುಗಿಗೆ ಜಡೆ ಇರಬೇಕಂತೆ. ಹೆಣಕೋತಾ ಇರಬೇಕಂತೆ. ಯಾರೆಲ್ಲ ಇದ್ದೀರಿ.. ಹುಷಾರಮ್ಮ ಹಾರಿಸ್ಬಿಡ್ತಾರೆ ಆಮೇಲೆ..

ಹೀಗಿರುವಾಗಲೇ ಡ್ರೋಣ್‌ ಪ್ರತಾಪ್‌ನ ನೋಡಿದ ಹುಡುಗಿಯೊಬ್ಬಳು, ನಾನು ಅವರನ್ನು ಮದುವೆಯಾಗಲು ರೆಡಿ. ಅವರ ವರ್ತನೆ ಹೇಗೆ ಅಂತ ನಾನು ಬಿಗ್‌ಬಾಸ್‌ನಲ್ಲಿ ನೋಡಿದ್ದೇನೆ. ತುಂಬ ಕಷ್ಟದಿಂದ ಮೇಲೆ ಬಂದಿದ್ದಾರೆ ಎಂದಿದ್ದಾರೆ. ಆ ಹುಡುಗಿಗೂ ದೀದಿ ಎಂದು ಕರೆದು ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು ಪ್ರತಾಪ್.‌