ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌-sandalwood news kichcha sudeep talked about bigg boss season 11 darshan and his upcoming movie max mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌

ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌

ಕಿಚ್ಚ ಸುದೀಪ್‌ ಬಹು ದಿನಗಳ ಬಳಿಕ ಮಾಧ್ಯಮದ ಮುಂದೆ ಬಂದಿದ್ದರು. ಮ್ಯಾಕ್ಸ್‌ ಸಿನಿಮಾ ಅಪ್‌ಡೇಟ್‌, ನಟ ದರ್ಶನ್‌ ಜೈಲು, ಬಿಗ್‌ಬಾಸ್‌, ಯಶ್‌, ರಿಷಬ್‌ ಶೆಟ್ಟಿ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್‌ ಮಾತನಾಡಿದರು.

ಕಿಚ್ಚ ಸುದೀಪ್‌ ಬಹು ದಿನಗಳ ಬಳಿಕ ಮಾಧ್ಯಮದ ಮುಂದೆ ಬಂದಿದ್ದರು. ಮ್ಯಾಕ್ಸ್‌ ಸಿನಿಮಾ ಅಪ್‌ಡೇಟ್‌, ನಟ ದರ್ಶನ್‌ ಜೈಲು, ಬಿಗ್‌ಬಾಸ್‌, ಯಶ್‌, ರಿಷಬ್‌ ಶೆಟ್ಟಿ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್‌ ಮಾತನಾಡಿದರು.
ಕಿಚ್ಚ ಸುದೀಪ್‌ ಬಹು ದಿನಗಳ ಬಳಿಕ ಮಾಧ್ಯಮದ ಮುಂದೆ ಬಂದಿದ್ದರು. ಮ್ಯಾಕ್ಸ್‌ ಸಿನಿಮಾ ಅಪ್‌ಡೇಟ್‌, ನಟ ದರ್ಶನ್‌ ಜೈಲು, ಬಿಗ್‌ಬಾಸ್‌, ಯಶ್‌, ರಿಷಬ್‌ ಶೆಟ್ಟಿ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್‌ ಮಾತನಾಡಿದರು.

Kichcha Sudeep about Darshan: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಬಹು ದಿನಗಳ ಬಳಿಕ ಮಾಧ್ಯಮದ ಮುಂದೆ ಬಂದಿದ್ದರು. ಮ್ಯಾಕ್ಸ್‌ ಸಿನಿಮಾ ಅಪ್‌ಡೇಟ್‌, ನಟ ದರ್ಶನ್‌ ಜೈಲು, ಬಿಗ್‌ಬಾಸ್‌, ಯಶ್‌, ರಿಷಬ್‌ ಶೆಟ್ಟಿ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್‌ ಮಾತನಾಡಿದರು. ಅಷ್ಟೇ ಅಲ್ಲ ಸೆ. 2ರಂದು ನಟ ಸುದೀಪ್‌ ಬರ್ತ್‌ಡೇ ಆ ಬಗ್ಗೆಯೂ ಕಿಚ್ಚ ಬಾಯ್ಬಿಟ್ಟರು. ಅದರಲ್ಲೂ ದರ್ಶನ್‌ ಅವರನ್ನು ಭೇಟಿ ಮಾಡಲು ಜೈಲಿಗೆ ಹೋಗಬಹುದಿತ್ತಲ್ಲ ಎಂಬ ಪ್ರಶ್ನೆಯೂ ಅವರಿಗೆ ಎದುರಾಗಿದೆ. ಬಿಗ್‌ಬಾಸ್‌ ನಿರೂಪಣೆ ಬಗ್ಗೆಯೂ ತಮ್ಮದೇ ಸ್ಟೈಲ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ನಟ ಕಿಚ್ಚ ನಿರೂಪಣೆ ಮಾಡಲ್ಲ ಎಂಬ ಗುಲ್ಲು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಬೇರೆ ಕಲಾವಿದರನ್ನು ಹುಡುಕಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, "ಅವರು ಬೇರೆಯವರನ್ನು ಹುಡುಕಲಿ ಎಂದು ನಾನು ಬಯಸುತ್ತೇನೆ" ಎಂದಿದ್ದಾರೆ ಕಿಚ್ಚ. ಹೊಸ ಸೀಸನ್‌ನ ಮಾತುಕಥೆ, ಚರ್ಚೆಗಳು ನಡೆಯುತ್ತಿವೆ ಇನ್ನೇನು ಶೀಘ್ರದಲ್ಲಿ ಅನೌನ್ಸ್‌ ಆಗುತ್ತೆ ಎಂದಿದ್ದಾರೆ.

ದರ್ಶನ್‌ ಭೇಟಿ ಬಗ್ಗೆ ಸುದೀಪ್‌ ಮಾತು..

ಜೈಲಲ್ಲಿದ್ದ ದರ್ಶನ್ ಅವರನ್ನು ಹೋಗಿ ಭೇಟಿ ಮಾಡಬೇಕು ಅನ್ನಿಸಿಲ್ಲವೇ? ಎಂಬ ಪ್ರಶ್ನೆಯೂ ಸುದೀಪ್‌ಗೆ ಕೇಳಿಬಂತು. ಅದಕ್ಕೂ ಉತ್ತರಿಸಿದ ಅವರು, "ನಾವಿಬ್ಬರು ಒಟ್ಟಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೆ, ನಾನು ಹೋಗಿ ಭೇಟಿ ಮಾಡಿಬರುತ್ತಿದ್ದೆ. ಆದರೆ ನಾವಿಬ್ಬರು ಮಾತನಾಡುತ್ತಿಲ್ಲವೇ? ಕೆಲವೊಮ್ಮೆ ಈ ಅಂತರ ಯಾಕೆ ಕಾಯ್ದುಕೊಳ್ತೀವಿ ಅಂದ್ರೆ ನಾವು ಸರಿಯಲ್ಲ, ಅವರು ಸರಿಯಿಲ್ಲ ಅಂತ ಅಲ್ಲ. ನಾವು ಇಬ್ಬರೂ ಒಟ್ಟಿಗೆ ಸರಿಯಿಲ್ಲ ಅಂತ. ಸೂರ್ಯ ಹಗಲು ಬರಬೇಕು, ಚಂದ್ರ ರಾತ್ರಿ ಬರಬೇಕು. ಆಗಲೇ ಚೆಂದ ಅಲ್ವಾ? ಎರಡೂ ಒಟ್ಟಿಗೆ ಬಂದರೆ ಸರಿಯಾಗಲ್ಲ" ಎಂದಿದ್ದಾರೆ.

ಮದಕರಿ ನಾಯಕರ ಕುರಿತು ನಟ ಸುದೀಪ್‌ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಕಳೆದ ಕೆಲ ವರ್ಷಗಳಿಂದ ಇದ್ದೇ ಇದೆ. ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಅದೇ ಸಿನಿಮಾವನ್ನು ನಟ ದರ್ಶನ್‌ ಮಾಡ್ತಾರೆ ಎನ್ನಲಾಗಿತ್ತು. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ ಮಾಡುವುದು ಖಚಿತವಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಪ್ರತಿಕ್ರಿಯಿಸಿದ್ದಾರೆ.

ವೀರ ಮದಕರಿ ನಾಯಕರ ಸಿನಿಮಾ ಬಿಟ್ಟುಕೊಟ್ಟೆ

"ಅಷ್ಟಕ್ಕೂ ನಾನು ವೀರಮದಕರಿನೇ, ಈಗ ನೀವು ಈ ಪ್ರಶ್ನೆ ಕೇಳಿದ್ರಿ. ನಾನು ಉತ್ತರ ಕೊಟ್ಟೆ. ಸೋಷಿಯಲ್‌ ಮೀಡಿಯಾದಲ್ಲಿ ಇದಕ್ಕೂ ಮತ್ತೆ ಜಾತಿ ಪಟ್ಟ ಕಟ್ತಾರೆ. ನಾನು ಹಾಗೆಲ್ಲಾ ಇಲ್ಲ. ನಾನು ಸಿನಿಮಾದವನು. ಪಾತ್ರ ನಂಬುವವನು. ಮರೆಯಬೇಡಿ ಇದೇ ಸಿನಿಮಾ ನಾನು ಮಾಡಬೇಕು ಅಂದಾಗ ನಮ್ಮ ಸಹೋದರ ಸಮಾನರಾದ ರಾಕ್‌ಲೈನ್ ವೆಂಕಟೇಶ್ ಇನ್ನೊಬ್ಬ ಸಹ ಕಲಾವಿದ (ದರ್ಶನ್) ನಿಗೆ ಇದು ಬಿಟ್ಟುಕೊಡಬೇಕು ಎಂದರು. ಅಷ್ಟಕ್ಕೂ ಅದಕ್ಕೂ ಮೊದಲು ಈ ಸಿನಿಮಾ ಸಲುವಾಗಿ ನಾನು 3 ವರ್ಷ ಶ್ರಮ ಹಾಕಿದ್ದೆ. ಆದರೂ ಆ ಸಿನಿಮಾ ಬಿಟ್ಟುಕೊಟ್ಟೆ. ನಾನೇ ಮಾಡಬೇಕು ಎನ್ನುವ ಸ್ವಾರ್ಥ ನನಗಿಲ್ಲ. ರಾಕ್‌ಲೈನ್ ನಾನು ತುಂಬ ಇಷ್ಟಪಡುವ ವ್ಯಕ್ತಿ. ಅವರು ಬೇಕೆಂದಿದ್ದಾರೆ ಬಿಟ್ಟುಕೊಟ್ಟಿದ್ದೀನಿ. ಆವ್ರು ಮಾಡ್ಲಿಲ್ಲ. ಅದು ಬೇರೆ ವಿಚಾರ ಎಂದಿದ್ದಾರೆ ಸುದೀಪ್.‌