Jigar Teaser: ಸಮುದ್ರ ತಟದ ರಕ್ತದ ಕಥೆ ಹೇಳಲಿದೆ ಜಿಗರ್; ಮಾಸ್ ಅವತಾರದಲ್ಲಿ ಕ್ಲಾಸ್‌ ಹೀರೋ ಪ್ರವೀಣ್ ತೇಜ್
ಕನ್ನಡ ಸುದ್ದಿ  /  ಮನರಂಜನೆ  /  Jigar Teaser: ಸಮುದ್ರ ತಟದ ರಕ್ತದ ಕಥೆ ಹೇಳಲಿದೆ ಜಿಗರ್; ಮಾಸ್ ಅವತಾರದಲ್ಲಿ ಕ್ಲಾಸ್‌ ಹೀರೋ ಪ್ರವೀಣ್ ತೇಜ್

Jigar Teaser: ಸಮುದ್ರ ತಟದ ರಕ್ತದ ಕಥೆ ಹೇಳಲಿದೆ ಜಿಗರ್; ಮಾಸ್ ಅವತಾರದಲ್ಲಿ ಕ್ಲಾಸ್‌ ಹೀರೋ ಪ್ರವೀಣ್ ತೇಜ್

Praveen Tej: ಪ್ರವೀಣ್‌ ತೇಜ್‌ ನಟನೆಯ ಜಿಗರ್‌ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಈ ಹಿಂದೆ ಕ್ಲಾಸ್‌ ಮತ್ತು ಲವರ್‌ ಬಾಯ್‌ ಅವತಾರದಲ್ಲಿ ಎದುರಾಗಿದ್ದ ಪ್ರವೀಣ್‌, ಇದೀಗ ಮಾಸ್‌ ಅವತಾರಲ್ಲಿ ಎಂಟ್ರಿ ಕೊಟ್ಟಿದ್ದಾರೆ.

Jigar Teaser: ಸಮುದ್ರ ತಟದ ರಕ್ತದ ಕಥೆ ಹೇಳಲಿದೆ ಜಿಗರ್; ಮಾಸ್ ಅವತಾರದಲ್ಲಿ ಕ್ಲಾಸ್‌ ಹೀರೋ ಪ್ರವೀಣ್ ತೇಜ್
Jigar Teaser: ಸಮುದ್ರ ತಟದ ರಕ್ತದ ಕಥೆ ಹೇಳಲಿದೆ ಜಿಗರ್; ಮಾಸ್ ಅವತಾರದಲ್ಲಿ ಕ್ಲಾಸ್‌ ಹೀರೋ ಪ್ರವೀಣ್ ತೇಜ್

Jigar Teaser: ನಟ ಪ್ರವೀಣ್ ತೇಜ್ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಪ್ರವೀಣ್ ಈ ಬಾರಿ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಬಾರಿಗೆ ಪ್ರವೀಣ್ ಆಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಿದ್ದ ಸಿನಿಮಾತಂಡ, ಇದೀಗ ಟೀಸರ್ ಮೂಲಕ ಎಂಟ್ರಿ ಕೊಟ್ಟಿದೆ.

ಕರಾವಳಿ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಜಿಗರ್, ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ. ರೊಮ್ಯಾಂಟಿಕ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರವೀಣ್ ಜಿಗರ್‌ನಲ್ಲಿ ಚಾಕು ಚುಚ್ಚಿ ರಕ್ತ ಹರಿಸಿದ್ದನ್ನು ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಚಿತ್ರಕ್ಕೆ ಸೂರಿ ಕುಂದರ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಸೂರಿ ಅವರಿಗೆ ಇದು ಮೊದಲ ಸಿನಿಮಾ.

ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಿರ್ದೇಶಕ ಸೂರಿ ಜಿಗರ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಮೊದಲ ಸಿನಿಮಾದ ಮೇಲೆ ನಿರ್ದೇಶಕ ಸೂರಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯು ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಗಿದ್ದು ಪೂಜಾ ವಸಂತ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.ಪ್ರವೀಣ್‌ಗೆ ನಾಯಕಿಯಾಗಿ ವಿಜಯಶ್ರೀ ಕಾಣಿಸಿಕೊಂಡಿದ್ದಾರೆ. ವಿಜಯಶ್ರೀ ಅವರಿಗೂ ಇದು ಮೊದಲ ಸಿನಿಮಾವಾಗಿದೆ. ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮಲ್ಫೆ, ಮರುವಂತೆ, ಮಂಗಳೂರು ಸುತ್ತಮುತ್ತ ಜಿಗರ್ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಸಂಪೂರ್ಣ ಸಿನಿಮಾ ಕೂಡ ಇದೇ ಬ್ಯಾಕ್‌ಡ್ರಾಪ್‌ನಲ್ಲಿ ಇರಲಿದೆ. ಪ್ರವೀಣ್ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಎದುರುನೋಡುತ್ತಿದ್ದಾರೆ. ಕೊನೆಯದಾಗಿ ಪ್ರವೀಣ್ ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಜಿಗರ್‌ ಜತೆ ಆಗಮಿಸಿದ್ದಾರೆ.

Whats_app_banner