ನಾನು ಚಿತ್ರರಂಗದಲ್ಲಿ ಇರಬೇಕೋ ಬೇಡವೋ ಎಂಬುದನ್ನು ಭೈರಾದೇವಿ ಸಿನಿಮಾ ನಿರ್ಧರಿಸಲಿದೆ!; ರಾಧಿಕಾ ಕುಮಾರಸ್ವಾಮಿ-sandalwood news ramesh aravind radhika kumaraswamy starrer bhairadevi kannada movie trailer released mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಾನು ಚಿತ್ರರಂಗದಲ್ಲಿ ಇರಬೇಕೋ ಬೇಡವೋ ಎಂಬುದನ್ನು ಭೈರಾದೇವಿ ಸಿನಿಮಾ ನಿರ್ಧರಿಸಲಿದೆ!; ರಾಧಿಕಾ ಕುಮಾರಸ್ವಾಮಿ

ನಾನು ಚಿತ್ರರಂಗದಲ್ಲಿ ಇರಬೇಕೋ ಬೇಡವೋ ಎಂಬುದನ್ನು ಭೈರಾದೇವಿ ಸಿನಿಮಾ ನಿರ್ಧರಿಸಲಿದೆ!; ರಾಧಿಕಾ ಕುಮಾರಸ್ವಾಮಿ

Bhairadevi Kannada Movie Trailer: ಭೈರಾದೇವಿ ಸಿನಿಮಾ ಬಿಡುಗಡೆ ಸನಿಹದಲ್ಲಿ ಇರುವಾಗಲೇ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ದೊಡ್ಡ ನಿರ್ಧಾರದ ಸುಳಿವೊಂದನ್ನು ನೀಡಿದ್ದಾರೆ. ಆ ಸುದ್ದಿ ಸುಳ್ಳಾಗಲಿ ಎಂದು ಅವರ ಫ್ಯಾನ್ಸ್‌ ಬಯಸುತ್ತಿದ್ದಾರೆ. ಅಷ್ಟಕ್ಕೂ ರಾಧಿಕಾ ಹೇಳಿದ್ದೇನು? ಇಲ್ಲಿದೆ ನೋಡಿ ವಿವರ

‘ನಾನು ಚಿತ್ರರಂಗದಲ್ಲಿ ಇರಬೇಕೋ ಬೇಡವೋ ಎಂಬುದನ್ನು ಭೈರಾದೇವಿ ಸಿನಿಮಾ ನಿರ್ಧರಿಸಲಿದೆ!’; ರಾಧಿಕಾ ಕುಮಾರಸ್ವಾಮಿ
‘ನಾನು ಚಿತ್ರರಂಗದಲ್ಲಿ ಇರಬೇಕೋ ಬೇಡವೋ ಎಂಬುದನ್ನು ಭೈರಾದೇವಿ ಸಿನಿಮಾ ನಿರ್ಧರಿಸಲಿದೆ!’; ರಾಧಿಕಾ ಕುಮಾರಸ್ವಾಮಿ

Bhairadevi kannada movie trailer: ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಭೈರಾದೇವಿ ಮೂಲಕ ಬೆಳ್ಳಿತೆರೆ ಮೇಲೆ ಬರಲು ತಯಾರಿ ನಡೆಸಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕು ಎಂಬ ನಿಟ್ಟಿನಲ್ಲಿ ಅವರ ಆಗಮನವಾಗುತ್ತಿದೆ. ಚಿತ್ರದಲ್ಲಿ ಟೈಟಲ್‌ ರೋಲ್‌ ಪ್ಲೇ ಮಾಡಿರುವ ರಾಧಿಕಾ, ಈ ಸಿನಿಮಾದ ನಿರ್ಮಾಣವನ್ನೂ ಮಾಡಿದ್ದಾರೆ. ಇನ್ನೇನು ಅಕ್ಟೋಬರ್‌ 3ರಂದು ಈ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮೊದಲು ಈ ಸಿನಿಮಾದಲ್ಲಿ ಏನಿದೆ ಎಂಬುದನ್ನು ಹೇಳುವುದಕ್ಕೆಂದೇ ಟ್ರೇಲರ್‌ ಹೊರತಂದಿದೆ ಚಿತ್ರತಂಡ.

ಶಮಿಕ ಎಂಟರ್ಪ್ರೈಸಸ್ ಬ್ಯಾನರ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗಿಯೂ ನಟಿಸಿರುವ ಭೈರಾದೇವಿ ಸಿನಿಮಾ ಮುಂದಿನ ತಿಂಗಳ ಅಕ್ಟೋಬರ್ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದರ ಪೂರ್ವಭಾವಿಯಾಗಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಈ ವೇಳೆ ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ಸಿನಿಮಾ ಜರ್ನಿಯನ್ನು ಮೆಲುಕು ಹಾಕಿದರು. ಸಿನಿಮಾ ನಿರ್ಮಾಣದ ಹಿಂದಿನ ಸಮಸ್ಯೆಗಳನ್ನೂ ಬಿಚ್ಚಿಟ್ಟರು. ಹೀಗಿದೆ ರಾಧಿಕಾ ಮಾತು.

ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?

"ನಿರ್ದೇಶಕ ಶ್ರೀಜೈ ನಮ್ಮ ಮನೆಗೆ ಬಂದು ಕಥೆ ಹೇಳಿದರು‌. ಕಥೆ ಇಷ್ಟವಾಗಿ, ಈ ಚಿತ್ರ ನಿರ್ಮಾಣಕ್ಕೆ ಹಾಗೂ ನಟಿಸಲು ಒಪ್ಪಿಕೊಂಡೆ. ಈ ಚಿತ್ರ ಆರಂಭವಾದಾಗಿನಿಂದ ಬಿಡುಗಡೆಯವರೆಗೂ ಸಾಕಷ್ಟು ಅಡೆತಡೆಗಳಾಗಿವೆ. ಹಾಗಾಗಿ ನಾನು ಚಿತ್ರದ ಬಿಡುಗಡೆ ಯೋಚನೆಯನ್ನೇ ಮಾಡಿರಲಿಲ್ಲ‌. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಸಿಕ್ಕ ದಂಪತಿ ಹೇಳಿದ ಮಾತೊಂದರ ಸ್ಪೂರ್ತಿಯಿಂದ ಈ ಚಿತ್ರವನ್ನು ಒಂದು ತಿಂಗಳೊಳಗೆ ಬಿಡುಗಡೆ ಮಾಡೋಣ ಎಂದು ನನ್ನ ಅಣ್ಣನಿಗೆ ಹೇಳಿದೆ. ಇದೀಗ ಭೈರಾದೇವಿ ಚಿತ್ರ ಪ್ರೇಕ್ಷಕರಿಗೆ ಇಷ್ಟವಾದರೆ ಇನ್ನೊಂದು ಸಿನಿಮಾ ಮಾಡುತ್ತೇನೆ. ಇಷ್ಟ ಆಗಲಿಲ್ಲ ಎಂದರೆ ಚಿತ್ರರಂಗದಿಂದಲೇ ದೂರ ಆಗಿಬಿಡುತ್ತೇನೆ. ಇದು ದೊಡ್ಡ ಯಶಸ್ಸಾಗುತ್ತದೆ ಎಂಬ ನಂಬಿಕೆ ನನಗಿದೆ" ಎಂದರು ರಾಧಿಕಾ ಕುಮಾರಸ್ವಾಮಿ.

ಆಪ್ತಮಿತ್ರ ನೆನಪಾಯಿತು..

"ನಾನು ಈ ಚಿತ್ರದಲ್ಲಿ ಪೊಲೀಸ್‍ ಅಧಿಕಾರಿ. ಅರವಿಂದ್ ನನ್ನ ಪಾತ್ರದ ಹೆಸರು. ಯಾವುದೇ ತರಹದ ರೌಡಿಗಳನ್ನು ಸದ್ದೆ ಬಡೆಯುವ ಖಡಕ್ ಪೊಲೀಸ್ ಆಫೀಸರ್ ನಾನು. ಆದರೆ, ಈ ಚಿತ್ರದಲ್ಲಿ ನನ್ನಗಿರುವ ವೈರಿ ಈ ರಾಜ್ಯದವರಲ್ಲ, ಈ ದೇಶದವರಲ್ಲ, ಬದಲಿಗೆ ಈ ಲೋಕದಲ್ಲಿರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಒಂದು ಶಕ್ತಿಯ ವಿರುದ್ಧ ಹೋರಾಡಬೇಕು. ಇನ್ನು ಈ ಚಿತ್ರದ ಟ್ರೇಲರ್ ನೋಡಿದಾಗ, ನನಗೆ ಆಪ್ತಮಿತ್ರ ಚಿತ್ರ ನೆನಪಾಯಿತು. ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿ ಹಾಗೂ ನಾಯಕಿಯಾಗಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿ ಪಾತ್ರದಲ್ಲಂತೂ ಅವರ ಅಭಿನಯ ಮನೋಜ್ಞ. ಅವರು ಆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಅವರೊಂದಿಗೆ ಮಾತನಾಡಲಿಕ್ಕೆ ಭಯವಾಗುತ್ತಿತ್ತು" ಎಂದರು ನಟ ರಮೇಶ್ ಅರವಿಂದ್.

"ಹೃದಯ ಹೃದಯ" ಚಿತ್ರ ತೆರೆಕಂಡು ಇಪ್ಪತ್ತೈದು ವರ್ಷಗಳಾಗಿದೆ. ನಾನು ಈಗ ನನ್ನ‌ ಸಿನಿ ಜರ್ನಿಯ ರಜತ ಮಹೋತ್ಸವ ಆಚರಿಸುತ್ತಿದ್ದೇನೆ. ರಮೇಶ್ ಅವರ ಜೊತೆ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲೂ ಅವರ ಜೊತೆ ನಟಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶ್ರೀಜೈ ಅವರ ಕಥೆಯೂ ಬಹಳ ಚೆನ್ನಾಗಿದೆ ಎಂದರು ಅನು ಪ್ರಭಾಕರ್.

ನಿರ್ದೇಶಕರ ಮಾತು

ಈ ಚಿತ್ರ ಇಷ್ಟು ಅದ್ದೂರಿಯಾಗಿ ಬರಲು ಕಾರಣ ನಮ್ಮ‌ ನಿರ್ಮಾಪಕರು‌ ಮೊದಲು ಅವರಿಗೆ ಧನ್ಯವಾದ ಹೇಳುತ್ತೇನೆ. ಇನ್ನು, ಕಲಾವಿದರಿಗೆ ನಾನು ಬಹಳ ತೊಂದರೆ ಕೊಟ್ಟಿದ್ದೇನೆ. ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್, ರವಿಶಂಕರ್, ರಂಗಾಯಣ ರಘು ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಂತ್ರಜ್ಞರ ಕಾರ್ಯವೈಖರಿಯೂ‌ ಅದ್ಭುತವಾಗಿದೆ ಎಂದು ನಿರ್ದೇಶಕ ಶ್ರೀಜೈ ತಿಳಿಸಿದರು.

 

mysore-dasara_Entry_Point