Devara Review: ಜ್ಯೂ ಎನ್‌ಟಿಆರ್ ದೇವರ ಸಿನಿಮಾ ವಿಶೇಷ ಪ್ರೀಮಿಯರ್ ಶೋ; ಬಿಡುಗಡೆಗೂ ಮುನ್ನವೇ ಹೊರಬಿತ್ತು ವಿಮರ್ಶೆ
ಟಾಲಿವುಡ್ ಗಣ್ಯರಿಗಾಗಿ ದೇವರ ಸಿನಿಮಾ ವಿಶೇಷ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಸೆಪ್ಟೆಂಬರ್ 27 ರಂದು ತೆರೆಗೆ ಬರುತ್ತಿರುವ ಸಿನಿಮಾ ವಿಮರ್ಶೆ ಈಗಲೇ ಹೊರ ಬಿದ್ದಿದೆ. ಸಿನಿಮಾ, ಖಂಡಿತ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಸಿನಿಮಾ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಜ್ಯೂ ಎನ್‌ಟಿಆರ್ ಜೊತೆಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.
ಎನ್ ಟಿಆರ್ ಅಭಿನಯದ ದೇವರ ಚಿತ್ರ ಸೆಪ್ಟೆಂಬರ್ 27 ರಂದು ತೆರೆಗೆ ಬರಲಿದೆ. ಎಸ್ ಎಸ್ ರಾಜಮೌಳಿ ಜೊತೆಗೆ ಎನ್ ಟಿಆರ್ ಅವರ ಕೆಲವು ಆಪ್ತರು ಇತ್ತೀಚೆಗೆ ದೇವರ ಚಿತ್ರವನ್ನು ನೋಡಿದ್ದಾರೆ ಎಂದು ವರದಿಯಾಗಿದೆ. ಊರಮಗಳ ಕಥೆಯಿಂದ ದೇವರ ಅಭಿಮಾನಿಗಳು ಖುಷಿ ಪಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ ಎಂದು ಗೊತ್ತಾಗಿದೆ.
ದೇವರ ಫಸ್ಟ್ ರಿವ್ಯೂ: ಜ್ಯೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್ ಕಾಂಬಿನೇಶನ್ ದೇವರ ಸಿನಿಮಾ ಬಿಡುಗಡೆಗೆ ಇನ್ನು 4 ದಿನಗಳು ಬಾಕಿ ಇವೆ. ಸಿನಿಮಾ ರಿಲೀಸ್ ಆಗುವ ಮುನ್ನವೇ ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ದೇವರ ಚಿತ್ರವು ಸೆಪ್ಟೆಂಬರ್ 27 ರಂದು ಪ್ಯಾನ್-ಇಂಡಿಯನ್ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಮಾಸ್ ಆ್ಯಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿರುವ ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ.
ಟಾಲಿವುಡ್ ಗಣ್ಯರಿಗಾಗಿ ವಿಶೇಷ ಪ್ರೀಮಿಯರ್
ದೇವರ ಚಿತ್ರತಂಡ ಇತ್ತೀಚೆಗೆ ರಾಜಮೌಳಿ ಹಾಗೂ ಕುಟುಂಬ, ಆಪ್ತ ವಲಯ ಹಾಗೂ ಟಾಲಿವುಡ್‌ನ ಇತರ ಗಣ್ಯರಿಗಾಗಿ ವಿಶೇಷ ಪ್ರೀಮಿಯರ್ ಶೋ ಏರ್ಪಡಿಸಿತ್ತು. ದೇವರ ಸಿನಿಮಾ ವೀಕ್ಷಿಸಿದವರು ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಎನ್‌ಟಿಆರ್, ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಸೇರಿದಂತೆ ಎಲ್ಲರ ನಟನೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಸೆಕೆಂಡ್ ಆಫ್ ಬಹಳ ಕುತೂಹಲಕಾರಿಯಾಗಿದೆ. ಅದರಲ್ಲೂ ಕೊನೆಯ 30 ನಿಮಿಷ ಪ್ರೇಕ್ಷಕರನ್ನು ಖಂಡಿತ ಕುರ್ಚಿಯ ತುದಿಗೆ ತಂದು ಕೂರಿಸುತ್ತದ ಎಂದು ಚಿತ್ರ ನೋಡಿದವರು ಕಾಮೆಂಟ್ ಮಾಡಿದ್ದಾರೆ. ಚಿತ್ರದ ಆಕ್ಷನ್ ಸೀಕ್ವೆನ್ಸ್‌ಗಳು ಗೂಸ್ ಬಂಪ್ಸ್ ಉಂಟು ಮಾಡುತ್ತವೆ ಎಂದು ನೋಡಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
1200 ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸುತ್ತಿರುವ ದೇವರ
ತೆಲುಗು ರಾಜ್ಯಗಳಲ್ಲಿ 1200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದೇವರ ಚಿತ್ರ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ . ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ದೇವರ ತೆರೆ ಕಾಣುತ್ತಿದೆ. ಈಗಾಗಲೇ ಜ್ಯೂ ಎನ್‌ಟಿಆರ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಭಾನುವಾರ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಇವೆಂಟ್ ರದ್ದುಪಡಿಸಲಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ತೆಲುಗಿನಲ್ಲಿ 50 ಕೋಟಿ ಹಾಗೂ ವಿಶ್ವಾದ್ಯಂತ 100 ಕೋಟಿಗೂ ಹೆಚ್ಚು ಗಳಿಸುವ ಅವಕಾಶ ಈ ಚಿತ್ರಕ್ಕಿದೆ ಎನ್ನಲಾಗುತ್ತಿದೆ . ಕಲೆಕ್ಷನ್ ವಿಚಾರದಲ್ಲಿ ಟಾಲಿವುಡ್‌ನಲ್ಲಿ ದಾಖಲೆ ಬರೆಯುವುದು ಖಚಿತ ಎನ್ನಲಾಗಿದೆ. ಈಗಾಗಲೇ ಮುಂಗಡ ಬುಕ್ಕಿಂಗ್‌ನೊಂದಿಗೆ ಚಿತ್ರವು ವಿದೇಶದಲ್ಲಿ ದಾಖಲೆ ಬರೆಯುತ್ತಿದೆ. ಬಿಡುಗಡೆಗೆ ಒಂದು ವಾರ ಮುಂಚೆಯೇ 12 ಕೋಟಿಯವರೆಗೆ ಮುಂಗಡ ಬುಕಿಂಗ್ ಮಾಡಲಾಗಿದೆ.
ಟಿಕೆಟ್ ಬೆಲೆಯಲ್ಲಿ ಹೆಚ್ಚಳ
ಮತ್ತೊಂದೆಡೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದೇವರ ಚಿತ್ರದ ಟಿಕೆಟ್ ದರವನ್ನು ಹೆಚ್ಚಿಸಲು ಎರಡೂ ರಾಜ್ಯ ಸರ್ಕಾರಗಳು ಅನುಮತಿ ನೀಡಿವೆ . ಎಪಿಯಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ 135 ರೂ., ಸಿಂಗಲ್ ಸ್ಕ್ರೀನ್‌ಗಳಲ್ಲಿ 110 ರೂ. ಮತ್ತು 60 ರೂ.ಗಳ ಬೆಲೆಯನ್ನು ಹೆಚ್ಚಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮಿಡ್ ನೈಟ್ ಶೋ ಹಾಗೂ ಹೆಚ್ಚುವರಿ ಪ್ರದರ್ಶನಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಬಿಡುಗಡೆಯಾದಾಗಿನಿಂದ 9 ದಿನಗಳ ಕಾಲ ಪ್ರತಿದಿನ 6 ಶೋ ಇರಲಿದೆ. ಇದಕ್ಕಾಗಿ ಇತ್ತೀಚೆಗೆ ಜ್ಯೂ ಎನ್‌ಟಿಆರ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಧನ್ಯವಾದ ಅರ್ಪಿಸಿದ್ದರು.
ಜಾನ್ವಿ ಕಪೂರ್ ಟಾಲಿವುಡ್ ಎಂಟ್ರಿ
ದೇವರ ಚಿತ್ರದ ಮೂಲಕ ಜಾನ್ವಿ ಕಪೂರ್ ದಕ್ಷಿಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಿದ್ದು, ಶ್ರೀಕಾಂತ್, ಪ್ರಕಾಶ್ ರಾಜ್, ಶೈನ್ ಟಾಮ್ ಚಾಕೊ ಸೇರಿದಂತೆ ದಕ್ಷಿಣದ ಭಾಷೆಗಳ ಅನೇಕ ನಟರು ಕಾಣಿಸಿಕೊಳ್ಳಲಿದ್ದಾರೆ. ದೇವರ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಿದ್ದಾರೆ. ದೇವರ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ. ಮೊದಲ ಭಾಗಕ್ಕೆ 300 ಕೋಟಿ ಖರ್ಚು ಮಾಡಲಾಗಿದೆ.