ಮದುವೆಗೂ ಮುನ್ನವೇ ಗರ್ಭಿಣಿ! ಅಬಾರ್ಷನ್‌ಗೆ ಲಕ್ಷ ಲಕ್ಷಕ್ಕೆ ಬೇಡಿಕೆ; ಈಗ ಈ ನಟಿಯ ಸಂಭಾವನೆಯೇ ಕೋಟಿ ಕೋಟಿ-sandalwood news do you remember this south actress had made a lot of noise regarding gossip ramya krishnan gossips mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮದುವೆಗೂ ಮುನ್ನವೇ ಗರ್ಭಿಣಿ! ಅಬಾರ್ಷನ್‌ಗೆ ಲಕ್ಷ ಲಕ್ಷಕ್ಕೆ ಬೇಡಿಕೆ; ಈಗ ಈ ನಟಿಯ ಸಂಭಾವನೆಯೇ ಕೋಟಿ ಕೋಟಿ

ಮದುವೆಗೂ ಮುನ್ನವೇ ಗರ್ಭಿಣಿ! ಅಬಾರ್ಷನ್‌ಗೆ ಲಕ್ಷ ಲಕ್ಷಕ್ಕೆ ಬೇಡಿಕೆ; ಈಗ ಈ ನಟಿಯ ಸಂಭಾವನೆಯೇ ಕೋಟಿ ಕೋಟಿ

ಒಂದು ಕಾಲದಲ್ಲಿ ಸ್ಟಾರ್‌ ನಾಯಕಿಯಾಗಿ ಸೌತ್‌ ಜತೆಗೆ ಬಾಲಿವುಡ್‌ನಲ್ಲಿಯೂ ಮಿಂಚಿದವರು ಈ ನಟಿ. ಸಿನಿಮಾ ಜತೆ ಜತೆಗೆ ಗಾಸಿಪ್‌ಗಳಿಂದಲೂ ಸದ್ದು ಮಾಡಿ ಸುದ್ದಿಯಾಗಿದ್ದರು. ಮದುವೆಗೂ ಮುನ್ನ ಗರ್ಭಿಣಿಯಾಗಿ, ಅಬಾರ್ಷನ್‌ಗೆ ಲಕ್ಷ ಲಕ್ಷ ಡಿಮಾಂಡ್‌ ಸಹ ಇಟ್ಟಿದ್ದರಂತೆ. ಹಾಗಾದರೆ, ಯಾರು ಈ ನಟಿ?

ಈ ಫೋಟೋದಲ್ಲಿರುವ ನಟಿ ಯಾರು ಎಂದು ಗುರುತಿಸುವಿರಾ?
ಈ ಫೋಟೋದಲ್ಲಿರುವ ನಟಿ ಯಾರು ಎಂದು ಗುರುತಿಸುವಿರಾ?

South Actress: ಬಣ್ಣದ ಲೋಕದಲ್ಲಿ ನಾಯಕಿಯಾಗಿ ಗುರುತಿಸಿಕೊಳ್ಳುವುದೇ ದೊಡ್ಡ ಸವಾಲು. ಅದರಲ್ಲೂ ದಶಕಗಳ ಕಾಲ ಅದೇ ನಾಯಕಿ ಪಟ್ಟವನ್ನು ಉಳಿಸಿಕೊಂಡು, ಇಂದಿಗೂ ಬೇಡಿಕೆ ಉಳಿಸಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಆದರೆ ಕೆಲವೊಬ್ಬರಿಗೆ ಅಂಥ ಯಶಸ್ಸು ಬಹುಬೇಗ ಸಿಕ್ಕರೆ, ಇನ್ನು ಕೆಲವರು ಆ ಯಶಸ್ಸಿಗಾಗಿ ಕಾಯುತ್ತಲೇ ಇರುತ್ತಾರೆ. ಇಲ್ಲವಾದರೆ, ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ, ಚಿತ್ರೋದ್ಯಮಕ್ಕೆ ಬೈ ಬೈ ಹೇಳಿ ಹೊರಟು ಬಿಡುತ್ತಾರೆ. ಇನ್ನು ಕೆಲವರು ರಾತ್ರೋ ರಾತ್ರಿ ಸೆನ್ಸೆಷನ್‌ ಸೃಷ್ಟಿಸಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ. ಅಂಥ ಒಬ್ಬ ನಟಿಯ ಕಥೆ ಇಲ್ಲಿದೆ. ಸಣ್ಣ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ಈ ನಟಿಯ ಸಂಭಾವನೆ ಇದೀಗ ಕೋಟಿ ಲೆಕ್ಕದಲ್ಲಿದೆ!

ಹೌದು, ಮೇಲಿನ ಫೋಟೋದಲ್ಲಿರುವ ನಟಿ, ಒಂದು ಕಾಲದಲ್ಲಿ ಸ್ಟಾರ್‌ ನಾಯಕಿಯಾಗಿ ಕೇವಲ ಒಂದೇ ಚಿತ್ರರಂಗಕ್ಕೆ ಸೀಮಿತವಾಗದೆ, ಸೌತ್‌ ಜತೆಗೆ ಬಾಲಿವುಡ್‌ನಲ್ಲಿಯೂ ಮಿಂಚಿದವರು. ಇಲ್ಲಿಯವರೆಗೂ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಈ ನಟಿ ಬಣ್ಣ ಹಚ್ಚಿದ್ದಾರೆ. ಅದೂ ಸ್ಟಾರ್‌ ನಟರ ಸಿನಿಮಾಗಳಿಗೆ ನಾಯಕಿಯಾಗಿ ನಟಿಸಿ, ಇದೀಗ ಸ್ಟಾರ್ ಪೋಷಕ‌ ನಟಿಯಾಗಿದ್ದಾರೆ. ಒಂದು ಕಾಲದಲ್ಲಿ ಈ ನಟಿಯ ಡೇಟ್ಸ್‌ಗಾಗಿ ಸ್ಟಾರ್ ಹೀರೋಗಳೂ ಕಾಯುವ ಸ್ಥಿತಿ ಇತ್ತು. ಅಷ್ಟಕ್ಕೂ ಈ ನಟಿ ಯಾರು, ಇವರ ಹಿನ್ನೆಲೆ ಏನು ಎಂಬ ಕುತೂಹಲ ಇದ್ಯಾ? ಈ ನಟಿ ಬೇರಾರು ಅಲ್ಲ ಸೌತ್‌ ಚಿತ್ರರಂಗವನ್ನು ಆಳಿದ ನಟಿ ರಮ್ಯಾ ಕೃಷ್ಣನ್.‌

ಈಗ ಇದೇ ನಟಿಗೆ ಕೋಟಿ ಕೋಟಿ ಸಂಭಾವನೆ..

ನಟಿ ರಮ್ಯಾ ಕೃಷ್ಣನ್ ತಮ್ಮ ಸೌಂದರ್ಯ ಮತ್ತು ನಟನೆಯಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಾಯಕಿಯಾಗಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ರಮ್ಯಾ ಕೃಷ್ಣನ್, ಸದ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಅಲ್ಲಿ ಅವರಿಗೆ ಸಂಭಾವನೆ ಕಡಿಮೆ ಏನಿಲ್ಲ. ಕೋಟಿ ಲೆಕ್ಕದಲ್ಲಿಯೇ ಸಂಭಾವನೆ ಪಡೆಯುತ್ತಿದ್ದಾರೆ. ಅಮ್ಮನಾಗಿ, ಚಿಕ್ಕಮ್ಮನಾಗಿ, ನಾಯಕಿಯ ತಾಯಿಯ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದ್ದಾರೆ. ಹೀಗೆ ನಟನೆ ಮೂಲಕ ಗುರುತಿಸಿಕೊಂಡ ಇದೇ ನಟಿ, ಕಾಂಟ್ರವರ್ಸಿ, ವಿವಾದಗಳು, ವದಂತಿಗಳಿಂದಲೂ ದಶಕಗಳ ಹಿಂದೆಯೇ ಸುದ್ದಿಯ ಮುನ್ನೆಲೆಗೆ ಬಂದಿದ್ದರು.

ವದಂತಿಗೂ ಆಹಾರವಾಗಿದ್ದ ರಮ್ಯಾ ಕೃಷ್ಣನ್‌..

1999ರಲ್ಲಿ ತಮಿಳಿನ ಖ್ಯಾತ ನಿರ್ದೇಶಕ ರವಿಕುಮಾರ್‌ ಅವರ ನಿರ್ದೇಶನದ ಪಡಯಪ್ಪ, ಪಾತ್ತಲ್ಲಿ ಸಿನಿಮಾ ಬಳಿಕ ಪಂಚತಂತ್ರ ಸಿನಿಮಾದಲ್ಲೂ ರಮ್ಯಾ ಅವರೇ ನಾಯಕಿಯಾದರು. ಹೀಗೆ ಅವರ ಸಾಲು ಸಾಲು ಸಿನಿಮಾಗಳಲ್ಲಿ ರಮ್ಯಾ ಕೃಷ್ಣನ್‌ ನಾಯಕಿಯಾಗಿ ನಟಿಸುತ್ತಿದ್ದಂತೆ, ಇವರ ನಡುವೆ ಏನೋ ನಡೆಯುತ್ತಿದೆ ಎಂಬ ವದಂತಿ ಆವತ್ತೇ ಹಬ್ಬಿತ್ತು. ನಿರ್ದೇಶಕ ರವಿಕುಮಾರ್‌ ಮದುವೆಯಾದರೂ, ರಮ್ಯಾ ಕೃಷ್ಣನ್‌ ಜತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾರೆ ಎಂದೇ ಪುಕಾರು ಹಬ್ಬಿತ್ತು. ಇಬ್ಬರ ನಡುವೆ ಪ್ರೀತಿ ಪ್ರೇಮದ ಬಳಿಕ ದೈಹಿಕವಾಗಿಯೂ ಒಂದಾಗಿದ್ದರು. ಹೀಗಿರುವಾಗಲೇ ರಮ್ಯಾ ಕೃಷ್ಣನ್‌ ಗರ್ಭಿಣಿ ಎಂಬ ವಿಚಾರವೂ ಕಾಳ್ಗಿಚ್ಚಿನಂತೆ ಕಾಲಿವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು.

ಅಬಾರ್ಷನ್‌ಗಾಗಿ 75 ಲಕ್ಷಕ್ಕೆ ರಮ್ಯಾ ಕೃಷ್ಣನ್ ಡಿಮಾಂಡ್‌?

ಇದೆಲ್ಲ ಸುದ್ದಿಯ ನಡುವೆಯೇ, ನಿರ್ದೇಶಕ ಕೆ.ಎಸ್.‌ ರವಿಕುಮಾರ್‌ ಅವರ ಪತ್ನಿ ಕರ್ಪಗಂ ಅವರ ಕಿವಿಗೂ ಈ ಸುದ್ದಿ ಮುಟ್ಟಿತ್ತು. ಕೊನೆಗೆ ರಮ್ಯಾ ಜತೆಗಿನ ಸಂಬಂಧ ಕಳಚಿಕೊಳ್ಳಲು ರವಿಕುಮಾರ್‌ ನಿರ್ಧರಿಸಿದ್ದರು. ಆಗ ರಮ್ಯಾ ಕೃಷ್ಣನ್‌ ಗರ್ಭಿಣಿ! ಅಬಾರ್ಷನ್‌ ಮಾಡಿಸಿಕೊಳ್ಳಲು ಬರೋಬ್ಬರಿ 75 ಲಕ್ಷಕ್ಕೆ ನಿರ್ದೇಶಕ ರವಿಕುಮಾರ್‌ ಬಳಿ ರಮ್ಯಾ ಕೃಷ್ಣನ್‌ ಬೇಡಿಕೆ ಇಟ್ಟಿದ್ದರಂತೆ ಎಂದು ವರದಿಯಾಗಿತ್ತು. ಆವತ್ತಿನ ಕಾಲಘಟ್ಟದಲ್ಲಿ ಈ ಸುದ್ದಿ ಹರಿದಾಡಿದ್ದೇ ತಡ, ನಮಗೇನೂ ಗೊತ್ತೇ ಇಲ್ಲ ಎಂಬಂತೆ ಈ ಜೋಡಿ ಉತ್ತರ ನೀಡಿ ಗಾಸಿಪ್‌ಗೆ ಫುಲ್‌ಸ್ಟಾಪ್‌ ಇಟ್ಟಿತ್ತು. ಆದರೆ, ಬೆಂಕಿ ಇಲ್ಲದೆ ಯಾವತ್ತೂ ಹೊಗೆಯಾಡದೂ ಎಂಬ ಮಾತೂ ಆವತ್ತು ಹೆಚ್ಚು ಸದ್ದು ಮಾಡಿತ್ತು.

mysore-dasara_Entry_Point