ಕನ್ನಡ ಸುದ್ದಿ  /  ಮನರಂಜನೆ  /  ‘ಶೂಟಿಂಗ್‌ ಸೆಟ್‌ನಲ್ಲಿ ಖ್ಯಾತ ನಟಿಗೆ ಈ ದುರ್ಯೋದನ ಹೀಗಾ ಮಾಡೋದು?’ ದರ್ಶನ್‌ ವಿರುದ್ಧ ಮತ್ತೊಂದು ಕರ್ಮಕಾಂಡದ ಆರೋಪ

‘ಶೂಟಿಂಗ್‌ ಸೆಟ್‌ನಲ್ಲಿ ಖ್ಯಾತ ನಟಿಗೆ ಈ ದುರ್ಯೋದನ ಹೀಗಾ ಮಾಡೋದು?’ ದರ್ಶನ್‌ ವಿರುದ್ಧ ಮತ್ತೊಂದು ಕರ್ಮಕಾಂಡದ ಆರೋಪ

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ವಿರುದ್ಧ ಸಾಕಷ್ಟು ಮಂದಿ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಅದೇ ರೀತಿ ಇದೀಗ ಬಿಗ್‌ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ಮತ್ತೊಂದು ಆರೋಪ ಮಾಡಿದ್ದಾರೆ.

‘ಶೂಟಿಂಗ್‌ ಸೆಟ್‌ನಲ್ಲಿ ಖ್ಯಾತ ನಟಿಗೆ ಈ ದುರ್ಯೋದನ ಹೀಗಾ ಮಾಡೋದು?’ ದರ್ಶನ್‌ ವಿರುದ್ಧ ಮತ್ತೊಂದು ಕರ್ಮಕಾಂಡದ ಆರೋಪ
‘ಶೂಟಿಂಗ್‌ ಸೆಟ್‌ನಲ್ಲಿ ಖ್ಯಾತ ನಟಿಗೆ ಈ ದುರ್ಯೋದನ ಹೀಗಾ ಮಾಡೋದು?’ ದರ್ಶನ್‌ ವಿರುದ್ಧ ಮತ್ತೊಂದು ಕರ್ಮಕಾಂಡದ ಆರೋಪ

Prashanth Sambargi on Darshan: ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಧನವಾಗಿ ವಿಚಾರಣೆ ಎದುರಿಸುತ್ತಿದೆ ದರ್ಶನ್‌ ಅಂಡ್‌ ಗ್ಯಾಂಗ್‌. ಗೆಳತಿ ಪವಿತ್ರಾ ಗೌಡ ಅವರಿಗೆ ಅಸಭ್ಯವಾಗಿ ಮೆಸೆಜ್‌ ಮತ್ತು ಕಾಮೆಂಟ್‌ ಮಾಡಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು, ಶೆಡ್‌ನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಕೊನೇ ಹಂತಕ್ಕೆ ಬಂದಿದ್ದು, ಇನ್ನೇನು ಕೋರ್ಟ್‌ಗೆ ಜಾರ್ಜ್‌ ಶೀಟ್‌ ಸಲ್ಲಿಕೆಯಾಗಲಿದೆ. ಈ ನಡುವೆ ಇದೇ ದರ್ಶನ್‌ ವಿರುದ್ಧ ಸಾಕಷ್ಟು ಮಂದಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ನಟ, ಸಿನಿಮಾ ವಿತರಕ, ಬಿಗ್‌ ಬಾಸ್‌ ಮಾಜಿ ಸ್ಪರ್ಧಿಯಾಗಿದ್ದ ಪ್ರಶಾಂತ್‌ ಸಂಬರ್ಗಿ ಬನಟ ದರ್ಶನ್‌ ಮೇಲೆ ಮುಗಿಬಿದ್ದಿದ್ದಾರೆ. ಅವರ ವಿರುದ್ಧ ಒಂದಾದ ಮೇಲೊಂದು ಆರೋಪಗಳನ್ನು ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿರುವ ಪ್ರಶಾಂತ್‌, ಇದೀಗ ಶೂಟಿಂಗ್‌ ಸೆಟ್‌ನಲ್ಲಿ ಸಹನಟಿಯ ಜತೆಗೆ ದುರ್ಯೋದನನಂತೆ ವರ್ತಿಸಿದ ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅದಕ್ಕೂ ಮುನ್ನ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಬಗ್ಗೆಯೂ ಪ್ರಶಾಂತ್‌ ಸಂಬರ್ಗಿ ಆರೋಪವೊಂದನ್ನು ಮಾಡಿದ್ದರು.

ಟ್ರೆಂಡಿಂಗ್​ ಸುದ್ದಿ

ನಟಿ ಜತೆಗೆ ದರ್ಶನ್‌ ವರ್ತನೆಗೆ ಸಂಬರ್ಗಿ ಖಂಡನೆ

"6 ಅಡಿ ದೈತ್ಯಾಕಾರನ ಮತ್ತೊಂದು ಕರ್ಮ ಕಾಂಡ Part 2. ಹಿಂಸೆ ಮತ್ತು ಕೊಲೆ ಮಾಡುವ ಮುನ್ನ ಈ ಅಮಾಯಕ ರೇಣುಕಾ ಸ್ವಾಮಿ ತಾನು ಲಿಂಗಾಯತ ಮತ್ತು ಸಸ್ಯಾಹಾರಿ ಎಂದು ಗೊಗರೆದರೂ ಕೇಳದೆ ಬಲವಂತವಾಗಿ ಚಿಕನ್ ಪೀಸ್ ಬಾಯಿಗೆ ತುರಿಕಿದನು ಈ ರೌಡಿ ಬಾಸ್"

"ಅದೇ ರೀತಿ 3 ವರ್ಷಗಳ ಹಿಂದೆ ಒಬ್ಬಳು ಖ್ಯಾತ ಕನ್ನಡ ಚಲನಚಿತ್ರ ನಟಿ, ಇವನೊಡನೆ ಚಿತ್ರೀಕರಣ ವೇಳೆಯಲ್ಲಿ ತಾನು ಸಸ್ಯಾಹಾರಿ ಮತ್ತು ಸಾತ್ವಿಕ ಊಟ ಬೇಕು ಎಂದು ಕೇಳಿದಾಗಲೂ ಅವಳ ಮಾತನ್ನು ಲೆಕ್ಕಿಸದೆ, ಈ ದೈತ್ಯಾಕಾರನ ಸೂಚನೆಯಂತೆ ಮಧ್ಯಾಹ್ನದ ಊಟದಲ್ಲಿ ನಾನ್‌ವೆಜ್ ಮಾಂಸವನ್ನು ಬೆರೆಸಿ ನೀಡಲಾಯಿತು. ಇವಳು ಅದನ್ನು ತಿನ್ನುವಾಗ ಈ ದುರಾತ್ಮ ದುರ್ಯೋದನಂತೆ ಗಹಗಹಿಸಿ ನಕ್ಕನಂತೆ. ತು ಇವನೊಬ್ಬ ಹೆರನೋವುಗ ಮೃಗ" ಎಂದು ಪ್ರಶಾಂತ್‌ ಸಂಬರ್ಗಿ ಆರೋಪ ಮಾಡಿದ್ದಾರೆ.

ಅರ್ಜುನ್‌ ಜನ್ಯಾ ಹೃದಯಾಘಾತಕ್ಕೆ ದರ್ಶನ್‌ ಕಾರಣ

ಕನ್ನಡ ಚಿತ್ರರಂಗದ ಒಬ್ಬ ಖ್ಯಾತ ಸಂಗೀತ ನಿರ್ದೇಶಕ ಮತ್ತು TV ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿರೋ ನನ್ನ ಸ್ನೇಹಿತನಿಗೆ 2 ವರುಷದ ಹಿಂದೆ Heart Attack ಆಯಿತ ಇದಕ್ಕೆ ಕಾರಣ,ರೌಡಿ ಬಾಸ್(D boss is now R Boss rowdy boss) ಅದೇ ಆರು ಅಡಿ ಎತ್ತರದ ಮೃಗದಿಂದ ಬೆದರಿಕೆಯ ಕರೆ ಮತ್ತು ಮಾನಸಿಕ ಹಿಂಸೆ.

ಪರಿವರ್ತನೆ ಆಗದಿದ್ದರೆ ಹಂದಿಗಿಂತಲೂ ಕಡೆ..

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್, "ಚಿತ್ರದುರ್ಗದಲ್ಲಿಯೇ ಇದ್ದ ರೇಣುಕಾಸ್ವಾಮಿಗೆ ಒಂದು ಫೋನ್‌ ಮಾಡಿ, ಯಾಕೆ ಹೀಗೆ ಮಾಡಿದೆ ರಾಸ್ಕಲ್‌ ಅಂದಿದ್ರೆ, ಅವನು ಅಣ್ಣಾ ತಪ್ಪಾಯ್ತು ಅಂತ ಹೇಳ್ತಿದ್ದ. ನಮಗಷ್ಟೇ ಅಲ್ಲ ಯಾವ ಹೆಣ್ಮಕ್ಕಳಿಗೂ ಹೀಗೆ ಮಾಡಬೇಡ ಅಂದಿದ್ರೆ ದರ್ಶನ್‌ ಇನ್ನೂ ದೊಡ್ಡವರಾಗುತ್ತಿದ್ದರು. ಆದರೆ, ಅದನ್ನ ಬಿಟ್ಟು ಮಾಡಿದ್ದೇನು? ದರ್ಶನ್‌ ನೀನು ನಿನಗೆ ಗೊತ್ತಿಲ್ಲದಂತೆ ಆಹಾರವಾದೆ. ಯಾರಿಗೆ ಆಹಾರ ಆದೆ, ಯಾಕೆ ಆಹಾರ ಆದೆ ಎಂಬುದು ನಿನಗೆ ಖಂಡಿತ ಗೊತ್ತಿಲ್ಲ. ಗೊತ್ತಿದ್ದಿದ್ದರೆ ಖಂಡಿತ ಈ ತಪ್ಪು ಮಾಡುತ್ತಿರಲಿಲ್ಲ. ದರ್ಶನ್‌ ಆಚೆ ಬಂದೇ ಬರ್ತಾನೆ. ಬಂದ ಮೇಲೂ ಅವನು ಪರಿವರ್ತನೆ ಆಗದಿದ್ದರೆ ಹಂದಿಗಿಂತಲೂ ಕಡೆಯಾಗ್ತಾನೆ. ಅಂಧಾಭಿಮಾನಿಗಳು ಏನೇ ಹೇಳಿದ್ರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಹಂದಿಯಾಗಿದ್ರೆ ಎಷ್ಟೋ ಬೆಲೆ ಇರುತ್ತೆ, ಅವನಿಗೆ ಬೆಲೆ ಇರಲ್ಲ" ಎಂದಿದ್ದರು.