ಕನ್ನಡ ಸುದ್ದಿ  /  ಮನರಂಜನೆ  /  ಹುಟ್ಟುಹಬ್ಬದಂದು ನನ್ನ ಬದಲಿಗೆ ಅವನಿರ್ತಾನೆ; ಶಿವರಾಜ್‌ಕುಮಾರ್‌ ಬರ್ತ್‌ಡೇ ಆಚರಿಸಿಕೊಳ್ಳದಿರಲು ದರ್ಶನ್‌ ಕಾರಣನಾ?

ಹುಟ್ಟುಹಬ್ಬದಂದು ನನ್ನ ಬದಲಿಗೆ ಅವನಿರ್ತಾನೆ; ಶಿವರಾಜ್‌ಕುಮಾರ್‌ ಬರ್ತ್‌ಡೇ ಆಚರಿಸಿಕೊಳ್ಳದಿರಲು ದರ್ಶನ್‌ ಕಾರಣನಾ?

Shiva rajkumar birthday: ಈ ಸಲವೂ ಅಭಿಮಾನಿಗಳ ಜತೆಗೆ ಬರ್ತ್‌ಡೇ ಆಚರಿಸಿಕೊಳ್ಳುವ ಮನಸ್ಸು ಮಾಡಿಲ್ಲ ನಟ ಶಿವರಾಜ್‌ಕುಮಾರ್‌. ಅದಕ್ಕಾಗಿಯೇ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಸಲದ ಬರ್ತ್‌ಡೇಗೆ ನಾನಿರಲ್ಲ, ಬದಲಿಗೆ ಅವನಿರ್ತಾನೆ ಎಂದೂ ಹೇಳಿದ್ದಾರೆ.

ಹುಟ್ಟುಹಬ್ಬದಂದು ನನ್ನ ಬದಲಿಗೆ ಅವನಿರ್ತಾನೆ; ಶಿವರಾಜ್‌ಕುಮಾರ್‌ ಬರ್ತ್‌ಡೇ ಆಚರಿಸಿಕೊಳ್ಳದಿರಲು ದರ್ಶನ್‌ ಕಾರಣನಾ?
ಹುಟ್ಟುಹಬ್ಬದಂದು ನನ್ನ ಬದಲಿಗೆ ಅವನಿರ್ತಾನೆ; ಶಿವರಾಜ್‌ಕುಮಾರ್‌ ಬರ್ತ್‌ಡೇ ಆಚರಿಸಿಕೊಳ್ಳದಿರಲು ದರ್ಶನ್‌ ಕಾರಣನಾ?

Shiva rajkumar birthday: ಸ್ಯಾಂಡಲ್‌ವುಡ್‌ ನಟ, ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಬರ್ತ್‌ಡೇಗೆ ಈಗಾಗಲೇ ಫ್ಯಾನ್ಸ್‌ ಮಾತ್ರವಲ್ಲ, ಚಿತ್ರತಂಡಗಳೂ ಕಾಯುತ್ತಿವೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಅವರ ಅಭಿಮಾನಿ ಬಳಗ ಬರ್ತ್‌ಡೇಯನ್ನು ಹಬ್ಬದಂತೆ ಆಚರಿಸಲು ಪ್ಲಾನ್‌ ಮಾಡಿದ್ದು, ಅದರ ಅಪ್‌ಡೇಟ್‌ ನೀಡುತ್ತಲೇ ಇದ್ದಾರೆ. ಜತೆಗೆ ಕಾಮನ್ ಡಿಸ್‌ಪ್ಲೇ ಪಿಕ್ಚರ್ಸ್‌ಗಳೂ ಹರಿದಾಡುತ್ತಿವೆ.‌ ಆದರೆ, ಈ ನಡುವೆ ನಟ ಶಿವರಾಜ್‌ಕುಮಾರ್‌ ತಮ್ಮ ಬರ್ತ್‌ಡೇ ಆಚರಣೆ ಮಾಡದಿರುವ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಾಳೆ (ಜುಲೈ 12) ಶಿವರಾಜ್‌ಕುಮಾರ್‌ ಅವರ ಬರ್ತ್‌ಡೇ. ನೆಚ್ಚಿನ ಸೆಲೆಬ್ರಿಟಿಗಳ ಹುಟ್ಟುಹಬ್ಬ ಅಂದರೆ ಅಲ್ಲಿ ಸಹಜವಾಗಿ ಸಂಭ್ರಮ ಸಡಗರ ಇದ್ದೇ ಇರುತ್ತದೆ. ಅಭಿಮಾನಿಗಳ ಜೈಕಾರ, ಹಾರ ತುರಾಯಿ, ಕೇಕ್‌ ಕತ್ತರಿಸಿ ಸೆಲೆಬ್ರೇಟ್‌ ಮಾಡುತ್ತಾರೆ. ಅಭಿಮಾನಿಗಳ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಬರ್ತ್‌ಡೇ ಕ್ಷಣವನ್ನು ಆನಂದಿಸುತ್ತಾರೆ. ಆದರೆ, ಈ ಸಲವೂ ಅದ್ಯಾಕೋ ಅಭಿಮಾನಿಗಳ ಜತೆಗೆ ಬರ್ತ್‌ಡೇ ಆಚರಿಸಿಕೊಳ್ಳುವ ಮನಸ್ಸು ಮಾಡಿಲ್ಲ ಶಿವಣ್ಣ. ಅದಕ್ಕಾಗಿಯೇ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ಶಿವರಾಜ್‌ಕುಮಾರ್‌, "ಅಭಿಮಾನಿ ದೇವರುಗಳಿಗೆ, ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹಸ್ತಲಾಘವ, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರೋದಕ್ಕೆ ಆಗುವುದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು ಹುಟ್ಟುಹಬ್ಬಕ್ಕೆ ಇಲ್ಲದೆ ಇದ್ರೂ ನಿಮ್ಮ ಜೊತೆ ಭೈರತಿ ರಣಗಲ್ ಇರ್ತಾನೆ, ಜುಲೈ 12 ರಂದು ಬೆಳಿಗ್ಗೆ 10:10 ಕ್ಕೆ, ನಿಮ್ಮ ಆಶೀರ್ವಾದ ಸದಾ ಇರಲಿ" ಎಂದಿದ್ದಾರೆ.

ಶಿವಣ್ಣ ಬರ್ತ್‌ಡೇ ಆಚರಿಸಿಕೊಳ್ಳದಿರಲು ಕಾರಣ ಏನು?

ಕೊಲೆ ಪ್ರಕರಣದಲ್ಲಿ ದರ್ಶನ್‌ ಜೈಲು ಸೇರುತ್ತಿದ್ದಂತೆ, ಸ್ಯಾಂಡಲ್‌ವುಡ್‌ನ ಸಾಕಷ್ಟು ಸೆಲೆಬ್ರಿಟಿಗಳು ಈ ವರ್ಷದ ತಮ್ಮ ಬರ್ತ್‌ಡೇಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅದರಂತೆ ಪ್ರಜ್ವಲ್‌ ದೇವರಾಜ್‌, ಗಣೇಶ್‌, ಸೇರಿ ಇನ್ನೂ ಸಾಕಷ್ಟು ಮಂದಿ ಹುಟ್ಟುಹಬ್ಬ ಆಚರಣೆಯಿಂದ ದೂರವೇ ಉಳಿದಿದ್ದರು. ಇದೀಗ ನಟ ಶಿವರಾಜ್‌ಕುಮಾರ್‌ ಸಹ ಅದೇ ಹಾದಿಯಲ್ಲಿಯೇ ಮುಂದಡಿ ಇರಿಸಿದ್ದಾರೆ. ಆದರೆ, ಯಾರೂ ಸಹ ನೇರವಾಗಿ ದರ್ಶನ್‌ ಅವರ ಹೆಸರನ್ನು ಬಹಿರಂಗಪಡಿಸಿಲ್ಲ.

ಸರಣಿ ಸಿನಿಮಾಗಳಿಂದ ಅಪ್‌ಡೇಟ್‌..

ಸ್ಯಾಂಡಲ್‌ವುಡ್‌ನ ಬಿಜಿಯೆಸ್ಟ್‌ ನಟ, ವರ್ಷವಿಡೀ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುವ ಏಕೈಕ ಕನ್ನಡದ ಸ್ಟಾರ್‌ ನಟ ಎಂದರೆ ಅದು ಒನ್‌ ಅಂಡ್‌ ಓನ್ಲಿ ಶಿವರಾಜ್‌ಕುಮಾರ್‌. ಅದರಲ್ಲೂ ಅವರ ಬರ್ತ್‌ಡೇ ಎಂದರೆ ಅಲ್ಲಿ ಸಾಲು ಸಾಲು ಸಿನಿಮಾ ತಂಡಗಳಿಂದ ಟೀಸರ್, ಟ್ರೇಲರ್‌, ಪೋಸ್ಟರ್‌, ಸಿನಿಮಾ ಅನೌನ್ಸ್‌ಮೆಂಟ್‌ ಸೇರಿ ಇನ್ನೂ ಹತ್ತು ಹಲವು ಸರ್ಪ್ರೈಸ್‌ಗಳನ್ನು ಫ್ಯಾನ್ಸ್‌ಗೆ ನೀಡಲಾಗುತ್ತದೆ. ಈ ಸಲದ ಬರ್ತ್‌ಡೇಗೆ ಶಿವಣ್ಣ ಫ್ಯಾನ್ಸ್‌ ಜತೆಗೆ ಇರದಿದ್ದರೂ, ಅವರು ನಟಿಸುತ್ತಿರುವ ಸಿನಿಮಾ ತಂಡಗಳಿಂದ ಮಾತ್ರ ಭರ್ಜರಿ ವಿಶೇಷತೆಗಳೇ ಸಿಗಲಿವೆ.

ಶಿವಣ್ಣನ ಫ್ಯಾನ್ಸ್‌ಗೆ ನಾಳೆ ಭರ್ಜರಿ ಹಬ್ಬ

  • ಗೀತಾ ಪಿಕ್ಚರ್ಸ್‌ ಅಡಿಯಲ್ಲಿ ನಿರ್ಮಾಣವಾಗಿರುವ ಭೈರತಿ ರಣಗಲ್‌ ಸಿನಿಮಾ ಈಗಾಗಲೇ ಶೂಟಿಂಗ್‌ ಮುಗಿಸಿಕೊಂಡಿದೆ. ಇದೀಗ ಇದೇ ಚಿತ್ರದಿಂದ ಜುಲೈ 12ರ ಬೆಳಗ್ಗೆ 10;10ಕ್ಕೆ ಟೀಸರ್‌ ಬಿಡುಗಡೆ ಆಗಲಿದೆ. ಮಫ್ತಿ ಚಿತ್ರದ ಪ್ರಿಕ್ವೆಲ್‌ ಇದಾಗಿದ್ದು, ನರ್ತನ್‌ ಈ ಸಿನಿಮಾ ನಿರ್ದೇಶಿಸಿದ್ದಾರೆ.
  • ರೋಹಿತ್‌ ಪದಕಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಉತ್ತರಕಾಂಡ ಚಿತ್ರದಲ್ಲಿಯೂ ಶಿವರಾಜ್‌ಕುಮಾರ್‌ ನಟಿಸಿದ್ದಾರೆ. ಮಾಲೀಕ ಪಾತ್ರದಲ್ಲಿ ಶಿವಣ್ಣ ಎದುರಾಗಲಿದ್ದು, ಬರ್ತ್‌ಡೇ ಪ್ರಯುಕ್ತ ಶಿವಣ್ಣನ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.
  • ಹೇಮಂತ್‌ ಎಂ ರಾವ್‌ ನಿರ್ದೇಶನದ ಭೈರವನ ಕೊನೆ ಪಾಠ ಸಿನಿಮಾ ಸಹ ಘೋಷಣೆ ಆಗಿದೆ. ಅಷ್ಟೇ ಅಲ್ಲದೆ ಶಿವರಾಜ್‌ಕುಮಾರ್‌ ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದೂ ಈಗಾಗಲೇ ಫಸ್ಟ್‌ ಲುಕ್‌ ಹೊರಬಂದಿವೆ. ನಾಳೆ ಇನ್ನೂ ಏನಾದರೂ ವಿಶೇಷವಾದದ್ದೇ ಬರಬಹುದು.
  • ಅರ್ಜುನ್‌ ಜನ್ಯ ಚೊಚ್ಚಲ ನಿರ್ದೇಶನದ 45 ಸಿನಿಮಾ ತಂಡದಿಂದಲೂ ಶಿವರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ವಿಶೇಷ ಟ್ರೀಟ್‌ ಇದೆ. ಅಭಿಮಾನಿಗಳಿಗಾಗಿಯೇ ಈ ಚಿತ್ರದಿಂದಲೂ ಸರ್ಪ್ರೈಸ್‌ ಹೊರಬೀಳಲಿದೆ.
  • ಇನ್ನು ಒಪ್ಪಿಕೊಂಡ ಸಿನಿಮಾ ಮಾತ್ರವಲ್ಲದೆ, ಹೊಸ ಸಿನಿಮಾಗಳ ಘೋಷಣೆಗಳು ಸಹ ಶಿವಣ್ಣನ ಬರ್ತ್‌ಡೇಗೆ ಅನೌನ್ಸ್‌ ಆಗಲಿವೆ. ಬೇರೆ ಭಾಷೆಗಳಲ್ಲಿ ನಟಿಸುತ್ತಿರುವ ಸಿನಿಮಾಗಳಿಂದಲೂ ಅಪ್‌ಡೇಟ್‌ ಮಾಹಿತಿ ಹೊರಬೀಳಲಿದೆ.