ಕನ್ನಡ ಸುದ್ದಿ  /  Entertainment  /  Tollywood News Anupama Gave A Counter After Being Criticized For Appearing In A Bold Role In Tillu Square Trailer Mnk

Tillu Square: ‘ದಿನವೂ ಬಿರಿಯಾನಿ ತಿನ್ನೋಕಾಗುತ್ತಾ? ಸಿಕ್ದಾಗ ಬಿಡಬಾರ್ದು!’ ಹಸಿಬಿಸಿ ದೃಶ್ಯಗಳ ಬಗ್ಗೆ ಕೇಳಿದ್ದಕ್ಕೆ ಹೀಗಂದ್ರು ಅನುಪಮಾ

ಟಿಲ್ಲು ಸ್ಕ್ವೇರ್‌ ಚಿತ್ರದ ಟ್ರೇಲರ್‌ನಲ್ಲಿ ಹಸಿ ಬಿಸಿ ಅವತಾರದಲ್ಲಿ ಕಾಣಿಸಿಕೊಂಡು, ಲಿಪ್‌ ಲಾಕ್‌ ಮೂಲಕವೇ ಅಚ್ಚರಿ ಮೂಡಿಸಿದ್ದರು ನಟಿ ಅನುಪಮಾ ಪರಮೇಶ್ವರನ್.‌ ಟೀಕೆಗಳನ್ನೂ ಎದುರಿಸಿದ್ದರು. ಈಗ ಇದೇ ನಟಿ ಅಂದಿನ ಟೀಕೆ ಟಿಪ್ಪಣಿಗಳಿಗೆ ಕೌಂಟರ್‌ ಕೊಟ್ಟಿದ್ದಾರೆ.

Tillu Square: ‘ದಿನವೂ ಬಿರಿಯಾನಿ ತಿನ್ನೋಕಾಗುತ್ತಾ? ಸಿಕ್ದಾಗ ಬಿಡಬಾರ್ದು!’ ಹಸಿಬಿಸಿ ದೃಶ್ಯಗಳ ಬಗ್ಗೆ ಕೇಳಿದ್ದಕ್ಕೆ ಹೀಗಂದ್ರು ಅನುಪಮಾ
Tillu Square: ‘ದಿನವೂ ಬಿರಿಯಾನಿ ತಿನ್ನೋಕಾಗುತ್ತಾ? ಸಿಕ್ದಾಗ ಬಿಡಬಾರ್ದು!’ ಹಸಿಬಿಸಿ ದೃಶ್ಯಗಳ ಬಗ್ಗೆ ಕೇಳಿದ್ದಕ್ಕೆ ಹೀಗಂದ್ರು ಅನುಪಮಾ

Tillu Square: ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್‌ ಸದ್ಯ ಸೌತ್‌ನ ಕ್ರಶ್‌. ಬೆರಳೆಣಿಕೆ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಈ ನಟಿ. ಪ್ರೇಮಮ್‌ ಸಿನಿಮಾದಲ್ಲಿ ಮೇರಿ ಜಾರ್ಜ್‌ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಹೀಗೆ ಶುರುವಾದ ಇವರ ಸಿನಿಮಾ ಜರ್ನಿ ಸದ್ಯ ಸೌತ್‌ನ ಎಲ್ಲ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಬೇಡಿಕೆಯನ್ನೂ ಸೃಷ್ಟಿಸಿಕೊಂಡಿದ್ದಾರೆ. ಈಗ ಇದೇ ನಟಿ ಟಾಲಿವುಡ್‌ನ ಟಿಲ್ಲು ಸ್ವ್ಕೇರ್‌ ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸದ ರೀತಿಯಲ್ಲಿ ಎದುರಾಗಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಪಕ್ಕದ ತೆಲುಗಿನಲ್ಲಿ ಟಿಲ್ಲು ಸ್ಕ್ವೇರ್‌ ಸಿನಿಮಾ ಸದ್ಯ ಹೆಚ್ಚು ಹೈಪ್‌ ಸೃಷ್ಟಿಸಿಕೊಂಡಿದೆ. ಅದರಲ್ಲೂ ಕಳೆದ ತಿಂಗಳು ಬಿಡುಗಡೆಯಾದ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿತ್ತು. ಹಾಗೆ ಬಿಡುಗಡೆಯಾಗಿದ್ದ ಟ್ರೇಲರ್‌ನಲ್ಲಿ ಅನುಪಮಾ ಪರಮೇಶ್ವರನ್‌ ಸಖತ್‌ ಬೋಲ್ಡ್‌ ಆಗಿಯೇ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದರು. ಪ್ರತಿ ಸಿನಿಮಾಗಳಲ್ಲಿ ಡಿಸೇಂಟ್‌ ಪಾತ್ರಗಳಲ್ಲಿಯೇ ಕಂಗೊಳಿಸಿದ್ದರು. ಆದರೆ, ಟಿಲ್ಲು ಸ್ಕ್ವೇರ್‌ ಚಿತ್ರದಲ್ಲಿನ ಪಾತ್ರದ ಮೂಲಕ ಬೇರೆ ಅನುಪಮಾ ರೂಪದಲ್ಲಿ ಎಲ್ಲರ ಮುಂದೆ ಬಂದಿದ್ದರು.

ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ನಾಯಕ ನಾಯಕಿಯಾಗಿ ನಟಿಸಿರುವ ಟಿಲ್ಲು ಸ್ವ್ಕೇರ್‌ ಚಿತ್ರದ ಅಂದು ಬಿಡುಗಡೆಯಾಗಿದ್ದ ಟ್ರೇಲರ್‌ ಎಲ್ಲರ ಗಮನ ಸೆಳೆದಿತ್ತು. ಬೋಲ್ಡ್‌ ಆಗಿ, ಲಿಪ್‌ಲಾಕ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ಮೆಚ್ಚುಗೆ ಜತೆಗೆ ಟೀಕೆಗಳೂ ಅನುಪಮಾ ಅವರ ಬಳಿ ಬಂದಿದ್ದವು. ಈ ರೀತಿ ನಿಮ್ಮನ್ನು ನೋಡಲು ಆಗಲ್ಲ, ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತೀರಿ ಎಂದೂ ಭಾವಿಸಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಇದೇ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಓ ಮೈ ಲಿಲ್ಲಿ.. ಹೆಸರಿನ ಹಾಡು ಬಿಡುಗಡೆಯ ವೇಳೆ, ಟ್ರೇಲರ್‌ ಬಗ್ಗೆ, ಟೀಕೆ ಮಾಡಿದವರ ಬಗ್ಗೆಯೂ ಅನುಪಮಾ ಮಾತನಾಡಿದ್ದಾರೆ ಅನುಪಮಾ.

ನೀವು ಪ್ರತಿದಿನ ಬಿರಿಯಾನಿ ತಿನ್ನುತ್ತೀರಾ?

ಈ ರೀತಿಯ ಪಾತ್ರ ಬೇಕಿತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅನುಪಮಾ, ನಿಮಗೆ ಇಷ್ಟ ಎಂದು ಹೇಳಿದರೆ ಪ್ರತಿದಿನ ಬಿರಿಯಾನಿ ತಿನ್ನುತ್ತೀರಾ? ಎಂದಿದ್ದಾರೆ. ಅಲ್ಲದೆ, ನನಗೂ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಲು ಇಷ್ಟ ಎಂದು ಅನುಪಮಾ ಹೇಳಿದ್ದಾರೆ. ನಿರ್ದೇಶಕರು ನೀಡಿದ ಪಾತ್ರವನ್ನು ನೂರಕ್ಕೆ ನೂರು ಮಾಡುವುದು ನನ್ನ ಕರ್ತವ್ಯ ಎಂದು ಅನುಪಮಾ ಕೊಂಚ ಖಾರವಾಗಿ ಉತ್ತರಿಸಿದ್ದಾರೆ. "ನಿಮಗೆ ಬಿರಿಯಾನಿ ಇಷ್ಟವಾದರೆ, ನಿಮ್ಮ ಮನೆಯಲ್ಲಿ ಪ್ರತಿದಿನ ಬಿರಿಯಾನಿ ತಿಂತೀರಾ? ಇಲ್ಲ ತಾನೇ, ಹಾಗೆಯೇ ನಾನೂ ಪ್ರತಿದಿನ ಬಿರಿಯಾನಿ ತಿನ್ನಲು ಬಯಸುವುದಿಲ್ಲ. ನನಗೆ ಬೇರೆ ಬೇರೆ ಪುಲಾವ್ ಬೇಕು.. ನನಗೆ ಪುಳಿಯೊಗರೇ ಬೇಕು.. ನಿರ್ದೇಶಕರು ನೀಡಿದ ಪಾತ್ರಕ್ಕೆ ನೂರಕ್ಕೆ ನೂರು ನೀಡುವುದು ನನ್ನ ಕರ್ತವ್ಯ. ನಾನು ಅದನ್ನು ಮಾಡಲು ಪ್ರಯತ್ನಿಸಿದೆ" ಎಂದಿದ್ದಾರೆ.

ವರ್ಷಗಟ್ಟಲೆ ಒಂದೇ ಪಾತ್ರ ಮಾಡಿದರೆ ಬೇಜಾರಾಗುತ್ತೆ ಎಂದಿರುವ ಅನುಪಮಾ ಪರಮೇಶ್ವರನ್, ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ನಟಿಸಿರುವ ಲಿಲ್ಲಿ ಪಾತ್ರ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ ಎಂದರು. ಚಿತ್ರದಲ್ಲಿ ಸಿಕ್ಕ ಪಾತ್ರವನ್ನೇ ಬಿಟ್ಟುಕೊಟ್ಟರೆ ಮೂರ್ಖತನವಾಗುತ್ತಿತ್ತು. ಇಂಥ ಕಮರ್ಷಿಯಲ್ ಸಿನಿಮಾದಲ್ಲಿ ನಾಯಕಿಗೆ ಈ ರೀತಿಯ ಒಳ್ಳೆಯ ಪಾತ್ರ ಸಿಗುವುದಿಲ್ಲ ಎಂದೂ ಹೇಳಬಹುದು ಎಂಬುದು ಅನುಪಮಾ ಮಾತು.

ಮಲಿಕ್ ರಾಮ್ ನಿರ್ದೇಶನದ ಟಿಲ್ಲು ಸ್ಕ್ವೇರ್ ಮಾರ್ಚ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಾರ್ಚ್ 19 ಈ ಸಿನಿಮಾದ ಮೂರನೇ ಹಾಡು 'ಓ ಮೈ ಲಿಲಿ' ಬಿಡುಗಡೆಯಾಗಿದೆ. ಅಚ್ಚು ರಾಜಮಣಿ ಈ ಹಾಡಿಗೆ ಟ್ಯೂನ್ ನೀಡಿದ್ದಾರೆ. ರಾಮ್ ಮಿರ್ಯಾಲ ಮತ್ತು ಶ್ರೀಚರಣ್ ಪಕಾಲ ಈ ಚಿತ್ರದ ಸಂಗೀತ ನಿರ್ದೇಶಕರು. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ.