Bagheera OTT: ಕೇವಲ ಮೂರೇ ವಾರಕ್ಕೆ ಒಟಿಟಿಗೆ ಗ್ರ್ಯಾಂಡ್‌ ಎಂಟ್ರಿಕೊಟ್ಟ ಬಘೀರ; ಯಾವ ಒಟಿಟಿಯಲ್ಲಿ ವೀಕ್ಷಣೆ?
ಕನ್ನಡ ಸುದ್ದಿ  /  ಮನರಂಜನೆ  /  Bagheera Ott: ಕೇವಲ ಮೂರೇ ವಾರಕ್ಕೆ ಒಟಿಟಿಗೆ ಗ್ರ್ಯಾಂಡ್‌ ಎಂಟ್ರಿಕೊಟ್ಟ ಬಘೀರ; ಯಾವ ಒಟಿಟಿಯಲ್ಲಿ ವೀಕ್ಷಣೆ?

Bagheera OTT: ಕೇವಲ ಮೂರೇ ವಾರಕ್ಕೆ ಒಟಿಟಿಗೆ ಗ್ರ್ಯಾಂಡ್‌ ಎಂಟ್ರಿಕೊಟ್ಟ ಬಘೀರ; ಯಾವ ಒಟಿಟಿಯಲ್ಲಿ ವೀಕ್ಷಣೆ?

Bagheera OTT: ಶ್ರೀಮುರಳಿ ನಾಯಕನಾಗಿ ನಟಿಸಿ, ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಸೂಪರ್‌ ಹೀರೋ ಪರಿಕಲ್ಪನೆಯ ಬಘೀರ ಸಿನಿಮಾ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕೇವಲ 3 ವಾರಕ್ಕೆ ಒಟಿಟಿ ಅಂಗಳ ತಲುಪಿದೆ ಈ ಸಿನಿಮಾ.

ಸೂಪರ್‌ ಹೀರೋ ಪರಿಕಲ್ಪನೆಯ ಬಘೀರ ಸಿನಿಮಾ ಒಟಿಟಿಗೆ ಆಗಮಿಸಿದೆ
ಸೂಪರ್‌ ಹೀರೋ ಪರಿಕಲ್ಪನೆಯ ಬಘೀರ ಸಿನಿಮಾ ಒಟಿಟಿಗೆ ಆಗಮಿಸಿದೆ

Bagheera OTT: ಈ ವರ್ಷದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಬಘೀರ ಸಿನಿಮಾ ಒಂದಾಗಿತ್ತು. ಅದರಂತೆ, ಅಕ್ಟೋಬರ್‌ 31ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಿತ್ತು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬಂದಿದ್ದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ಮೋಡಿ ಮಾಡಿತ್ತು. ಬಹುತಾರಾಗಣದಲ್ಲಿನ ಈ ಸಿನಿಮಾಕ್ಕೆ ಹೊಂಬಾಳೆ ಫಿಲಂಸ್‌ ಬಂಡವಾಳ ಹೂಡಿ ರಿಚ್‌ ಆಗಿಯೇ ನಿರ್ಮಾಣ ಮಾಡಿತ್ತು. ಈಗ ಇದೇ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡ ಕೇವಲ ಮೂರೇ ವಾರಕ್ಕೆ ಒಟಿಟಿಗೆ ಆಗಮಿಸಿದೆ.

ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದ ಬಘೀರ ಸಿನಿಮಾಕ್ಕೆ ಪ್ರಶಾಂತ್‌ ನೀಲ್‌, ಕಥೆ ಬರೆದಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ಎರಡು ಶೇಡ್‌ನಲ್ಲಿ ಕಾಣಿಸಿದ್ದಾರೆ. ಒಂದರಲ್ಲಿ ಪೊಲೀಸ್‌ ಅಧಿಕಾರಿಯಾದರೆ, ಮತ್ತೊಂದರಲ್ಲಿ ಮುಖಕ್ಕೆ ಮುಖವಾಡ ಧರಿಸಿದ ಬಘೀರನಾಗಿ ಎದುರಾಗಿದ್ದಾರೆ. ಪೊಲೀಸ್‌ ವೇಷದಲ್ಲಿದ್ದುಕೊಂಡು, ಸಮಾಜದಲ್ಲಿ ತಾಂಡವವಾಡುವ ಅನಿಷ್ಠಗಳನ್ನು ಸರ್ವನಾಶ ಮಾಡಲು ಬಘೀರ ವೇಷದಲ್ಲಿ ಶ್ರೀಮುರಳಿ ಕಂಡಿದ್ದಾರೆ. ಈಗ ಇದೇ ಸಿನಿಮಾ ಹೆಚ್ಚು ತಡಮಾಡದೇ ಒಟಿಟಿ ಅಂಗಳ ಪ್ರವೇಶಿಸಿದೆ.

ಏನಿದು ಕಥೆ

ಆರ್ಗನ್‌ ಟ್ರೇಡಿಂಗ್‌, ಮಾನವ ಕಳ್ಳಸಾಗಾಣಿಕೆ, ಡ್ರಗ್ಸ್‌, ಭ್ರಷ್ಟಾಚಾರ.. ಹೀಗೆ ಒಂದಷ್ಟು ವಿಚಾರಗಳನ್ನು ಬಘೀರ ಸಿನಿಮಾದಲ್ಲಿ ನಿರ್ದೇಶಕರು ಟಚ್‌ ಮಾಡಿದ್ದಾರೆ. ಈ ವಿಚಾರಗಳಿಗೆ ಸೂಪರ್‌ ಮ್ಯಾನ್‌ ಅನ್ನೂ ಲೇಬಲ್‌ ಅಂಟಿಸಿದ್ದಾರೆ. ಮೇಕಿಂಗ್‌ ವಿಚಾರದಲ್ಲಿ ತುಸು ಹೆಚ್ಚೇ ರಿಚ್‌ ಆಗಿದ್ದಾನೆ ಈ ಬಘೀರ. ಜತೆಗೆ ಈ ಚಿತ್ರದ ಕಥೆ ಪ್ರೇಕ್ಷಕನ ಊಹೆಗೆ ನಿಲುಕುವಂಥದ್ದು. ಮುಂದೇನಾಗುತ್ತದೆ ಎಂಬುದನ್ನು ಸಲೀಸಾಗಿಯೇ ಆತ ಊಹಿಸಿಬಿಡಬಲ್ಲ. ಆದರೆ, ಆ ಊಹೆಗೆ ನಿಲುಕುವ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕರು. ಶ್ರೀಮುರಳಿ ಅವರನ್ನು ಗಮನದಲ್ಲಿಟ್ಟುಕೊಂಡೇ ಭಾವ ಪ್ರಶಾಂತ್‌ ನೀಲ್‌ ಕೆತ್ತಿದ ಕಥೆಯೇ ಈ ಬಘೀರ. ವ್ಯವಸ್ಥೆಯ ವಿರುದ್ಧ ಎದೆಗೊಟ್ಟು ನಿಲ್ಲುವ ವ್ಯಕ್ತಿಯಾಗಿ ಶ್ರೀಮುರಳಿ ಇಲ್ಲಿ ಕಾಣಿಸಿಗುತ್ತಾರೆ.

ಯಾವ ಒಟಿಟಿಯಲ್ಲಿ ವೀಕ್ಷಣೆ?

ಸಿನಿಮಾ ಬಿಡುಗಡೆ ಆದ ದಿನವೇ ಈ ಸಿನಿಮಾದ ಒಟಿಟಿ ಹಕ್ಕುಗಳ ಖರೀದಿ ಬಗ್ಗೆ ಸುದ್ದಿಯಾಗಿತ್ತು. ಅದರಂತೆ, ಕನ್ನಡದ ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಖರೀದಿಸಿತ್ತು ಎಂಬ ಸುದ್ದಿ ಮುನ್ನೆಲೆಗೆ ಬಂದಿತ್ತು. ಈಗ ಇದೇ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿಯೇ ಸ್ಟ್ರೀಮ್‌ ಆಗುವುದು ಅಧಿಕೃತವಾಗಿದೆ. ಈ ಬಗ್ಗೆ ಪೋಸ್ಟ್‌ ಹಂಚಿಕೊಂಡು ನೆಟ್‌ಫ್ಲಿಕ್ಸ್‌ ಇಂಡಿಯಾ ಸೌತ್‌, ವೀರರು ಇನ್ನು ಕಾಲ್ಪನಿಕರಲ್ಲ, ಊರಲ್ಲಿ ಒಂದು ಹೊಸ ವೀರ ಬಂದಿದ್ದಾನೆ. ಅವನ ಹೆಸರೇ ಬಘೀರ. ಬಘೀರನನ್ನು ಇದೇ ನವೆಂಬರ್‌ 21ರಿಂದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ವೀಕ್ಷಿಸಬಹುದು" ಎಂದಿದೆ.

ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ?

ಪ್ರಶಾಂತ್‌ ನೀಲ್‌ ಬರೆದ ಬಘೀರ ಚಿತ್ರದ ಕಥೆಗೆ ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಶ್ರೀಮುರಳಿ, ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣದಲ್ಲಿ ಬಘೀರ ಸಿನಿಮಾ ಮೂಡಿಬಂದರೆ, ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ.

Whats_app_banner