ತಂಗಿಯ ಆರೈಕೆ, ಅಮ್ಮನ ಆಶೀರ್ವಾದ ಪಡೆದು ಮನೆಗೆ ಬಂದ ಗೌತಮ್‌ ದಿವಾನ್‌ಗೆ ಕಣ್ಣೀರ ಸ್ವಾಗತ; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  ತಂಗಿಯ ಆರೈಕೆ, ಅಮ್ಮನ ಆಶೀರ್ವಾದ ಪಡೆದು ಮನೆಗೆ ಬಂದ ಗೌತಮ್‌ ದಿವಾನ್‌ಗೆ ಕಣ್ಣೀರ ಸ್ವಾಗತ; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

ತಂಗಿಯ ಆರೈಕೆ, ಅಮ್ಮನ ಆಶೀರ್ವಾದ ಪಡೆದು ಮನೆಗೆ ಬಂದ ಗೌತಮ್‌ ದಿವಾನ್‌ಗೆ ಕಣ್ಣೀರ ಸ್ವಾಗತ; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

ಅಮೃತಧಾರೆ ಧಾರಾವಾಹಿಯ ನವೆಂಬರ್‌ 9ರ ಸಂಚಿಕೆಯಲ್ಲಿ ಭಾವುಕ ಕ್ಷಣಗಳು ಮುಂದುವರೆದಿವೆ. ಸುಧಾ ನೀಡಿದ ಚಿತ್ರಾನ್ನ ತಿಂದು, ಅಮ್ಮನ ಆಶೀರ್ವಾದ ಪಡೆದು ಗೌತಮ್‌ ಮನೆಗೆ ಬಂದಾಗ ಕಣ್ಣೀರ ಸ್ವಾಗತ ದೊರಕಿದೆ. ಗೌತಮ್‌ ಇಲ್ಲದೆ ವಿಲವಿಲ ಒದ್ದಾಡಿದ ಭೂಮಿಕಾ ಪತಿಯನ್ನು ಕಂಡಾಗ ಕಣ್ಣೀರಾಗಿದ್ದಾರೆ.

ತಂಗಿಯ ಆರೈಕೆ, ಅಮ್ಮನ ಆಶೀರ್ವಾದ ಪಡೆದು ಮನೆಗೆ ಬಂದ ಗೌತಮ್‌ ದಿವಾನ್‌ಗೆ ಕಣ್ಣೀರ ಸ್ವಾಗತ
ತಂಗಿಯ ಆರೈಕೆ, ಅಮ್ಮನ ಆಶೀರ್ವಾದ ಪಡೆದು ಮನೆಗೆ ಬಂದ ಗೌತಮ್‌ ದಿವಾನ್‌ಗೆ ಕಣ್ಣೀರ ಸ್ವಾಗತ

ಅಮೃತಧಾರೆ ಧಾರಾವಾಹಿ ನವೆಂಬರ್‌ 9ರ ಸಂಚಿಕೆ: ಅಮೃತಧಾರೆಯಲ್ಲಿ ಗೌತಮ್‌ ಅವರು ಸುಧಾ ಮನೆಯಲ್ಲಿದ್ದಾರೆ. ಸುಧಾ ನೀಡಿದ ಊಟ ಮಾಡುವಾಗ ಹಳೆಯ ನೆನಪುಗಳು ಉಕ್ಕಿ ಬರುತ್ತವೆ. ತುಂಬಾ ಚೆನ್ನಾಗಿ ಮಾಡಿದ್ದೀರಿ ಚಿತ್ರಾನ್ನ, ಇದು ಚಿತ್ರಾನ್ನ ಅಲ್ಲ, ಮೃಷ್ಟಾನ್ನ ಎಂದು ಗೌತಮ್‌ ಹೇಳುತ್ತಾರೆ. "ನಾನು ಕೂಡ ನನ್ನಮ್ಮ ರೀತಿ, ನಾನು ಅಮ್ಮನಿಂದಲೇ ಎಲ್ಲಾ ಕಲಿತದ್ದು" ಎಂದು ಸುಧಾ ಹೇಳುತ್ತಾರೆ. ಪಕ್ಕದಲ್ಲಿ ಅಮ್ಮ ಇದ್ದರೂ ಗುರುತಿಸಲಾಗದಂತೆ ಗೌತಮ್‌ ಇದ್ದಾರೆ. ಇನ್ನೊಂದೆಡೆ ಆನಂದ್‌ ಟೆನ್ಷನ್‌ನಲ್ಲಿದ್ದಾರೆ. ಗೌತಮ್‌ ಎಲ್ಲಿದ್ದಾರೆ ಎಂದು ತಿಳಿಯದೆ ತೊಳಲಾಟ ಪಡುತ್ತಿದ್ದಾರೆ. "ಮನೆಗೂ ಹೋಗಿಲ್ಲ, ಆಫೀಸ್‌ಗೂ ಹೋಗಿಲ್ಲ, ಎಲ್ಲಿಗೆ ಹೋದ್ರು" ಎಂದು ಆನಂದ್‌ ಯೋಚಿಸುತ್ತಾರೆ. ಭೂಮಿಕಾ ಕೂಡ ಕರೆ ಮಾಡಿ "ಗೌತಮ್‌ ಎಲ್ಲಿದ್ದಾರೆ, ಸಿಕ್ಕಿದ್ರ" ಎಂದು ಕೇಳುತ್ತಾರೆ. "ತುಂಬಾ ಕರೆ ಮಾಡಿದೆ, ಆ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಟೆನ್ಷನ್‌ ಮಾಡಬೇಡಿ" ಎಂದು ಆನಂದ್‌ ಹೇಳುತ್ತಾನೆ.

ಅನ್ನ ನೀಡುವ ತೃಪ್ತಿ ಚಿನ್ನ ನೀಡುವುದಿಲ್ಲ

ಗೌತಮ್‌ ಚಿತ್ರಾನ್ನವನ್ನು ಖಾಲಿ ಮಾಡಿ ತೃಪ್ತಿ ಪಡುತ್ತಾರೆ. ನಾನಿನ್ನು ಹೊರಡುವೆ, ನೀವು ಚಿತ್ರಾನ್ನ ಕೊಟ್ರಲ್ಲ, ಆನೆ ಬಲ ಬಂತು ಎಂದು ಹೇಳುತ್ತಾರೆ ಗೌತಮ್‌. "ಅನ್ನ ಕೊಡುವ ತೃಪ್ತಿ ಚಿನ್ನ ನೀಡುವುದಿಲ್ಲ" ಎಂದು ಗೌತಮ್‌ ಹೇಳುತ್ತಾರೆ. "ಆದರೆ, ಅನ್ನ ಚಿನ್ನವೇ ದುಬಾರಿ" ಎಂದು ಹೇಳುತ್ತಾರೆ. "ಆಡಂಬರಕ್ಕೆ ಯಾವಾಗಲೂ ಹಣ ಜಾಸ್ತಿ" ಎನ್ನುತ್ತಾರೆ. ಈ ಸಮಯದಲ್ಲಿ ಗೌತಮ್‌ ಹಣ ನೀಡಲು ಮುಂದಾದಗ ಸುಧಾ ಬೇಡ ಎನ್ನುತ್ತಾರೆ. "ನಿಮ್ಮ ಕೈರುಚಿ ಮಾತ್ರವಲ್ಲ, ಮಾತೂ ಕೂಡ ಚೆನ್ನಾಗಿದೆ. ನೀವು ಸಂಸ್ಕಾರದಲ್ಲಿ ತುಂಬಾ ಶ್ರೀಮಂತರು" ಎನ್ನುತ್ತಾರೆ. "ಎಲ್ಲವೂ ನನ್ನಮ್ಮ ಹೇಳಿಕೊಟ್ಟದ್ದು" ಎಂದು ಹೇಳುತ್ತಾರೆ. "ನಾನು ನಿಮ್ಮ ಅಮ್ಮನ ಆಶೀರ್ವಾದ ಪಡೆಯುವೆ" ಎಂದು ಮಲಗಿದ್ದ ತಾಯಿಯ ಕಾಲು ಮುಟ್ಟಿ ನಮಸ್ಕಾರಿಸುತ್ತಾರೆ. ಗೌತಮ್‌ ಹೊರಗೆ ಹೋದಾಗ ಮಗುವಿನ ಬಳಿ ಸುಧಾ "ಅಜ್ಜಿಗೆ ಮಾತ್ರೆ ಕೊಡುವ ಹೊತ್ತಾಯ್ತು, ಮನೆಯಲ್ಲಿ ಅನ್ನ ಎಲ್ಲಾ ಖಾಲಿಯಾಗಿದೆ. ರತ್ನ ಆಂಟಿ ಮನೆಯ ಬಳಿ ಸ್ವಲ್ಪ ಅಕ್ಕಿ ತಾ" ಎಂದು ಸುಧಾ ಹೇಳುವುದು ಗೌತಮ್‌ಗೆ ಕೇಳುತ್ತದೆ. ಈ ಮಾತು ಕೇಳಿ ಗೌತಮ್‌ಗೆ ಸಂಕಟವಾಗುತ್ತದೆ.

ಮಲ್ಲಿ ಕೂಡ ಟೆನ್ಷನ್‌ನಲ್ಲಿ "ಭಾವ ಬಂದಿಲ್ಲ" ಎಂದು ಜೈದೇವ್‌ಗೆ ಹೇಳುತ್ತಾರೆ. ಫೋನ್‌ ಸ್ವಿಚ್‌ ಆಫ್‌ ಆಗಿದೆ. ಸಮ್‌ಥಿಂಗ್‌ ಈಸ್‌ ರಾಂಗ್‌, ನಮ್ಮ ಮನೆಯಲ್ಲಿ ಏನೋ ನಡೆಯುತ್ತ ಇದೆ. ಬೆಳಗ್ಗೆ ಪಾರ್ಥನಿಗೆ ಎಂದಾಗ ಮಲ್ಲಿಗೆ ಟೆನ್ಷನ್‌ ಆಗುತ್ತದೆ. "ಬೆಳಗ್ಗೆ ಪಾರ್ಥನ ಕಾರಿನ ಬ್ರೇಕ್‌ ಫೈಲ್‌ ಆಗಿದೆ. ಈಗ ಅಣ್ಣನ ಸ್ವಿಚ್‌ ಆಫ್‌ ಆಗಿದೆ. ಯಾರೋ ನಮ್ಮ ಮನೆಯ ವಿರುದ್ಧ ಏನೋ ಮಾಡುತ್ತಿದ್ದಾರೆ. ನಾನು ಹೊರಗೆ ಹೋಗಿ ನೋಡಿಕೊಂಡು ಬರುವೆ" ಎಂದು ಜೈದೇವ್‌ ಹೇಳುತ್ತಾನೆ.

ಗೌತಮ್‌ರನ್ನು ಕಂಡು ಕಣ್ಣೀರಾದ ಭೂಮಿಕಾ

ಗೌತಮ್‌ ಖುಷಿಯಿಂದ "ನಿಮಗೆ ಖಂಡಿತಾ ಒಳ್ಳೆಯದಾಗುತ್ತದೆ" ಎಂದು ಸುಧಾಳಿಗೆ ಹೇಳುತ್ತಾರೆ. "ಫೋನ್‌ ಸ್ವಿಚ್‌ ಆಫ್‌ ಆಗಿದೆ. ಮನೆಗೆ ಹೋಗ್ತಿನಲ್ವ" ಎಂದು ಗೌತಮ್‌ ಹೊರಡುತ್ತಾರೆ. ಇನ್ನೊಂದೆಡೆ ಮನೆಯ ಹೊರಗೆ ಭೂಮಿಕಾ ಕಾಯುತ್ತಿದ್ದಾರೆ. ಆಗ ಗೌತಮ್‌ ಬರುತ್ತಾರೆ. ಓಡೋಡಿ ಬಂದು ಅವರನ್ನು ತಬ್ಬಿಕೊಳ್ಳುತ್ತಾರೆ. ಜೋರಾಗಿ ಅಳುತ್ತಾರೆ. "ಭಾವರೇ ಎಲ್ಲಿ ಹೋಗಿದ್ದೀರಿ. ನೀವು ಫೋನ್‌ ಎತ್ತದೆ ಇರುವುದಕ್ಕೆ ಇವರು ಎಷ್ಟು ಗಾಬರಿಯಾಗಿದ್ರು" ಎಂದು ಮಲ್ಲಿ ಹೇಳುತ್ತಾಳೆ. ಆಗ ಎಲ್ಲರೂ ಬರುತ್ತಾರೆ. "ಎಲ್ಲಿ ಹೋಗಿದ್ರಿ, ಅತ್ತಿಗೆ ಎಷ್ಟು ಟೆನ್ಷನ್‌ ಮಾಡಿಕೊಂಡ್ರು" ಎಂದು ಹೇಳುತ್ತಾರೆ. "ನಾನು ಹೇಳಿಕೊಳ್ಳುವುದನ್ನೂ ಕೇಳಿಸಿಕೊಳ್ಳಿ. ನಾನು ಕಾರು ಡ್ರೈವ್‌ ಮಾಡ್ತಾ ಇದ್ದೆ. ಶುಗರ್‌ ಲೋ ಆಯ್ತು, ಸುಸ್ತಾಯ್ತು. ಕಾರನ್ನು ಪಾರ್ಕ್‌ ಮಾಡಿ ರೆಸ್ಟ್‌ ಮಾಡಿದೆ" ಎಂದು ಗೌತಮ್‌ ಹೇಳುತ್ತಾರೆ. "ಏನಾದರೂ ಹೆಚ್ಚು ಕಮ್ಮಿಯಾದರೆ.." ಎಂದು ಭೂಮಿಕಾ ಅಳುತ್ತಾರೆ. ಎಲ್ಲರನ್ನೂ ಕಳುಹಿಸಿದ ಬಳಿಕ ಗೌತಮ್‌ ಭೂಮಿಕಾರನ್ನು ಸಮಧಾನ ಮಾಡುತ್ತಾರೆ.

ಗುಂಡುವಿನ ಕನವರಿಕೆಯಲ್ಲಿ ಸುಧಾಳ ಅಮ್ಮ

ಸುಧಾಳ ಮಗಳು ಪಾಠ ಓದುತ್ತಿದ್ದಾಳೆ. ಆ ಆನೆ, ಅ ಅಮ್ಮ, ಆ ಅಳಿಲು ಎಂದು ಓದುತ್ತಿದ್ದಾಳೆ. ಪಕ್ಕದಲ್ಲಿ ಅಜ್ಜಿ ಕೆಮ್ಮು ಇಡುತ್ತಾ "ಗುಂಡೂ ಗುಂಡೂ" ಎನ್ನುತ್ತಾ ಇದ್ದಾರೆ. ಅಲ್ಲಿಗೆ ಬಂದ ಸುಧಾ "ಯಾಕಮ್ಮ ಯಾವಾಗಲೂ ಗುಂಡೂ ಗುಂಡೂ ಎನ್ನುತ್ತಿರುವೆ, ಯಾರೂ ಈ ಗುಂಡು. ನಮಗ್ಯಾರು ಇಲ್ಲಾಮ್ಮ, ಅಮ್ಮ ನಮಗೆ ಯಾರಾದರೂ ಇದ್ದಾರ.. " ಎಂದು ಕೇಳುತ್ತಾರೆ. ವಿಷಯ ಗೊತ್ತಿಲ್ಲದೆ ಮಗು "ಅಮ್ಮಾ ಅವಾಗ್ಲೆ ಗುಂಡು ಮಾಮಾ ಬಂದಿದ್ರಲ್ವ. ತೋರಿಸಬಹುದಿತ್ತಲ್ವ" ಎನ್ನುತ್ತಾಳೆ. ಇನ್ನೊಂದೆಡೆ ಗೌತಮ್‌ ಭೂಮಿಕಾಳ ಬಳಿ "ಸುಧಾ ಮಾಡಿದ ಆರೈಕೆ, ನೀಡಿದ ಚಿತ್ರಾನ್ನ" ಎಲ್ಲವನ್ನೂ ಖುಷಿಯಿಂದ ಹೇಳುತ್ತಾರೆ. ಅಮೃತಧಾರೆ ಧಾರಾವಾಹಿ ನವೆಂಬರ್‌ 10ಕ್ಕೆ ಮುಂದುವರೆದಿದೆ. 

Whats_app_banner