Annayya Serial: ರಾಣಿ ಬಾಯಿಂದ ಹೊರಬಿತ್ತು ಸತ್ಯ; ಮಾವಯ್ಯ ಆಡಿದ ಮಾತು ಕೇಳಿ ಅಪ್ಪನ ಕುತಂತ್ರ ಅರ್ಥ ಮಾಡಿಕೊಂಡ ಪಾರು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ರಾಣಿ ಬಾಯಿಂದ ಹೊರಬಿತ್ತು ಸತ್ಯ; ಮಾವಯ್ಯ ಆಡಿದ ಮಾತು ಕೇಳಿ ಅಪ್ಪನ ಕುತಂತ್ರ ಅರ್ಥ ಮಾಡಿಕೊಂಡ ಪಾರು

Annayya Serial: ರಾಣಿ ಬಾಯಿಂದ ಹೊರಬಿತ್ತು ಸತ್ಯ; ಮಾವಯ್ಯ ಆಡಿದ ಮಾತು ಕೇಳಿ ಅಪ್ಪನ ಕುತಂತ್ರ ಅರ್ಥ ಮಾಡಿಕೊಂಡ ಪಾರು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ರಾಣಿ ಇಬ್ಬರೂ ಒಂದೊಂದು ಹೊಸ ಸತ್ಯವನ್ನು ಹೇಳುತ್ತಿದ್ದಾರೆ. ರಾಣಿ ಆಡಿದ ಮಾತು ಕೇಳಿ ಅಣ್ಣಯ್ಯ ಕಂಗಾಲಾದರೆ, ಮಾವಯ್ಯ ಆಡಿದ ಮಾತಿಗೆ ಪಾರು ಕಂಗಾಲಾಗಿದ್ದಾಳೆ.

ವೀರಭದ್ರನನ್ನು ಮಟ್ಟ ಹಾಕಲು ಪಾರು ಏನ್ ಮಾಡ್ತಾಳೆ?
ವೀರಭದ್ರನನ್ನು ಮಟ್ಟ ಹಾಕಲು ಪಾರು ಏನ್ ಮಾಡ್ತಾಳೆ? (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ದಿನೇ ದಿನೇ ಹೊಸ ತಿರುವುಗಳು ತೆರೆದುಕೊಳ್ಳುತ್ತಿದೆ. ಪಾರು ಮತ್ತು ತನ್ನ ನಡುವೆ ಏನೆಲ್ಲ ನಡೆದಿದೆ ಈ ಹಿಂದೆ, ಪಾರು ಯಾರನ್ನು ಪ್ರೀತಿ ಮಾಡಿದ್ದಳು? ಈ ಯಾವ ವಿಚಾರವೂ ತನ್ನ ಮನೆಯಲ್ಲಿ ಯಾವ ತಂಗಿಯರಿಗೂ ಗೊತ್ತಾಗಬಾರದು ಎಂದು ಅಣ್ಣಯ್ಯ ಕಾಳಜಿ ಮಾಡುತ್ತಿರುತ್ತಾನೆ. ಆದರೆ ರಾಣಿಗೆ ಆ ಸತ್ಯ ತಿಳಿದಿರುತ್ತದೆ. ಅವಳು ಇಷ್ಟು ದಿನ ಸುಮ್ಮನೆ ಇರುತ್ತಾಳೆ. ಆದರೆ ಅವನ ನೋವನ್ನು ನೋಡಿ ನನಗೆ ಎಲ್ಲಾ ಸತ್ಯ ಗೊತ್ತಿದೆ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಅಣ್ಣಯ್ಯನಿಗೆ ಬಹಳ ದುಃಖ ಆಗುತ್ತದೆ. ಯಾರಿಗೂ ತಿಳಿದಿರದ ಮಾತು ಇವಳಿಂದ ಹೇಗೆ ಬಂತು ಎಂದು ಅವನು ಅಂದುಕೊಳ್ಳುತ್ತಾನೆ.

ಅಂದು ಅವರಿಬ್ಬರ ನಡುವೆ ನಡೆದ ಎಲ್ಲಾ ಮಾತುಗಳೂ ಅವಳಿಗೆ ನೆನಪಾಗುತ್ತದೆ. ಅಣ್ಣ ನೀನೊಬ್ಬನೆ ಯಾಕೆ ಎಲ್ಲವನ್ನೂ ಅನುಭವಿಸುತ್ತೀಯಾ ಎಂದು ಪ್ರಶ್ನೆ ಮಾಡುತ್ತಾಳೆ. ಅದಾದ ನಂತರದಲ್ಲಿ ಅಣ್ನಯ್ಯನ ತಂದೆ ಕುಡಿದುಕೊಂಡು ಮನೆಗೆ ಬರುತ್ತಾನೆ. ಅವನನ್ನು ಮನೆಯಲ್ಲಿ ಯಾರೂ ಅಷ್ಟಾಗಿ ಮಾತಾಡಿಸೋದಿಲ್ಲ. ಹೀಗಿರುವಾಗ ಪಾರು ಬಂದು ಮಾತಾಡಿಸುತ್ತಾಳೆ. ಆಗ ಅವನು ಕುಡಿದಿರುವುದು ತಿಳಿಯುತ್ತದೆ. ಯಾಕೆ ಮಾವ ನೀನು ಕುಡ್ದಿದೀರಿ? ಎಂದು ಪ್ರಶ್ನೆ ಮಾಡುತ್ತಾಳೆ.

ಆಗ ಅವರು ಹೇಳ್ತಾರೆ “ಅವರು ಮಾಡಿರೋ ಪಾಪಾನ ನೀರಿಂದ ತೊಳ್ಕೊಳೋಕ್ ಆಗೋದಿಲ್ಲ, ಅದ್ಕೆ ನಾನು ಕುಡಿತೀನಿ” ಅಂತ ಉತ್ತರ ನೀಡುತ್ತಾರೆ. ಆಗ ಅವಳಿಗೆ ಯಾರು ಏನು ಪಾಪ ಮಾಡಿದ್ದಾರೆ ಅನ್ನೋದೇ ಅರ್ಥ ಆಗೋದಿಲ್ಲ. ಆದರೂ ಮಾತಾಡುತ್ತಾಳೆ. ಅವರು ಕೇಳಿದ ಅದೆಷ್ಟೋ ಕಡೆ ನಾನು ಹೆಬ್ಬೆಟ್ಟು ಒತ್ತಿಬಿಟ್ಟೆ ಎಂದು ಹೇಳುತ್ತಾನೆ. ಆಗ ಪಾರುಗೆ ಎಲ್ಲ ಅರ್ಥ ಆಗುತ್ತದೆ. ಹಿಂದೆ ವೀರಭದ್ರ ಇವರಿಗೆ ಮೋಸ ಮಾಡಿದ್ದಾನೆ ಎಂದು ಅವಳು ಅರ್ಥ ಮಾಡಿಕೊಳ್ಳುತ್ತಾಳೆ.

ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner