Bigg Boss Kannada: ಬಿಗ್ ಬಾಸ್ ಮನೆಯ ರಾಜಕೀಯ ಅಖಾಡಕ್ಕಿಳಿದ ರಾಧಾ ಹಿರೇಗೌಡರ್; ಒಂದೊಂದು ಪ್ರಶ್ನೆಗೂ ಕಕ್ಕಾಬಿಕ್ಕಿಯಾದ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 11ರಲ್ಲಿ ದಿನೇ ದಿನೇ ಹೊಸ ರೀತಿಯ ಬೆಳವಣಿಗೆಗಳಾಗುತ್ತಿದೆ. ಇದೀಗ ಬಿಗ್ ಬಾಸ್ ಮನೆಯ ಎರಡು ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡಲು ರಾಧಾ ಹಿರೇಗೌಡ ಅವರು ಮನೆಯೊಳಗಿದ್ದಾರೆ. ಅವರ ಪ್ರಶ್ನೆಗೆ ಸ್ಪರ್ಧಿಗಳು ಯಾವ ರೀತಿ ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
ಬಿಗ್ ಬಾಸ್ ಸೀಸನ್ 11ರ ಇಂದಿನ ಪ್ರೋಮೋ ಬಿಡುಗಡೆಯಾಗಿದೆ. ಅದರಲ್ಲಿ ಮನೆಯೊಳಗಿನ ಎರಡು ರಾಜಕೀಯ ಪಕ್ಷಗಳು ಸುಮ್ಮನೆ ಕುಳಿತಿದ್ದಾಗ ಒಂದು ಹಾಡು ಬರುತ್ತದೆ. ಅದಕ್ಕೆ ಎಲ್ಲರೂ ಒಂದೇ ಬಾರಿ ಬೆಚ್ಚಿ ಬೀಳುತ್ತಾರೆ. ‘ಕನ್ನಡ ಹೆಣ್ಣು ನಾನು’ಎಂಬ ಹಾಡು ಬರುತ್ತಿದ್ದಂತೆ ಸ್ಪರ್ಧಿಗಳೆಲ್ಲ ತುಂಬಾ ಶಾಕ್ ಆಗಿ ಕಣ್ ಕಣ್ ಬಿಟ್ಟು ನೋಡುತ್ತಾರೆ. ಯಾರೋ ಮನೆಗೆ ಬರ್ತಾ ಇದ್ದಾರೆ ಎಂದು ಎಲ್ಲರಿಗೂ ಅರೆ ಕ್ಷಣದಲ್ಲಿ ಅರ್ಥವಾಗುತ್ತದೆ. ಒಳಗಡೆ ಊಟ ಮಾಡುತ್ತಿದ್ದ ಸ್ಪರ್ಧಿಗಳೂ ಸಹ ಅಲ್ಲಿಂದ ಎದ್ದು ಹೊರಗಡೆ ಬರುತ್ತಾರೆ. ಇನ್ನೊಂದಷ್ಟು ಜನಕ್ಕೆ ಎಷ್ಟು ಕುತೂಹಲ ಎಂದರೆ ಊಟದ ತಟ್ಟೆಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಹಾಗೇ ಓಡಿ ಬರುತ್ತಾರೆ.
ಸ್ಪರ್ಧಿನಾ? ಅತಿಥಿನಾ?
ಬಂದು ನೋಡುವಷ್ಟರಲ್ಲಿ ರಾಧಾ ಹಿರೇಗೌಡ ಅವರು ಮನೆಯೊಳಗಡೆ ಬಂದಿರುತ್ತಾರೆ. ಎಲ್ಲರೂ ಅವರನ್ನು ಬರಮಾಡಿಕೊಳ್ಳುತ್ತಾರೆ. ಚಿಕ್ಕ ಕಿರುಪರಿಚಯವನ್ನೂ ಸಹ ಮಾಡಿಕೊಳ್ಳುತ್ತಾರೆ. ಅದಾದ ನಂತರದಲ್ಲಿ ಅವರು ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ಚೈತ್ರಾ ಕುಂದಾಪುರ ಅವರು ಹೆಚ್ಚಿನ ಸಮಯ ಅವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ನೀವು ಈ ಮನೆಗೆ ಸ್ಪರ್ಧಿಯಾಗಿ ಬಂದಿದ್ದೀರಾ? ಅಥವಾ ಗೆಸ್ಟ್ ಆಗಿ ಬಂದಿದ್ದೀರಾ? ಎಂದು ಪ್ರಶ್ನೆ ಮಾಡುತ್ತಾರೆ. ಎಲ್ಲರಿಗೂ ಮೊದಲು ಈ ಬಗ್ಗೆ ಹೆಚ್ಚು ಆಲೋಚನೆ ಇರುತ್ತದೆ.
ನಂತರ ಅವರು ಯಾವ ಗೌಪ್ಯತೆಯನ್ನೂ ಬಿಟ್ಟುಕೊಡದೆ ಮುಂದುವರೆಯುತ್ತಾರೆ. ನಂತರ ಕೆಲ ಸಂಭಾಷಣೆಗಳ ಚಿಕ್ಕ ಚಿಕ್ಕ ತುಣುಕುಗಳನ್ನು ನಾವಿಲ್ಲಿ ಕಾಣಬಹುದು. “ನಂಗೇನ್ ಈ ಪಕ್ಷಗಳೆಲ್ಲ ಹೊಸದಲ್ಲ, ಈ ಭಾಷಣ..ಜೈಕಾರ ಇದೆಲ್ಲ ನಾನು ಮೊದಲಿಂದಲೂ ನೋಡ್ಕೊಂಡು ಬಂದಿದಿನಿ” ಎಂದು ಹೇಳುತ್ತಾರೆ. ನಂತರ ಟಿವಿಯಲ್ಲಿ ನಡೆಯುವ ಪೊಲಿಟಿಕಲ್ ಡಿಬೆಟ್ ರೀತಿಯಲ್ಲಿ ಒಂದು ಸೆಟ್ ರೆಡಿ ಇರುತ್ತದೆ. ಎರಡು ಪಕ್ಷಗಳನ್ನು ಮುಂದೆ ಕೂರಿಸಿಕೊಂಡು ಪ್ರಶ್ನೆ ಕೇಳುತ್ತಾರೆ.
ಪ್ರಶ್ನೆಗಳ ಸರಮಾಲೆ
ಐಶ್ವರ್ಯ ಅವರೆ ಎದೆ ಮುಟ್ಟಿಕೊಂಡು ಹೇಳಿ, ನಿಮ್ಮ ಪಕ್ಷದಲ್ಲಿ ಎಲ್ಲರೂ ಪ್ರಾಮಾಣಿಕರೇ ಇದಾರಾ? ಎಂದು ಕೇಳುತ್ತಾರೆ. ಆಗ ವಿರೋಧ ಪಕ್ಷದವರು ನಗುವುದು ಕಾಣಿಸುತ್ತದೆ. ನಂತರ ತ್ರಿವಿಕ್ರಂ ನಾಯಕನಾಗಿರುವ ಪಕ್ಷಕ್ಕೆ ಪ್ರಶ್ನೆ ಕೇಳುತ್ತಾರೆ. ನಿಮ್ಮನ್ನು ನಂಬಿ ಓಟ್ ಹಾಕಿದವರಿಗೆ ನೀವೇನು ಕೊಡ್ತೀರಾ? ಎಂದು ಕೇಳುತ್ತಾರೆ. ಆಗ ನಾವು ಎಲ್ಲರಿಗೂ ಟಿವಿ ಕೊಡ್ತೀವಿ ಎಂದು ಹೇಳುತ್ತಾರೆ. ಅದನ್ನು ನೀವೇನ್ ಕೊಡೋದು? ಬಿಗ್ ಬಾಸೇ ಕೊಡ್ತಾರೆ ಎನ್ನುತ್ತಾರೆ. ಇನ್ನು ಐಶ್ವರ್ಯ ಅವರು ನಾವು ಮನರಂಜನೆ ನೀಡುತ್ತೇವೆ ಎಂದು ಹೇಳುತ್ತಾರೆ. ಹಾಗಾದ್ರೆ ನನ್ನ ನಗಿಸಿ ನೋಡೋಣ ಎಂದು ಗಟ್ಟಿಯಾಗಿ ಕೂತು ಬಿಡ್ತಾರೆ. ಇದೆಲ್ಲವೂ ಇಂದಿನ ಪ್ರೋಮೋದಲ್ಲಿ ಕಾಣಿಸುತ್ತಿದೆ. ಜನರೆಲ್ಲ ಇಂದಿನ ಸಂಚಿಕೆಯನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ವಿಭಾಗ