Annayya Serial: ಅಣ್ಣಯ್ಯ ಬೈತಾನೆ ಅಂದುಕೊಂಡ್ರೆ ಹೊಗಳೇಬಿಟ್ಟ; ತಂಗಿಯರಿಗಿಂದು ಪಶ್ಚಿಮದಲ್ಲಿ ಸೂರ್ಯ ಹುಟ್ಟಿದ ಅನುಭವ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣಯ್ಯ ಬೈತಾನೆ ಅಂದುಕೊಂಡ್ರೆ ಹೊಗಳೇಬಿಟ್ಟ; ತಂಗಿಯರಿಗಿಂದು ಪಶ್ಚಿಮದಲ್ಲಿ ಸೂರ್ಯ ಹುಟ್ಟಿದ ಅನುಭವ

Annayya Serial: ಅಣ್ಣಯ್ಯ ಬೈತಾನೆ ಅಂದುಕೊಂಡ್ರೆ ಹೊಗಳೇಬಿಟ್ಟ; ತಂಗಿಯರಿಗಿಂದು ಪಶ್ಚಿಮದಲ್ಲಿ ಸೂರ್ಯ ಹುಟ್ಟಿದ ಅನುಭವ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿಯಲ್ಲಿ ಅಣ್ಣಯ್ಯನ ಕಣ್ತಪ್ಪಿಸಿ ತಂಗಿಯರೆಲ್ಲ ಟಿವಿ ನೋಡುತ್ತಿರುತ್ತಾರೆ. ಕಾರಣ ಇದಕ್ಕೆ ಅತ್ತಿಗೆ ಪಾರು ಸಹಾಯ ಮಾಡುತ್ತಾಳೆ. ಆದರೂ ಅಣ್ಣಯ್ಯ ಮನೆಗೆ ಬಂದಾಗ ಎಲ್ಲರೂ ಓಡಿ ಹೋಗಿ ಅವಿತುಕೊಳ್ಳುತ್ತಾರೆ.

ಅಣ್ಣಯ್ಯ ಬೈತಾನೆ ಎಂದು ಅಡಗಿ ಕೂತ ತಂಗಿಯರು
ಅಣ್ಣಯ್ಯ ಬೈತಾನೆ ಎಂದು ಅಡಗಿ ಕೂತ ತಂಗಿಯರು

ನಮ್ಮನೆಲಿ ಇರೋದು ಒಂದೇ ಟೀವಿ ಅದರಲ್ಲೂ ಬರೋದು ಒಂದೇ ಚಾನೆಲ್. ನ್ಯೂಸ್‌ ಬರೋವಾಗಷ್ಟೇ ನಾವು ಟಿವಿ ನೋಡ್ಬೇಕು ಮತ್ತೆ ಆಫ್‌ ಮಾಡಿ ಇಡಬೇಕು. ಈ ರೀತಿಯಾಗಿ ನಮ್ಮ ಮನೆಯಲ್ಲಿ ಮೊದಲಿನಿಂದಲೂ ಕಡ್ಡಾಯವಾಗಿ ಒಂದು ನಿಯಮ ಪಾಲನೆ ಆಗ್ತಾ ಬಂದಿದೆ. ನಾವು ಅಣ್ಣ ಇರೋವಾಗ ಒಂದು ರೀತಿ ಇದ್ರೆ, ಅಣ್ಣ ಇಲ್ಲದೆ ಇರೋವಾಗ ಇನ್ನೊಂದು ರೀತಿ ಇರ್ತೀವಿ. ಇದೊಂದು ವಿಷಯದಲ್ಲಿ ಅಣ್ಣನಿಗೆ ನಾವು ಮೋಸ ಮಾಡ್ತೀವಿ ಎಂದು ರತ್ನ ಹೇಳುತ್ತಾಳೆ. ಆಗ ಪಾರು ಹೌದಾ? ಯಾಕೆ ನೀವೆಲ್ಲ ಹಾಗೆ ಮಾಡೋದು? ಟಿವಿ ನೋಡಿದ್ರೆ ಏನಾಗುತ್ತೆ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಎಲ್ಲರೂ ಒಂದೊಂದು ಉತ್ತರ ಕೊಡುತ್ತಾರೆ. ಅದಾದ ನಂತರದಲ್ಲಿ ಎಲ್ಲರಿಗೂ ಟಿವಿ ನೋಡುವ ಮನಸಾಗುತ್ತದೆ. ಅವರೂ ಅತ್ತಿಗೆಯ ಜೊತೆ ಕುಳಿತುಕೊಳ್ಳುತ್ತಾರೆ.

ಆ ಸಂದರ್ಭದಲ್ಲಿ ಅಣ್ಣ ಶಿವು ಮನೆಯಲ್ಲಿ ಇರೋದಿಲ್ಲ. ಹಾಗಾಗಿ ನಾವೂ ನಿನ್ನ ಜೊತೆ ಟಿವಿ ನೋಡ್ತೀವಿ ಎಂದು ಎಲ್ಲರೂ ಬಂದು ಟಿವಿ ಮುಂಬದಿಯಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಅವರೆಲ್ಲ ಕುಳಿತು ಟಿವಿ ನೊಡುತ್ತಿರುವ ಸ್ವಲ್ಪ ಸಮಯದಲ್ಲೇ ಅಲ್ಲಿಗೆ ಅಣ್ಣಯ್ಯ ಬರುತ್ತಾನೆ. ಅವನು ಬರುವಾಗ ಆದ ಶಬ್ಧವನ್ನು ಕೇಳಿ ಎಲ್ಲರೂ ಗಾಬರಿಯಿಂದ ಅತ್ತಿಂದಿತ್ತ ಓಡುತ್ತಾರೆ. ಪಾರು ಎಲ್ಲರನ್ನೂ ನೋಡಿ ಗಾಬರಿ ಆಗುತ್ತಾಳೆ. “ಯಾಕೆ ಎಲ್ಲ ಈ ರೀತಿ ಆಡ್ತಾ ಇದ್ದೀರಾ? ಏನಾಯ್ತು?” ಎಂದು ಅವಳು ಪ್ರಶ್ನೆ ಮಾಡುತ್ತಾಳೆ. ಆಗ ಉತ್ತರ ಕೊಡುವಷ್ಟೂ ಅವರಿಗೆ ನಿಲ್ಲೋಕೆ ಆಗೋದಿಲ್ಲ.

"ಭಯದಿಂದಲೇ ಅತ್ತಿಗೆ ಬೇಗ ಟಿವಿ ಆಫ್‌ ಮಾಡಿ ಅಣ್ಣ ಬಂದುಬಿಡ್ತಾನೆ. ಅವನು ನೋಡಿದ್ರೆ ಮುಗೀತು ಅಷ್ಟೇ, ಇನ್ನು ಯುದ್ದನೇ ಆಗೋಗತ್ತೆ" ಎಂದು ರಶ್ಮಿ ಹೇಳುತ್ತಾಳೆ. ಇಷ್ಟೆಲ್ಲ ಮಾತುಕತೆ ನಡೆಯುವಷ್ಟರಲ್ಲಿ ಅಣ್ಣಯ್ಯ ಸೀದಾ ಮನೆ ಒಳಗಡೆ ಬಂದು ಬಿಡುತ್ತಾನೆ. ರಶ್ಮಿ ಹೋಗಿ ಟಿವಿ ಆಫ್ ಮಾಡಲು ನೋಡುತ್ತಾಳೆ. ಆದರೆ ಅಷ್ಟರಲ್ಲಾಗಲೇ ಪಾರು ಅವಳನ್ನು ತಡೆದು “ಬೇಡ, ಏನಾಗುತ್ತೆ ನಾನೂ ನೋಡ್ತೀನಿ” ಎಂದು ಕಾಲು ಮೇಲೆ ಕಾಲು ಹಾಕಿ ಕುಳಿತು ಟಿವಿ ನೋಡುತ್ತಾಳೆ.

ಅಣ್ಣಯ್ಯ ಮನೆಯೊಳಗಡೆ ಬಂದವನು ಪಾರುಗೆ ಏನೂ ಹೇಳೋದಿಲ್ಲ. ನೋಡು ಪಾರು ಟಿವಿ ನೋಡು ಎಂದು ಅವಳಿಗೆ ಸಪೋರ್ಟ್ ಮಾಡುತ್ತಾನೆ. ಅದನ್ನು ಕೇಳಿದ ತಂಗಿಯರಿಗೆಲ್ಲ ಆಶ್ಚರ್ಯ ಆಗುತ್ತದೆ.

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.