ಅಪೇಕ್ಷಾಳಿಗೆ ಕಪಾಳಮೋಕ್ಷ ಮಾಡಿದ ಭೂಮಿಕಾಳಿಗೆ ಗೌತಮ್‌ ನೀಡಿದ್ರು ಐಡಿಯಾ, ಉಡುಗೊರೆ ನೋಡಿ ಸುಧಾ ಸಂಭ್ರಮ- ಅಮೃತಧಾರೆ ಸೀರಿಯಲ್‌
ಕನ್ನಡ ಸುದ್ದಿ  /  ಮನರಂಜನೆ  /  ಅಪೇಕ್ಷಾಳಿಗೆ ಕಪಾಳಮೋಕ್ಷ ಮಾಡಿದ ಭೂಮಿಕಾಳಿಗೆ ಗೌತಮ್‌ ನೀಡಿದ್ರು ಐಡಿಯಾ, ಉಡುಗೊರೆ ನೋಡಿ ಸುಧಾ ಸಂಭ್ರಮ- ಅಮೃತಧಾರೆ ಸೀರಿಯಲ್‌

ಅಪೇಕ್ಷಾಳಿಗೆ ಕಪಾಳಮೋಕ್ಷ ಮಾಡಿದ ಭೂಮಿಕಾಳಿಗೆ ಗೌತಮ್‌ ನೀಡಿದ್ರು ಐಡಿಯಾ, ಉಡುಗೊರೆ ನೋಡಿ ಸುಧಾ ಸಂಭ್ರಮ- ಅಮೃತಧಾರೆ ಸೀರಿಯಲ್‌

Amruthadhaare serial November 13 Episode: ಜೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯ ನಾಳೆಯ ಅಂದರೆ ನವೆಂಬರ್‌ 13ರ ಸಂಚಿಕೆಯಲ್ಲಿ ಒಂದು ಕಡೆ ಅಕ್ಕ ತಂಗಿ ಮುನಿಸು ಮುಂದುವರೆದಿದೆ. ಇನ್ನೊಂದೆಡೆ ಗೌತಮ್‌ ನೀಡಿದ ಉಡುಗೊರೆ ನೋಡಿ ಸುಧಾಳಿಗೆ ಖುಷಿಯಾಗಿದೆ.

ಅಪೇಕ್ಷಾಳಿಗೆ ಕಪಾಳಮೋಕ್ಷ ಮಾಡಿದ ಭೂಮಿಕಾಳಿಗೆ ಗೌತಮ್‌ ನೀಡಿದ್ರು ಐಡಿಯಾ
ಅಪೇಕ್ಷಾಳಿಗೆ ಕಪಾಳಮೋಕ್ಷ ಮಾಡಿದ ಭೂಮಿಕಾಳಿಗೆ ಗೌತಮ್‌ ನೀಡಿದ್ರು ಐಡಿಯಾ

ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾಳಿಗೆ ಭೂಮಿಕಾಳ ಕಪಾಳಮೋಕ್ಷವಾಗಿದೆ. ಇದಾದ ಬಳಿಕ ಉರಿವ ಬೆಂಕಿಗೆ ಮತ್ತಷ್ಟು ಅಗ್ಗಿಷ್ಟಿಕೆ ಸುರಿಯುವಂತೆ ಶಕುಂತಲಾದೇವಿ ಟೀಮ್‌ ಅಪೇಕ್ಷಾಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಇದರಿಂದ ಅಪೇಕ್ಷಾಳ ಕೋಪ ಇನ್ನಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ ತನ್ನ ಹೆಸರಿನಂತೆ ಭೂಮಿಕಾ ಸಹನ ಧರಿತ್ರಿಯಂತೆ ಚಿಂತೆಯಲ್ಲಿದ್ದಾಳೆ. ಆಕೆಗೆ ಬೇಸರವಾಗಿದೆ. ತಂಗಿಗೆ ಹೊಡೆದ ಘಟನೆ ನೆನಪಾಗುತ್ತದೆ. ಇದೇ ಸಮಯದಲ್ಲಿ ಅಪ್ಪನ ಕುರಿತು ಕೆಟ್ಟದ್ದಾಗಿ ಮಾತನಾಡಿದ್ದು ಆಕೆಗೆ ಬೇಸರ ತರಿಸಿದೆ. ಭೂಮಿಕಾ ಬೇಸರದಲ್ಲಿದ್ದಾಗ ಮಲ್ಲಿ "ಅಕ್ಕರೇ.." ಎಂದು ಅಕ್ಕರೆಯಿಂದ ಕರೆಯುತ್ತಾಳೆ. "ಅಪೇಕ್ಷಾಗೆ ಹೊಡೆದದ್ದು ಬೇಸರವಾಗಿದೆ. ನಾನು ಈ ರೀತಿ ಯಾವತ್ತೂ ಮಾಡಿರಲಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ಅವಳು ಈ ಹಿಂದೆ ಈ ರೀತಿ ಮಾಡಿರಲಿಲ್ಲ, ಅದಕ್ಕೆ ಹಿಂದೆ ಈ ರೀತಿ ಮಾಡುವ ಪ್ರಸಂಗ ಬಂದಿರಲಿಲ್ಲ" ಎಂದು ಮಲ್ಲಿ ಸಮಾಧಾನ ಹೇಳುತ್ತಾಳೆ. ನಿಮ್ಮ ಜಾಗದಲ್ಲಿ ಯಾರೇ ಇದ್ರೂ ಅದನ್ನೇ ಮಾಡ್ತಾ ಇದ್ರು. ನೀವಾಗಿ ಒಂದೇಟು ಹಾಕಿದ್ರಿ. ಬೇರೆಯವರಾದರೆ ಇನ್ನೂ ನಾಲ್ಕೇಟು ಹಾಕುತ್ತಿದ್ದರು ಎಂದು ಮಲ್ಲಿ ಹೇಳುತ್ತಾಳೆ.

"ಹೆತ್ತ ಅಪ್ಪ ಅಮ್ಮನ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಯಾರು ಸಹಿಸಿಕೊಳ್ಳುತ್ತಾರೆ" ಎಂದು ಮಲ್ಲಿ ಹೇಳುತ್ತಾಳೆ. "ಅವಳು ತಪ್ಪು ಮಾಡಿದ್ದು ಸಹಜ. ಆದರೆ, ನಾನು ನನ್ನ ಸಹನೆ ಕಳೆದುಕೊಳ್ಳಬಾರದಿತ್ತು. ನನ್ನ ತಂಗಿ ಅವಳು. ನಮ್ಮ ಬೆಳವಣಿಗೆಗೆ ಕಾರಣವಾದವರನ್ನು ಮರೆಯಬಾರದು. ನಮ್ಮತನವನ್ನು ಮರೆತ್ರೆ ನಮ್ಮ ಅಸ್ತಿತ್ವಕ್ಕೆ ಬೆಲೆ ಇರೋದಿಲ್ಲ. ಯಾಕೆ ಹೀಗೆ ಮಾಡ್ತಾಳೆ" ಎಂದು ಭೂಮಿಕಾ ಹೇಳುತ್ತಾರೆ. "ತೀರ ಒಳ್ಳೆಯವರಾದ್ರೆ ಹೀಗೆ. ಅದರ ಬದಲು ಒಳ್ಳೆಯವರಿಗೆ ಒಳ್ಳೆಯವರು, ಕೆಟ್ಟವರಿಗೆ ಕೆಟ್ಟವರಾಗಿ ಇದ್ರೆ ಬಿಂದಾಸ್‌ ಆಗಿರಬಹುದು" ಎಂದು ಮಲ್ಲಿ ಹೇಳುತ್ತಾಳೆ. "ನನಗೂ ಹಾಗೇ ಇರಬಹುದಿತ್ತು. ಆದರೆ, ನನ್ನಪ್ಪ ನನ್ನ ಹೀಗೆ ಬೆಳೆಸಿದ್ದಾರೆ. ನನಗೆ ಅಪ್ಪ ರೋಲ್‌ ಮಾಡೆಲ್‌. ಅಪ್ಪಿ ತಾನು ಬಂದ ದಾರಿಯನ್ನು ಮರೆತಿರುವುದಕ್ಕೆ ನನಗೆ ಬೇಸರವಾಗಿದೆ" ಎಂದು ಹೇಳುತ್ತಾಳೆ. "ಅಪೇಕ್ಷಾಳ ಮನಸ್ಸಲ್ಲಿ ಹಳೆಯ ಕೋಪ ಇದೆ. ಅದು ತನ್ನಗಾದ ಬಳಿಕ ಸರಿಯಾಗುತ್ತದೆ. ನಾನು ಕೂಡ ಈ ಹಿಂದೆ ಹೀಗೆಯೇ ಇದ್ದೆ. ನಾನು ಬುದ್ದಿ ಕಲಿತಿಲ್ವ. ಸಮಯ ಎಲ್ಲವನ್ನೂ ಕಲಿಸುತ್ತದೆ" ಎಂದು ಮಲ್ಲಿ ಹೇಳುತ್ತಾಳೆ.

ಗೌತಮ್‌ ಉಡುಗೊರೆ ನೋಡಿ ಖುಷಿಪಟ್ಟ ಸುಧಾ

ಸುಧಾ ಮನೆಗೆ ಬಂದಾಗ ಮಗಳು ಚಾಕೋಲೇಟ್‌ ತಿನ್ನುತ್ತಿದ್ದಾಳೆ. ಅವರು ಮತ್ತೆ ಬಂದ್ರ ಎಂದು ಕೇಳಿದಾಗ "ನನಗೆ ಚಾಕೋಲೇಟ್‌ ಕೊಟ್ರು, ಇದೆಲ್ಲ ನಿನಗೆ" ಎನ್ನುತ್ತಾಳೆ. ಡುಮ್ಮ ಸರ್‌ ತಂದ ಸೀರೆಗಳನ್ನು, ಮಗಳ ಉಡುಗೆ ನೋಡಿ ಖುಷಿ ಪಡುತ್ತಾರೆ ಸುಧಾ. ಇಷ್ಟೆಲ್ಲ ಉಡುಗೊರೆಗಳ ನಡುವೆ ಒಂದಿಷ್ಟು ಹಣವೂ ಇರುತ್ತದೆ. "ಇದನ್ನೆಲ್ಲ ಯಾಕೆ ಕೊಟ್ಟಿದ್ದಾರೆ" ಎಂದು ಸುಧಾ ಯೋಚಿಸುತ್ತಾರೆ. "ನೀನು ಅವರನ್ನು ಅಣ್ಣಾ ಅಂತ ಕರೆಯುತ್ತಿ ಅಲ್ವ, ಅದಕ್ಕೆ ಕೊಟ್ರಂತೆ" ಎಂದು ಮಗಳು ಹೇಳಿದಾಗ ಸುಧಾಳ ಹೃದಯ ತುಂಬಿ ಬರುತ್ತದೆ. "ಮಾವ ತುಂಬಾ ಹೊತ್ತು ಕಾದ್ರು. ಅರ್ಜೆಂಟ್‌ ಫೋನ್‌ ಬಂತು, ಹಾಗೇ ಹೋದ್ರು" ಎಂದು ಮಗಳು ಹೇಳುತ್ತಾಳೆ. ಅವರು ಒಳ್ಳೆಯ ಮಾಮ ಎನ್ನುತ್ತಾಳೆ. ಇದಾದ ಬಳಿಕ ಸುಧಾ ಬಂಗಾರದ ಬಳೆಯನ್ನು ಅಮ್ಮನ ಕೈಗೆ ತೊಡಿಸಿ ಭಾವುಕಳಾಗುತ್ತಾಳೆ. ಅಮ್ಮನಿಗೆ ಸಿಹಿಯನ್ನೂ ತಿನ್ನಿಸುತ್ತಾಳೆ. "ಖುಷಿ ಅನ್ನೋದು ನಮ್ಮ ಮನೆ ಬಾಗಿಲಿಗೆ ನಿಧಾನವಾಗಿ ಬರುತ್ತಿದೆ" ಎನ್ನುತ್ತಾಳೆ. "ಎಲ್ಲವೂ ಬದಲಾಗುತ್ತಿದೆ, ಎಲ್ಲವೂ ಒಳ್ಳೆಯದಾಗುತ್ತಿದೆ ಅನಿಸುತ್ತದೆ" ಎಂದು ಹೇಳುತ್ತಾಳೆ.

ಭೂಮಿಕಾಗೆ ಗೌತಮ್‌ ನೀಡಿದ್ರು ಸಲಹೆ

ಭೂಮಿಕಾ ಗೌತಮ್‌ನಲ್ಲಿ ಮಾತನಾಡುತ್ತಿದ್ದಾಳೆ. "ನನಗೆ ಅಷ್ಟು ಕೋಪ ಬಂದಿರಲಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ಇದರಲ್ಲಿ ನಿಮ್ಮ ತಪ್ಪಿಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ. ತಮ್ಮ ಹೆತ್ತವರ ಬಗ್ಗೆ ಹಗುರವಾಗಿ ಮಾತನಾಡಿದರೆ ಈ ರೀತಿ ಪ್ರತಿಕ್ರಿಯೆ ಸಹಜ. ಅಪ್ಪ ಅಮ್ಮನ ಬಗ್ಗೆ ಯಾರಾದರೂ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ" ಎಂದು ಗೌತಮ್‌ ಹೇಳುತ್ತಾರೆ. "ಅಪ್ಪಿ ಈ ರೀತಿ ಮಾತನಾಡಿದ್ದು ನನಗೆ ಬೇಸರ ತಂದಿದೆ" ಎಂದು ಭೂಮಿಕಾ ಹೇಳುತ್ತಾಳೆ. "ಮೆಚ್ಚುರಿಟಿ ಕಡಿಮೆ ಇದೆ. ಬದಲಾಗಬಹುದು" ಎಂದು ಗೌತಮ್‌ ಹೇಳುತ್ತಾರೆ. "ಇದು ಮೆಚ್ಯುರಿಟಿ ಪ್ರಶ್ನೆಯಲ್ಲ. ಅವಳು ತುಂಬಾ ಬದಲಾಗಿದ್ದಾಳೆ" ಎಂದು ಭೂಮಿಕಾ ಹೇಳುತ್ತಾರೆ. "ಸಂಸಾರ ಅಂದ್ಮೆಲೆ ಇದೆಲ್ಲ ಸಹಜ. ಕಾಲ ಎಲ್ಲಾ ಸರಿ ಮಾಡುತ್ತೆ. ಆ ಟೈಮ್‌ಗೆ ನಾವು ಕೊಂಚ ಟೈಮ್‌ ನೀಡಬೇಕು" ಎಂದು ಗೌತಮ್‌ ಹೇಳುತ್ತಾರೆ.

ಅಪೇಕ್ಷಾಳ ಕೋಪ ತಣಿಸಲು ಯತ್ನಿಸಿದ ಪಾರ್ಥ

ಇನ್ನೊಂದೆಡೆ ಪಾರ್ಥನ ಮುಂದೆ ಅಪೇಕ್ಷಾ ರೋಷಾಗ್ನಿ ಪ್ರದರ್ಶಿಸುತ್ತಿದ್ದಾಳೆ. ಆತ ಎಷ್ಟು ಕೂಲ್‌ ಆಗಿ ಹೇಳಿದರೂ ಆಕೆ ಕೇಳುವುದಿಲ್ಲ. "ಅಕ್ಕ ನನ್ನ ಮೇಲೆ ಕೈ ಮಾಡಿದ್ಲು. ಅದು ಮನೆಯವರ ಮುಂದೆ. ಇದಕ್ಕಿಂತ ಅವಮಾನ ಬೇಕಾ ನನಗೆ. ಸಾಯುವಷ್ಟು ಸಂಕಟವಾಯ್ತು" ಎಂದು ಅಪೇಕ್ಷಾ ಹೇಳುತ್ತಾಳೆ. "ಅಪೇಕ್ಷಾ ಅವಳನ್ನೇ ಪಾಯಿಂಟ್‌ ಮಾಡಬೇಡಿ. ನೀವು ಆ ರೀತಿ ಮಾತನಾಡಿದ್ದು ತಪ್ಪಲ್ವ" ಎಂದು ಕೇಳುತ್ತಾನೆ. "ಅದೇ ಕಾಯ್ತಾ ಇದ್ದೆ. ಇನ್ನೂ ಅವಳ ಪರವಹಿಸಿ ಯಾಕೆ ಮಾತನಾಡ್ತ ಇಲ್ಲ ಅಂತ" ಎಂದು ಶುರು ಮಾಡುತ್ತಾಳೆ. ಆಕೆ ಒಂದಿಷ್ಟು ಹೊತ್ತು ಮಾತನಾಡಿದ್ದನ್ನು ಪಾರ್ಥ ಸಹನೆಯಿಂದ ಕೇಳುತ್ತಾನೆ. "ನಿಮ್ಮ ಅಪ್ಪ ಅಮ್ಮನ ಪಾಯಿಂಟ್‌ನಿಂದ ನೋಡಿ. ಅವರಿಗೆ ನಿಮ್ಮ ಮೇಲೆ ಎಷ್ಟೆಲ್ಲ ಆಸೆ ಇತ್ತು. ಎಷ್ಟೆಲ್ಲ ಕನಸಿತ್ತು. ನಮ್ಮಿಂದಾಗಿ ಅವರ ಕನಸು ನನಸಾಗಲಿಲ್ಲ. ಆ ಬೇಜಾರು ಇದೆ. ಅದಕ್ಕೆ ರಿಯಾಕ್ಟ್‌ ಮಾಡಿದ್ದಾರೆ ಅಷ್ಟೇ. ಅವರಿಗೆ ನಿಮ್ಮ ಮೇಲೆ ಪ್ರೀತಿ ಇದೆ. ಇದಕ್ಕೆಲ್ಲ ಟೈಮ್‌ ಉತ್ತರ ನೀಡಬೇಕು" ಎಂದು ಪಾರ್ಥ ಆಕೆಯ ಕಣ್ತೆರೆಸಲು ನೋಡುತ್ತಾನೆ. "ಅಪ್ಪ ಅಮ್ಮನ ರಿಲೇಷನ್‌ ಯಾವತ್ತೂ ಚೇಂಜ್‌ ಆಗೋಲ್ಲ. ನೀವು ಮಿಸ್‌ ಮಾಡಿಕೊಳ್ಳುವಷ್ಟು ಅವರೂ ಅಲ್ಲಿ ಅಷ್ಟೇ ಮಿಸ್‌ ಮಾಡಿಕೊಳ್ಳುತ್ತಾರೆ" ಎಂದಾಗ ಆಕೆಯೂ ಕರಗಿ ತಬ್ಬಿಕೊಳ್ಳುತ್ತಾಳೆ.

ಭೂಮಿಕಾ ಚಿಂತೆಯಲ್ಲಿರುವುದನ್ನು ನೋಡಿ ಗೌತಮ್‌ ಒಂದು ಸೊಲ್ಯುಷನ್‌ ಹೇಳುತ್ತಾರೆ. ಮಾತಿನಿಂದ ಶುರುವಾಗಿರೋದಲ್ವ. ಹೋಗಿ ಮಾತನಾಡಿ. ಎಲ್ಲವೂ ಸರಿಯಾಗುತ್ತದೆ ಎಂದು ಹೇಳುತ್ತಾರೆ. ನೀವು ಹೋಗಿ ಮಾತನಾಡಿ. ಆಮೇಲೆ ಏನಾಗುತ್ತದೆ ನೋಡಿಕೊಳ್ಳೋಣ ಎನ್ನುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ.

Whats_app_banner