ಮದನ್‌ ವಿಚಾರದಲ್ಲಿ ವೀರೇಂದ್ರ ಬದಲಾದ ಖುಷಿಯಲ್ಲಿದ್ದ ವಿಜಯಾಂಬಿಕಾಗೆ ಭಾರಿ ನಿರಾಸೆ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 108 august 15th subbu birthday preparation ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮದನ್‌ ವಿಚಾರದಲ್ಲಿ ವೀರೇಂದ್ರ ಬದಲಾದ ಖುಷಿಯಲ್ಲಿದ್ದ ವಿಜಯಾಂಬಿಕಾಗೆ ಭಾರಿ ನಿರಾಸೆ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಮದನ್‌ ವಿಚಾರದಲ್ಲಿ ವೀರೇಂದ್ರ ಬದಲಾದ ಖುಷಿಯಲ್ಲಿದ್ದ ವಿಜಯಾಂಬಿಕಾಗೆ ಭಾರಿ ನಿರಾಸೆ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode August 15th: ಸುಬ್ಬು ಮನೆಗೆ ಬಂದು ಅಮ್ಮನ ಕೈಯಲ್ಲಿ ತಾಗ್ಲಾಕೊಂಡ್ರು ಹೇಗೋ ತಪ್ಪಿಸಿಕೊಂಡ್ಲು ಶ್ರೀವಲ್ಲಿ. ವೀರೇಂದ್ರನಿಗೆ ಸುಬ್ಬು ಹುಟ್ಟುಹಬ್ಬದ ಸಂಭ್ರಮ, ವಿಜಯಾಂಬಿಕಾಗೆ ಮಗನ ಸಾಧನೆ ತಮ್ಮ ಗುರುತಿಸಿದ್ದಾನೆ ಎಂಬ ಭ್ರಮೆ. ಹುಟ್ಟು ಆಚರಿಸಲು ಮಿನಿಸ್ಟರ್‌ ಮನೆಗೆ ಬಂದ ಪದ್ಮನಾಭ ಕುಟುಂಬಕ್ಕೆ ಅವಮಾನ.

ಮದನ್‌ ವಿಚಾರದಲ್ಲಿ ವೀರೇಂದ್ರ ಬದಲಾದ ಖುಷಿಯಲ್ಲಿದ್ದ ವಿಜಯಾಂಬಿಕಾಗೆ ಭಾರಿ ನಿರಾಸೆ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಮದನ್‌ ವಿಚಾರದಲ್ಲಿ ವೀರೇಂದ್ರ ಬದಲಾದ ಖುಷಿಯಲ್ಲಿದ್ದ ವಿಜಯಾಂಬಿಕಾಗೆ ಭಾರಿ ನಿರಾಸೆ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್‌ 15ರ) ಸಂಚಿಕೆಯಲ್ಲಿ ಸುಬ್ಬು ಮನೆಗೆ ಬಂದು ಅಮ್ಮನ ಕೈಯಲ್ಲಿ ಸಿಕ್ಕಿಹಾಕಿಕೊಂಡ ಶ್ರೀವಲ್ಲಿ ಉಪಾಯವಾಗಿ ಅಮ್ಮನನ್ನು ಒಲಿಸಿಕೊಳ್ಳುವ ಪ್ಲಾನ್‌ ಮಾಡುತ್ತಾಳೆ. ಅದಕ್ಕಾಗಿ ವಿಶಾಲಾಕ್ಷಿ ಬಳಿ ತನಗೆ ಬೈಯುವಂತೆ ಹೇಳುತ್ತಾಳೆ. ವಿಶಾಲಾಕ್ಷಿ ಶ್ರೀವಲ್ಲಿಗೆ ಬೈಯುತ್ತಾ, ಸುಬ್ಬುವನ್ನು ಹೊಗಳಿದ್ದೇ ತಡ ಇಂದ್ರಮ್ಮನ ವರಸೆ ಬದಲಾಗುತ್ತದೆ. ವಿಶಾಲಾಕ್ಷಿ ಸುಬ್ಬು ಮಿನಿಸ್ಟರ್‌ ಮನೆಯಲ್ಲಿ ಕೆಲಸ ಮಾಡೋದು, ನಮ್ಮ ಲೆವೆಲ್ಲೇ ಬೇರೆ ಎಂದಾಗ ಇಂದ್ರಮ್ಮ ಕೂಡ ನನ್ನ ಮಗಳು ಕೂಡ ಮಿನಿಸ್ಟರ್‌ ಮನೆಯಲ್ಲೇ ಕೆಲಸ ಮಾಡೋದು, ನಾಳೆ ನಮ್ಮ ಮನೆಗೂ ಮಿನಿಸ್ಟರ್‌ ಬರಬಹುದು. ನಿಮ್ಮ ಮನೆಗೆ ಮಾತ್ರ ಬರೋದೇನಲ್ಲ. ಮಿನಿಸ್ಟರ್‌ ಮನೆ ಫಂಕ್ಷನ್‌ಗೆ ನನ್ನ ಮಗಳಿಗೂ ಹೇಳಿಕೆ ಇದೆ, ಅವಳು ಹೋಗ್ತಾಳೆ ಎಂಬ ದರ್ಪದಿಂದ ಮಾತನಾಡುತ್ತಾರೆ. ಈ ಇಬ್ಬರ ಜಗಳದಿಂದ ಲಾಭ ತೆಗೆದುಕೊಂಡ ಶ್ರೀವಲ್ಲಿ ಅಮ್ಮನ ಬಾಯಿಂದಾನೇ ನಾಳೆ ಮಿನಿಸ್ಟರ್‌ ಮನೆಗೆ ಹೋಗಲು ಪರ್ಮಿಷನ್‌ ಪಡೆದುಕೊಳ್ಳುತ್ತಾಳೆ. ಅಂತೂ ಸುಬ್ಬು ಹುಟ್ಟುಹಬ್ಬ ಆಚರಣೆಗೆ ಶ್ರೀವಲ್ಲಿ ಮಿನಿಸ್ಟರ್‌ ಮನೆಗೆ ಹೋಗೋದು ಫಿಕ್ಸ್‌ ಆಗುತ್ತದೆ.

ಮಗನ ವಿಚಾರದಲ್ಲಿ ತಮ್ಮ ಬದಲಾದ ಖುಷಿಯಲ್ಲಿ ವಿಜಯಾಂಬಿಕಾ

ಶ್ರಾವಣಿ ಜೊತೆ ತಮ್ಮ ವೀರೇಂದ್ರ ಗುಟ್ಟುಗುಟ್ಟಾಗಿ ಮಾತನಾಡುವುದನ್ನು ನೋಡಿದ ವಿಜಯಾಂಬಿಕಾಗೆ ಅವರೇನು ಮಾತನಾಡುತ್ತಿರುವುದು ಎಂದು ತಿಳಿಯದೇ ಚಡಪಡಿಕೆ ಶುರುವಾಗುತ್ತದೆ. ಹೇಗಾದರೂ ಅದನ್ನು ತಿಳಿದುಕೊಳ್ಳಬೇಕು ಎಂದುಕೊಂಡು ವೀರೇಂದ್ರನನ್ನ ಪಕ್ಕಕ್ಕೆ ಕರೆದು ಮಾತನಾಡುತ್ತಾಳೆ. ಆರಂಭದಲ್ಲಿ ನೀನು ಬದಲಾಗಿದ್ದೀಯಾ ಎಂದು ಪೀಠಿಕೆ ಹಾಕುವ ವಿಜಯಾಂಬಿಕಾ ಶ್ರಾವಣಿ ವಿಚಾರದಲ್ಲಿ ನೀನು ನಡೆದುಕೊಳ್ಳುತ್ತಿರುವುದು ನನಗೆ ಆಶ್ಚರ್ಯ ಮೂಡಿಸಿದೆ ಎಂದು ಹೇಳಿ ವಿಷಯ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆಗ ವೀರೇಂದ್ರ ನಾನು ಶ್ರಾವಣಿ ಜೊತೆ ಹತ್ತಿರ ಆಗಿರುವುದರ ಹಿಂದೆ ಒಂದು ಉದ್ದೇಶ ಇದೆ. ಇದು ಈ ಮನೆಯ ಮನೆಗೆ ಸರ್ಪ್ರೈಸ್‌ ನೀಡುವ ಸಲುವಾಗಿ, ಇನ್ನೊಂದು ಸ್ವಲ್ಪ ಹೊತ್ತಿನಲ್ಲೇ ನಿನಗೆ ಎಲ್ಲವೂ ಅರ್ಥ ಆಗುತ್ತೆ ಎನ್ನುತ್ತಾ ಅಲ್ಲಿಂದ ಹೊರಟು ಬಿಡುತ್ತಾನೆ ವೀರೇಂದ್ರ. ಆದರೆ ಮನೆ ಮಗ ಎಂದು ತನ್ನ ಮಗನಿಗೆ ಹೇಳಿದ್ದು ಎಂದುಕೊಂಡು ಖುಷಿಯಲ್ಲಿ ತೇಲಾಡುತ್ತಾಳೆ ವಿಜಯಾಂಬಿಕಾ, ಸ್ವಲ್ಪ ಹೊತ್ತಿಗೆ ಮರಳಿ ಬರುವ ವೀರೇಂದ್ರ ಬದಲಾವಣೆ ಜಗದ ನಿಯಮ ಅಕ್ಕಾ, ನಾವು ಒಳ್ಳೆಯ ಕಾರಣಕ್ಕೆ ಬದಲಾಗೋದು ತಪ್ಪಲ್ಲ ಎಂದು ಹೇಳಿ ಹೋಗುತ್ತಾನೆ. ಆದರೆ ಸುಬ್ಬು ಹುಟ್ಟುಹಬ್ಬದ ಆಚರಣೆಯ ಕನಿಷ್ಠ ಯೋಚನೆಯೂ ಇಲ್ಲದ ವಿಜಯಾಂಬಿಕಾ ಮಗನಿಗೆ ವೀರೇಂದ್ರ ಸರ್ಪ್ರೈಸ್‌ ಪಾರ್ಟಿ ಕೊಡುತ್ತಾನೆ ಎಂದು ಭ್ರಮೆಯಲ್ಲಿ ಇರುತ್ತಾಳೆ.

ಪದ್ಮನಾಭ ಕುಟುಂಬದ ಜೊತೆ ತಾನೂ ಹೊರಟ ಶ್ರೀವಲ್ಲಿ

ಸುಬ್ಬು ಹುಟ್ಟುಹಬ್ಬ ಆಚರಣೆಗೆ ಮಿನಿಸ್ಟರ್‌ ಮನೆಗೆ ಹೊರಡುತ್ತಾರೆ ಪದ್ಮನಾಭ ಕುಟುಂಬ. ಪದ್ಮನಾಭ ಅವರ ಟಂಟಂ ಗಾಡಿಯೇರಿ ಹೊರಡುವ ಹೊತ್ತಿಗೆ ಅಲ್ಲಿಗೆ ಬರುವ ಶ್ರೀವಲ್ಲಿ ಏನೋ ಪ್ಲಾನ್‌ ಮಾಡಿ ತಾನು ಕೂಡ ಸುಬ್ಬು ಮನೆಯವರ ಜೊತೆ ಹೋಗುವಂತೆ ತನ್ನ ತಾಯಿಯೇ ಹೇಳುವಂತೆ ಮಾಡುತ್ತಾಳೆ. ಎಲ್ಲರೂ ಒಟ್ಟಾಗಿ ಖುಷಿಯಿಂದ ಮಿನಿಸ್ಟರ್‌ ಮನೆಗೆ ಹೊರಟರೆ ಅಲ್ಲಿ ಆಗುವುದೇ ಬೇರೆ.

ವಿಜಯಾಂಬಿಕಾಗೆ ಭಾರಿ ನಿರಾಸೆ, ಮದನ್‌ಗೆ ಅವಮಾನ 

ತನ್ನ ಮಗನ ವಿಚಾರದಲ್ಲಿ ವೀರೇಂದ್ರ ಬದಲಾಗಿದ್ದು ನೋಡಿ ಖುಷಿಯಾದ ವಿಜಯಾಂಬಿಕಾ ಈ ವಿಚಾರವನ್ನು ಮಗನಿಗೆ ಕಾಲ್‌ ಮಾಡಿ ತಿಳಿಸುತ್ತೇನೆ ಎಂದು ಕಾಲ್‌ ಮಾಡುತ್ತಾಳೆ. ಆದರೆ ಅವನು ಕಾಲ್‌ ಪಿಕ್‌ ಮಾಡುವುದಿಲ್ಲ. ಎರಡು-ಮೂರು ಬಾರಿ ಕಾಲ್‌ ಮಾಡಿದಾಗ ಕಾಲ್‌ ರಿಸೀವ್‌ ಮಾಡುವ ಮದನ್‌ ಅಮ್ಮನ ಮೇಲೆ ರೇಗುತ್ತಾನೆ, ಆದರೆ ವಿಜಯಾಂಬಿಕಾಗೆ ಕಾರಣ ತಿಳಿಯುವುದಿಲ್ಲ. ಕೊನೆಗೆ ಮದನ್‌ ತಾಯಿಯ ಬಳಿ ಮಾವ ಹಾಗೂ ಶ್ರಾವಣಿ ಸೇರಿಕೊಂಡು ಸುಬ್ಬು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದು, ಅದಕ್ಕಾಗಿ ಇಷ್ಟೆಲ್ಲಾ ಸಿದ್ಧತೆ, ಅವರಿಬ್ಬರು ಮಾತನಾಡಿಕೊಳ್ಳುತ್ತಿರುವುದನ್ನು ನಾನು ಕೇಳಿಸಿಕೊಂಡೆ ಎಂದು ರೋಷಾವೇಷದಲ್ಲಿ ಕೂಗಾಡುತ್ತಾನೆ. ಮಾತ್ರವಲ್ಲ ಸದ್ಯಕ್ಕೆ ನಾನು ಮನೆಗೆ ಬರೋಲ್ಲ. ನನಗೆ ಮನಸ್ಸಿಗೆ ಬಂದು ದಿನ ಬರುತ್ತೇನೆ ಎಂದು ಹೇಳಿ ತಾಯಿಯ ಮಾತು ಮುಗಿಯುವ ಮೊದಲೇ ಕಾಲ್‌ ಕಟ್‌ ಮಾಡುತ್ತಾಳೆ.

ಕೇಕ್‌ ಆರ್ಡರ್‌ ಮಾಡಿರುವುದು ಮನೆಗೆ ಬಂದಾಗ ಅದನ್ನು ಅಕ್ಕನಿಗೆ ತೋರಿಸಿ ಸುಬ್ಬು ಹುಟ್ಟುಹಬ್ಬ ಆಚರಿಸುತ್ತಿರುವ ವಿಷಯ ಹೇಳುತ್ತಾನೆ, ಅಲ್ಲದೇ ಸುಬ್ಬುಗೆ ಗಿಫ್ಟ್‌ ಮಾಡಲು ನಾನು ಗೋಲ್ಡ್‌ ಚೈನ್‌ ತಂದಿದ್ದು, ನನ್ನ ನಿನ್ನ ರೂಮ್‌ನಲ್ಲೇ ಇಟ್ಟಿದ್ದೇನೆ ಎಂದು ಹೇಳುತ್ತಾನೆ. ಮೊದಲೇ ಉರಿದುಕೊಂಡಿದ್ದ ವಿಜಯಾಂಬಿಕಾ ಈಗ ಇನ್ನಷ್ಟು ಉರಿದು ಬೀಳುತ್ತಾಳೆ. ಇತ್ತ ಖುಷಿಖುಷಿಯಲ್ಲಿ ಮಿನಿಸ್ಟರ್‌ ಮನೆ ಗೇಟ್‌ ಮುಂದೆ ಬಂದು ನಿಂತ ಸುಬ್ಬು ಮನೆಯವರಿಗೆ ನಿರಾಸೆ, ಅವಮಾನ. ಗೇಟ್‌ ಒಳಗೂ ಬಿಡುತ್ತಿಲ್ಲ ಸೆಕ್ಯೂರಿಟಿ. ಗೇಟ್‌ ಬಳಿ ಸುಬ್ಬು ಮನೆಯವರನ್ನು ನೋಡಿದ ವಿಜಯಾಂಬಿಕಾ, ಅವರನ್ನು ಯಾವುದೇ ಕಾರಣಕ್ಕೂ ಒಳಗೆ ಬಿಡಬೇಡ ಎಂದು ಸೆಕ್ಯೂರಿಟಿಗೆ ಆರ್ಡರ್‌ ಮಾಡುತ್ತಾಳೆ.

ಸುಬ್ಬು ಹುಟ್ಟುಹಬ್ಬಕ್ಕೆ ಮನೆಯವರಿಗೆ ಬರಲು ಸಾಧ್ಯವಾಗುವುದಿಲ್ವಾ, ವಿಜಯಾಂಬಿಕಾ ಇನ್ನೇನು ಮಾಡಬಹುದು, ವೀರೇಂದ್ರ ಸಂಭ್ರಮಕ್ಕೆ ಕಲ್ಲು ಹಾಕ್ತಾಳಾ ಅಕ್ಕ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.