ಅಮೃತಧಾರೆ: ಹಳ್ಳಿ ಮನೆಯತ್ತ ಮಲ್ಲಿ ಜೈದೇವ್ ಪ್ರಯಾಣ, ದಿವಾನ್ ಮನೆಗೆ ಗುರುಗಳ ಆಗಮನ, ಶಕುಂತಲಾ ಕಾಯಿಲೆಗೆ ಮದ್ದು ಅರೆಯುತ್ತಿದ್ದಾರೆ ಭೂಮಿಕಾ
Amruthadhaare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಶುಕ್ರವಾರದ ಸಂಚಿಕೆಯಲ್ಲಿ ಭೂಮಿಕಾ ತನ್ನ ತಾಯಿಯ ನೆರವಿನಿಂದ ಗುರುಗಳ ಬಳಿ ಜಾತಕ ತೋರಿಸಿ ಸತ್ಯ ತಿಳಿದುಕೊಂಡಿದ್ದಾರೆ. ಮಲ್ಲಿ ಮತ್ತು ಜೈದೇವ್ ಹಳ್ಳಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಶಕುಂತಲಾದೇವಿ ಷಡ್ಯಂತ್ರಕ್ಕೆ ಕೊನೆಹಾಡಲು ಮದ್ದು ಅರೆಯುತ್ತಿದ್ದಾರೆ ಭೂಮಿಕಾ.
Amruthadhaare Serial Story: ಭೂಮಿಕಾ ತನ್ನ ತಾಯಿಯ ನೆರವಿನಿಂದ ಗುರುಗಳ ಬಳಿಯಲ್ಲಿ ತನ್ನ ಮತ್ತು ಗೌತಮ್ ಜಾತಕ ತೋರಿಸುತ್ತಾಳೆ. ನಿಮ್ಮಿಬ್ಬರದ್ದು ತುಂಬಾ ಅಪರೂಪದ ಜಾತಕ ಎಂದು ಗುರುಗಳು ಹೇಳುತ್ತಾರೆ. ಇಂತಹ ಜಾತಕ ಸಿಗೋದೇ ಅಪರೂಪ ಎನ್ನುತ್ತಾರೆ. ಈ ಮೂಲಕ ಜಾತಕದ ವಿಷಯದಲ್ಲಿ ಮನೆಯಲ್ಲಿ ಏನೋ ಷಡ್ಯಂತ್ರ ನಡೆದಿದೆ ಎನ್ನುವುದನ್ನು ಭೂಮಿಕಾ ಖಚಿತಪಡಿಸಿಕೊಳ್ಳುತ್ತಾಳೆ. ಹೀಗಿದ್ದರೂ ಶಾಸ್ತ್ರಿಗಳ ಬಳಿ ಭೂಮಿಕಾ ಮತ್ತೊಮ್ಮೆ ನೋಡಲು ಹೇಳುತ್ತಾಳೆ. "ನಾವಿಬ್ಬರು ಒಂದಾದರೆ ನಮ್ಮಿಬ್ಬರಲ್ಲಿ ಯಾರ ಜೀವಕ್ಕೆ ಅಪಾಯ ಇದೆಯಾ?" ಎಂದು ಕೇಳುತ್ತಾಳೆ. "ನೂರಕ್ಕೆ ನೂರು ಭಾಗ ಅಂತಹ ಯಾವುದೇ ಸಮಸ್ಯೆಯಾಗದು. ಅದಕ್ಕೆ ನಾನು ಭರವಸೆ ಕೊಡುವೆ. ಇದಕ್ಕೂ ಮೀರಿ ಹಾಗೆನಾದರೂ ಆದ್ರೆ ನಾನು ಜ್ಯೋತಿಷ ಹೇಳೋದನ್ನೆ ಬಿಟ್ಟುಬಿಡ್ತಿನಿ" ಎಂದು ಶಾಸ್ತ್ರಿಗಳು ಹೇಳುತ್ತಾರೆ. "ಈ ಜಾತಕದ ಪ್ರಕಾರ ನಿಮ್ಮ ಮನೆಯವರಿಗೆ ತುಸು ಹುಷಾರಿಲ್ಲ ಅಲ್ವೇ?" ಎಂದು ಶಾಸ್ತ್ರಿಗಳು ಹೇಳುತ್ತಾರೆ. ಈ ಮೂಲಕ ಇವರ ಜ್ಯೋತಿಷದ ಕುರಿತು ಭೂಮಿಕಾಳಿಗೆ ನಂಬಿಕೆ ಬರುತ್ತದೆ. ನೀವಿಬ್ಬರು ತುಂಬಾ ಚೆನ್ನಾಗಿ ಬಾಳ್ತಿರ ಎಂದು ಶಾಸ್ತ್ರಿಗಳು ಹೇಳುತ್ತಾರೆ.
ಮನೆಯಲ್ಲಿ ಆನಂದ್ ಮತ್ತು ಗೌತಮ್ ಮಾತನಾಡುತ್ತಾ ಇರುತ್ತಾರೆ. ಆಗ ಅಲ್ಲಿಗೆ ಜೈದೇವ್ ಬಂದು ಆಫೀಸ್‌ನ ಫೈಲ್ ಹಿಡಿದುಕೊಂಡು ಬರುತ್ತಾನೆ. "ಮದುವೆಯಾದ ಬಳಿಕ ಜೈದೇವ್ ಎಷ್ಟು ಬದಲಾಗಿದ್ದಾನೆ" ಎಂದು ಗೌತಮ್ ಹೇಳುತ್ತಾನೆ. ಆದರೆ, ಆನಂದ್‌ಗೆ ಆತನ ಕ್ಯಾರೆಕ್ಟರ್ ಬಗ್ಗೆ ಸಂದೇಹ ಬರುತ್ತದೆ. ಮನೆಯಲ್ಲಿ ಇಷ್ಟೆಲ್ಲ ಆಗುತ್ತಿರುವುದರ ಹಿಂದೆ ಇವನ ಕೈವಾಡ ಇರಬಹುದಾ ಎಂದು ಆನಂದ್ ಯೋಚಿಸುತ್ತಾನೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಸ್ವಲ್ಪ ಹೊತ್ತಲ್ಲಿ ಮನೆಗೆ ಮಲ್ಲಿ ತಾತಾ ಬರುತ್ತಾರೆ. ಹೊರಗಿನಿಂದ ತಾತಾ ನೋಡುವ ಸಂದರ್ಭದಲ್ಲಿ ಗೌತಮ್ ಅವರನ್ನು ನೋಡುತ್ತಾರೆ. "ಯಾಕೆ ಹೊರಗೆ ನಿಂತಿದ್ದೀರಿ. ಬನ್ನಿ ಒಳಗೆ" ಎಂದು ತಾತಾನನ್ನು ಗೌತಮ್ ಕರೆಯುತ್ತಾರೆ. ಅಲ್ಲಿಗೆ ಭೂಮಿಕಾ ಬರುತ್ತಾಳೆ. "ಅರೇ ತಾತಾ ಹೇಗಿದ್ದೀರಾ" ಎಂದು ಕೇಳುತ್ತಾಳೆ. ಮಲ್ಲಿಯೂ ಬರುತ್ತಾಳೆ. ತಾತಾನ ನೋಡಿ ಖುಷಿಪಡುತ್ತಾಳೆ. ಪಾರ್ಥನೂ ಅಲ್ಲಿಗೆ ಬರುತ್ತಾನೆ. "ಯುಗಾದಿ ಹಬ್ಬಕ್ಕೆ ಮಲ್ಲಿ ಮತ್ತು ಜೈದೇವ್‌ನನ್ನು ಊರಿಗೆ ಕರೆದುಕೊಂಡು ಹೋಗಬೇಕಿತ್ತು" ಎಂದು ತಾತಾ ಹೇಳುತ್ತಾನೆ. ಉಳಿದವರಿಗೆ ಇವರು ಮೂಕ ಭಾಷೆಯಲ್ಲಿ ಹೇಳಿದ್ದು ಅರ್ಥವಾಗುವುದಿಲ್ಲ. ಮಲ್ಲಿ ಮಾತಿನ ಅರ್ಥ ಹೇಳುತ್ತಾಳೆ. ಜೈದೇವ್‌ಗೆ ನಾನು ಹೇಳ್ದೆ ಅಂತ ಹೇಳು ಎಂದು ಗೌತಮ್ ಹೇಳುತ್ತಾನೆ. ಈ ಮೂಲಕ ಜೈದೇವ್‌ಗೆ ಈ ಬಾರಿ ಹಬ್ಬ ಹಳ್ಳಿಯಲ್ಲಿ ನಡೆಯಲಿದೆ.
ಇನ್ನೊಂದೆಡೆ ಪಾರ್ಥ ತಲೆಕೆಡಿಸಿಕೊಳ್ಳುತ್ತಾನೆ. ಅತ್ತೆ ಮತ್ತು ಮಾವ ಹಬ್ಬಕ್ಕೆ ಕರೆದಿಲ್ಲ. ಅತ್ತಿಗೆ ತಂಗಿಯಾದರೂ ಕರೆಯಬೇಕಿತ್ತು ಅಲ್ವ ಎಂದು ಕಾಲ್ ಮಾಡುತ್ತಾನೆ. "ನಾಳೆ ಯುಗಾದಿ ಹಬ್ಬ. ನನ್ನ ಇನ್‌ವೈಟೇ ಮಾಡಿಲ್ಲ" ಎಂದು ಹೇಳುತ್ತಾನೆ. "ನೀವಿನ್ನು ಲೀಗಲಿ ಅಳಿಯ ಆಗಿಲ್ಲ" ಎಂದೆಲ್ಲ ಒಂದಿಷ್ಟು ಮಾತನಾಡುತ್ತಾರೆ. "ಹಬ್ಬದ ಆಫರ್ ತರಹ ಎಲ್ಲಾದರೂ ಹೊರಗಡೆ ಬರ್ತಿರಾ" ಎನ್ನುತ್ತಾನೆ. "ನಾನೇ ಮನೆಗೆ ಬರ್ಲಾ" ಎಂದೆಲ್ಲ ಮಾತುಕತೆಯಾಗುತ್ತದೆ. ಫೈನಲಿ ಮನೆಗೆ ಬರಲು ಅಪೇಕ್ಷಾ ಅವಕಾಶ ನೀಡುವುದಿಲ್ಲ.
ಮಲ್ಲಿ ಮನೆಯಲ್ಲಿ ಇರುತ್ತಾಳೆ. ಜೈದೇವ್ ಹಿಂದಿನಿಂದ ಬಂದು ತಬ್ಬಿಕೊಳ್ಳುತ್ತಾನೆ. ಮನೆಗೆ ತಾತಾ ಬಂದಿದ್ರು ಎನ್ನುತ್ತಾಳೆ. "ಮುದುಕ ಮನೆಯೊಳಗೆ ಬರುವಷ್ಟು ಆಯ್ತಾ" ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. "ನಮ್ಮಿಬ್ಬರನ್ನು ಹಳ್ಳಿಗೆ ಕರೆದುಕೊಂಡು ಹೋಗಲು ಬಂದಿದ್ದಾರೆ" ಎನ್ನುತ್ತಾಳೆ. "ಯಾವ ಊರಿಗೆ?" "ಸೇವಂತಿಪುರ" ಎನ್ನುತ್ತಾಳೆ. ನೀನೇ ಹೋಗಿ ಬಾ ಮಲ್ಲಿ ಅನ್ತಾನೆ. ಹಳ್ಳಿಯ ಹಸಿರು, ನೆಮ್ಮದಿ ಕುರಿತು ಮಲ್ಲಿ ಮಾತನಾಡುತ್ತಾಳೆ. ಹೋಗಿಬರೋಣ ಅಂತ ಒತ್ತಾಯ ಮಾಡ್ತಾಳೆ. "ಓಕೆ" ಅನ್ನುತ್ತಾನೆ. "ಇಬ್ಬರ ಬಟ್ಟೆ ಪ್ಯಾಕ್ ಮಾಡಿದ್ದೇನೆ" ಅಂತಾಳೆ. ನಾಳೆ ಬೆಳಗ್ಗೆ ಹಳ್ಳಿಗೆ ಹೊರಡೋ ಪ್ಲಾನ್ ಆಗುತ್ತದೆ.
ಇನ್ನೊಂದೆಡೆ ಗೌತಮ್ ಜತೆಗೆ ಇರುವಾಗ ಭೂಮಿಕಾಗೆ ಅಪ್ಪನ ಕಾಲ್ ಮಾಡ್ತಾರೆ. "ನಮ್ಮ ಗುರುಗಳು ಬೆಂಗಳೂರಿಗೆ ಬಂದಿದ್ದಾರೆ. ಮನೆಗೆ ಬರಲು ಹೇಳಿದ್ದೇನೆ. ನೀನೂ ಬರ್ತಿಯಾ" ಎನ್ನುತ್ತಾರೆ. "ಅಪ್ಪ ನೀವು ಹೇಳಿದ್ದು ಒಳ್ಳೆಯದಾಯ್ತು. ಅವರನ್ನು ನಮ್ಮ ಮನೆಗೆ ಬರಲು ಹೇಳಿ" ಎಂದು ಹೇಳುತ್ತಾಳೆ. ಈ ಮೂಲಕ ಮನೆಗೆ ಗುರುಗಳನ್ನು ಕರೆಸಿ ನಿಜವಾದ ಜ್ಯೋತಿಷ ಹೇಳಿಸುವ ಪ್ರಯತ್ನವನ್ನು ಭೂಮಿಕಾ ಮಾಡಲಿದ್ದಾಳೆ. ಇದಾದ ಬಳಿಕ ಗೌತಮ್‌ಗೆ "ನಾಳೆ ನಿಮಗೆ ವಿಶೇಷವಾದ ವ್ಯಕ್ತಿಯನ್ನು ಭೇಟಿ ಮಾಡಿಸ್ತೇನೆ" ಎಂದು ಹೇಳುತ್ತಾಳೆ. ಇದಾದ ಬಳಿಕ ನಾಳೆ ಹಬ್ಬಕ್ಕೆ ಏನೇನು ಮಾಡಬೇಕು ಎಂದು ಅತ್ತೆಯನ್ನು ಮಾತನಾಡಿಸ್ತಾಳೆ. ಅತ್ತೆಯ ನಾಟಕ ನೋಡುತ್ತ "ನಿಮ್ಮ ನಾಟಕ ಶೀಘ್ರದಲ್ಲಿ ಕೊನೆಗೊಳ್ಳಲಿದೆ" ಎಂದುಕೊಳ್ಳುತ್ತಾಳೆ ಭೂಮಿಕಾ. ಸೀರಿಯಲ್ ಶನಿವಾರಕ್ಕೆ ಮುಂದುವರೆದಿದೆ.