Amruthadhaare: ಕ್ಲೈಮ್ಯಾಕ್ಸ್ ಹಂತದಲ್ಲಿದೆ ಅಪ್ಪ-ಪಾರ್ಥ ಲವ್ ಸ್ಟೋರಿ; ಮಲ್ಲಿ ಬಯಕೆ ಈಡೇರಿಸ್ತಾನಂತೆ ಜೈದೇವ್, ನಿನ್ನೆಯ ಅಮೃತಧಾರೆ ಕಥೆ
Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಪ್ರೀತಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಮುಂದೇನಾಗಬಹುದು ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಮೂಡಿದೆ.
Amruthadhaare serial Yesterday Episode: ಅಪೇಕ್ಷಾ ಕೊಠಡಿಯಲ್ಲಿದ್ದಾಳೆ. ಊಟಕ್ಕೆ ಕರೆದರೂ ಬರುತ್ತಿಲ್ಲ. ಮಂದಾಕಿನಿಗೆ ಟೆನ್ಷನ್ ಆಗುತ್ತದೆ. ಇದಾದ ಬಳಿಕ ಸದಾಶಿವನೂ ಪ್ರಯತ್ನಿಸುತ್ತಾರೆ. "ಅತಿಯಾಯ್ತು ನಿಂದು. ಎಲ್ಲರಿಗೂ ಅನುಮಾನ ಬರುವ ಹಾಗೇ ಮಾಡಬೇಡ. ನಿನ್ನ ಮರ್ಯಾದೆ ಕಳೆದುಕೊಳ್ಳಬೇಡ" ಎಂದು ಸದಾಶಿವ ಮಗಳನ್ನು ಕರೆದುಕೊಂಡು ಬರುತ್ತಾರೆ. ಎಲ್ಲರ ಜತೆ ಕುಳಿತುಕೊಂಡು ಊಟ ಮಾಡುತ್ತಾಳೆ. ಯಾಕೆ ಏನಾಗಿದೆ ನಿನಗೆ ಎಂದು ಎಲ್ಲರೂ ಕೇಳುತ್ತಿದ್ದಾರೆ. "ನಿಜವಾಗಿಯೂ ತಲೆನೋವ ಬೇರೆ ಏನಾದರೂ ಕಾರಣ ಇದೆಯ" ಎಂದು ಮಂದಾಕಿನಿ ಕೇಳುತ್ತಾಳೆ. ಒಟ್ಟಾರೆ, ಅಪೇಕ್ಷಾ ನಾರ್ಮಲ್ ಆಗಿಲ್ಲ ಎನ್ನುವುದು ಎಲ್ಲರಿಗೂ ತಿಳಿಯುತ್ತದೆ.
ಜೈದೇವ್ ಮಲ್ಲಿ ಕೊಠಡಿಗೆ ಬರುತ್ತಾಳೆ. ಮಲ್ಲಿ ಕತ್ತಲಲ್ಲಿ ಕುಳಿತಿದ್ದಾಳೆ. ಆಕೆ ಮಲಗದೆ ಜೈದೇವ್‌ಗೆ ಕಾಯುತ್ತಿದ್ದಾಳೆ. ಜೈದೇವ್ ತಡವಾಗಿ ಬರುವುದನ್ನು ಮುಂದುವರೆಸಿದ್ದಾನೆ. ಆತನ ಅಕ್ರಮ ಪ್ರೀತಿ ಬಗ್ಗೆ ಈಕೆಗೆ ಗೊತ್ತಿಲ್ಲ. ಬಸುರಿಯ ಚಿಂತೆ ಆತನಿಗೆ ಅರಿವಾಗೋದಿಲ್ಲ. ಆಕೆಯ ಬಯಕೆಯನ್ನು ಈತ ಈಡೇರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾಳೆ. "ನಿನ್ನನ್ನು ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದಕ್ಕೆ ಕಷ್ಟಪಟ್ಟು ದುಡಿಯುತ್ತಿದ್ದೇನೆ" ಎಂದು ಸುಳ್ಳು ಹೇಳುತ್ತಾನೆ. "ಬಸುರಿ ಬಯಕೆಗಳನ್ನು ಎಲ್ಲಾ ನೆನಪಿನಲ್ಲಿಟ್ಟುಕೊಂಡಿದ್ದೇನೆ" ಎಂದು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾನೆ. ನಿನ್ನ ಸೀಮಂತವನ್ನು ನಾನೇ ಮುಂದೆ ನಿಂತು ಮಾಡುವೆ ಎಂದು ಭರವಸೆ ನೀಡುತ್ತಾಳೆ. "ಸೀಮಂತ ಮಾಡಿ ತಾತನ ಮನೆಗೆ ಕಳುಹಿಸ್ತೀರ. ನಾನು ಇಲ್ಲೇ ಇರಬೇಕು. ನಿಮ್ಮ ಜತೆ ಇರಬೇಕು" ಎನ್ನುತ್ತಾಳೆ. "ಅಯ್ಯೋ ಕಂದ, ನಾನು ನಿನ್ನನ್ನು ಸಾಗಹಾಕಬೇಕು ಎಂದುಕೊಂಡರೆ ನೀನು ಇಲ್ಲೇ ಉಳಿದುಕೊಳ್ಳಲು ಯೋಚನೆ ಮಾಡ್ತಾ ಇದ್ದಿಯಲ್ವ" ಎಂದು ಮನಸ್ಸಿನಲ್ಲಿ ಯೋಚಿಸುತ್ತಾನೆ.
"ಪಾರ್ಥ ಅಣ್ಣನಿಗೆ ಇವತ್ತು ಹುಡುಗಿ ಫಿಕ್ಸ್ ಆದ್ಲಂತೆ. ನಾಳೆ ಅಫಿಶಿಯಲ್ ಆಗಿ ಹೆಣ್ಣಿನ ಮನೆಯವರಿಗೆ ಹೇಳ್ತಾರೆ ಅಂತೆ" ಎಂದು ಮಹಿಮಾ ಹೇಳಿದಾಗ ಅಪೇಕ್ಷಾ ಎದ್ದು ಹೋಗುತ್ತಾಳೆ. ಊಟ ಮಾಡದೆ ಎದ್ದು ಹೋದಿಯಲ್ವ ಎಂದು ಮಂದಾಕಿನಿ ಬೇಸರ ವ್ಯಕ್ತಪಡಿಸುತ್ತಾಳೆ. ಕೊಠಡಿಗೆ ಹೋಗಿ ಅಪ್ಪಿ ಅಳುತ್ತಾಳೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಇನ್ನೊಂದೆಡೆ ಗೌತಮ್ ಮತ್ತು ಭೂಮಿಕಾ ಮಾತನಾಡುತ್ತ ಇದ್ದಾರೆ. ಪಾರ್ಥನ ಮದುವೆಯ ಕುರಿತು ಖುಷಿಯಿಂದ ಮಾತನಾಡುತ್ತ ಇದ್ದಾರೆ. ಇದೇ ಸಮಯದಲ್ಲಿ ಭೂಮಿಕಾ ಬೇಸರದಲ್ಲಿರುತ್ತಾರೆ. ನಮ್ಮ ಪಾರ್ಥನಿಗೆ ಪರ್ಫೆಕ್ಟ್ ಮ್ಯಾಚ್ ಅವಳು ಎಂದು ಖುಷಿಯಿಂದ ಹೇಳುತ್ತಾರೆ.
ಆನಂದ್ ಮತ್ತು ಅಪರ್ಣಾ ಮನೆಯಲ್ಲಿ ಮಾತನಾಡುತ್ತ ಇದ್ದಾರೆ. ಅತ್ತಿಗೆ ಯಾಕೋ ಡಲ್ ಇದ್ರು ಎಂದು ಆನಂದ್ ಹೇಳುತ್ತಾನೆ. "ಅತ್ತಿಗೆ ನ್ಯೂಟ್ರಲ್ ಆಗಿದ್ರು. ಅಲ್ಲಿ ನಡೆಯುತ್ತಿರುವುದಕ್ಕೆ ಅವರು ಸಂಬಂಧ ಇಲ್ಲದಂತೆ ಇತ್ತು" ಎನ್ನುತ್ತಾನೆ ಆನಂದ್. "ಅತ್ತಿಗೆ ಹಾಗೇ ಇದ್ರ. ನನಗೆ ನಂಬಿಕೆ ಬರ್ತಾ ಇಲ್ಲ" ಎನ್ನುತ್ತಾಳೆ ಅಪರ್ಣಾ. ಇದು ಬಾಡಿಗೆ ಬಂದಿರೋ ಜ್ವರ ಅಲ್ಲ., ಮನಸ್ಸಿಗೆ ಬಂದ ಜ್ವರ ಎನ್ನುತ್ತಾನೆ ಆನಂದ್. "ಅಲ್ಲಿ ಏನೋ ನಡೆಯುತ್ತಿದೆ. ಸಮ್‌ಥಿಂಗ್ ಫಿಶಿ" ಎನ್ನುತ್ತಾನೆ. "ಒಂದೆರಡು ದಿನ ಸುಮ್ಮನಿರೋಲ್ಲ. ವಿಷಯ ಗೊತ್ತಾಗುತ್ತದೆ" ಎಂದು ಹೇಳುತ್ತಾರೆ.
ಅಪೇಕ್ಷಾ ಪಾರ್ಥನ ನೆನಪಿನಲ್ಲಿದ್ದಾಳೆ. ಇನ್ನೊಂದೆಡೆ ಪಾರ್ಥನೂ ದುಃಖದಲ್ಲಿದ್ದಾನೆ. ಪಾರ್ಥ ಚಿಂತೆಯಲ್ಲಿರುವುದನ್ನು ಮಾವ ನೋಡಿ ಶಕುಂತಲಾದೇವಿಗೆ ವಿಷಯ ತಿಳಿಸುತ್ತಾನೆ. "ಹೆತ್ತ ಕರಳು ಕರಗೋದಿಲ್ವ" ಎನ್ನುತ್ತಾನೆ. "ನನಗೂ ಭಾವನೆ ಇದೆ. ಅದು ಯಾವಾಗ ತೋರಿಸಬೇಕು ಎಂದು ನನಗೆ ಗೊತ್ತು" ಎಂದು ಶಕುಂತಲಾದೇವಿ ಹೇಳುತ್ತಾರೆ.
"ಹುಡುಗಿ ಮನೆಯವರಿಗೆ ಹೆಣ್ಣು ಓಕೆ ಎಂದು ಹೇಳ್ಲಾ" ಎಂದು ಗೌತಮ್ ಕೇಳುತ್ತಾರೆ. "ಪಾರ್ಥನಲ್ಲಿ ಕೇಳಿ ಹೇಳುವೆ" ಎಂದು ಗೌತಮ್ ಹೇಳಿದಾಗ ಭೂಮಿಕಾಳಿಗೆ ಮಂದಾಕಿನಿಯ ಕಾಲ್ ಬರುತ್ತದೆ. "ಅಪ್ಪಿ ವಿಚಿತ್ರವಾಗಿ ಆಡ್ತಾ ಇದ್ದಾಳೆ. ಒಮ್ಮೆ ನೀನು ಮಾತನಾಡು" ಎನ್ನುತ್ತಾರೆ. ಈ ಸಮಯದಲ್ಲಿ ಗೌತಮ್ ಏನು ವಿಷಯ ಎಂದು ಕೇಳುತ್ತಾರೆ. ಅಕ್ಕ ಮಾತನಾಡ್ತಾಳೆ ಎಂದಾಗ ಅಪ್ಪಿ ಮಾತನಾಡಲು ಕೇಳುವುದಿಲ್ಲ. "ಅಪ್ಪಿ ಸ್ವಲ್ಪ ಡಲ್ ಆಗಿದ್ದಾಳೆ" ಎಂದು ಗೌತಮ್‌ಗೆ ಹೇಳುತ್ತಾಳೆ. "ನಾನು ಮಾತನಾಡ್ತಿನಿ" ಎಂದು ಗೌತಮ್ ಹೇಳುತ್ತಾರೆ. "ಹಾಯ್ ಅಪ್ಪಿ ಯಾಕೆ ಡಲ್ ಆಗಿದ್ದೀಯಾ. ನಿನಗೇನಾದರೂ ಲವ್ ಫೈಲ್ಯೂರ್ ಆಗಿರುವುದೇ. ನನ್ನತ್ರ ಹೇಳ್ಕೋ. ಧೈರ್ಯವಾಗಿ ಹೇಳು. ಏನೇ ಪ್ರಾಬ್ಲಂ ಇದ್ರೆ ನನಗೆ ಹೇಳು" ಎನ್ನುತ್ತಾರೆ. "ಪ್ರೀತಿ ವಿಷಯ ಹೇಳಿ ಬಿಡ್ಲಾ" ಎಂದು ಯೋಚಿಸುತ್ತಾಳೆ. "ಯಾರನ್ನಾದರೂ ಲವ್ ಮಾಡ್ತಾ ಇದ್ದೀಯ. ಪಾರ್ಥನ ಮದುವೆ ಮುಗಿದ ತಕ್ಷಣ ನಿನ್ನ ಲವ್ ವಿಷಯ ಕ್ಲೀಯರ್ ಮಾಡೋಣʼ ಎನ್ನುತ್ತಾರೆ ಗೌತಮ್. "ಏನಿಲ್ಲ. ಸ್ವಲ್ಪ ತಲೆನೋವು" ಎಂದು ಮಾತು ಮುಗಿಸುತ್ತಾಳೆ. "ನಮ್ಮ ಪಾರ್ಥನ ಮದುವೆ ಮುಗಿದ ಬಳಿಕ ಅಪೇಕ್ಷಾನಿಗೆ ಮದುವೆ ಮಾಡಿದ್ರೆ ಹೇಗಿದೆ" ಎಂದು ಹೇಳಿ ಗೌತಮ್ ಹೋಗುತ್ತಾರೆ. ಭೂಮಿಕಾಳ ಬೇಸರ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)