Elvish Yadav: ಹಾವಿನ ವಿಷ ಪ್ರಕರಣದಲ್ಲಿ ಬಿಗ್‌ಬಾಸ್‌ ವಿಜೇತ, ಯೂಟ್ಯೂಬರ್‌ ಎಲ್ವಿಶ್‌ ಯಾದವ್‌ಗೆ ಜಾಮೀನು-televison news bigg boss ott winner and youtuber elvish yadav gets bail in snake venom case pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Elvish Yadav: ಹಾವಿನ ವಿಷ ಪ್ರಕರಣದಲ್ಲಿ ಬಿಗ್‌ಬಾಸ್‌ ವಿಜೇತ, ಯೂಟ್ಯೂಬರ್‌ ಎಲ್ವಿಶ್‌ ಯಾದವ್‌ಗೆ ಜಾಮೀನು

Elvish Yadav: ಹಾವಿನ ವಿಷ ಪ್ರಕರಣದಲ್ಲಿ ಬಿಗ್‌ಬಾಸ್‌ ವಿಜೇತ, ಯೂಟ್ಯೂಬರ್‌ ಎಲ್ವಿಶ್‌ ಯಾದವ್‌ಗೆ ಜಾಮೀನು

Elvish Yadav gets bail: ತಾನು ಆಯೋಜಿಸಿದ್ದ ಪಾರ್ಟಿಗಳಲ್ಲಿ ಹಾವಿನ ವಿಷಯವನ್ನು ಒಳಗೊಂಡ ಡ್ರಗ್ಸ್‌ ಬಳಸಲಾಗಿದೆ ಎಂಬ ಅನುಮಾನದಿಂದ ಬಂಧನಕ್ಕೆ ಒಳಗಾಗಿದ್ದ ಯೂಟ್ಯೂಬರ್‌ ಮತ್ತು ಬಿಗ್‌ಬಾಸ್‌ ಒಟಿಟಿ 2ರ ವಿಜೇತ ಎಲ್ವಿಶ್‌ ಯಾದವ್‌ಗೆ ಜಾಮೀನು ದೊರಕಿದೆ.

Elvish Yadav: ಹಾವಿನ ವಿಷ ಪ್ರಕರಣ, ಯೂಟ್ಯೂಬರ್‌ ಎಲ್ವಿಶ್‌ ಯಾದವ್‌ಗೆ ಜಾಮೀನು
Elvish Yadav: ಹಾವಿನ ವಿಷ ಪ್ರಕರಣ, ಯೂಟ್ಯೂಬರ್‌ ಎಲ್ವಿಶ್‌ ಯಾದವ್‌ಗೆ ಜಾಮೀನು

ನವದೆಹಲಿ: ಶಂಕಿತ ಡ್ರಗ್ಸ್ ಅಪರಾಧಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಯಾದವ್ ಎಂದು ಜನಪ್ರಿಯತೆ ಪಡೆದಿರುವ ಸಿದ್ಧಾರ್ಥ್ ಅವರಿಗೆ ನೋಯ್ಡಾ ನ್ಯಾಯಾಲಯ ಜಾಮೀನು ನೀಡಿದೆ. ಯಾದವ್‌ ಮತ್ತು ಇತರೆ ಐವರ ವಿರುದ್ಧ ನೋಯ್ಡಾ ಸೆಕ್ಟರ್ 49 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನೋಯ್ಡಾದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಮನರಂಜನಾ ಔಷಧಿಯಾಗಿ ಬಳಸಲು ಹಾವಿನ ವಿಷವನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪದಡಿ ಇವರನ್ನು ಬಂಧಿಸಲಾಗಿತ್ತು. ಇದೀಗ ಇವರಿಗೆ ಕೋರ್ಟ್‌ ಜಾಮೀನು ನೀಡಿದೆ ಎಂದು ಅವರ ವಕೀಲರು ಮಾಹಿತಿ ನೀಡಿದ್ದಾರೆ.

"ಕೋರ್ಟ್‌ ಜಾಮೀನು ಅರ್ಜಿಯನ್ನು ಆಲಿಸಿ ಪ್ರಕರಣದಲ್ಲಿ ಜಾಮೀನು ನೀಡಿದೆ. ತಲಾ 50,000 ರೂ.ಗಳ ಎರಡು ಜಾಮೀನು ಬಾಂಡ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ" ಎಂದು ವಕೀಲ ಪ್ರಶಾಂತ್‌ ರಾಠಿ ಹೇಳಿದ್ದಾರೆ. ಮಾರ್ಚ್ 17 ರಿಂದ ಜೈಲಿನಲ್ಲಿರುವ ಯೂಟ್ಯೂಬರ್‌ ಗ್ರೇಟರ್ ನೋಯ್ಡಾದ ಲುಕ್ಸರ್ ಜೈಲಿನಿಂದ ಯಾದವ್ ಹೊರಕ್ಕೆ ಬರಲು ಕೊಂಚ ಸಮಯ ಬೇಕಾಗಬಹುದು" ಎಂದು ಎಲ್ವಿಶ್‌ ಯಾದವ್‌ ಅವರ ಪರ ವಕೀಲ ದೀಪಕ್‌ ಭಾಟಿ ಹೇಳಿದ್ದಾರೆ.

"ಜಾಮೀನಿಗೆ ಸಂಬಂಧಪಟ್ಟ ಕಾನೂನು ಕ್ರಮಗಳನ್ನು ಆರಂಭಿಸಿದ್ದೇವೆ. ಜಾಮೀನು ಬಾಂಡ್‌ಗಳಿಗಾಗಿ ಅರ್ಜಿ ಸಲ್ಲಿಸುತ್ತೇವೆ. ಇದರಿಂದ ಬಿಡುಗಡೆ ಆದೇಶ ಶೀಘ್ರದಲ್ಲಿ ಜಾರಿಯಾಗುತ್ತದೆ. ನಾಳೆಯಿಂದ ಹೋಳಿ ರಜೆ ಇರುವುದರಿಂದ ಕೋರ್ಟ್‌ಗೆ ರಜೆ ಇರುತ್ತದೆ. ಇದೇ ಕಾರಣಕ್ಕೆ ಇಂದು ರಾತ್ರಿಯೇ ಬಿಡುಗಡೆಯಾಗಬಹುದು ಅಥವಾ ಜೈಲಿನಿಂದ ಹೊರಬರಲು ಕೆಲವು ದಿನಗಳು ಬೇಕಾಗಬಹುದು" ಎಂದು ವಕೀಲರು ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಬಂಧನದಲ್ಲಿರುವ ಇತರೆ ಐವರು ಆರೋಪಿಗಳನ್ನು ಹಾವಾಡಿಗರು ಎಂದು ಗುರುತಿಸಲಾಗಿದೆ. ಇವರನ್ನು ನವೆಂಬರ್‌ 3ರಂದು ಸೆಕ್ಟರ್ 51 ರ ಬ್ಯಾಂಕ್ವೆಟ್ ಹಾಲ್‌ನಿಂದ ಬಂಧಿಸಲಾಗಿದೆ. ಸದ್ಯ ಇವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಐದು ನಾಗರಹಾವುಗಳು ಸೇರಿದಂತೆ ಒಂಬತ್ತು ಹಾವುಗಳನ್ನು ಹಾವಾಡಿಗರಿಂದ ರಕ್ಷಿಸಲಾಗಿದೆ. 20 ಮಿಲಿ ಶಂಕಿತ ಹಾವಿನ ವಿಷವನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.

ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿಯಲ್ಲಿ ಭಾಗಿ), 284 (ಮಾನವ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ವಿಷಕ್ಕೆ ಸಂಬಂಧಿಸಿದ ನಿರ್ಲಕ್ಷ್ಯದ ನಡವಳಿಕೆ) ಮತ್ತು 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಪೂರೈಸುವಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಎಲ್ವಿಶ್‌ ಯಾದವ್‌ ನಿರಾಕರಿಸುತ್ತ ಬಂದಿದ್ದಾರೆ. ಗೌತಮ್ ಬುದ್ಧ ನಗರ ಪೊಲೀಸ್ ಆಯುಕ್ತ ಲಕ್ಷ್ಮಿ ಸಿಂಗ್ ಅವರ ನಿರ್ದೇಶನದ ಮೇರೆಗೆ ಪ್ರಕರಣದ ವ್ಯಾಪ್ತಿಯನ್ನು ನೋಯ್ಡಾದ ಸೆಕ್ಟರ್ 49 ಪೊಲೀಸ್ ಠಾಣೆಯಿಂದ ಸೆಕ್ಟರ್ 20 ಕ್ಕೆ ಸ್ಥಳಾಂತರಿಸಲಾಗಿತ್ತು. ಎಲ್ವಿಶ್‌ ಯಾದವ್‌ ಜನಪ್ರಿಯ ಯೂಟ್ಯೂಬರ್‌ ಆಗಿದ್ದು, ಇದೇ ಖ್ಯಾತಿಯಿಂದ ಬಿಗ್‌ಬಾಸ್‌ ಒಟಿಟಿಯಲ್ಲೂ ಭಾಗವಹಿಸಿ ಗೆಲುವು ಪಡೆದಿದ್ದರು.

mysore-dasara_Entry_Point