ಕನ್ನಡ ಸುದ್ದಿ  /  Entertainment  /  Television News Gicchi Gili Gili S3 Sadhu Kokila And Other Contestants Quit The Show Due To Prashant's Allegations Mnk

Gicchi Gili Gili ಶೋನಲ್ಲಿ ಸಾಧುಕೋಕಿಲ ವಿರುದ್ಧ ಗಂಭೀರ ಆರೋಪ; ಸ್ಪರ್ಧಿ ಪ್ರಶಾಂತ್‌ ಮಾತಿಗೆ ಕಾರ್ಯಕ್ರಮ ತ್ಯಜಿಸಿದ ತೀರ್ಪುಗಾರರು!

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಎಡವಟ್ಟಾಗಿದೆ. ಸ್ಪರ್ಧಿ ಪ್ರಶಾಂತ್‌ ಮಾತಿಗೆ, ಸಾಧುಕೋಕಿಲ ಸೇರಿ ಇನ್ನುಳಿದ ತೀರ್ಪುಗಾರರು ಮತ್ತು ಸ್ಪರ್ಧಿಗಳು ಶೋ ತ್ಯಜಿಸಿದ್ದಾರೆ. ಅಷ್ಟಕ್ಕೂ ಹೀಗಾಗಲು ಕಾರಣ ಏನು? ಇಲ್ಲಿದೆ ವಿವರ.

Gicchi Gili Gili ಶೋನಲ್ಲಿ ಸಾಧುಕೋಕಿಲ ವಿರುದ್ಧ ಗಂಭೀರ ಆರೋಪ; ಸ್ಪರ್ಧಿ ಪ್ರಶಾಂತ್‌ ಮಾತಿಗೆ ಕಾರ್ಯಕ್ರಮ ತ್ಯಜಿಸಿದ ತೀರ್ಪುಗಾರರು!
Gicchi Gili Gili ಶೋನಲ್ಲಿ ಸಾಧುಕೋಕಿಲ ವಿರುದ್ಧ ಗಂಭೀರ ಆರೋಪ; ಸ್ಪರ್ಧಿ ಪ್ರಶಾಂತ್‌ ಮಾತಿಗೆ ಕಾರ್ಯಕ್ರಮ ತ್ಯಜಿಸಿದ ತೀರ್ಪುಗಾರರು!

Gicchi Gili Gili Show: ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಮುಗಿದ ಬಳಿಕ ಶುರುವಾದ ಕಾರ್ಯಕ್ರಮ ಎಂದರೆ ಅದು ನಗುವಿನ ಹೂರಣವನ್ನೇ ಬಡಿಸುವ ಗಿಚ್ಚಿ ಗಿಲಿಗಿಲಿ ಸೀಸನ್‌ 3. ಈಗಾಗಲೇ ನಗುವಿನ ಅಲೆಯನ್ನೇ ಎಬ್ಬಿಸಿರುವ ಈ ಶೋದಲ್ಲಿ ಸ್ಪರ್ಧಿಗಳು ಬಗೆಬಗೆ ಹಾಸ್ಯದೂಟವನ್ನು ವೀಕ್ಷಕರಿಗೆ ಬಡಿಸುತ್ತಿದ್ದಾರೆ. ಅದರ ಜತೆಗೆ ತೀರ್ಪುಗಾರರ ಕಾಮಿಡಿ ಕಚಗುಳಿಯೂ ನೋಡುಗರ ಹೊಟ್ಟೆ ಹುಣ್ಣಾಗಿಸುತ್ತಿದೆ. ಹೀಗಿರುವಾಗಲೇ ಇದೇ ಶೋನಲ್ಲಿ ಗಂಭೀರತೆ ಕಂಡರೇ ಹೇಗಿರಬೇಡ!

ಗಿಚ್ಚಿ ಗಿಲಿ ಗಿಲಿಯ ಶನಿವಾರದ ಏಪಿಸೋಡ್‌ನ ಪ್ರೋಮೋ ಝಲಕ್‌ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಕಾಮಿಡಿಗಿಂತ ಕೊಂಚ ಗಂಭೀರ ಭಾವ ಕಂಡಿದೆ. ಸಾಧುಕೋಕಿಲ ವಿರುದ್ಧ ಸ್ಪರ್ಧಿಗಳಲ್ಲಿ ಒಬ್ಬರಾದ ಪ್ರಶಾಂತ್‌ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರವನ್ನು ಎಲ್ಲರ ಸಮ್ಮುಖದಲ್ಲಿ ವೇದಿಕೆ ಮೇಲೆಯೇ ಪ್ರಶಾಂತ್‌ ಹೇಳಿಕೊಳ್ಳುತ್ತಿದ್ದಂತೆ, ಸಾಧುಕೋಕಿಲ ಶೋ ತ್ಯಜಿಸಿದ್ದಾರೆ. ಅಷ್ಟೇ ಅಲ್ಲ ಸ್ಪರ್ಧಿಗಳು, ತೀರ್ಪುಗಾರರು ಮತ್ತು ನಿರೂಪಕ ನಿರಂಜನ್‌ ದೇಶಪಾಂಡೆ ಸಹ ಶೋದಿಂದ ಹೊರನಡೆದಿದ್ದಾರೆ.

ಹಾಗಾದರೆ ಅಷ್ಟಕ್ಕೂ ಆಗಿದ್ದೇನು?

"ಅಣ್ಣ ಹೋದ ವಾರ ಯಾಕೋ ನೀನು ಸ್ಟೇಜ್‌ ಮೇಲೆ ಕಾಮಿಡಿ ಮಾಡಲಿಲ್ಲ ಅಂದ್ರೆ, ನಾನೇ ಮಾಡಿದ್ರೆ ಸಾಧು ಸರ್‌ ಏನ್‌ ಮಾಡ್ತಾರೆ ಅಂತ ಹೇಳ್ತಿದಾನೆ" ಎಂದಿದ್ದಾರೆ ತುಕಾಲಿ ಸಂತೋಷ್. "ಅವರು ಮಾಡೋ ಕಾಮಿಡಿ ಒಂದೊಂದು ಟೈಮ್‌ ಅರ್ಥ ಆಗಲ್ಲ ಅಂತ ಹೇಳಿರಬಹುದು" ಎಂದು ಪ್ರಶಾಂತ್‌‌ ಅದಕ್ಕೆ ಉತ್ತರಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಸಾಧುಕೋಕಿಲ, “ಏನು.. ನಾನು ಮಾಡ್ತಿರೋ ಕಾಮಿಡಿ ನಿನಗೆ ಅರ್ಥ ಆಗ್ತಿಲ್ಲ?”,  ಅಷ್ಟೇ ಹೇಳಿರಬಹುದು ಎನ್ನುತ್ತಲೇ, ಅಯ್ಯಯ್ಯೋ ಹಾಗೆ ಹೇಳಿಲ್ಲ ಸರ್‌ ಎಂದಿದ್ದಾರೆ ಪ್ರಶಾಂತ್.‌ ಆಗ "ಈ ಸೀಟ್‌ಗೆ ಅವನ್ನೇ ಕೂರಿಸಿ" ಎಂದು ಬೇಸರ ಹೊರಹಾಕಿದ್ದಾರೆ ಸಾಧುಕೋಕಿಲ.

ಮಧ್ಯೆ ಪ್ರವೇಶಿಸಿದ ಕೋಮಲ್, "ಏನ್ರಿ ಅವರಿಗೆ ಬೇಜಾರಾದ್ರೆ ನಮಗೆ ಬೇಜಾರಾಗಲ್ವ?" ಎಂದಿದ್ದಾರೆ. ತಾವು ಧರಿಸಿದ್ದ ಜಾಕೆಟ್‌ ಬಿಚ್ಚಿ ಪ್ರಶಾಂತ್‌ ಕೈಗೆ ಕೊಟ್ಟಿದ್ದಾರೆ ಕೋಮಲ್. "ನಿಮಗೆಲ್ಲ ಬೇಜಾರಾದ್ರೆ, ನಾವೂ ಇಲ್ಲಿ ಇರಲ್ಲ ಸರ್‌" ಎಂದು ನಿರೂಪಕ ನಿರಂಜನ್‌ ದೇಶಪಾಂಡೆ ಸಹ ಹೊರ ನಡೆದಿದ್ದಾರೆ.

ಅಷ್ಟಕ್ಕೆ ಮುಗಿಯದ ಶೋ, ತೀರ್ಪುಗಾರರಾದ ಸಾಧುಕೋಕಿಲ, ಶ್ರುತಿ, ಕೋಮಲ್‌ ಕುಮಾರ್‌ ಹೊರನಡೆದಿದ್ದಾರೆ. ಅವರೂ ಹೋದರು ಅಂತ ಗ್ಯಾಲರಿಯಲ್ಲಿ ಕೂತಿದ್ದ ಎಲ್ಲ ಸ್ಪರ್ಧಿಗಳೂ ಪ್ರಶಾಂತ್‌ ಮಾತಿಗೆ ಬೇಸರ ಹೊರಹಾಕಿ ಹೊರನಡೆದಿದ್ದಾರೆ.‌ ಅಲ್ಲಿಗೆ ಪ್ರಶಾಂತ್‌ ಹ್ಯಾಪು ಮೋರೆ ಹಾಕಿದ್ದಾರೆ.

ಸಾಧು ತಮಾಷೆಗೆ ಪ್ರಶಾಂತ್‌ ಸುಸ್ತು..

ಅಂದಹಾಗೆ, ಇದು ಕೇವಲ ಕಾಮಿಡಿಗಾಗಿ ಮಾಡಿದ್ದು. ಈ ಪ್ರಹಸನದ ಸಂಪೂರ್ಣ ಸಂಚಿಕೆ ಇಂದು ಪ್ರಸಾರವಾಗಲಿದೆ. ಆಗಲೇ ಇದರ ಅಸಲಿಯತ್ತು ಗೊತ್ತಾಗಲಿದೆ.

ಇನ್ನು ಈ ಸಲದ ಗಿಚ್ಚಿಗಿಲಿಗಿಲಿ ಸೀಸನ್‌ 3 ಶೋನಲ್ಲಿ ಕಲರ್ಸ್‌ ಕನ್ನಡದ ಜನಪ್ರಿಯ ಕಾಮಿಡಿಯನ್‌ಗಳಾದ ಹುಲಿ ಕಾರ್ತಿಕ್‌, ಶಿವು, ಚಿಲ್ಲರ್‌ ಮಂಜು, ಚಂದ್ರಪ್ರಭಾ, ಬಿಗ್‌ಬಾಸ್‌ ಖ್ಯಾತಿಯ ತುಕಾಲಿ ಸಂತೋಷ್‌ ಮತ್ತವರ ಪತ್ನಿ ಮಾನಸ, ಪ್ರಶಾಂತ್‌, ನಂದೀಶ್‌ ಮಡಿವಾಳ ಎಂದಿನಂತೆ ವೀಕ್ಷಕರನ್ನು ತಮ್ಮ ಕಾಮಿಡಿ ಮೂಲಕವೇ ರಂಜಿಸುತ್ತಿದ್ದಾರೆ. ಕನ್ನಡ ಕೋಗಿಲೆ ಶೋನ ಹಾಡುಗಾರ ಕರಿಬಸವ, ನನ್ನಮ್ಮ ಸೂಪರ್‌ಸ್ಟಾರ್‌ ನ ಪುನೀತಾ, ಮಜಾ ಟಾಕೀಸ್‌ನ ಮೋಹನ್‌, ಕುಂದಾಪುರದ ದೀಕ್ಷಾ, ಖುಷಿ, ಮಧುಮತಿ ಇನ್ನೂ ಹಲವರು ನಗಿಸುವ ಕಾಯಕಕ್ಕೆ ಇಳಿದಿದ್ದಾರೆ. ಇವರ ಜೊತೆಗೆ ಬಿಗ್‌ಬಾಸ್‌ ಸೀಸನ್‌ ಎಂಟರ ವಿಜೇತ ಮಂಜು ಪಾವಗಡ ಒಂದೆರಡು ವರ್ಷಗಳ ಬ್ರೇಕ್‌ನ ನಂತರ ಗಿಚ್ಚಿ ಗಿಲಿಗಿಲಿಗೆ ಮರಳಿದ್ದಾರೆ.