ಬಿಗ್‌ಬಾಸ್‌ ಸೀಸನ್‌ 8 ಹೋಸ್ಟ್‌ ಮಾಡಲ್ವಂತೆ ಕಮಲ್‌ ಹಾಸನ್;‌ ಹಾಗಾದ್ರೆ ಈ ಬಾರಿ ತಮಿಳು ಬಿಗ್‌ಬಾಸ್‌ ಮುನ್ನಡೆಸೋ ಸಾರಥಿ ಯಾರು?-televison news why kamal haasan not host bigg boss tamil season 8 this season kalki actor shared reasons ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಸೀಸನ್‌ 8 ಹೋಸ್ಟ್‌ ಮಾಡಲ್ವಂತೆ ಕಮಲ್‌ ಹಾಸನ್;‌ ಹಾಗಾದ್ರೆ ಈ ಬಾರಿ ತಮಿಳು ಬಿಗ್‌ಬಾಸ್‌ ಮುನ್ನಡೆಸೋ ಸಾರಥಿ ಯಾರು?

ಬಿಗ್‌ಬಾಸ್‌ ಸೀಸನ್‌ 8 ಹೋಸ್ಟ್‌ ಮಾಡಲ್ವಂತೆ ಕಮಲ್‌ ಹಾಸನ್;‌ ಹಾಗಾದ್ರೆ ಈ ಬಾರಿ ತಮಿಳು ಬಿಗ್‌ಬಾಸ್‌ ಮುನ್ನಡೆಸೋ ಸಾರಥಿ ಯಾರು?

Bigg Boss Tamil Season 8 Kamal Hassan: ಈ ಬಾರಿ ಬಿಗ್‌ಬಾಸ್‌ ತಮಿಳು ಸೀಸನ್‌ 8 ಹೋಸ್ಟ್‌ ಮಾಡುವುದಿಲ್ಲ ಎಂದು ಜನಪ್ರಿಯ ನಟ ಕಮಲ್‌ ಹಾಸನ್‌ ಹೇಳಿದ್ದಾರೆ. ಈ ಬಾರಿ ಬಿಗ್‌ಬಾಸ್‌ನಿಂದ ಹಿಂದಡಿ ಇಡಲು ಕಾರಣವಾದ ಅಂಶಗಳನ್ನು ಅವರು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಬಿಗ್‌ಬಾಸ್‌ ಮುನ್ನಡೆಸುವ ಹೊಸ ಸಾರಥಿ ಯಾರು ಎಂಬ ಪ್ರಶ್ನೆಯೂ ಕಿರುತೆರೆ ಪ್ರೇಕ್ಷಕರಲ್ಲಿ ಮೂಡಿದೆ.

ಬಿಗ್‌ಬಾಸ್‌ ಸೀಸನ್‌ 8 ಹೋಸ್ಟ್‌ ಮಾಡಲ್ವಂತೆ ಕಮಲ್‌ ಹಾಸನ್
ಬಿಗ್‌ಬಾಸ್‌ ಸೀಸನ್‌ 8 ಹೋಸ್ಟ್‌ ಮಾಡಲ್ವಂತೆ ಕಮಲ್‌ ಹಾಸನ್

ಬೆಂಗಳೂರು: ಕಮಲ್‌ ಹಾಸನ್‌ ಈ ಬಾರಿ ಬಿಗ್‌ಬಾಸ್‌ ತಮಿಳು ಸೀಸನ್‌ 8 ರಿಯಾಲಿಟಿ ಶೋವನ್ನು ಹೋಸ್ಟ್‌ ಮಾಡುವುದಿಲ್ಲ. ಈ ಕುರಿತು ಸ್ವತಃ ಕಮಲ್‌ ಹಾಸನ್‌ ಸೋಷಿಯಲ್‌ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಕಲ್ಕಿ 2898 ಎಡಿ ಸಿನಿಮಾದಲ್ಲಿ ಯಾಸ್ಕಿನ್‌ ಆಗಿ ಮಿಂಚಿದ್ದ ಕಮಲ್‌ ಹಾಸನ್‌ ತಾನು ಈ ರಿಯಾಲಿಟಿ ಶೋದಿಂದ ಬ್ರೇಕ್‌ ತೆಗೆದುಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್‌ರಂತೆ ತಮಿಳಿನಲ್ಲಿ ಬಿಗ್‌ಬಾಸ್‌ ಕಾರ್ಯಕ್ರಮ ಆರಂಭವಾದಗಿನಿಂದ ಕಮಲ್‌ ಹಾಸನ್‌ ಹೋಸ್ಟ್‌ ಮಾಡುತ್ತ ಬಂದಿದ್ದರು. ತಮಿಳು ಬಿಗ್‌ಬಾಸ್‌ ಎಂದರೆ ಕಮಲ್‌ ಹಾಸನ್‌ ಎಂದೇ ಭಾವಿಸಿದ್ದ ಅಭಿಮಾನಿಗಳು ಈ ಹೊಸ ಸುದ್ದಿಯಿಂದ ಆಘಾತಕ್ಕೆ ಈಡಾಗಿದ್ದಾರೆ. ಕಮಲ್‌ ಹಾಸನ್‌ ಸ್ಥಳದಲ್ಲಿ ಇನ್ನೊಬ್ಬ ಹೋಸ್ಟ್‌ನನ್ನು ಕಲ್ಪಿಸಿಕೊಳ್ಳುವುದು ಅವರಿಗೆ ಕಷ್ಟವಾಗಿದೆ.

ಎಕ್ಸ್‌ನಲ್ಲಿ ಕಮಲ್‌ ಹಾಸನ್‌ ಹೀಗೆ ಪೋಸ್ಟ್‌ ಮಾಡಿದ್ದಾರೆ. "ಪ್ರೀತಿಯ ವೀಕ್ಷಕರೇ. ತುಂಬಾ ಭಾರವಾದ ಹೃದಯದಿಂದ ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಕಳೆದ 7 ವರ್ಷಗಳ ಹಿಂದೆ ನನ್ನ ಬಿಗ್‌ಬಾಸ್‌ ತಮಿಳು ಪ್ರಯಾಣ ಆರಂಭವಾಗಿತ್ತು. ಆದರೆ, ನನ್ನ ಹಲವು ಸಿನಿಮಾಗಳ ಕಮಿಟ್‌ಮೆಂಟ್‌ಗಳಿಂದಾಗಿ ಈ ಬಾರಿಯ ಬಿಗ್‌ಬಾಸ್‌ ತಮಿಳು ಹೋಸ್ಟ್‌ ಮಾಡಲು ಆಗುತ್ತಿಲ್ಲ" ಎಂದು ಕಮಲ್‌ ಹಾಸನ್‌ ಸುದೀರ್ಘ ನೋಟ್‌ ಹಂಚಿಕೊಂಡಿದ್ದಾರೆ.

“ಬಿಗ್‌ಬಾಸ್‌ ಮೂಲಕ ನಿಮ್ಮ ಮನೆಗಳಲ್ಲಿ ನಿಮ್ಮನ್ನು ತಲುಪುವ ಸೌಭಾಗ್ಯ ನನಗೆ ಸಿಕ್ಕಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ನೀವು ನನಗೆ ಧಾರೆಯೆರೆದಿದ್ದೀರಿ, ಅದಕ್ಕಾಗಿ ನಾನು ನಿಮಗೆ ಸದಾ ಋಣಿ. ಸ್ಪರ್ಧಿಗಳ ಉತ್ಸಾಹಭರಿತ ಮತ್ತು ಭಾವೋದ್ರಿಕ್ತ ಬೆಂಬಲವು ಬಿಗ್ ಬಾಸ್ ತಮಿಳನ್ನು ಭಾರತದ ಅತ್ಯುತ್ತಮ ದೂರದರ್ಶನ ರಿಯಾಲಿಟಿ ಶೋಗಳಲ್ಲಿ ಒಂದನ್ನಾಗಿ ಮಾಡುವ ಮುಖ್ಯ ಅಂಶವಾಗಿದೆ,”ಎಂದು ಅವರು ಟ್ವಿಟ್ಟರ್‌ನಲ್ಲಿ ಟಿಪ್ಪಣಿ ಹಂಚಿಕೊಂಡಿದ್ದಾರೆ.

"ವೈಯಕ್ತಿಕವಾಗಿ ಬಿಗ್‌ಬಾಸ್‌ ತಮಿಳು ಹೋಸ್ಟ್‌ ಮಾಡಿರುವುದು ನನಗೆ ದೊರಕಿರುವ ದೊಡ್ಡ ಅದೃಷ್ಟ. ಇಲ್ಲಿ ನಾಣು ನನ್ನ ಕಲಿಕೆಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ. ಈ ಕಲಿಕೆಯ ಅನುಭವಕ್ಕಾಗಿ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ನಾವೆಲ್ಲರೂ ಒಟ್ಟಿಗೆ ಸಮಯ ಕಳೆದಿದ್ದಕ್ಕಾಗಿ ಪ್ರತಿಯೊಬ್ಬರಿಗೂ ಮತ್ತು ಕಾರ್ಯಕ್ರಮದಲ್ಲಿರುವ ಸ್ಪರ್ಧಿಗಳಿಗೂ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ಕೊನೆಯದಾಗಿ, ವಿಜಯ್ ಟಿವಿಯಲ್ಲಿನ ಅದ್ಭುತ ತಂಡಕ್ಕೆ ಮತ್ತು ಈ ಉದ್ಯಮವನ್ನು ದೊಡ್ಡ ಯಶಸ್ಸಿನಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಸೀಸನ್ ಮತ್ತೊಂದು ಯಶಸ್ಸನ್ನು ಪಡೆಯುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಕಮಲ್‌ ಹಾಸನ್‌ ಬರೆದಿದ್ದಾರೆ.

ಬಿಗ್‌ಬಾಸ್‌ ತಮಿಳು ಟೀಮ್‌ ಕಡೆಯಿಂದ ಈ ಕುರಿತು ಯಾವುದೇ ಅಪ್‌ಡೇಟ್‌ ಬಂದಿಲ್ಲ. ಆದರೆ, ಕಮಲ್‌ ಹಾಸನ್‌ ಈ ಕುರಿತು ಅಧಿಕೃತವಾಗಿ ಘೋಷಿಸಿದ್ದಾರೆ.

ಅಂದಹಾಗೆ ಮುಂದಿನ ದಿನಗಳಲ್ಲಿ ಎಲ್ಲಾ ಕಿರುತೆರೆಗಳಲ್ಲಿಯೂ ಬಿಗ್‌ಬಾಸ್‌ ಹಬ್ಬ ಆರಂಭವಾಗಲಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋ ಸೀಸನ್‌ 11ಕ್ಕೆ ದಿನಗಣನೆ ಆರಂಭವಾಗಿದೆ. ಬಿಗ್‌ಬಾಸ್‌ ಕನ್ನಡದ ಎಲ್ಲಾ ಅಪ್‌ಡೇಟ್‌ಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ವಿಸಿಟ್‌ ಮಾಡ್ತಾ ಇರಿ.