ಮಹಾನಟಿ ಕನ್ನಡ ರಿಯಾಲಿಟಿ ಶೋ ಜಡ್ಜ್‌ ಯಾರು? ಈ ವಿಡಿಯೋ ನೋಡಿ ಗೆಸ್‌ ಮಾಡಿ, ಉತ್ತರನೂ ಇಲ್ಲಿದೆ ನೋಡಿ-televison news zee kannada who is mahanati reality show judge watch video and guess pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮಹಾನಟಿ ಕನ್ನಡ ರಿಯಾಲಿಟಿ ಶೋ ಜಡ್ಜ್‌ ಯಾರು? ಈ ವಿಡಿಯೋ ನೋಡಿ ಗೆಸ್‌ ಮಾಡಿ, ಉತ್ತರನೂ ಇಲ್ಲಿದೆ ನೋಡಿ

ಮಹಾನಟಿ ಕನ್ನಡ ರಿಯಾಲಿಟಿ ಶೋ ಜಡ್ಜ್‌ ಯಾರು? ಈ ವಿಡಿಯೋ ನೋಡಿ ಗೆಸ್‌ ಮಾಡಿ, ಉತ್ತರನೂ ಇಲ್ಲಿದೆ ನೋಡಿ

Mahanati Reality Show: ಜೀ ಕನ್ನಡ ವಾಹಿನಿಯ ಮುಂಬರುವ ಮಹಾನಟಿ ರಿಯಾಲಿಟಿ ಶೋ ಜಡ್ಜ್‌ ಯಾರು? ನಟಿ ಪ್ರೇಮಾ ಅಥವಾ ಇನ್ಯಾರು ಈ ಕಾರ್ಯಕ್ರಮದ ಜಡ್ಜ್‌ ಸೀಟ್‌ನಲ್ಲಿ ಕುಳಿತುಕೊಳ್ಳಲಿದ್ದಾರೆ? ಈ ವಿಡಿಯೋ ನೋಡಿ ಗೆಸ್‌ ಮಾಡಿ.

ಮಹಾನಟಿ ಕನ್ನಡ ರಿಯಾಲಿಟಿ ಶೋ ಜಡ್ಜ್‌ ವಿವರ
ಮಹಾನಟಿ ಕನ್ನಡ ರಿಯಾಲಿಟಿ ಶೋ ಜಡ್ಜ್‌ ವಿವರ

ಬೆಂಗಳೂರು: ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಸದ್ಯದಲ್ಲಿಯೇ ಆರಂಭವಾಗಲಿದೆ. ಈಗಾಗಲೇ ಈ ರಿಯಾಲಿಟಿ ಶೋದ ಅಡಿಷನ್‌ ಆರಂಭವಾಗಿದೆ. ಕರ್ನಾಟಕದ ಪ್ರತಿಭಾನ್ವಿತ ನಟಿಯರ ಹುಡುಕಾಟಕ್ಕೆ ನೆರವಾಗುವ ಈ ಕಾರ್ಯಕ್ರಮದ ಕುರಿತು ಪ್ರೇಕ್ಷಕರು ಕುತೂಹಲಗೊಂಡಿದ್ದಾರೆ. ಇದೇ ಸಮಯದಲ್ಲಿ ಮಹಾನಟಿ ಶೋಗೆ ಜಡ್ಜ್‌ ಆಗಿ ಯಾರು ಆಗಮಿಸಲಿದ್ದಾರೆ ಎಂಬ ಕುತೂಹಲವೂ ಜನರಲ್ಲಿದೆ. ಇದೇ ಕಾರಣಕ್ಕೆ ಜೀ ವಾಹಿನಿಯು ಸೋಷಿಯಲ್‌ ಮೀಡಿಯಾದಲ್ಲಿ "ಮಹಾನಟಿ ರಿಯಾಲಿಟಿ ಶೋದ ಜಡ್ಜ್‌ ಯಾರು?" ಗೆಸ್‌ ಮಾಡಿ ಎಂಬ ವಿಡಿಯೋ ತುಣಕನ್ನು ಹರಿಯಬಿಟ್ಟಿದೆ.

ಮಹಾನಟಿ ರಿಯಾಲಿಟಿ ಶೋದ ಜಡ್ಜ್‌ ಯಾರು?

ಈ ರಿಯಾಲಿಟಿ ಶೋದಲ್ಲಿ ಎಷ್ಟು ಜನರು ಜಡ್ಜ್‌ ಸೀಟ್‌ನಲ್ಲಿ ಕುಳಿತುಕೊಳ್ಳಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಇದೀಗ ಜೀ ವಾಹಿನಿಯು ಒಬ್ಬರು ಜಡ್ಜ್‌ ಬಗ್ಗೆ ಒಂದು ಹಿಂಟ್‌ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋ ನೋಡಿ ಮಹಾನಟಿ ರಿಯಾಲಿಟಿ ಶೋನ ಜಡ್ಜ್‌ ಯಾರು ಎಂದು ಗೆಸ್‌ ಮಾಡಿ ಎಂದು ತಿಳಿಸಿದೆ.

ನಟಿ ಪ್ರೇಮಾ ಎಂದ ಪ್ರೇಕ್ಷಕರು

ಈ ವಿಡಿಯೋಗೆ ಬಹುತೇಕ ನೆಟ್ಟಿಗರು "ನಟಿ ಪ್ರೇಮ" ಎಂದಿದ್ದಾರೆ. ವಿಡಿಯೋ ನೋಡಿದಾಗ ಜಡ್ಜ್‌ ಸ್ಥಾನದಲ್ಲಿ ಕುಳಿತುಕೊಳ್ಳಲಿರುವುದು ನಟಿ ಪ್ರೇಮ ಎನ್ನುವ ಸೂಚನೆ ದೊರಕಿದೆ.

ಮಹಾನಟಿ ಪ್ರಮೋ ಬಿಡುಗಡೆ

ಇತ್ತೀಚೆಗೆ ವಾಹಿನಿಯು ಮಹಾನಟಿ ರಿಯಾಲಿಟಿ ಶೋನ ಪ್ರಮೋವನ್ನೂ ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿತ್ತು. ಈ ಪ್ರಮೋದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆದ ಹಲವು ಡೈಲಾಗ್‌ಗಳು ಕೇಳಿಸಿವೆ. ನಮ್ಮ ಮನ್ಸು ನಮಗೆ ಒಳ್ಳೆದು ಮಾಡಿದ್ರೆ ದೇವ್ರು, ರಾವುಲ್ಲಾ ಪಟಪಟ ಎಂಬೆಲ್ಲ ಧ್ವನಿಗಳು ಕೇಳಿಸಿವೆ. ಮಹಾನಟಿ ಪ್ರಮೋ ಇಲ್ಲಿದೆ ನೋಡಿ

ಏನಿದು ಮಹಾನಟಿ ರಿಯಾಲಿಟಿ ಶೋ?

ಸಿನಿಮಾ ನಟಿಯರಾಗಬೇಕು, ಕಿರುತೆರೆ ನಟಿಯರಾಗಬೇಕು ಎಂಬ ಕನಸು ಇರುವ ಕರ್ನಾಟಕದ ಯುವತಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಜೀ ಕನ್ನಡ ವಾಹಿನಿಯು ಮಹಾನಟಿ ಎಂಬ ರಿಯಾಲಿಟಿ ಶೋ ಆರಂಭಿಸುತ್ತಿದೆ. ಕರ್ನಾಟಕದ್ಯಾಂತ ಕಳೆದ ಒಂದು ತಿಂಗಳಿನಿಂದ ಅಡಿಷನ್‌ ಮಾಡಿ ಒಂದಿಷ್ಟು ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. ಇವರೆಲ್ಲರೂ ಇನ್ನು ಮುಂದೆ ಮಹಾನಟಿ ಶೋನದಲ್ಲಿ ತಮ್ಮ ಪ್ರತಿಭೆ ತೋರಿಸಲಿದ್ದಾರೆ.

ನಟಿ ಪ್ರೇಮಾ ಕುರಿತು

ಇವರ ಪೂರ್ಣ ಹೆಸರು ನೆರವಂದ ಚೆಟ್ಟಿಚಾ ಪ್ರೇಮಾ. ಕನ್ನಡ , ತೆಲುಗು , ಮಲಯಾಳಂ ಮತ್ತು ಕೆಲವು ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ನಮ್ಮೂರ ಮಂದಾರ ಹೂವೆ, ಓಂ ಮತ್ತು ಯಜಮಾನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇವರು "ಉಪೇಂದ್ರ ಮತ್ತೆ ಬಾ" ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಮದುವೆಯ ಉಡುಗೊರೆ ಚಿತ್ರದಲ್ಲೂ ನಟಿಸಿದ್ದಾರೆ. ತೆಲುಗಿನ ಮೈ ನೇಮ್‌ ಶೃತಿ, ರಜಾಕರ್‌ ಸಿನಿಮಾಗಳಲ್ಲೂ ನಟಿಸಿದ್ದಾರೆ. ಶಿಶಿರ, ಅಂಜನಿ ಪುತ್ರುಡು, ನವಶಕ್ತಿ ವೈಭವ, ಸುಂದರಕಾಂಡ, ಕ್ಷಣಕ್ಷಣ, ಏಕದಂತ, ಅಯೋಧ್ಯೆ, ಪಾಂಡುರಂಗ ವಿಟ್ಟಲ, ಇನ್‌ಸ್ಪೆಕ್ಟರ್‌ ಝಾನ್ಸಿ, ರಣಚಂಡಿ, ಆಳಗೇಶನ್‌, ಆಪ್ತಮಿತ್ರ, ಲವ್ವೆ ಪಾಸಾಗಲಿ, ಆಯಿ ನಾನಾ ಭೀಷ್ಮ ಕಣೋ, ಸಿಂಗಾರವ್ವ, ಪರ್ವ, ಮರ್ಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.