ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಟೌಟ್‌ಗೆ ರಕ್ತಾಭಿಷೇಕ; ಹಾಲಿನ ಅಭಿಷೇಕ ಓಕೆ ಇದೆಲ್ಲಾ ಏಕೆ ಅಂತಿದ್ದಾರೆ ನೆಟಿಜನ್ಸ್‌-tollywood fans make blood bath to jr ntr devara movie cut out at ananthapur telugu film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಟೌಟ್‌ಗೆ ರಕ್ತಾಭಿಷೇಕ; ಹಾಲಿನ ಅಭಿಷೇಕ ಓಕೆ ಇದೆಲ್ಲಾ ಏಕೆ ಅಂತಿದ್ದಾರೆ ನೆಟಿಜನ್ಸ್‌

ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಟೌಟ್‌ಗೆ ರಕ್ತಾಭಿಷೇಕ; ಹಾಲಿನ ಅಭಿಷೇಕ ಓಕೆ ಇದೆಲ್ಲಾ ಏಕೆ ಅಂತಿದ್ದಾರೆ ನೆಟಿಜನ್ಸ್‌

ಜ್ಯೂ ಎನ್‌ಟಿಆರ್‌ ಅಭಿನಯದ ದೇವರ ಸಿನಿಮಾ ರಿಲೀಸ್‌ ದಿನಾಂಕ ಅನೌನ್ಸ್‌ ಆದಾಗಿನಿಂದ ಅಭಿಮಾನಿಗಳು ಸಿನಿಮಾವನ್ನು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. 2 ದಿನಗಳ ಹಿಂದಷ್ಟೇ ಅನಂತಪುರದಲ್ಲಿ ಥಿಯೇಟರ್‌ ಮುಂದೆ ಸ್ಥಾಪಿಸಲಾಗಿದ್ದ 50 ಅಡಿ ಕಟೌಟ್‌ಗೆ ಫ್ಯಾನ್ಸ್‌ ರಕ್ತಾಭಿಷೇಕ ಮಾಡಿದ್ದು ಈ ವಿಡಿಯೋ ವೈರಲ್‌ ಆಗುತ್ತಿದೆ.

ಅನಂತ್‌ಪುರದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಟೌಟ್‌ಗೆ ಅಭಿಮಾನಿಗಳಿಂದ ರಕ್ತಾಭಿಷೇಕ
ಅನಂತ್‌ಪುರದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಟೌಟ್‌ಗೆ ಅಭಿಮಾನಿಗಳಿಂದ ರಕ್ತಾಭಿಷೇಕ

ಸಿನಿಮಾ ನಟ ನಟಿಯರನ್ನು ದೇವರಂತೆ ಆರಾಧಿಸುವ ಜನರ ಬಗ್ಗೆ ಕೇಳಿದ್ದೇವೆ. ಕೆಲವರು ತಾವು ಮೆಚ್ಚಿದ ಸ್ಟಾರ್‌ಗಳಿಗಾಗಿ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ. ಅವರ ಹೊಸ ಸಿನಿಮಾ ರಿಲೀಸ್‌ ಆದರೆ, ದೊಡ್ಡ ಕಟೌಟ್‌ಗಳನ್ನು ನಿಲ್ಲಿಸಿ ಹೂವಿನ ಮಳೆ ಸುರಿಸುವುದು, ಹಾಲಿನ ಅಭಿಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಕೆಲವು ಅಭಿಮಾನಿಗಳು ಜ್ಯೂನಿಯರ್‌ ಎನ್‌ಟಿಆರ್‌ ಕಟೌಟ್‌ಗೆ ರಕ್ತದ ಅಭಿಷೇಕವನ್ನೇ ಮಾಡಿದ್ದಾರೆ.

ಸಿನಿಮಾ ಬ್ಲಾಕ್‌ ಬಸ್ಟರ್‌ ಎಂದ ಅಭಿಮಾನಿಗಳು

ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಕೊರಟಾಲ ಶಿವ ಕಾಂಬಿನೇಶನ್‌ನಲ್ಲಿ ತಯಾರಾದ ದೇವರ ಸಿನಿಮಾ ಇಂದು ರಿಲೀಸ್‌ ಆಗಿದೆ. ಸಿನಿಮಾ ಸಾಕಷ್ಟು ಬಝ್‌ ಸೃಷ್ಟಿಸಿದೆ. ಟಿಕೆಟ್‌ ದರ ಹೆಚ್ಚಿಸಲು ಹಾಗೂ ಮಧ್ಯರಾತ್ರಿ ಶೋಗೆ ಅನುಮತಿ ನೀಡುವಂತೆ ಜ್ಯೂ ಎನ್‌ಟಿಆರ್‌ ಆಂಧ್ರ ಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಅನುಮತಿ ಕೂಡಾ ಪಡೆದಿದ್ದರು. ಇದಕ್ಕಾಗಿ ಚಂದ್ರಬಾಬು ನಾಯ್ಡು ಹಾಗೂ ರೇವಂತ್‌ ರೆಡ್ಡಿ ಇಬ್ಬರಿಗೂ ಧನ್ಯವಾದ ಅರ್ಪಿಸಿದ್ದರು. ನಿನ್ನೆ ಮಧ್ಯರಾತ್ರಿ ಅಭಿಮಾನಿಗಳು ಸಿನಿಮಾ ನೋಡಿದ್ದಾರೆ. ಎನ್‌ಟಿಆರ್‌ ಎಂಟ್ರಿ ಸೀನ್‌ಗೆ ಅರಚಾಡಿದ್ದಾರೆ. ಥಿಯೇಟರ್‌ನಲ್ಲಿ ಹೂ, ಪೇಪರ್‌ ಕಟಿಂಗ್‌ಗಳನ್ನು ಎರಚಾಡಿ ಸಂಭ್ರಮಿಸಿದ್ದಾರೆ. ಇದಕ್ಕೂ 2 ದಿನಗಳ ಮುನ್ನ ಅನಂತಪುರದಲ್ಲಿ ಕೆಲವು ಅಭಿಮಾನಿಗಳು ಜ್ಯೂನಿಯರ್‌ ಎನ್‌ಟಿಆರ್‌ ಕಟೌಟ್‌ಗೆ ರಕ್ತಾಭಿಷೇಕ ಮಾಡಿದ್ದಾರೆ.

50 ಅಡಿ ಎತ್ತರದ ದೇವರ ಕಟೌಟ್‌ಗೆ ರಕ್ತಾಭಿಷೇಕ

ಅನಂತಪುರದ ಥಿಯೇಟರ್ ಒಂದರಲ್ಲಿ 50 ಅಡಿ ಎತ್ತರದ ಎನ್‌ಟಿಆರ್‌ ಬೃಹತ್ ದೇವರ ಲುಕ್ ಕಟ್ ಔಟ್ ಅಳವಡಿಸಲಾಗಿತ್ತು. ಅಭಿಮಾನಿಗಳು ದೇವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾತ್ರವಲ್ಲದೆ ರಕ್ತಾಭಿಷೇಕ ಮಾಡಿದ್ದಾರೆ. ದೇವರ ಸಿನಿಮಾವನ್ನು ಹಬ್ಬದಂತೆ ಸ್ವಾಗತಿಸಿದ್ದಾರೆ. ಚಿತ್ರಮಂದಿರಕ್ಕೆ ಬಂದವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ದೇವರ ಸಿನಿಮಾ ಸೂಪರ್‌ ಹಿಟ್ ಆಗಬೇಕೆಂದು ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಮೇಲೆ ಹತ್ತಿ ಕಟೌಟ್‌ಗೆ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. @Sai_Mohan_999 ಎಂಬ ಎಕ್ಸ್‌ ಪೇಜ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ಕೆಲವರು ಫೈರ್‌ ಎಮೋಜಿ ಕಾಮೆಂಟ್‌ ಮಾಡಿದರೆ, ಈ ರೀತಿಯ ಅಭಿಮಾನ ಸರಿಯಲ್ಲ ಹಾಲಿನ ಅಭಿಷೇಕ ಓಕೆ ಇದೆಲ್ಲಾ ಏಕೆ? ಎನ್ನುತ್ತಿದ್ದಾರೆ.

ಟ್ವಿಟ್ಟರ್‌ ರಿವ್ಯೂ ಹೇಗಿದೆ?

ಮಧ್ಯರಾತ್ರಿ ಸಿನಿಮಾ ನೋಡಿದ ಸಿನಿಮಾಭಿಮಾನಿಗಳು ಎಕ್ಸ್‌ನಲ್ಲಿ ದೇವರ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ಜ್ಯೂನಿಯರ್‌ ಎನ್‌ಟಿಆರ್‌ ತಾವೊಬ್ಬ ಆಲ್ ರೌಂಡರ್‌ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಚಿತ್ರದ ಬ್ಯಾಕ್ ಟು ಬ್ಯಾಕ್ ಮಾಸ್ ದೃಶ್ಯಗಳಲ್ಲಂತೂ ಎನ್‌ಟಿಆರ್ ಮಿಂಚಿದ್ದಾರೆ. ಫಸ್ಟ್‌ ಹಾಫ್‌ಗಿಂತ ಸೆಕೆಂಡ್‌ ಹಾಫ್‌ ಚೆನ್ನಾಗಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಫಸ್ಟ್‌ ಹಾಫ್‌ ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಕಾಲರ್‌ ಎಗರಿಸಿ ಹೇಳುತ್ತಿದ್ದೇನೆ, ದೇವರ ಬ್ಲಾಕ್‌ ಬಸ್ಟರ್‌ ಪಕ್ಕಾ ಎಂದು ತಾರಕ್‌ ಅಭಿಮಾನಿಗಳು ಜೋಶ್‌ನಿಂದ ಹೇಳುತ್ತಿದ್ದಾರೆ.

mysore-dasara_Entry_Point