ಬೆಂಗಳೂರಿನಲ್ಲಿ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌; ಹೈದರಾಬಾದ್‌ ಉಪ್ಪಾರಪಲ್ಲಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ-tollywood news choreographer jani master arrested in bangalore shifted to hyderabad soon sexual assault case rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರಿನಲ್ಲಿ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌; ಹೈದರಾಬಾದ್‌ ಉಪ್ಪಾರಪಲ್ಲಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ

ಬೆಂಗಳೂರಿನಲ್ಲಿ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌; ಹೈದರಾಬಾದ್‌ ಉಪ್ಪಾರಪಲ್ಲಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ

ಲೈಂಗಿಕ ದೌರ್ಜನ್ಯ ಕೇಸ್‌ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌ ಆಗಿದ್ದಾರೆ. ಸೈಬರಾಬಾದ್‌ ಪೊಲೀಸರು, ಬೆಂಗಳೂರಿನಲ್ಲಿ ಜಾನಿ ಮಾಸ್ಟರ್‌ ಬಂಧಿಸಿದ್ದು ಹೈದರಾಬಾದ್‌ಗೆ ಕರೆ ತರುತ್ತಿದ್ದಾರೆ. ಶೀಘ್ರದಲ್ಲೇ ಆತನನ್ನು ಉಪ್ಪಾರಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌; ಹೈದರಾಬಾದ್‌ ಉಪ್ಪಾರಪಲ್ಲಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ
ಬೆಂಗಳೂರಿನಲ್ಲಿ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಅರೆಸ್ಟ್‌; ಹೈದರಾಬಾದ್‌ ಉಪ್ಪಾರಪಲ್ಲಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ

ಸಹ ಕೊರಿಯೋಗ್ರಾಫರ್‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಜಾನಿ ಮಾಸ್ಟರ್‌ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಜಾನಿ ಮಾಸ್ಟರ್‌ನನ್ನು ಸೈಬರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ಜಾನಿ ಮಾಸ್ಟರ್‌, ಸೈಬರಾಬಾದ್ ಪೊಲೀಸರ ವಶದಲ್ಲಿದ್ದಾರೆ. ಶೀಘ್ರಲದಲ್ಲೇ ಹೈದರಾಬಾದ್‌ಗೆ ಜಾನಿ ಮಾಸ್ಟರ್‌ ಕರೆ ತಂದು ಉಪ್ಪಾರಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ನರಸಿಂಗಿಗೆ ಪ್ರಕರಣ ವರ್ಗಾಯಿಸಿದ ರಾಯದುರ್ಗ ಪೊಲೀಸರು

ಜಾನಿ ಮಾಸ್ಟರ್ ವಿರುದ್ಧ ಹೈದರಾಬಾದ್‌ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರ ಜೊತೆ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ರಾಯದುರ್ಗ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಆತ ತನ್ನ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಈಗ ಜಾನಿ ಮಾಸ್ಟರ್‌ ಅರೆಸ್ಟ್‌ ಮಾಡಿದ್ದಾರೆ. ಈ ಪ್ರಕರಣವನ್ನು ನರಸಿಂಗಿ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ.

ಜಾನಿ ಮಾಸ್ಟರ್‌ ತಂಡದಲ್ಲಿ ಕೆಲಸ ಮಾಡುತ್ತಿದ್ದ ಯುವತಿ

ಹೊರಾಂಗಣ ಶೂಟಿಂಗ್ ವೇಳೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ್ದಾರೆ. ನರಸಿಂಗಿಯಲ್ಲಿಯೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 2017ರಲ್ಲಿ ಟಿವಿ ಶೋವೊಂದರಲ್ಲಿ ಜಾನಿ ಮಾಸ್ಟರ್ ಅವರನ್ನು ಭೇಟಿಯಾಗಿದ್ದೆ, ಅಂದಿನಿಂದ ಅವರು ನನಗೆ ಪರಿಚಯ. ಕೆಲವು ದಿನಗಳಲ್ಲಿ ಜಾನಿ ಮಾಸ್ಟರ್, ತಮ್ಮ ತಂಡಕ್ಕೆ ಸಹಾಯಕ ನೃತ್ಯ ನಿರ್ದೇಶಕರಾಗಿ ನನ್ನನ್ನು ಸೇರಿಕೊಂಡರು. ಶೋಗಾಗಿ ಜಾನಿ ಜತೆ ಮುಂಬೈಗೆ ತೆರಳಿದ್ದ ವೇಳೆ ಅಲ್ಲಿನ ಹೋಟೆಲ್‌ನಲ್ಲಿ ಜಾನಿ ಮಾಸ್ಟರ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಮೇಲೆ ಆರೋಪ ಬಂದಾಗಿನಿಂದ ಜಾನಿ ಮಾಸ್ಟರ್ ತಲೆ ಮರೆಸಿಕೊಂಡಿದ್ದರು. ಪೋನ್‌ ಸಂಪರ್ಕಕ್ಕೆ ಕೂಡಾ ಸಿಕ್ಕಿರಲಿಲ್ಲ. ಲಡಾಖ್‌, ನೆಲ್ಲೂರು ಹಾಗೂ ಇತರ ಕಡೆ ಅವರನ್ನು ಹುಡುಕಲಾಗಿತ್ತು. ಕೊನೆಗೆ ಆತ ಬೆಂಗಳೂರಿನಲ್ಲಿರುವ ಮಾಹಿತಿ ದೊರೆತಿದ್ದರಿಂದ ಅಲ್ಲೇ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕನ್ನಡದಲ್ಲೂ ಡ್ಯಾನ್ಸ್‌ ಕೊರಿಯೋಗ್ರಫಿ ಮಾಡಿದ್ದ ಜಾನಿ

ಜಾನಿ ಮಾಸ್ಟರ್ ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಅನೇಕ ಸ್ಟಾರ್ ಹೀರೋ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತೆಲುಗಿನ ಧೀ, ಡ್ಯಾನ್ಸ್‌ ಶೋ ಮೂಲಕ ವೀಕ್ಷಕರಿಗೆ ಪರಿಚಯವಾದ ಜಾನಿ ಮಾಸ್ಟರ್‌ ಈಗ ಚಿತ್ರರಂಗದಲ್ಲಿ ಸ್ಟಾರ್ ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ಯುವರತ್ನ ಚಿತ್ರದ ಹಾಡುಗಳು, ವಿಕ್ರಾಂತ್‌ ರೋಣ ಚಿತ್ರದ ರಾ ರಾ ರಕ್ಕಮ್ಮ, ತೆಲುಗಿನ ಬುಟ್ಟ ಬೊಮ್ಮಾ, ರೌಡಿ ಬೇಬಿ, ಮಲಮ ಪಿತಾ ಪಿತಾದೆ, ಮಾಟೆ ಮಾಣಿಕ್ಯಮಾಯೆನೆ, ರಾ ನೀ ಕಾವಾಲಯ್ಯ ಸೇರಿದಂತೆ ಜಾನಿ ಮಾಸ್ಟರ್‌ ಕೊರಿಯೋಗ್ರಫಿ ಮಾಡಿರುವ ಹಾಡುಗಳು ಹಿಟ್‌ ಆಗಿವೆ. ನೃತ್ಯ ಸಂಯೋಜನೆಗೆ ಆತನಿಗೆ ರಾಷ್ಟ್ರಪ್ರಶಸ್ತಿ ಕೂಡಾ ದೊರೆತಿದೆ.

ಇಷ್ಟೆಲ್ಲಾ ಹೆಸರು ಸಂಪಾದಿಸಿರುವ ಜಾನಿ ಮಾಸ್ಟರ್‌ ಹೆಸರು ಈಗ ಅತ್ಯಾಚಾರ ಆರೋಪದಡಿ ಸಿಲುಕಿದೆ. ಈ ವಿಚಾರ ತೆಲುಗು ಸಿನಿರಂಗದಲ್ಲಿ ಸಂಚಲನ ಉಂಟು ಮಾಡಿದೆ.

mysore-dasara_Entry_Point