Higher Education Council: ಉನ್ನತ ಶಿಕ್ಷಣ ಪರಿಷತ್ತಿಗೆ ಮೈಂಡ್ ಟ್ರೀ ಸಿಇಒ ಸೇರಿ 10 ಮಂದಿ ನಾಮನಿರ್ದೇಶನ: ಅಶ್ವತ್ಥ ನಾರಾಯಣ
ಕನ್ನಡ ಸುದ್ದಿ  /  ಕರ್ನಾಟಕ  /  Higher Education Council: ಉನ್ನತ ಶಿಕ್ಷಣ ಪರಿಷತ್ತಿಗೆ ಮೈಂಡ್ ಟ್ರೀ ಸಿಇಒ ಸೇರಿ 10 ಮಂದಿ ನಾಮನಿರ್ದೇಶನ: ಅಶ್ವತ್ಥ ನಾರಾಯಣ

Higher Education Council: ಉನ್ನತ ಶಿಕ್ಷಣ ಪರಿಷತ್ತಿಗೆ ಮೈಂಡ್ ಟ್ರೀ ಸಿಇಒ ಸೇರಿ 10 ಮಂದಿ ನಾಮನಿರ್ದೇಶನ: ಅಶ್ವತ್ಥ ನಾರಾಯಣ

ಮೈಂಡ್‌‌ ಟ್ರೀ ಕಂಪನಿಯ ಸಿಇಒ ದೇವಶಿಶ್ ಚಟರ್ಜಿ ಮತ್ತು ಅಜೀಂ ಪ್ರೇಂಜಿ ವಿ.ವಿ.ಯ ಮಾಜಿ ಕುಲಪತಿ ಪ್ರೊ. ಅನುರಾಗ್ ಬೆಹಾರ್ ಸೇರಿದಂತೆ ಹತ್ತು ತಜ್ಞರನ್ನು ಮುಂದಿನ ಐದು ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ
ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ

ಬೆಂಗಳೂರು: ಮೈಂಡ್‌‌ ಟ್ರೀ ಕಂಪನಿಯ ಸಿಇಒ ದೇವಶಿಶ್ ಚಟರ್ಜಿ ಮತ್ತು ಅಜೀಂ ಪ್ರೇಂಜಿ ವಿ.ವಿ.ಯ ಮಾಜಿ ಕುಲಪತಿ ಪ್ರೊ. ಅನುರಾಗ್ ಬೆಹಾರ್ ಸೇರಿದಂತೆ ಹತ್ತು ತಜ್ಞರನ್ನು ಮುಂದಿನ ಐದು ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಮಿಕ್ಕಂತೆ ವಿಶಾಖಪಟ್ಟಣ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ ವಿ ಕಟ್ಟೀಮನಿ, ಕುವೆಂಪು ವಿವಿ ನಿವೃತ್ತ ಕುಲಪತಿ ಜೋಗನ್ ಶಂಕರ್, ಅಕ್ಕಮಹಾದೇವಿ ವಿವಿ ನಿವೃತ್ತ ಕುಲಪತಿ ಮೀನಾ ಚಂದಾವರ್ಕರ್, ಐಸಿಎಸ್ಎಸ್ಆರ್ ನಿರ್ದೇಶಕಿ ಪ್ರೊ. ಉಷಾರಾಣಿ, ಎಂಎಆರ್ಸಿಕೆ ಲೈಫ್ ಸೈನ್ಸಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್ ಎಸ್ ಶ್ರೀನಾಥ್, ಕ್ವಿಸ್ಟ್ ಗ್ಲೋಬಲ್ ಕಂಪನಿಯ ಅಧ್ಯಕ್ಷ ಅಜಯ್ ಪ್ರಭು ಮತ್ತು ಬಾಶ್ ಗ್ಲೋಬಲ್ ಸಾಫ್ಟ್‌ವೇರ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ರಾಘವೇಂದ್ರ ಕೃಷ್ಣಮೂರ್ತಿ ಅವರನ್ನು ಉನ್ನತ ಶಿಕ್ಷಣ ಪರಿಷತ್ತಿಗೆ ನಾಮನಿರ್ದೇಶಕ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಉದ್ಯಮದ ಪ್ರಮುಖರನ್ನು ಶಿಕ್ಷಣ ಕ್ಷೇತ್ರದ ಜತೆ ಜೋಡಿಸುವ ಉದ್ದೇಶದಿಂದ ಈ ಬಾರಿ ಪರಿಷತ್ತಿಗೆ ಉದ್ಯಮಿಗಳನ್ನೂ ನೇಮಿಸಲಾಗಿದೆ.

ಸುಶಾಸನ ಮಾಸಾಚರಣೆಗೆ ಚಾಲನೆ ನೀಡಿದ ಅಶ್ವತ್ಥ ನಾರಾಯಣ

ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಬೆಸೆಯುವ ಸ್ಕಿಲ್ ಕನೆಕ್ಟ್ ಪೋರ್ಟಲ್ ಉದ್ಘಾಟನೆ, ಐದು ಸಂಸ್ಥೆಗಳೊಂದಿಗೆ ಉದ್ಯೋಗಸೃಷ್ಟಿಯ ಒಡಂಬಡಿಕೆ ಮತ್ತು ತಮ್ಮ ಇಲಾಖೆಗಳಲ್ಲಿ ಏನೆಲ್ಲ ಸುಧಾರಣೆಗಳನ್ನು ಮಾಡಲಾಗುತ್ತದೆ ಎಂಬುದರ ಸಂಕಲ್ಪ ಪತ್ರಗಳ ಬಿಡುಗಡೆಯೊಂದಿಗೆ ತಮ್ಮ ನೇತೃತ್ವದ ಎಲ್ಲ ಇಲಾಖೆಗಳಡಿಯಲ್ಲಿ ಡಿಸೆಂಬರ್ ಪೂರ್ತಿ ನಡೆಯುವ 'ಸುಶಾಸನ ಮಾಸಾಚರಣೆ'ಗೆ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ನಿನ್ನೆ ಚಾಲನೆ ನೀಡಿದರು.

ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳ ವ್ಯಾಪ್ತಿಯಲ್ಲಿ ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಈ ಸುಶಾಸನ ಉಪಕ್ರಮವನ್ನು ವ್ಯಾಪಕ ಸ್ವರೂಪದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಆರಂಭಕ್ಕಾಗಿ ವಿಧಾನಸೌಧದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ಸುಶಾಸನ ಎನ್ನುವುದು ಹೊಸ ರಾಜಕೀಯ ಸಂಸ್ಕೃತಿಯಾಗಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ಇದು ಸಾರ್ವಜನಿಕ ಸೇವೆಗಳನ್ನು ಜನರ ಮನೆ ಬಾಗಿಲಿಗೇ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನವಾಗಿದೆ. ಇದರಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಒತ್ತು ಕೊಡಲಾಗಿದೆ" ಎಂದರು.

ಸುಶಾಸನ ಬರಬೇಕೆಂದರೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಹೀಗಾಗಿ ಎನ್‌ಇಪಿ ಅನುಷ್ಠಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರಲಾಗುತ್ತಿದೆ. ಇದರ ಜತೆಗೆ ಈಗ ಸುಶಾಸನವೂ ಸೇರಿಕೊಂಡಿದೆ. ಇದರ ಭಾಗವಾಗಿ ಡಿಗ್ರಿ ಕಾಲೇಜು, ಪಾಲಿಟೆಕ್ನಿಕ್‌, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಣಿ ನೇರ ಸಂವಾದಗಳನ್ನು ನಡೆಸಲಾಗುವುದು ಎಂದರು.

Whats_app_banner