ದೆಹಲಿಯ ಶ್ರದ್ದಾ ಮಾದರಿಯಲ್ಲೇ ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ, 50 ತುಂಡು ಪತ್ತೆ, ಅನೈತಿಕ ಸಂಬಂಧದ ಶಂಕೆ; ಭೀಕರ ಕೊಲೆಯ 10 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ದೆಹಲಿಯ ಶ್ರದ್ದಾ ಮಾದರಿಯಲ್ಲೇ ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ, 50 ತುಂಡು ಪತ್ತೆ, ಅನೈತಿಕ ಸಂಬಂಧದ ಶಂಕೆ; ಭೀಕರ ಕೊಲೆಯ 10 ಅಂಶಗಳು

ದೆಹಲಿಯ ಶ್ರದ್ದಾ ಮಾದರಿಯಲ್ಲೇ ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ, 50 ತುಂಡು ಪತ್ತೆ, ಅನೈತಿಕ ಸಂಬಂಧದ ಶಂಕೆ; ಭೀಕರ ಕೊಲೆಯ 10 ಅಂಶಗಳು

ಬೆಂಗಳೂರಿನಲ್ಲಿ ಮಹಿಳೆ ಭೀಕರ ಕೊಲೆ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟ ಪ್ರಕರಣದಲ್ಲಿ ಯಾರ ಪಾತ್ರವಿದೆ ಎನ್ನುವ ಕುರಿತು ಪೊಲೀಸ್‌ ತನಿಖೆ ಚುರುಕುಗೊಂಡಿದೆ. ಪ್ರಕರಣದ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರಲ್ಲಿ ಕೊಲೆಯಾದ ಮಹಾಲಕ್ಷ್ಮಿ ಹಾಗೂ ಆಕೆಯ ಮನೆಯ ಎದುರು ಮಹಜರು ನಡೆದಿದೆ.
ಬೆಂಗಳೂರಲ್ಲಿ ಕೊಲೆಯಾದ ಮಹಾಲಕ್ಷ್ಮಿ ಹಾಗೂ ಆಕೆಯ ಮನೆಯ ಎದುರು ಮಹಜರು ನಡೆದಿದೆ. (Indian Express)

ಬೆಂಗಳೂರು: ನೇಪಾಳ ಮೂಲದವರಾದರೂ ನೆಲಮಂಗಲದಲ್ಲಿದ್ದು ನಂತರ ಪತಿಯಿಂದ ದೂರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಮಹಾಲಕ್ಷ್ಮಿ ಎಂಬ ಗೃಹಿಣಿ ಭೀಕರ ಕೊಲೆ ಪ್ರಕರಣ ಬೆಚ್ಚಿ ಬೀಳಿಸಿದೆ. ಕೊಲೆ ಮಾಡಿ ದೇಹದ ಭಾಗಗಳನ್ನು50 ತುಂಡುಗಳಾಗಿ ಮಾಡಿ ಮನೆಯಲ್ಲಿಯೇ ಫ್ರಿಡ್ಜ್‌ನಲ್ಲಿ ಇರಿಸಿರುವುದು ಕೊಲೆ ಹೇಗೆ ಆಗಿರಬಹುದು ಎಂದು ಹೇಳುತ್ತದೆ. ಕಳೆದ ವರ್ಷ ದೆಹಲಿಯ ಶ್ರದ್ದಾ, ಮುಂಬೈನ ಯುವತಿಯೊಬ್ಬಳ ಕೊಲೆ ಇದೇ ರೀತಿ ಮಾಡಲಾಗಿತ್ತು. ಅದರಲ್ಲೂ ಕೊಲೆ ಮಾಡಿದ ಪರಿ, ಫ್ರಿಡ್ಜ್‌ನಲ್ಲಿ ದೇಹದ ತುಂಡುಗಳನ್ನು ಇರಿಸಿದ್ದ ರೀತಿ ನೋಡಿದರೆ ದ್ವೇಷದ ಕಾರಣಕ್ಕೆ ಈ ಕೊಲೆ ನಡೆದಿರಬಹುದು ಎನ್ನುವ ಶಂಕೆ ಬಲವಾಗಿದೆ. ಈಗಾಗಲೇ ಬೆಂಗಳೂರು ಪೊಲೀಸ್‌ ಎಂಟು ತಂಡಗಳು ಕೊಲೆ ಪ್ರಕರಣ ಬೇಧಿಸಿ, ಕೊಲೆಗಾರರನ್ನು ಬಂಧಿಸಲು ಮಾಹಿತಿ ಕಲೆ ಹಾಕುತ್ತಿವೆ. ಕುಟುಂಬದವರು ಏತಕ್ಕಾಗಿ ಈ ಕೊಲೆ ನಡೆಯಿತು, ಯಾರು ಈ ಕೊಲೆಯನ್ನು ಇಷ್ಟು ಬೀಭತ್ಸವಾಗಿ ನಡೆಸಿದರು ಎನ್ನುವ ಮಾಹಿತಿಗಾಗಿ ಕಾಯುತ್ತಿದ್ದಾರೆ.

  • ನೇಪಾಳ ಮೂಲದವರಾದರೂ ಹಲವಾರು ವರ್ಷಗಳ ಹಿಂದೆಯೇ ನೆಲಮಂಗಲಕ್ಕೆ ಬಂದಿದ್ದ ಮೀನಾ ರಾಣಾ ಎಂಬುವವರ ಪುತ್ರಿ ಮಹಾಲಕ್ಷ್ಮಿ(27). ಈಕೆಗೆ ಮದುವೆಯಾಗಿ ಮಗು ಕೂಡ ಇದೆ. ಪತಿ ಹೇಮಂತ್ ದಾಸ್‌ ರಿಂದ ದೂರವೇ ಇದ್ದಳು.
  • ಕೆಲಸಕ್ಕಾಗಿ ಆಕೆ ಬೆಂಗಳೂರಿಗೆ ಬಂದಿದ್ದಳು. ಮಲ್ಲೇಶ್ವರಂನ ಫ್ಯಾಶನ್ ಫ್ಯಾಕ್ಟರ್ ಎಂಬ ಬಟ್ಟೆ ಅಂಗಡಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದಳು. ವೈಯಾಲಿ ಕಾವಲ್‌ ನಲ್ಲಿ ಮನೆಯೊಂದರಲ್ಲಿ ಒಬ್ಬಂಟಿ ವಾಸವಾಗಿದ್ದಳು
  • ಮನೆಯವರು ಆಗಾಗ ಬಂದು ಹೋಗುತ್ತಿದ್ದರು. ತಾಯಿ, ಸಹೋದರರು ಬರುತ್ತಿದ್ದರು. ಈಕೆಯೂ ನೆಲಮಂಗಲಕ್ಕೆ ಹೋಗಿ ಬರುತ್ತಿದ್ದಳು. ಎರಡು ಮೂರು ದಿನದಿಂದ ಬಂದಿರಲಿಲ್ಲ. ಬರಬಹುದು ಎಂದು ಮನೆಯವರು ನಿರೀಕ್ಷೆಯಲ್ಲಿದ್ದರು
  • ವಯಾಲಿ ಕಾವಲ್‌ ಮಹಾಲಕ್ಷ್ಮಿ ಇದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಮಹಾಲಕ್ಷ್ಮಿಯೂ ಕೆಲ ದಿನಗಳಿಂದ ಕಂಡಿರಲಿಲ್ಲ. ಕೊನೆಗೆ ಕುಟುಂಬದವರಿಗೆ ಮನೆಯ ಮಾಲೀಕರು ಮಾಹಿತಿ ನೀಡಿದ್ದರು.
  • ನಾವು ಅಪಾರ್ಟ್ಮೆಂಟ್‌ ಪ್ರವೇಶಿಸಿದಾಗ ಅಲ್ಲಿ ವಾಸನೆ ತುಂಬಿ ಹೋಗಿತ್ತು. ಬಟ್ಟೆಗಳು, ಚಪ್ಪಲಿಗಳು, ಚೀಲಗಳು ಮತ್ತು ಸೂಟ್ಕೇಸ್ ಅನ್ನು ಲಿವಿಂಗ್ ರೂಮಲ್ಲಿ ಎಸೆಯಲಾಗಿತ್ತು. ರೆಫ್ರಿಜರೇಟರ್ ಬಳಿ ಕೆಲವು ಹುಳುಗಳು ಇದ್ದವು ಮತ್ತು ರಕ್ತದ ಕಲೆಗಳೂ ಇದ್ದಂತೆ ಕಾಣುತ್ತಿತ್ತು. ರೆಫ್ರಿಜರೇಟರ್ ತೆರೆದ ನಂತರ, ನನ್ನ ಅಳಿಯ ಇಮ್ರಾನ್ ಗೆ ತಿಳಿಸಲು ನಾನು ಆಘಾತದಿಂದ ಹೊರಗೆ ಓಡಿದೆ. ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿದರು ಎಂದು ಮೀನಾ ರಾಣಾ ದೂರಿನಲ್ಲಿ ತಿಳಿಸಿದ್ದಾರೆ.
  • ಪೊಲೀಸರು ಬಂದು ಬಾಗಿಲು ತೆಗೆಸಿದಾಗ ವಾಸನೆ ಮಾತ್ರ ಭೀಕರವಾಗಿತ್ತು. ನೋಡಿದರೆ ಸಮೀಪದ ಫ್ರಿಡ್ಜ್‌ ಬಳಿ ವಾಸನೆ ತೀವ್ರವಾಗಿತ್ತು. ಹುಳುಗಳು ಕೂಡ ಅಲ್ಲಿದ್ದವು. ತೆರೆದು ನೋಡಿದರೆ ಆಕೆಯ ದೇಹದ ಭಾಗಗಳನ್ನು ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಇರಿಸಲಾಗಿತ್ತು. ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆಯ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟಿರುವುದು ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ ವಲಯ) ಎನ್.ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
  • ದೇಹದ ಭಾಗಗಳನ್ನು ಒಂದುಗೂಡಿಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಇನ್ನೂ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ. ದೇಹಕ್ಕೆ ಬಲವಾದ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿದೆಯೋ ಅಥವಾ ಮಾದಕವಸ್ತು ನೀಡಿ ನಶೆಯಲ್ಲಿ ಕೊಲೆ ಮಾಡಲಾಗಿದೆಯಾ ಎನ್ನುವುದು ತಿಳಿಯಬೇಕಿದೆ
  • ಪತಿಯಿಂದ ದೂರವಾದ ಆಕೆ ಬೆಂಗಳೂರಿನಲ್ಲಿ ಇತರರೊಂದಿಗೆ ಸ್ನೇಹ ಹೊಂದಿದ್ದಳು. ಅನೈತಿಕ ಸಂಬಂಧ ಹೊಂದಿದ ಅನುಮಾನಗಳೂ ಇದ್ದವು. ಅವರು ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದರು. ಅವರಲ್ಲಿ ಯಾರಾದರೂ ಕೊಲೆ ಮಾಡಿದ್ದಾರೆಯೇ ಹೇಗೆ ಎನ್ನುವ ಆಯಾಮದಲ್ಲೂ ತನಿಖೆ ನಡೆದಿದೆ. ನಾಲ್ವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.ಉತ್ತರಾಖಂಡದ ಅಶ್ರಫ್‌ ಎಂಬುವವರ ವಿರುದ್ದ ನಾನು ದೂರು ನೀಡಿದ್ದೆ. ಬೆಂಗಳೂರಿಗೆ ಬಾರದಂತೆ ಹೇಳಿದ್ದೆ. ಆತನ ಮೇಲೆಯೇ ಅನುಮಾನವಿದೆ ಎಂದು ಪತಿ ಹೇಮಂತ್‌ ದಾಸ್‌ ತಿಳಿಸಿದ್ದು. ಆ ಆಯಾಮದಲ್ಲೂ ತನಿಖೆ ನಡೆದಿದೆ.
  • ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೀಕರ ಕೊಲೆ ಇದು. ಅದರಲ್ಲೂ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಲಾಗಿದೆ. 50 ತುಂಡು ಪತ್ತೆಯಾಗಿವೆ. ದೆಹಲಿ. ಮುಂಬೈನಲ್ಲಿ ಇಂತಹದೇ ಮಾದರಿ ಕೊಲೆಗಳು ಆಗಿದ್ದವು ಎನ್ನುವುದು ಪೊಲೀಸರ ವಿವರಣೆ.ನಾಲ್ಕೈದು ದಿನದ ಹಿಂದೆ ಕೊಲೆಯಾಗಿರುವ ರೀತಿ ಇದು ಕಾಣುತ್ತಿದೆ. ಪೊಲೀಸರು ಪತಿ ಸೇರಿದಂತೆ ಹಲವಾರು ಶಂಕಿತರನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಯಾರನ್ನೂ ಈವರೆಗೂ ಬಂಧಿಸಿಲ್ಲ. ತನಿಖೆಯಂತೂ ಚುರುಕಾಗಿ ನಡೆದಿದೆ.

-

Whats_app_banner