Bangalore crime: ಬೆಂಗಳೂರು ಠಾಣೆಗಳಲ್ಲಿ ಒಂದೇ ವರ್ಷದಲ್ಲಿ 22 ಸಾವಿರ ಪ್ರಕರಣ ಹೆಚ್ಚಳ: ಪೊಲೀಸರು ನೀಡುವ ಕಾರಣ ಏನು
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರು ಠಾಣೆಗಳಲ್ಲಿ ಒಂದೇ ವರ್ಷದಲ್ಲಿ 22 ಸಾವಿರ ಪ್ರಕರಣ ಹೆಚ್ಚಳ: ಪೊಲೀಸರು ನೀಡುವ ಕಾರಣ ಏನು

Bangalore crime: ಬೆಂಗಳೂರು ಠಾಣೆಗಳಲ್ಲಿ ಒಂದೇ ವರ್ಷದಲ್ಲಿ 22 ಸಾವಿರ ಪ್ರಕರಣ ಹೆಚ್ಚಳ: ಪೊಲೀಸರು ನೀಡುವ ಕಾರಣ ಏನು

Bangalore police ಬೆಂಗಳೂರಿನಲ್ಲಿ 2023ರಲ್ಲಿ ನಡೆದ ಅಪರಾಧ ಪ್ರಕರಣಗಳೆಷ್ಟು? ಪೊಲೀಸರ ಬಂಧನಕ್ಕೆ ಒಳಗಾದ ಅರೋಪಿಗಳೆಷ್ಟು? ಎನ್ನುವ ಮಾಹಿತಿಯನ್ನು ಬೆಂಗಳೂರು ನಗರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಒಟ್ಟು68518 ಪ್ರಕರಣ ದಾಖಲಾಗಿವೆ. ವಶಪಡಿಸಿಕೊಂಡ ಮಾದಕ ವಸ್ತಗಳ ತೂಕ 4228 ಕೆಜಿ ಮತ್ತು ಮೌಲ್ಯ 103 ಕೋಟಿ ರೂ.

ಬೆಂಗಳೂರು ನಗರದಲ್ಲಿ ದಾಖಲಾದ ಪೊಲೀಸ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.
ಬೆಂಗಳೂರು ನಗರದಲ್ಲಿ ದಾಖಲಾದ ಪೊಲೀಸ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.

ಬೆಂಗಳೂರು: ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರಿನ ಹೆಸರು ಎಂಟನೇ ಸ್ಥಾನದಲ್ಲಿತ್ತು. ಈ ಖುಷಿ ಮಾಸುವ ಮುನ್ನವೇ ಬೆಂಗಳೂರು ನಗರ ಪೊಲೀಸ್‌ ನಲ್ಲೇ ಲಭ್ಯ ಇರುವ ಮಾಹಿತಿ ಪ್ರಕಾರ ಒಂದೇ ವರ್ಷದಲ್ಲಿ 22 ಸಾವಿರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಸಣ್ಣಪುಟ್ಟ ಪ್ರಕರಣಗಳೂ ಸೇರಿಕೊಂಡಿವೆ.

ಬೆಂಗಳೂರು ನಗರದಲ್ಲಿ 2022 ರಲ್ಲಿ 46187 ಪ್ರಕರಣಗಳು ಹಾಗೂ 2023ನೇ ಸಾಲಿನಲ್ಲಿ 68518 ಪ್ರಕರಣಗಳು ದಾಖಲಾಗಿವೆ. ಒಂದೇ ವರ್ಷದಲ್ಲಿ 22 ಸಾವಿರ ಪ್ರಕರಣಗಳ ಹೆಚ್ಚಳ ಕಂಡಿದೆ.

ಪೊಲೀಸರ ಪ್ರಕಾರ ಸಾರ್ವಜನಿಕರು ನಿರ್ಭೀತಿ ಮತ್ತು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುತ್ತಿರುವುದು, ಕಂಟ್ರೋಲ್ ರೂಂ 112ಕ್ಕೆ ಬರುವ ಕರೆಗಳನ್ನು ದೂರುಗಳನ್ನಾಗಿ ಪರಿವರ್ತಿಸಿ ಪ್ರಕರಣಗಳನ್ನು ದಾಖಲಿಸುತ್ತಿರುವುದು ಮತ್ತು ಇ-ಎಫ್‌ಐಆರ್ ವ್ಯವಸ್ಥೆಯನ್ನು ರೂಪಿಸಿರುವುದರಿಂದ ಪ್ರಕರಣಗಳ ಹೆಚ್ಚಳವಾಗಲು ಕಾರಣ.

ಬಗೆಬಗೆಯ ಪ್ರಕರಣ

ಬೆಂಗಳೂರು ನಗರ ಪೊಲೀಸರು ದಾಖಲಿಸಿಕೊಂಡ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯನ್ನೂ ಮಾಡಿದ್ದಾರೆ. ಗಮನ ಸೆಳೆಯುವ ಹಲವು ಪ್ರಕರಣಗಳೂ ಇದರಲ್ಲಿವೆ.

ಬೆಂಗಳೂರು ನಗರದಾದ್ಯಂತ 2022ರಲ್ಲಿ 92,70,84,840 ರೂ. ಮೌಲ್ಯದ 4228 ಕೆಜಿ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

2023ನೇ ಸಾಲಿನಲ್ಲಿ ಒಟ್ಟು 3433 ಪ್ರಕರಣಗಳನ್ನು ದಾಖಲಿಸಿ ರೂ. 103,21,51 ,260 ರೂಪಾಯಿ ಮೌಲ್ಯದ 5387 ಕೆ.ಜಿ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವಿದೇಶಿಯರು ಸೇರಿ 4399 ಆರೋಪಿಗಳನ್ನು ಬಂಧಿಸಲಾಗಿದೆ.

2023ನೇ ಸಾಲಿನಲ್ಲಿ 2721 ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದು 2635 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. 2023ನೇ ಸಾಲಿನಲ್ಲಿ ಒಟ್ಟು 111 ಕೋಟಿ ರೂ ಮೌಲ್ಯದ 6425 ಕೆ.ಜಿ ಯಷ್ಟು ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ ಎನ್ನುವುದು ಬೆಂಗಳೂರು ಪೊಲೀಸ್‌ ಅಧಿಕಾರಿಗಳ ವಿವರಣೆ.

ವಿದೇಶಿ ಪ್ರಜೆಗಳ ವಿರುದ್ದ ಕ್ರಮ

2023ನೇ ಸಾಲಿನಲ್ಲಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದ ವಿದೇಶಿಯರ ವಿರುದ್ಧ 92 ಪ್ರಕರಣಗಳನ್ನು ದಾಖಲಿಸಿ 126 ವ್ಯಕ್ತಿಗಳನ್ನು ಬಂಧಿಸಲಾಗಿದೆ ಮತ್ತು 247 ವ್ಯಕ್ತಿ ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ. ರೌಡಿಗಳ ವಿರುದ್ಧ ಮುಂಜಾಗೃತ ಕ್ರಮದ ಅಡಿಯಲ್ಲಿ ಒಟ್ಟು 4020 ಪ್ರಕರಣಗಳನ್ನು ದಾಖಲಿಸಿ ಒಟ್ಟು 14 ಜನರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗಿರುತ್ತದೆ. ತಲೆ ಮರೆಸಿಕೊಂಡಿರುವ ರೌಡಿಗಳ ಪೈಕಿ 324 ರೌಡಿಗಳನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಲಾಗಿದೆ.

ಪತ್ತೆ ಮಾಡಲಾದ ಪ್ರಮುಖ ಪ್ರಕರಣಗಳು

  • 2023 ರ ಏಪ್ರಿಲ್ ನಲ್ಲಿ ವಿ.ವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೈಜೀರಿಯಾ ದೇಶದ ಇಬ್ಬರು ಅಂತರರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಸುಮಾರು 7 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ಜೂನ್ ತಿಂಗಳಲ್ಲಿ ಸಿಸಿಬಿ ಪೊಲೀಸರು ಮೂವರು ಅಂತರರಾಜ್ಯ ಡ್ರಗ್ ಪೆಡ್ಲರ್‌ ಗಳನ್ನು ಬಂಧಿಸಿ ಸುಮಾರು 11.44 ಕೋಟಿ ರೂ ಬೆಲೆ ಬಾಳುವ 1438 ಕೆ.ಜಿ ತೂಕದ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
  • ನವೆಂಬರ್ ನಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಜೀರಿಯಾ ದೇಶದ ಪ್ರಜೆಯನ್ನು ಬಂಧಿಸಿ ಸುಮಾರು 10 ಕೋಟಿ ರೂ ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಬೀರಿಯಾ ದೇಶದ ಪ್ರಜೆಯನ್ನು ಬಂಧಿಸಿ ಸುಮಾರು 21 ಕೋಟಿರೂ ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ಸಾಹಿತಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
  • ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡುತ್ತಿದ್ದ ಜಾಲವನ್ನು ಭೇದಿಸಿವೈದ್ಯರು, ಸಹಚರರು, ಹಾಗೂ ಲ್ಯಾಬ್‌ಟೆಕ್ನಿಷಿಯನ್‌ರನ್ನು ಬಂಧಿಸುವಲ್ಲಿ ಬಯ್ಯಪ್ಪನಹಳ್ಳ ಪೊಲೀಸರು ಯಶಸ್ವಿಯಾಗಿರುತ್ತಾರೆ.
  • ಸಿಸಿಬಿ ಪೊಲೀಸರು ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ, ಮಕ್ಕಳ ಕಳ್ಳ ಸಾಕಾಣಿಕೆ ಮಾಡುತ್ತಿದ್ದ
  • ಅಂತರರಾಜ್ಯ ಜಾಲವನ್ನು ಭೇದಿಸಿ ತಮಿಳುನಾಡು ಮೂಲದ ಮಹಿಳೆ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
  • ಬ್ಯಾಂಕ್ ಖಾತೆ ತೆರೆದು ಸಾಮಾಜಿಕ ಜಾಲ ತಾಣಗಳಾದ ವ್ಯಾಟ್ಸಾಪ್ ಮತ್ತು ಟೆಲಿಗ್ರಾಂ ಆಪ್‌ಗಳ ಮೂಲಕ ಹಣವನ್ನು ಹೂಡಿಕೆ ಮಾಡಿಸಿ ಜನರಿಗೆ ಕೋಟ್ಯಾಂತರ ರೂಪಾಯಿ ವಂಚಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳು ದೇಶಾದ್ಯಂತ 5013 ದೂರುದಾರರಿಗೆ ಸುಮಾರು 854 ಕೋಟಿ ರೂಪಾಯಿ ಹಣವನ್ನು ವಂಚನೆ ಮಾಡಿದ್ದು 6 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
  • ಮಟ್ಕಾ ದಂಧೆಯಲ್ಲಿ ತೊಡಗಿದ್ದ 149 ವ್ಯಕ್ತಿಗಳ ಬಂಧನ, ಕ್ರಿಕೆಟ್, ಆನ್ ಲೈನ್ ಮತ್ತು ಇತರೆ ಬೆಟ್ಟಿಂಗ್ ಗಳಲ್ಲಿ ತೊಡಗಿದ್ದ 274 ಜೂಜಾಟದಲ್ಲಿ ತೊಡಗಿದ್ದ 2593 ಮಂದಿಯನ್ನು ಬಂಧಿಸಲಾಗಿದೆ.
  • ಅಕ್ರಮ ಕ್ಲಬ್, ಮಾನವ ಸಾಗಾಣೆ, ಅಕ್ರಮ ಶಸ್ತ್ರಾಸ್ತ್ರ, ಮೀಟರ್ ಬಡ್ಡಿ, ಅಕ್ರಮ ಲಾಟರಿ, ಕೋಕಾ, ಎನ್ ಡಿ ಪಿಎಸ್ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಲ್ಲಿ 5994 ಪ್ರಕರಣಗಳನ್ನು ದಾಖಲಿಸಿ 9614 ವ್ಯಕ್ತಿಗಳನ್ನು ಬಂಧಿಸಲಾಗಿದೆ.

==============

(ವರದಿ: ಎಚ್. ಮಾರುತಿ. ಬೆಂಗಳೂರು)

Whats_app_banner