ಕನ್ನಡ ಸುದ್ದಿ  /  Karnataka  /  Bangalore News Ias Officers Transferred Rakeshkumar Will Be Kpsc Secretary Lathakumari Shifted To Kreis Ed Kub

KPSC News: ಐಎಎಸ್‌ ಅಧಿಕಾರಿಗಳ ವರ್ಗ, ಕೆಪಿಎಸ್ಸಿಗೆ ನೂತನ ಕಾರ್ಯದರ್ಶಿ

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಕಾರ್ಯದರ್ಶಿ ಲತಾಕುಮಾರಿ ಅವರನ್ನು ವರ್ಗ ಮಾಡಲಾಗಿದ್ದು. ಅವರ ಜಾಗಕ್ಕೆ ಕೆ.ರಾಕೇಶ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ.

ಕೆಪಿಎಸ್ಸಿ ಕಾರ್ಯದರ್ಶಿ ಲತಾ ಕುಮಾರಿ ಅವರನ್ನು ವರ್ಗ ಮಾಡಿ ಅವರ ಜಾಗಕ್ಕೆ ರಾಕೇಶ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ.
ಕೆಪಿಎಸ್ಸಿ ಕಾರ್ಯದರ್ಶಿ ಲತಾ ಕುಮಾರಿ ಅವರನ್ನು ವರ್ಗ ಮಾಡಿ ಅವರ ಜಾಗಕ್ಕೆ ರಾಕೇಶ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ಮಂಗಳವಾರ ರಾತ್ರಿ ಐಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಿದೆ. ಅಧ್ಯಕ್ಷರ ನಡುವಿನ ತಿಕ್ಕಾಟದ ಕಾರಣದಿಂದ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿದ್ದ ಕೆ.ಎಸ್‌.ಲತಾಕುಮಾರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಕೆ.ರಾಕೇಶ್‌ ಕುಮಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ರಾಕೇಶ್‌ ಕುಮಾರ್‌ ಅವರು ಸಮಾಜ ಕಲ್ಯಾಣ ಆಯುಕ್ತರಾಗಿಯೂ ಮುಂದುವರೆಯಲಿದ್ದಾರೆ.

ಲತಾಕುಮಾರಿ ಅವರ ವರ್ಗಾವಣೆಗೆ ಅಧ್ಯಕ್ಷರು ಹಾಗೂ ಸದಸ್ಯರು ಒತ್ತಾಯ ಮಾಡಿದ್ದರು. ಹಲವಾರು ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿ ನಡುವೆ ಕೆಲ ದಿನಗಳಿಂದ ಸಂಘರ್ಷ ಜೋರಾಗಿತ್ತು. ಈ ಹಿನ್ನೆಲೆಯಲ್ಲಿ ಲತಾಕುಮಾರಿ ಅವರನ್ನು ವರ್ಗ ಮಾಡಲಾಗಿದೆ.

ಲತಾಕುಮಾರಿ ಅವರನ್ನು ಕರ್ನಾಟಕ ವಸತಿ ನಿಲಯಗಳ ಶಿಕ್ಷಣ ಸಂಸ್ಥೆಗಳ ಸೊಸೈಟಿ ಕಾರ್ಯನಿರ್ವಾಹಕ ನಿರ್ದೇಶಕರ ಹುದ್ದೆಗೆ ವರ್ಗ ಮಾಡಲಾಗಿದೆ.

ಮೂರು ವಾರಗಳ ಹಿಂದೆ ಅವರನ್ನು ರಜೆ ಮೇಲೆ ಕಳುಹಿಸಲಾಗಿತ್ತು. ರಜೆಯಿಂದ ವಾಪಾಸಾದ ದಿನದಿಂದಲೇ ಅವರ ವರ್ಗಾವಣೆ ಆದೇಶ ಜಾರಿಯಾಗಿದೆ. ಸೆಪ್ಟಂಬರ್‌ನಲ್ಲಿಯಷ್ಟೇ ಲತಾಕುಮಾರಿ ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಈ ಹಿಂದೆ ಕೆಪಿಎಸ್ಸಿಯಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ನಡುವೆ ಸಂಘರ್ಷ ನಡೆಯುತ್ತಲೇ ಬರುತ್ತಿದೆ. ಈ ಹಿಂದೆ ಜಿ.ಸತ್ಯವತಿ ಅವರನ್ನು ಇದೇರೀತಿ ವರ್ಗ ಮಾಡಲಾಗಿತ್ತು.

ಆನಂತರ ವಿಕಾಸ್‌ ಕಿಶೋರ್‌ ಸುರಳ್ಕರ್‌ ಅವರನ್ನು ಕೆಪಿಎಸ್ಸಿ ಕಾರ್ಯದರ್ಶಿ ಸ್ಥಾನದಿಂದ ಬದಲಾಯಿಸಲಾಗಿತ್ತು. ಈಗ ಮತ್ತೆ ಕಾರ್ಯದರ್ಶಿ ಬದಲಾವಣೆಯಾಗಿದೆ.

IPL_Entry_Point

ವಿಭಾಗ