Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ; ಯಾವ ಪ್ರದೇಶದಲ್ಲಿ ಕರೆಂಟ್‌ ಇರೋಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ; ಯಾವ ಪ್ರದೇಶದಲ್ಲಿ ಕರೆಂಟ್‌ ಇರೋಲ್ಲ

Bangalore Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ; ಯಾವ ಪ್ರದೇಶದಲ್ಲಿ ಕರೆಂಟ್‌ ಇರೋಲ್ಲ

ಬೆಂಗಳೂರು ಹೊರ ವಲಯದ ಹಲವು ಪ್ರದೇಶಗಳಲ್ಲಿ ಬುಧವಾರ ವಿದ್ಯುತ್‌ ವ್ಯತ್ಯಯವಾಗಲಿದೆ. ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯವನ್ನುಕೆಪಿಟಿಸಿಎಲ್‌ ಕೈಗೆತ್ತಿಕೊಂಡಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು ಹೊರವಲಯದ ಕೆಲವು ಪ್ರದೇಶದಲ್ಲಿ ಬುಧವಾರ ವಿದ್ಯುತ್‌ ವ್ಯತ್ಯಯ ಆಗಲಿದೆ.
ಬೆಂಗಳೂರು ಹೊರವಲಯದ ಕೆಲವು ಪ್ರದೇಶದಲ್ಲಿ ಬುಧವಾರ ವಿದ್ಯುತ್‌ ವ್ಯತ್ಯಯ ಆಗಲಿದೆ.

ಬೆಂಗಳೂರು: 66/11 ಕೆವಿ. ಆಲೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು ಕೈಗೆತ್ತಿಕೊಂಡಿರುವುದರಿಂದ ವಿದ್ಯುತ್ ಸರಬರಾಜಾಗುತ್ತಿರುವ ಬೆಂಗಳೂರು ಹೊರ ವಲಯದ ನೆಲಮಂಗಲ ತಾಲ್ಲೂಕಿನ ಕೆಳಕಂಡ ಗ್ರಾಮಗಳಲ್ಲಿ 2024ರ ಅಕ್ಟೋಬರ್‌ 23. ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.

ವಿದ್ಯುತ್ ಅಡಚಣೆಯುಂಟಾಗುವ ಪ್ರದೇಶಗಳು

ನೆಲಮಂಗಲ ತಾಲ್ಲೂಕಿನ ಮಾಕಳಿ, ಮಂತ್ರಿ ಬಡಾವಣೆ, ನರಸೀಪುರ ಬಿಡಿಎ ಪ್ಲಾಟ್ಸ್, ಅಡಕಮಾರನಹಳ್ಳಿ, ದೊಂಬರಹಳ್ಳಿ, ರಾಜೇಶ್ವರಿ ನಗರ, ದಾಸನಪುರ, ದೇವಣ್ಣಪಾಳ್ಯ, ಹಾರೋಕ್ಯಾತನಹಳ್ಳಿ, ಗೌಡಹಳ್ಳಿ, ಹೆಗ್ಗಡದೇವನಪುರ, ಹುಸ್ಕೂರು ಮುಖ್ಯರಸ್ತೆ, ಗೆಜ್ಜದಹಳ್ಳಿ, ನ್ಯಾನೋ ಸೆಂಟರ್, ಟಾಟಾಹೌಸಿಂಗ್, ರಾಯಲ್ ಟೌನ್‌ಶಿಪ್, ಕೋಡಿಪಳ್ಯ ವಡೇರಹಳ್ಳಿ, ಎ.ಪಿ.ಎಂಸಿ, ಹೊನ್ನಸಂದ್ರ, ಮತ್ತಹಳ್ಳಿ, ನರಸೀಪುರ, ಗೋವಿಂದಪುರ, ಆಲೂರು, ಆಲೂರು ಪಾಳ್ಯ, ಮುನಿಯನಪಾಳ್ಯ, ನಗರೂರು, ಕೈಗಾರಿಕಾ ಪ್ರದೇಶಗಳು, ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Whats_app_banner