Vidyarthi Bhavan: 'ಟ್ರೇಡ್‌ಮಾರ್ಕ್' ಸಮರ ಗೆದ್ದ ಜನಪ್ರಿಯ ವಿದ್ಯಾರ್ಥಿ ಭವನ
ಶಿವಮೊಗ್ಗದ ರೆಸ್ಟೋರೆಂಟ್ ವಿರುದ್ಧ ನಡೆಸುತ್ತಿದ್ದ ಟ್ರೇಡ್‌ಮಾರ್ಕ್ ಯುದ್ಧದಲ್ಲಿ ವಿದ್ಯಾರ್ಥಿ ಭವನ ಗೆಲುವು ಸಾಧಿಸಿದೆ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ (Bangalore) ಅತ್ಯಂತ ಜನಪ್ರಿಯ ಬ್ರೇಕ್‌ಫಾಸ್ಟ್ ಪಾಯಿಂಟ್ ಆಗಿರುವ ವಿದ್ಯಾರ್ಥಿ ಭವನವು (Vidyarthi Bhavan) ಶಿವಮೊಗ್ಗದ ರೆಸ್ಟೋರೆಂಟ್ (Shivamogga restaurant) ವಿರುದ್ಧ ಟ್ರೇಡ್‌ಮಾರ್ಕ್ (Trade Mark) ಹೋರಾಟವನ್ನು ಗೆದ್ದಿದ್ದು, ಇನ್ಮುಂದೆಯೂ ಇದೇ ಹೆಸರನ್ನ ಹೊಂದಿರಲಿದೆ.
ಶಿವಮೊಗ್ಗದ ರೆಸ್ಟೊರೆಂಟ್‌ನಲ್ಲಿ ‘ಬೆಂಗಳೂರು ಫುಡ್ ಟ್ರೆಂಡ್ ಇನ್ ಶಿವಮೊಗ್ಗ’ ಎಂಬ ಟ್ಯಾಗ್‌ಲೈನ್ ಬಳಸಲಾಗಿದ್ದು, ಇದು ವಿದ್ಯಾರ್ಥಿ ಭವನದ ಸಾರ್ವಜನಿಕರನ್ನು ದಾರಿ ತಪ್ಪಿಸುವಂತೆ ಇತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವರದಿಯ ಪ್ರಕಾರ, ಬೆಂಗಳೂರು ಕೋರ್ಟ್ ವಿದ್ಯಾರ್ಥಿ ಭವನದ ಟ್ರೇಡ್‌ಮಾರ್ಕ್ ಅನ್ನು ಬಳಸದಂತೆ ಶಿವಮೊಗ್ಗ ಫುಡ್ ಜಾಯಿಂಟ್‌ಗೆ ನಿರ್ದೇಶಿಸಲಾಗಿದೆ. ಅಲ್ಲದೆ, ನಿಯಮಗಳನ್ನು ಉಲ್ಲಂಘಿಸುವ ವಸ್ತುಗಳನ್ನು ನಾಶಪಡಿಸಲು ಆದೇಶಿಸಿದೆ.
ಪ್ರತಿವಾದಿ ರೆಸ್ಟೋರೆಂಟ್ ವಿದ್ಯಾರ್ಥಿ ಭವನವನ್ನು ವಿದಾರ್ಥಿ ಭವನ ಎಂದು ಬದಲಾಯಿಸಿದ್ದಾರೆ. ಟ್ರೇಡ್‌ಮಾರ್ಕ್ ಮೊಕದ್ದಮೆಯನ್ನು ಸಲ್ಲಿಸಿದ ನಂತರ ವಿಬಿ ಪೂರ್ವಪ್ರತ್ಯಯವನ್ನು ಬಳಸಿದ್ದರು. ಎರಡೂ ಹೆಸರುಗಳು ಒಂದೇ ರೀತಿಯ ಮತ್ತು ಒಂದೇ ಪೂರ್ವಪ್ರತ್ಯಯವನ್ನು ಹೊಂದಿರುವುದರಿಂದ, ಉಲ್ಲಂಘಿಸುವ ವಸ್ತುಗಳನ್ನು ನಾಶಮಾಡಲು ನ್ಯಾಯಾಲಯವು ಅವರಿಗೆ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಗಾಂಧಿ ಬಜಾರ್ ಬಡಾವಣೆಯಲ್ಲಿರುವ 7 ದಶಕಗಳಿಂದ ಸೇವೆಯನ್ನು ನೀಡುತ್ತಿರುವ ವಿದ್ಯಾರ್ಥಿ ಭವನದಲ್ಲಿ ಅಂದಿನಿಂದಲೂ ತನ್ನ ಜನಪ್ರಿಯತೆ ಮತ್ತು ಗುಣಮಟ್ಟದ ಆಹಾರಕ್ಕೆ ಹೆಸರುವಾಸಿಯಾಗಿದೆ. ಆ ಗುಣವನ್ನು ಹಾಗೇ ಉಳಿಸಿಕೊಂಡು ಬಂದಿರುವ ಜನಪ್ರಿಯ ಸಸ್ಯಹಾರಿ ಖಾದ್ಯಮಂದಿರವಾಗಿದೆ.
ವಿದ್ಯಾರ್ಥಿ ಭವನದಲ್ಲಿ ಬೆಣ್ಣೆ ದೋಸೆ, ಮಸಾಲೆ ದೋಸೆ ಹಾಗೂ ವಡೆಗೆ ಜನಪ್ರಿಯವಾಗಿದೆ. ಅತ್ಯಂತ ಶುಚಿ-ರುಚಿಯಾದ ತಿಂಡಿ ತಿನಿಸುಗಳು ಇಲ್ಲಿ ದೊರೆಯುತ್ತವೆ. ಇಲ್ಲಿನ ಪ್ರಮುಖ ಆಕರ್ಷಣೆ ಮಸಾಲೆ ದೋಸೆ. ಹೋಟೆಲ್ ಚಿಕ್ಕದಾಗಿದ್ದರೂ ಜನರು ಇಲ್ಲಿನ ತಿಂಡಿ ಸವಿಯಲು ಹೋಟೆಲ್ ನ ಹೊರಗಡೆಯೇ ಸರದಿ ಸಾಲಿನಲ್ಲಿ ನಿಂತು ಕಾದು ಕಾದು ಒಳಗೆ ಬಂದು ದೋಸೆಯನ್ನು ಆಸ್ವಾದಿಸುವುದು ಸಾಮಾನ್ಯವಾಗಿದೆ.
ಪ್ರವಾಸಿಗರು ಮತ್ತು ಇತ್ತೀಚಿನ ಆಹಾರ ಬ್ಲಾಗರ್‌ಗಳಲ್ಲಿ ಜನಪ್ರಿಯತೆಯನ್ನು ವಿದ್ಯಾರ್ಥಿ ಭವನ ಗಳಿಸಿದೆ. ವಾರದ ಎಲ್ಲಾ ದಿನಗಳಲ್ಲಿಯೂ ಸಹ ವಿದ್ಯಾರ್ಥಿ ಭವನವು ತಮ್ಮ ವಿಶೇಷ ದೋಸೆ, ಇಡ್ಲಿ, ವಡಾ ಮತ್ತು ಫಿಲ್ಟರ್ ಕಾಫಿಗೆ ತನ್ನದೇ ಆದ ಪ್ರತಿನಿತ್ಯದ ಗ್ರಾಹಕರನ್ನು ಹೊಂದಿದೆ.
ವಿಭಾಗ