ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣುಮುಂಗಾರು ಕೈ ಕೊಟ್ಟ ಕಾರಣಕ್ಕೆ ಬೆಲೆ ತುಸು ಹೆಚ್ಚು(ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ನಡೆದಿದ್ದು, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣುಗಳ ಮತ್ತು ಹಣ್ಣಿನ ಉತ್ಪನ್ನಗಳ ಪ್ರದರ್ಶನ, ಮಾರಾಟ ನಡೆಯಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ನಡೆದಿದ್ದು, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣುಗಳ ಮತ್ತು ಹಣ್ಣಿನ ಉತ್ಪನ್ನಗಳ ಪ್ರದರ್ಶನ, ಮಾರಾಟ ನಡೆಯಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಲಾಲ್‌ ಬಾಗ್‌ ನಲ್ಲಿ ಮಾವು ಮೇಳ ಮೇ 23ರಿಂದ ಜೂನ್‌ 9 ರವರೆಗೆ ನಡೆಯಲಿದೆ. ಮೇ9ರಂದು ಮತ್ತು ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಮಾವು ಬೆಳೆಗಾರರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಮೂರು ವಾರಗಳ ಕಾಲ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುತ್ತದೆ. ಈ ಮೇಳದಲ್ಲಿ ಸುಮಾರು 60ಕ್ಙೂ ಹೆಚ್ಚು ಮಾವು ಮಳಿಗೆಗಳೂ ಇರುತ್ತವೆ. ಜೊತೆಗೆ 15ಕ್ಕೂ ಹೆಚ್ಚು ಹಲಸಿನ ಹಣ್ಣಿನ ಮಳಿಗೆಗಳೂ ಇರಲಿವೆ. 10 ಹೆಚ್ಚು ಜಿಲ್ಲೆಗಳ ಮಾವು ಬೆಳೆಗಾರರು ಭಾಗವಹಿಸಲಿದ್ದಾರೆ. ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಹತ್ತಾರು ಬಗೆಯ ಮಾವು ತಳಿಗಳು ಲಭ್ಯವಾಗಲಿವೆ.

ಮಾವು ಹಲಸು ಮೇಳದ ವಿಶೇಷಗಳಿವು

ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಬಾದಾಮಿ, ರಸಪೂರಿ, ಬೆನಿಶಾ, ಮಲಗೋವಾ ಇಮಾಮ್‌ ಪಸಂದ್‌, ಕೊಪ್ಪಳದ ಕೇಸರ್‌, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಜಿಲ್ಲೆಗಳ ತೋತಾಪುರಿ, ಸೆಂಧೂರ, ನೀಲಂ, ಬಂಗನಪಲ್ಲಿ, ಸಕ್ಕರೆಗುತ್ತಿ, ಸೇರಿದಂತೆ ಹಲವಾರು ತಳಿಗಳ ಮಾವು ಹಣ್ಣುಗಳು ಲಭ್ಯವಾಗಲಿವೆ.

ಕೋಲಾರ ಜಿಲ್ಲೆಯ ಚಿಂತಾಮಣಿ, ಶ್ರೀನಿವಾಸಪುರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವ ನಿರೀಕ್ಷೆ ಇದೆ. ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್‌) ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕರಿ ಇಶಾದ್‌ ಮಾವಿನ ತಳಿ ಈ ಭಾರಿಯ ಪ್ರಮುಖ ಆಕಷಣೆಯಾಗಿರಲಿದೆ. ಹೆಚ್ಚಿನ ರುಚಿ, ವಾಸನೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ತಿರುಳು ಇರುವುದರಿಂದ ಈ ಹಣ್ಣು ವಿಶೇಷ ಆಕರ್ಷನೆಯಾಗಲಿದೆ.

ಮಳೆಯ ಅಭಾವದಿಂದಾಗಿ ಇಳುವರಿ ಕಡಿಮೆಯಾಗಿರುವ ಕಾರಣ ಕಳೆದ ವರ್ಷಗಳಗೆ ಹೋಲಿಸಿದರೆ ಈ ಬಾರಿ ಮಳಿಗೆಗಳ ಸಂಖ್ಯೆ ಕಡಿಮೆಯಾಗಲಿದೆ. ಏಪ್ರಿಲ್ ನಲ್ಲಿ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಣ್ಣ ಪ್ರಮಾಣದಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿದೆ. ಈ ಮೇಳ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.

ಮಳೆ ಕೊರತೆ, ಇಳುವರಿ ಕಡಿಮೆ, ಬೆಲೆ ಹೆಚ್ಚು

ಮುಂಗಾರು ಕೊರತೆಯಿಂದಾಗಿ ಈ ವರ್ಷ ಇಳುವರಿ ಕಡಿಮೆಯಾಗಿದ್ದು ಮಾವಿನಹಣ್ಣಿನ ಬೆಲೆ ತುಸು ಹೆಚ್ಚು ಎಂದು ಗ್ರಾಹಕರು ದೂರುತ್ತಾರೆ. ಉತ್ತಮ ಗುಣಮಟ್ಟದ ಹಣ್ಣಿನ ಬೆಲೆ ಪ್ರತಿ ಕೆಜಿಗೆ 250 ರೂ.ಗೆ ಮಾರಾಟವಾಗುತ್ತಿದೆ. ಮೇಳದಲ್ಲಿಯೂ ದರ ಕಡಿಮೆ ಇರುವುದಿಲ್ಲ. ಆದರೆ ಹತ್ತಾರು ಬಗೆಯ ರುಚಿಕರ ಮಾವಿನ ಹಣ್ಣುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುವುದರಿಂದ ಆಯ್ಕೆಗೆ ಅವಕಾಶಗಳಿರುತ್ತವೆ. ಹೆಚ್ಚು ಕಡಿಮೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ದರವೇ ಇಲ್ಲಿಯೂ ನಿಗದಿಯಾಗಿರುತ್ತದೆ.

ಮಾವಿನ ಹಣ್ಣು ಮತ್ತು ಹಲಸಿನ ಹಣ್ಣುಗಳ ಮಾರಾಟದ ಜೊತೆಗೆ ಪರ್ಯಾಯ ಉತ್ಪನ್ನಗಳೂ ಲಭ್ಯವಾಗಲಿವೆ. ಉಪ್ಪಿನಕಾಯಿಗೆ ಬಳಸುವ ಆಮ್ಲೆಟ್‌, ಮಿಡಿ ಮಾವಿನಕಾಯಿ ಲಭ್ಯವಾಗಲಿವೆ.

ಸಾಮಾನ್ಯವಾಗಿ ರಾಜ್ಯದಲ್ಲಿ ಪ್ರತಿ ವರ್ಷ 15ಲಕ್ಷ ಟನ್‌ ಗಳಷ್ಟು ಮಾವು ಉತ್ಪಾದನೆಯಾಗುತ್ತದೆ. ಆದರೆ ಈ ವರ್ಷ ಕೇವಲ 4-5 ಟನ್‌ ಗಳಷ್ಟು ಮಾತ್ರ ಫಸಲು ಬಂದಿದೆ. ಶೇ.60-70ರಷ್ಟು ಇಳುವರಿ ಕುಂಠಿತವಾಗಿದೆ. ಮಾವು ಮೇಳ ಕೇವಲ ಬೆಂಗಳೂರಿನಲ್ಲಿ ಮಾತ್ರ ನಡೆಯುವುದಿಲ್ಲ. ರಾಮನಗರ, ಕೊಪ್ಪಳ ಮೊದಲಾದ ಜಿಲ್ಲೆಗಳಲ್ಲೂ ನಡೆಯುತ್ತದೆ.

ಮಾವು ಮೇಳಕ್ಕೆ ಆಗಮಿಸುವಾಗ ಮನೆಯಿಂದ ಕೈ ಚೀಲಗಳನ್ನು ತರುವುದನ್ನು ಮರೆಯಬೇಡಿ ಎಂದು ಮಾವು ನಿಗಮದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner