ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಹವಾಮಾನ; ಕರ್ನಾಟಕದ ರಾಜಧಾನಿಗೆ ಜೂನ್ ಮಧ್ಯಭಾಗದಲ್ಲಿ ಮುಂಗಾರು ಮಳೆ ಪ್ರವೇಶ ಸಾಧ್ಯತೆ, ಮೇ 29ರ ಬಳಿಕ 3 ದಿನ ಮಳೆ

ಬೆಂಗಳೂರು ಹವಾಮಾನ; ಕರ್ನಾಟಕದ ರಾಜಧಾನಿಗೆ ಜೂನ್ ಮಧ್ಯಭಾಗದಲ್ಲಿ ಮುಂಗಾರು ಮಳೆ ಪ್ರವೇಶ ಸಾಧ್ಯತೆ, ಮೇ 29ರ ಬಳಿಕ 3 ದಿನ ಮಳೆ

ಬೆಂಗಳೂರು ಹವಾಮಾನ; ಕರ್ನಾಟಕದ ರಾಜಧಾನಿಗೆ ಜೂನ್ ಮಧ್ಯಭಾಗದಲ್ಲಿ ಮುಂಗಾರು ಮಳೆ ಪ್ರವೇಶ ಮಾಡುವ ಸಾಧ್ಯತೆ ಇದೆ. ಅದಕ್ಕೂ ಮೊದಲು, ಮೇ 29ರ ಬಳಿಕ 3 ದಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ಹೇಳಿದೆ.

ಬೆಂಗಳೂರು ಹವಾಮಾನ; ಕರ್ನಾಟಕದ ರಾಜಧಾನಿಗೆ ಜೂನ್ ಮಧ್ಯಭಾಗದಿಂದ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದೆ. ಮೇ 29ರ ಬಳಿಕ 3 ದಿನ ಮಳೆ ಬೀಳಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಹವಾಮಾನ; ಕರ್ನಾಟಕದ ರಾಜಧಾನಿಗೆ ಜೂನ್ ಮಧ್ಯಭಾಗದಿಂದ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದೆ. ಮೇ 29ರ ಬಳಿಕ 3 ದಿನ ಮಳೆ ಬೀಳಲಿದೆ. (ಸಾಂಕೇತಿಕ ಚಿತ್ರ) (PTI)

ಬೆಂಗಳೂರು: ಪ್ರಸಕ್ತ ವರ್ಷದ ಮುಂಗಾರು ಮಳೆ ಜೂನ್ 13 ಅಥವಾ 14ಕ್ಕೆ ರಾಜಧಾನಿ ಬೆಂಗಳೂರು ಪ್ರವೇಶಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಇಂದು (ಮೇ 26) ಹೇಳಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಕರ್ನಾಟಕದ ಕರಾವಳಿಯನ್ನು ಪ್ರವೇಶಿಸಲಿದ್ದು, ರಾಜ್ಯದ ಬಹುತೇಕ ಕಡೆ ಇದೇ ಅವಧಿಯಲ್ಲಿ ಮಳೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಮಳೆ ಮುನ್ಸೂಚನೆ ವರದಿ ಹೇಳಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಈಗಾಗಲೇ ಶುರುವಾಗಿದೆ. ಕೇರಳಕ್ಕೆ ಜೂನ್ 1-2 ರ ವೇಳೆಗೆ ಮುಂಗಾರು ಮಳೆ ಪ್ರವೇಶವಾಗಲಿದೆ. ಕರ್ನಾಟಕದ ಕರಾವಳಿಯನ್ನು ಇದು ಜೂನ್ 6 ಅಥವಾ 7 ರಂದು ತಲುಪ ಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ಹವಾಮಾನ ತಜ್ಞ ಸಿಎಸ್ ಪಾಟೀಲ್ ಹೇಳಿದ್ದಾಗಿ ಟೈಮ್ಸ್‌ನೌ ವರದಿ ಮಾಡಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಶುರುವಾದರೆ ಮುಂಗಾರು ಮಳೆ ಮೇಲೆ ಪರಿಣಾಮ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತಕ್ಕೆ ಕಾರಣವಾಗುವ ವಾಯುಭಾರ ಕುಸಿತ ಉಂಟಾದರೆ, ಅದು ಮಾನ್ಸೂನ್ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಇಂತಹ ಚಂಡಮಾರುತ ಚಟುವಟಿಕೆಯು ಕರ್ನಾಟಕ ಕರಾವಳಿಯಲ್ಲಿ ಮಾನ್ಸೂನ್ ಆಗಮನವನ್ನು ಕೆಲವು ದಿನಗಳವರೆಗೆ ಮುಂದೂಡಬಹುದು. ಮುಂಗಾರು ಪೂರ್ವ ಮಳೆಯು ಪ್ರಸ್ತುತ ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಇದು ಜೂನ್ 1 ರವರೆಗೆ ಮುಂದುವರಿಯುತ್ತದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ವಿವರಿಸಿದ್ದಾಗಿ ವರದಿ ಹೇಳಿದೆ.

ಎರಡು ವಾರಗಳಿಂದ ಸಕ್ರಿಯವಾಗಿದ್ದ ಮಳೆ ಈಗ ಅಲ್ಪ ವಿರಾಮ ತೆಗೆದುಕೊಂಡಿದೆ. ಆದರೆ, ಮೇ 29 ರ ವೇಳೆಗೆ ಬೆಂಗಳೂರಲ್ಲಿ ಮತ್ತೆ ಗುಡುಗು ಸಹಿತ ಮಳೆ ಸುರಿಯುವ ಲಕ್ಷಣಗಳಿವೆ. ಈ ಮಳೆ ಮತ್ತೆ 3 ರಿಂದ 4 ದಿನಗಳ ತನಕ ಇರಲಿದೆ. ಈ ಪರಿಸ್ಥಿತಿ ಉಂಟಾದರೆ ಅದು ಮುಂಗಾರು ಮಳೆಗೆ ಅನುಕೂಲಕರವಾಗಿರಲಿದೆ ಎಂದು ಪಾಟೀಲ್ ಹೇಳಿದ್ದಾರೆ.

ಬೆಂಗಳೂರು ಹವಾಮಾನ ಇಂದು; ಚದುರಿದ ಮಳೆ, ಉಷ್ಣಾಂಶ ಹೆಚ್ಚಳ

ಭಾರತೀಯ ಹವಾಮಾನ ಇಲಾಖೆಯ ವೆಬ್ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಮೇ 26 ರಂದು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಕೆಲವೆಡೆ ಒಂದು ಅಥವಾ ಎರಡು ಬಾರಿ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮೇ 27 ರ ಸೋಮವಾರ, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 ಮತ್ತು 23 ಡಿಗ್ರಿ ಸೆಲ್ಸಿಯಸ್ ಎಂದು ಮುನ್ಸೂಚನೆ ನೀಡಲಾಗಿದೆ.

ಮಂಗಳವಾರ ಮತ್ತು ಬುಧವಾರ (ಮೇ 28-29) ಐಎಂಡಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವನ್ನು ಕ್ರಮವಾಗಿ 33 ಮತ್ತು 23 ಡಿಗ್ರಿ ಸೆಲ್ಸಿಯಸ್ ನಡುವೆ ಮುನ್ಸೂಚನೆ ನೀಡುತ್ತದೆ. “ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆ”ಯಾಗುವ ನಿರೀಕ್ಷೆ ಇದೆ. ಶುಕ್ರವಾರ ಮತ್ತು ಶನಿವಾರ (ಮೇ 30 ಮತ್ತು 31) ತಾಪಮಾನವು 33 ರಿಂದ 23 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ.

ಟಿ20 ವರ್ಲ್ಡ್‌ಕಪ್ 2024