ಲಕ್ಕಿ ಲೇಡಿ ಸ್ಟೋರಿ ಇದೀಗ ವೈರಲ್: ಇದಪ್ಪಾ ಅದೃಷ್ಟ, ಅಜ್ಜ ಇನ್ವೆಸ್ಟ್‌ ಮಾಡಿ ಮರೆತಿದ್ದ ಷೇರು ಮೊಮ್ಮಗಳಿಗೆ 1.72 ಕೋಟಿ ರೂಪಾಯಿ ಕೊಡ್ತು
ಕನ್ನಡ ಸುದ್ದಿ  /  ಕರ್ನಾಟಕ  /  ಲಕ್ಕಿ ಲೇಡಿ ಸ್ಟೋರಿ ಇದೀಗ ವೈರಲ್: ಇದಪ್ಪಾ ಅದೃಷ್ಟ, ಅಜ್ಜ ಇನ್ವೆಸ್ಟ್‌ ಮಾಡಿ ಮರೆತಿದ್ದ ಷೇರು ಮೊಮ್ಮಗಳಿಗೆ 1.72 ಕೋಟಿ ರೂಪಾಯಿ ಕೊಡ್ತು

ಲಕ್ಕಿ ಲೇಡಿ ಸ್ಟೋರಿ ಇದೀಗ ವೈರಲ್: ಇದಪ್ಪಾ ಅದೃಷ್ಟ, ಅಜ್ಜ ಇನ್ವೆಸ್ಟ್‌ ಮಾಡಿ ಮರೆತಿದ್ದ ಷೇರು ಮೊಮ್ಮಗಳಿಗೆ 1.72 ಕೋಟಿ ರೂಪಾಯಿ ಕೊಡ್ತು

Bengaluru News: ಷೇರುಪೇಟೆಯಲ್ಲಿ ಸಮಯ ಬಹಳ ಮುಖ್ಯ ಎನ್ನುವ ಅಂಶ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸಮಯದಲ್ಲಿ ಮಹಿಳೆಯೊಬ್ಬರಿಗೆ ತಮ್ಮ ತಾತನ ಷೇರು ಹೂಡಿಕೆಯ ಬಗ್ಗೆ ತಿಳಿದುಬಂತು. ಅದರ ಮೌಲ್ಯ ತಿಳಿದ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.

ಅಜ್ಜ ಇನ್ವೆಸ್ಟ್‌ ಮಾಡಿ ಮರೆತಿದ್ದ ಷೇರು ಮೊಮ್ಮಗಳನ್ನು ಕೋಟ್ಯಧಿಪತಿ ಮಾಡಿದ ಕಥೆಯಿದು; ಈ ಕಥೆ ಈಗ ವೈರಲ್
ಅಜ್ಜ ಇನ್ವೆಸ್ಟ್‌ ಮಾಡಿ ಮರೆತಿದ್ದ ಷೇರು ಮೊಮ್ಮಗಳನ್ನು ಕೋಟ್ಯಧಿಪತಿ ಮಾಡಿದ ಕಥೆಯಿದು; ಈ ಕಥೆ ಈಗ ವೈರಲ್

ಬೆಂಗಳೂರು: ಅದೃಷ್ಟವೊಂದು ಬೆನ್ನಟ್ಟಿ ಬಂದು ಹರಸಿದ ಕಥೆಯಿದು. ನಗರದ ನಿವಾಸಿ ಪ್ರಿಯಾ ಶರ್ಮಾ ಅವರು ಅನಿರೀಕ್ಷಿತವಾಗಿ ತಮ್ಮ ದಿವಂಗತ ಅಜ್ಜನ ಷೇರು ಹೂಡಿಕೆ ಕಂಡುಹಿಡಿದು ರಾತ್ರೋರಾತ್ರಿ ಕೋಟ್ಯಧಿಪತಿ ಎನಿಸಿಕೊಂಡರು. 2020 ರಲ್ಲಿ, ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಪ್ರಿಯಾ ಶರ್ಮಾ ಅವರಿಗೆ ತನ್ನ ಅಜ್ಜನ ಕೆಲ ಹೂಡಿಕೆಗಳ ಬಗ್ಗೆ ತಿಳಿಯಿತು. ತನ್ನ ಅಜ್ಜ 2004 ಲಾರ್ಸೆನ್ & ಟಬ್ರೊ (ಎಲ್ &ಟಿ) ಕಂಪನಿಯ 500 ಷೇರುಗಳನ್ನು ಖರೀದಿಸಿದ್ದ ವಿಚಾರ ತಿಳಿಯಿತು. ಈ ಷೇರುಗಳು 16 ವರ್ಷಗಳ ಅವಧಿಯಲ್ಲಿ ಹಲವು ಪಟ್ಟು ಏರಿಕೆ ಕಂಡಿತು. ಪ್ರತಿ ಷೇರಿನ ಬೆಲೆ 4,500 ಕ್ಕೆ ಜಿಗಿಯಿತು. ಅಷ್ಟೆ ಅಲ್ಲದೆ, ಈ ಷೇರುಗಳ ಹೂಡಿಕೆಯ ಮೌಲ್ಯವು 1.72 ಕೋಟಿ ರೂಪಾಯಿಗೆ ಮುಟ್ಟಿತು.

ಅಜ್ಜನ ಆಸ್ತಿ ಕಣ್ಣಿಗೆ ಕಾಣಿಸುತ್ತಿದ್ದಾದರೂ ಅದನ್ನು ದಕ್ಕಿಸಿಕೊಳ್ಳುವುದು ಪ್ರಿಯಾ ಶರ್ಮಾ ಪಾಲಿಗೆ ಸುಲಭವಾಗಿರಲಿಲ್ಲ. ಷೇರು ಹಸ್ತಾಂತರ ಪ್ರಕ್ರಿಯೆಗೆ ಒಂದಿಡೀ ವರ್ಷ ಹಿಡಿಯಿತು. ಮುಂಬೈ ಮೂಲದ ಉದ್ಯಮಿಯಾಗಿದ್ದ ಅವರ ಅಜ್ಜ ಹಲವು ಷೇರುಗಳಲ್ಲಿ ಹೂಡಿಕೆ ಮಾಡಿ ಹಾಗೆಯೇ ಬಿಟ್ಟಿದ್ದರು. ಅವರ ನಿಧನದ ನಂತರ, ಈ ಹೂಡಿಕೆಯ ಬಗ್ಗೆ ಯಾರಿಗೂ ಗಮನ ಇರಲಿಲ್ಲ. ಹೀಗೆ ಮಾರುಕಟ್ಟೆಯಲ್ಲಿದ್ದ ಹೂಡಿಕೆಯ ಹಣವು ಹಲವು ಪಟ್ಟು ಬೆಳೆಯಿತು.

2020 ರಲ್ಲಿ ಕೊವಿಡ್ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್ ಹೇರಿದ್ದ ಸಂಗತಿ ನಿಮಗೆ ನೆನಪಿರಬಹುದು. ಈ ಸಮಯದಲ್ಲಿ ಪ್ರಿಯಾ ಶರ್ಮಾ ಸಹ ಮನೆಯಲ್ಲಿಯೇ ಉಳಿದಿದ್ದರು. ನಿಧಾನವಾಗಿ ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದರು. ಆಗಲೇ ಪತ್ತೆಯಾಗಿದ್ದು ಇವರ ತಾತ ಖರೀದಿಸಿದ್ದ ‘ಎಲ್‌ ಅಂಡ್ ಟಿ’ ಷೇರುಗಳ ವಿಚಾರ. ಹಲವು ವರ್ಷಗಳಲ್ಲಿ ಬೋನಸ್ ಷೇರುಗಳ ಸೇರ್ಪಡೆ ಮತ್ತು ಮೌಲ್ಯ ವೃದ್ಧಿಯ ಕಾರಣದಿಂದ ಈ ಹೂಡಿಕೆಯು 9 ಪಟ್ಟು ಹೆಚ್ಚಾಗಿತ್ತು.

ತಾನು ಅಜ್ಜನ ಹೂಡಿಕೆಗೆ ಉತ್ತರಾಧಿಕಾರಿ ಎಂದು ಪ್ರತಿಪಾದಿಸುವುದು ಸುಲಭವಾಗಿರಲಿಲ್ಲ. ಅಜ್ಜನ ಆಸ್ತಿಗಳು ಮುಂಬೈನಲ್ಲಿ ನೆಲೆಗೊಂಡಿದ್ದರಿಂದ, ಪ್ರಿಯಾ ಶರ್ಮಾ ಅವರಿಗೆ ಬೆಂಗಳೂರಿನಿಂದ ಅವುಗಳನ್ನು ನಿರ್ವಹಿಸಲು ಸಮಸ್ಯೆಯಾಗುತ್ತಿತ್ತು. ಅಜ್ಜನ ನಿಧನ ನಂತರ ಅವರ ಉಯಿಲನ್ನು ಊರ್ಜಿತಕ್ಕೆ ತರಲು ಕಷ್ಟವಾಯಿತು. ಪ್ರೊಬೆಟ್ ಪ್ರಕ್ರಿಯೆ ಮೂಲಕ ಉತ್ತರಾಧಿಕಾರವನ್ನು ಪಡೆದುಕೊಳ್ಳಬೇಕಾಗಿದೆ ಎಂದು ಇದೀಗ ಪ್ರಕಟಗೊಂಡಿರುವ ವರದಿಗಳು ಹೇಳುತ್ತವೆ.

ಮೂಲ ದಾಖಲೆಗಳು ಮತ್ತು ಷೇರು ಪ್ರಮಾಣ ಪತ್ರಗಳು ತಮಗೆ ಸಿಗದ ಕಾರಣ ಪ್ರಿಯಾ ಶರ್ಮಾ ಅವರು ‘ಎಲ್ & ಟಿ’ ಕಂಪನಿಯ ಸಹಾಯ ಕೋರಿದರು. ಇಂತಹ ವಿಷಯಗಳಲ್ಲಿ ಪರಿಣತಿ ಹೊಂದಿರುವ ಶೇರ್ ಸಮಧಾನ್ ಎಂಬ ಸಂಸ್ಥೆಯು ವ್ಯಾಪಕ ಪರಿಶೀಲನಾ ಅವಶ್ಯಕತೆಗಳನ್ನು ನಿರ್ವಹಿಸಲು ಸಹಾಯ ಮಾಡಿತು.

ಶರ್ಮಾ ಅವರು ಕೆವೈಸಿ ವಿವರಗಳು, ಅಫಿಡವಿಟ್‌ಗಳು, ಹಣಕಾಸು ಖಾತರಿ, ವೈಯಕ್ತಿಕ ಪರಿಶೀಲನೆ ಸೇರಿದಂತೆ ಎಲ್‌ & ಟಿ ಕೋರಿದ ಹಲವು ದಾಖಲೆಗಳನ್ನು ಸಲ್ಲಿಸಿದರು. ಅಂತಿಮವಾಗಿ ಅವರ ಪ್ರತಿಪಾದನೆಯನ್ನು ಎಲ್‌ & ಟಿ ಪುರಸ್ಕರಿಸಿತು. ಇದರ ಫಲವಾಗಿ ಪ್ರಿಯಾ ಶರ್ಮಾ ಇದೀಗ ಕೋಟ್ಯಧಿಪತಿಯಾಗಿ ಹೊರಹೊಮ್ಮಿದ್ದಾರೆ.

Whats_app_banner