Chamarajanagar News: ಸತತ ನಾಲ್ಕು ಬಾರಿ ಪುಟ್ಟರಂಗಶೆಟ್ಟಿ ಗೆಲುವು, ಮಹಿಳೆಯರಿಂದ ನಂಜನಗೂಡಿಗೆ ಅಭಿಮಾನದ ಪಾದಯಾತ್ರೆ
Chamarajanagar News: ಉಪ್ಪಾರ ಸಮುದಾಯದ ನಾಯಕ ಸಿ ಪುಟ್ಟರಂಗಶೆಟ್ಟಿ ಅವರು ಸತತ 4ನೇ ಬಾರಿ ಕ್ಷೇತ್ರದಲ್ಲಿ ಗೆದ್ದ ಕಾರಣ ಮಹಿಳೆಯರು ಚಾಮರಾಜನಗರದಿಂದ ನಂಜನಗೂಡಿಗೆ ಪಾದಯಾತ್ರೆ ಬೆಳೆಸಿದ್ದಾರೆ.
ಚಾಮರಾಜನಗರ : ಉಪ್ಪಾರ ಸಮುದಾಯದ ನಾಯಕ ಸಿ ಪುಟ್ಟರಂಗಶೆಟ್ಟಿ ಅವರು ಸತತ 4ನೇ ಬಾರಿ ಕ್ಷೇತ್ರದಲ್ಲಿ ಗೆದ್ದ ಕಾರಣ ಮಹಿಳೆಯರು ಚಾಮರಾಜನಗರದಿಂದ ನಂಜನಗೂಡಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಸೋಮವಾರ ಸಂಜೆ 6 ಗಂಟೆಗೆ ನಗರದ ಎಲ್ಐಸಿ ಕಚೇರಿ ಬಳಿ ಜಮಾಯಿಸಿದ ಮಹಿಳೆಯರು ಶಾಸಕರಿಗೆ, ಪಕ್ಷದ ನಾಯಕರುಗಳಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಘೋಷಣೆ ಕೂಗುವುದರ ಮೂಲಕ ವಿಭಿನ್ನವಾಗಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.
ಅಪ್ಪ ನಾಲ್ಕು ಬಾರಿ ಗೆದ್ದಿದ್ದಕ್ಕೆ ಮುಡಿ ಕೊಟ್ಟ ಮಗ
ಚಾಮರಾಜನಗರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಇದ್ದ ಕಾರಣ ಪುಟ್ಟರಂಗಶೆಟ್ಟಿ ಅವರಿಗೆ ಗೆಲ್ಲುವ ಅವಕಾಶಗಳು ಕಡಿಮೆ ಇದ್ದವು. ಚುನಾವಣಾ ಎಕ್ಸಿಟ್ ಪೋಲ್ಗಳು ಕೂಡ ಹೀಗೆ ಬಣ್ಣಿಸಿದ್ದವು. ಆದರೂ ಕೂಡ ತಮ್ಮ ವರ್ಚಸ್ಸಿನಿಂದ ಮತ್ತು ಜನಹಿತ ಕಾರ್ಯಗಳಿಂದ ಚುನಾವಣಾ ಎಕ್ಸಿಟ್ ಪೋಲ್ಗಳನ್ನು ಸಹ ಉಲ್ಟಾ ಹೊಡೆಯುವಂತೆ ಮಾಡಿ ವಿ ಸೋಮಣ್ಣ ಅವರನ್ನು ಮಣಿಸಿ ನಾಲ್ಕು ಬಾರಿ ಚಾಮರಾಜನಗರ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಕಾರಣ ಪುಟ್ಟರಂಗಶೆಟ್ಟಿ ಅವರ ಮಗ ಕುಸುಮ ಮುಡಿಕೊಟ್ಟಿದ್ದಾರೆ.
ಚಾಮರಾಜನಗರದಲ್ಲಿ ಮೇ 17ಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿರುವ ಸೋಮಣ್ಣ
ಚಾಮರಾಜನಗರ : ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡ ವಿ.ಸೋಮಣ್ಣ ಅವರು ಮೇ17ಕ್ಕೆ ಚಾಮರಾಜನಗರ ಬಿಜೆಪಿ ಕಚೇರಿಗೆ ಆಗಮಿಸಿ ಮತ ನೀಡಿದ ಮತದಾರರಿಗೆ ಹಾಗೂ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸಲಿದ್ದಾರೆ. ವರುಣ ಕ್ಷೇತ್ರ ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಎರಡರಲ್ಲೂ ವಿ ಸೋಮಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ ಎರಡು ಕ್ಷೇತ್ರಗಳಲ್ಲಿ ಗೆಲುವು ಕಾಣಲು ಸಾಧ್ಯವಾಗಲಿಲ್ಲ.
ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಗೆ ಈ ಬಾರಿ ನೋಟಾಗಿಂತಲೂ ಕಡಿಮೆ ಮತ
ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರಿಗೆ ಈ ಬಾರಿ ನೋಟಾಗಿಂತಲೂ ಕಡಿಮೆ ಮತಗಳು ಬಿದ್ದಿವೆ.
ಈ ಬಾರಿ ಜನ ನನ್ನನ್ನು ಗೆಲ್ಲಿಸದೇ ಹೋದರೆ ಇನ್ಯಾವತ್ತೂ ಚಾಮರಾಜನಗರದ ಕಡೆ ಮುಖ ಮಾಡುವುದಿಲ್ಲ ಎಂದು ಹೇಳಿದ್ದ ವಾಟಾಳ್ ನಾಗರಾಜ್ ರವರಿಗೆ ದೊರಕಿದ್ದು ಕೇವಲ 658 ಮತ. ಈ ಕ್ಷೇತ್ರದಲ್ಲಿ ನೋಟಾ ಗೆ ಮತ ಒತ್ತಿದವರ ಸಂಖ್ಯೆ 794. ಹಿಂದೊಂದು ಬಾರಿ ಚಾಮರಾಜನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ನಡೆಸುವಲ್ಲಿ ಮತ್ತು ಕನ್ನಡ ಚಳುವಳಿಗಳಲ್ಲಿ ಹೋರಾಡುವುದರಲ್ಲಿ ಎಂದಿಗೂ ಅಗ್ರಗಣ್ಯ. 2018ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಾಟಾಳ್ ಅವರಿಗೆ ದೊರಕಿದ್ದು 5927 ಮತ. ಆದರೆ ಈ ಬಾರಿ ನೋಟಾಗಿಂತಲೂ ಕಡಿಮೆ ಮತ ಬಂದಿರುವುದು ವಿಷಾದನೀಯ.