ಕನ್ನಡ ಸುದ್ದಿ  /  ಕರ್ನಾಟಕ  /  Karnataka Sslc Exam -2 Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ, ವಿದ್ಯಾರ್ಥಿನಿಯರ ಮೇಲುಗೈ ಉತ್ತೀರ್ಣರಾದವರು ಎಷ್ಟು?

Karnataka SSLC Exam -2 Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ, ವಿದ್ಯಾರ್ಥಿನಿಯರ ಮೇಲುಗೈ ಉತ್ತೀರ್ಣರಾದವರು ಎಷ್ಟು?

Education News ಕರ್ನಾಟಕದಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ2 ರ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿನಿಯರೇ ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಫಲಿತಾಂಶ ಪ್ರಮಾಣ ಕಡಿಮೆಯಿದೆ.

ಕರ್ನಾಟಕ ಎಸ್‌ಎಸ್‌ ಎಲ್‌ ಸಿ 2 ಪರೀಕ್ಷೆಯಲ್ಲೂ ವಿದ್ಯಾರ್ಥಿನಯರೇ ಮೇಲುಗೈ ಸಾಧಿಸಿದ್ದಾರೆ.
ಕರ್ನಾಟಕ ಎಸ್‌ಎಸ್‌ ಎಲ್‌ ಸಿ 2 ಪರೀಕ್ಷೆಯಲ್ಲೂ ವಿದ್ಯಾರ್ಥಿನಯರೇ ಮೇಲುಗೈ ಸಾಧಿಸಿದ್ದಾರೆ.

ಬೆಂಗಳೂರು: ಕಳೆದ ತಿಂಗಳು ನಡೆದಿದ್ದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ-2 ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈಗಾಗಲೇ ತಿಳಿಸಿದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ(Karnataka School Examination and Assessment Board) ಫಲಿತಾಂಶವನ್ನು ಪ್ರಕಟಿಸಿದ್ದು, ಶೇ. 31.02ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 223293 ವಿದ್ಯಾರ್ಥಿಗಳಲ್ಲಿ 69275 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲೂ ಹೆಣ್ಣು ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗಿದ್ದಾರೆ. ಶೇ 38.48ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾದರೆ ಬಾಲಕರು ಶೇ. 26 .93ರಷ್ಟು ಮಾತ್ರ ಉತ್ತೀರ್ಣರಾಗಿದ್ದಾರೆ ಎಂದು ಮಂಡಲಿಯ ಅಧ್ಯಕ್ಷೆ ಎನ್‌.ಮಂಜುಳಾ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ2 ಅನ್ನು ನಿಗದಿತ ವೇಳಾಪಟ್ಟಿಯಂತೆಯೇ ನಡೆಸಲಾಗಿತ್ತು. ಒಟ್ಟು 724 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಜೂನ್‌ 14 ರಿಂದ ಒಂದು ವಾರ ಕಾಲ ವಿವಿಧ ವಿಷಯಗಳ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮೌಲ್ಯಮಾಪನವೂ ಜೂನ್‌ 26ರಂದು ಆರಂಭಗೊಂಡು ಐದು ದಿನ ಕಾಲ ನಡೆದಿತ್ತು. ಒಟ್ಟು 14 ಜಿಲ್ಲೆಗಳ 85 ಮೌಲ್ಯಮಾಪನ ಕೇಂದ್ರಗಳಲ್ಲಿ 21658 ಮೌಲ್ಯಮಾಪರು ಪಾಲ್ಗೊಂಡಿದ್ದರು.

ಯಾವ ವಿಷಯದಲ್ಲಿ ಎಷ್ಟು?

ಮೊದಲ ಭಾಷೆಯಲ್ಲಿ 223192 ವಿದ್ಯಾರ್ಥಿಗಳು ಹಾಜರಾಗಿದ್ದು, 118730 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ. 53.2

ಟ್ರೆಂಡಿಂಗ್​ ಸುದ್ದಿ

ಎರಡನೇ ಭಾಷೆಯಲ್ಲಿ222419 ವಿದ್ಯಾರ್ಥಿಗಳು ಹಾಜರಾಗಿದ್ದು, 106148ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ 47.72

ಮೂರನೇ ಭಾಷೆಯಲ್ಲಿ2222330 ವಿದ್ಯಾರ್ಥಿಗಳು ಹಾಜರಾಗಿದ್ದು, 113470 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ51.04

ಮೊದಲನೇ ವಿಷಯದಲ್ಲಿ 223218 ವಿದ್ಯಾರ್ಥಿಗಳು ಹಾಜರಾಗಿದ್ದು, 96951ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ 43.43

ಎರಡನೇ ವಿಷಯದಲ್ಲಿ223218 ವಿದ್ಯಾರ್ಥಿಗಳು ಹಾಜರಾಗಿದ್ದು, 84730 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ37.96

ಮೂರನೇ ವಿಷಯದಲ್ಲಿ223293 ವಿದ್ಯಾರ್ಥಿಗಳು ಹಾಜರಾಗಿದ್ದು, 113776ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಷಯದಲ್ಲಿ ಉತ್ತೀರ್ಣ ಪ್ರಮಾಣ ಶೇ 50.95

ಬಾಲಕಿಯರೇ ಮುಂದೆ

ಈ ಬಾರಿ ಒಟ್ಟು 144153 ಬಾಲಕರು ಪರೀಕ್ಷೆ ಎದುರಿಸಿ 38820 ಬಾಲಕರು ತೇರ್ಗಡೆಯಾಗಿದ್ದಾರೆ. ಅದೇ ರೀತಿ ಒಟ್ಟು 79140 ಬಾಲಕರಿಯನ್ನು ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣರಾಗಿದ್ದು 30455. ಪರೀಕ್ಷೆಗೆ ಹಾಜರಾದ ಸಂಖ್ಯೆಯಲ್ಲಿ ಬಾಲಕರಿದ್ದರೂ ಬಾಲಕಿಯರೇ ಹೆಚ್ಚು ಫಲಿತಾಂಶ ಪಡೆದುಕೊಂಡಿದ್ದಾರೆ.

ನಗರದವರೇ ಮುಂದೆ

ಪರೀಕ್ಷೆಗೆ ಹಾಜರಾಗಿದ್ದ ನಗರ ಪ್ರದೇಶದ 89691 ವಿದ್ಯಾರ್ಥಿಗಳಲ್ಲಿ 27955 ವಿದ್ಯಾರ್ಥಿಗಳು ಶೇ 31.17 ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ.

ಅದೇ ರೀತಿ ಪರೀಕ್ಷೆ ಎದುರಿಸಿದ ಗ್ರಾಮೀಣ ಪ್ರದೇಶದ 133602 ವಿದ್ಯಾರ್ಥಿಗಳಲ್ಲಿ 41320 ವಿದ್ಯಾರ್ಥಿಗಳು ಶೇ 30.93 ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದು ನಗರ ಪ್ರದೇಶದವರೇ ಮುಂದಿದ್ದಾರೆ.

ಶಾಲಾವಾರು ತೇರ್ಗಡೆ

ಇನ್ನು ಕರ್ನಾಟಕದ 5401 ಸರ್ಕಾರಿ ಶಾಲೆಗಳ 110654 ಮಕ್ಕಳು ಪರೀಕ್ಷೆ ಎದುರಿಸಿ ಅದರಲ್ಲಿ 32570 ಮಕ್ಕಳು ಶೇ. 29.43 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಕರ್ನಾಟಕದ 3503 ಅನುದಾನಿತ ಶಾಲೆಗಳ 66712 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 19154 ವಿದ್ಯಾರ್ಥಿಗಳು ಶೇ. 28.71ದೊಂದಿಗೆ ಪಾಸಾಗಿದ್ದಾರೆ.

ಅದೇ ರೀತಿ ಕರ್ನಾಟಕದ 5315 ಅನುದಾನ ರಹಿತ ಶಾಲೆಗಳ ಒಟ್ಟು 45927 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅದರಲ್ಲಿ 17551 ಮಕ್ಕಳು ಶೇ. 38.21 ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.

ಮಾಧ್ಯಮವಾರು ಎಷ್ಟು

ಕನ್ನಡ ಮಾಧ್ಯಮದಲ್ಲಿಯೇ 159299 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 44097 ವಿದ್ಯಾರ್ಥಿಗಳು ಶೇ. 27.68ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿಯೇ 52476 ದ್ಯಾರ್ಥಿಗಳು ಪರೀಕ್ಷೆ ಎದುರಿಸಿ 21193 ವಿದ್ಯಾರ್ಥಿಗಳು ಶೇ. 40.39ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಉರ್ದು ಮಾಧ್ಯಮದಲ್ಲಿಯೇ8180 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ2985ವಿದ್ಯಾರ್ಥಿಗಳು ಶೇ.36.49ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಮರಾಠಿ ಮಾಧ್ಯಮದಲ್ಲಿಯೇ3212 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 964 ವಿದ್ಯಾರ್ಥಿಗಳು ಶೇ.30.01ದೊಂದಿಗೆ ಉತ್ತೀರ್ಣರಾಗಿದ್ದಾರೆ.

ತೆಲುಗು ಮಾಧ್ಯಮದಲ್ಲಿಯೇ 53 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ12 ವಿದ್ಯಾರ್ಥಿಗಳು ಶೇ.22.64ದೊಂದಿಗೆ ಉತ್ತೀರ್ಣರಾಗಿದ್ದಾರೆ.

ತಮಿಳು ಮಾಧ್ಯಮದಲ್ಲಿಯೇ 34 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ10 ವಿದ್ಯಾರ್ಥಿಗಳು ಶೇ.29.41ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಹಿಂದಿ ಮಾಧ್ಯಮದಲ್ಲಿಯೇ 39 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 14 ವಿದ್ಯಾರ್ಥಿಗಳು ಶೇ.35.09ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಎಂಟು ಮಾಧ್ಯಮದಲ್ಲಿಯೇ 223293 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 69275 ವಿದ್ಯಾರ್ಥಿಗಳು ಶೇ. 31.02ದೊಂದಿಗೆ ಉತ್ತೀರ್ಣರಾಗಿದ್ದಾರೆ.

ಫಲಿತಾಂಶ ನೋಡುವುದು ಹೇಗೆ?

ಫಲಿತಾಂಶ ನೋಡುವುದು ಹೇಗೆ?

kseab.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

https://www.karresults.nic.in ಅನ್ನು ಕ್ಲಿಕ್‌ ಮಾಡಿ.

ಹೋಮ್‌ ಪೇಜ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಫಲಿತಾಂಶದ ಲಿಂಕ್‌ ಕ್ಲಿಕ್‌ ಮಾಡಿ

ಸ್ಕ್ರೀನ್‌ನಲ್ಲಿ ಹೊಸ ಪುಟ ಕಾಣಿಸುತ್ತದೆ

ನಿಮ್ಮ ರೋಲ್‌ ನಂಬರ್‌, ಜನ್ಮ ದಿನಾಂಕ ಸೇರಿದಂತೆ ಅಲ್ಲಿ ಕೇಳಲಾಗುವ ಮಾಹಿತಿಯನ್ನು ನಮೂದಿಸಿ

ಸ್ಕ್ರೀನ್‌ ಮೇಲೆ ನಿಮ್ಮ ಫಲಿತಾಂಶ ಕಾಣುತ್ತದೆ

ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿ ಅಥವಾ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ