ಕನ್ನಡ ಸುದ್ದಿ  /  ಕರ್ನಾಟಕ  /  Prajwal Revanna: ಪ್ರಜ್ವಲ್‌ರೇವಣ್ಣ ವಿಡಿಯೋ ಬಿಡುಗಡೆ ನಂತರ ನೆಟ್ಟಿಗರ ಪ್ರತಿಕ್ರಿಯೆ ಏನು?

Prajwal Revanna: ಪ್ರಜ್ವಲ್‌ರೇವಣ್ಣ ವಿಡಿಯೋ ಬಿಡುಗಡೆ ನಂತರ ನೆಟ್ಟಿಗರ ಪ್ರತಿಕ್ರಿಯೆ ಏನು?

Hassan Scandal ಪ್ರಜ್ವಲ್‌ ರೇವಣ್ಣ( Prajwal Revanna) ವಿಡಿಯೋ ಬಿಡುಗಡೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಜ್ವಲ್‌ ರೇವಣ್ಣ ಹೇಳಿಕೆಗೆ ನೆಟ್ಟಿಗರೂ ಪ್ರತಿಕ್ರಿಯಿಸಿದ್ದಾರೆ.
ಪ್ರಜ್ವಲ್‌ ರೇವಣ್ಣ ಹೇಳಿಕೆಗೆ ನೆಟ್ಟಿಗರೂ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿಡಿಯೋ ಮೂಲಕ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ. ಇನ್ನು ನಾಲ್ಕು ದಿನದಲ್ಲಿ ಬಂದು ವಿಚಾರಣೆಗೆ ಹಾಜರಾಗುವೆ. ನನ್ನ ವಿರುದ್ದ ದಾಖಲಾಗಿರುವುದು ಸುಳ್ಳು ಪ್ರಕರಣಗಳು. ಇದರ ಹಿಂದೆ ರಾಜಕೀಯ ಇರುವುದು ಸ್ಪಷ್ಟ. ನನ್ನ ರಾಜಕೀಯ ಜೀವನ ಕೊನೆಗಾಣಿಸಲೆಂದೇ ಕೆಲವರು ಮಾಡಿರುವ ಪಿತೂರಿ ವಿರುದ್ದ ಉತ್ತರ ನೀಡುವೆ ಎಂದು ಪ್ರಜ್ವಲ್‌ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಪ್ರಜ್ವಲ್‌ ಬಿಡುಗಡೆ ಮಾಡಿರುವ ವಿಡಿಯೋಗೆ ನೆಟ್ಟಿಗರು ಭರ್ಜರಿ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ಮೊದಲು ಬಂದು ಶರಣಾಗಿ ನಂತರ ಹೇಳಿಕೆ ನೀಡಬೇಕು ಎಂದು ಕೆಲವರು ಹೇಳಿದ್ದಾರೆ. ಇದನ್ನೆಲ್ಲಾ ಎದುರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಮತ್ತೆ ಕೆಲವರು ಬೆಂಬಲ ಕೂಡ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಷ್ಣು ಚೇತನ್ ಗೌಡ ಎಂಬುವವರು. ಯಾವಾಗ ಕೇಂದ್ರ ಸರ್ಕಾರ ಕ್ರಮ ತೆಗೆದು ಕೊಳ್ಳಲು ಮುಂದಾಯಿತೋ ಅದಿಕ್ಕೆ ಈ ವಿಡಿಯೋ ಬಂದಿದೆ ಅಷ್ಟೇ, ಒಟ್ಟಾರೆ ದೇವೇಗೌಡರ ಮಾನ ಹಾನಿ ಮಾಡಿದ್ದ ದಾರಿ ತಪ್ಪಿದ ಮೊಮ್ಮಗ ಎಂದು ಟೀಕಿಸಿದ್ದಾರೆ.

ಬಸು ನಾಯಕ ಎನ್ನುವವರ ಪ್ರತಿಕ್ರಿಯೇ ಹೀಗಿದೆ. ಪ್ರಜ್ವಲ್ ಅವ್ರೇ! ನಾಟಿ ಕೋಳಿಗೂ, ಬಾಯ್ಲರ್ ಕೋಳಿಗೂ ರುಚಿಯಲ್ಲಿ ವ್ಯತ್ಯಾಸ ಕಂಡಿರಬೇಕು ಅಲ್ವಾ! ನಿಮ್ದು ದೊಡ್ಡವರದೆಲ್ಲಾ ಮೊದಲೇ ಕಾರ್ಯಕ್ರಮ ಫಿಕ್ಸ್ ಇರುತ್ತೆ ಬಿಡಿ... ಇವರೆಲ್ಲಾ ಪಿತೂರಿ ಮಾಡ್ತಾರೆ ಅಷ್ಟೇ... ನಿಮ್ಮ ರೆಂಜಿಗೆ ಯಾರು ಇಲ್ಲ ಬಿಡಣ್ಣ ಎಂದು ಕಾಲು ಎಳೆದಿದ್ದಾರೆ/

ಜವಳಿನಾಥ್ ಮಲ್ಲಿ ಎನ್ನುವವರ ಪ್ರತಿಕ್ರಿಯೇ ಕಾರವಾಗಿಯೇ ಇದೆ. ಪ್ರಜ್ವಲ್ ದಯವಿಟ್ಟು ಬನ್ನಿ ಕಾನೂನಿಗೆ ಎಲ್ಲರೂ ತಲೆ ಬಾಗಿಲೇ ಬೇಕು ಕಾನೂನುಗಿಂತ ದೊಡ್ಡವರು ಯಾರು ಇಲ್ಲಾ ನಿಮ್ಮಿಂದ ನಿಮ್ಮ ಕುಟುಂಬದ ತೇಜೋವಧೆ ಮಾಡುವ ಮೂಲಕ ವಿಪಕ್ಷಗಳಿಗೆ ಒಂದು ಅಸ್ತ್ರ ಸಿಕ್ಕಿದ್ದು ನಿಮ್ಮ ಮೇಲೆ ಒಂದು ದೊಡ್ಡದಾದ ಆಪಾದನೆ ಅಂತ ಇದ್ದೆ ಇದೆ ಆ ಆಪಾದನೆ ನ್ಯಾಯಾಲಯದಲ್ಲಿ ನಿರಪರಾಧಿ ಅಂದಮೇಲೆ ನೀವು ಕಳಂಕ ರಹಿತ ಪ್ರಜ್ವಲ್ ಆಗ್ತಾರಾ. ಅಲ್ಲಿಯತನಕ ಆದರೆ ನೀವು ಅಪರಾಧಿ ಒಟ್ಟಿನಲ್ಲಿ ಚುನಾವಣೆಗೆ ಗೋಸ್ಕರ ಯಾರೊ ಮಾಡಿದ ರಾಜಕೀಯ ಯಡವಟ್ಟಿನಿಂದ ಆ ಸಹೋದರಿಯರ ಮಾನ ಮರ್ಯಾದೆ ನೀವು ಯಾರು ವಾಪಸ್ ತಂದುಕೊಡಲು ಆಗುವುದಿಲ್ಲ ಇಂತಹ ಘಟನೆಗಳು ಮುಂದೆ ಎಲ್ಲಿ ಕೂಡಾ ನಡೆಯಕೂಡದು ತಪ್ಪು ಯಾರೇ ಮಾಡಲಿ ಅವರಿಗೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.

ಪುಟ್ಟೇಗೌಡ ಅವರು ಪ್ರಜ್ವಲ್‌ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ದೇಶದಲ್ಲಿ ನೀನು ಮಾಡಬಾರದು ಏನು ಮಾಡಿಲ್ಲ ನಿಮ್ಮೊಂದಿಗೆ ಜೆಡಿಎಸ್ ಕಾರ್ಯಕರ್ತರು ಹಳ್ಳಿಯ ಜನ ಇದ್ದಾರೆ ಬನ್ನಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸೋಣ ಎಂದು ಹೇಳಿದ್ದಾರೆ.

ದೇವರಾಜು ಎಂಬುವವರು ಕರ್ನಾಟಕ ಜನರ ಹೆಣ್ಣುಮಕ್ಕಳ ಮಾನ ಮರ್ಯಾದೆಯಲ್ಲ ಹಾಳು ಮಾಡಿ ವಿಡಿಯೋ ಮಾಡಿರೋದು ಪಿತೂರಿನ ವಿಡಿಯೋದಲ್ಲಿರುವ ಹೆಣ್ಣು ಎಷ್ಟು ಜನ ಹೆಣ್ಣುಮಕ್ಕಳ ಬಾಳ ಹಾಳು ಮಾಡಿದೆ ಮಕ್ಕಳು ಅದು ಪಿತೂರಿನ ನಿಮ್ಮ ಜೆಡಿಎಸ್ ಪಕ್ಷ ನಿಮ್ಮ ತಾತ ಹಗಲಿರುಳು ಸಂಘಟನೆ ಮಾಡಿ ಪಕ್ಷ ಕಟ್ಟಿದರು ಕ್ಷಣಮಾತ್ರದಲ್ಲಿ ಪಕ್ಷವನ್ನು ನಿರ್ನಾಮ ಮಾಡಿದ ಮೊಮ್ಮಗ ಎಂದು ಕಟಕಿಯಾಡಿದ್ದಾರೆ.

ನಿಜವಾದ ಜನ ನಾಯಕ ಅಂದ್ರೆ ನೀನೇ ಕಣಯ್ಯ, ಮಾಡೋ ಕಚಡಾ ಕೆಲಸ ಎಲ್ಲ ಮಾಡಿ 1ತಿಂಗಳು ಆದ ಮೇಲೆ ಬಂದು ಪಿತೂರಿ ಅಂತಿಯಲ್ಲ ನಾಚಿಕೆ ಮಾನ ಮರ್ಯಾದೆ ಇಲ್ವಾ ಎನ್ನುವುದು ಮಹೇಶ್‌ ಎಂಬುವವರ ನೇರವಾದ ಟೀಕೆ.

ಎಲ್ಲಾ ವ್ಯವಸ್ಥೆ ಮಾಡಿಕೊಂಡು ಬರಲು ಇಷ್ಟು ಟೈಮ್ ತಗೊಂಡಿದ್ದಾನೆ. ಎಲ್ಲಾ ಕೃಪಾಪೋಷಿತ ನಾಟಕ ಮಂಡಳಿ ಯ ಪ್ರಕಾರ ಈಗ ಡೈಲಾಗ್ ಹೇಳ್ತಿದಾನೇ ಅಷ್ಟೇ.

ಪಾಪ ಆಘಾತ ಆಗಿದೆಯಂತೆ, ಈ ಆಘಾತದಿಂದ ಬೇಗ ಹೊರಗೆ ಬಾಪ ಪ್ರಜ್ವಲ್‌ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಟಿ20 ವರ್ಲ್ಡ್‌ಕಪ್ 2024