ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್; ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದ ಅರ್ಥವೇನು?
ಕನ್ನಡ ಸುದ್ದಿ  /  ಕರ್ನಾಟಕ  /  ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್; ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದ ಅರ್ಥವೇನು?

ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್; ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದ ಅರ್ಥವೇನು?

Haveri News: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್ ಎಂದು ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದಿದ್ದಾರೆ. ಅದರ ಅರ್ಥ ಹೀಗಿದೆ.

ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್; ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದ ಅರ್ಥವೇನು?
ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್; ರೈತರು, ರಾಜಕೀಯದ ಬಗ್ಗೆ ಕಾರ್ಣಿಕ ನುಡಿದ ಅರ್ಥವೇನು?

ಹಾವೇರಿ: ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಐತಿಹಾಸಿಕ ದೇವರಗುಡ್ಡದ ಮಾಲತೇಶಸ್ವಾಮಿ ದೇವಾಲಯವೂ ಒಂದು. ಇದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿದೆ. ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ವೇಳೆ ಕಾರ್ಣಿಕ ನಡೆದಿದ್ದು, ‘ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್’ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು 9 ದಿನಗಳ ಕಾಲ ಉಪವಾಸವಿದ್ದು, ಇಂದು 18 ಅಡಿ ಬಿಲ್ಲನ್ನೇರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭವಿಷ್ಯವಾಣಿ ನುಡಿದಿದ್ದಾರೆ.

ಗೊರವಯ್ಯ ನಾಗಪ್ಪಜ್ಜ ಉರ್ಮಿ ನುಡಿದ ಕಾರ್ಣಿಕದ ಅರ್ಥವೇನು ಎಂದು ದೇವರಗುಡ್ಡದಲ್ಲಿ ಮಾಲತೇಶಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ವಿವರಿಸಿದ್ದಾರೆ. ಆಕಾಶದತ್ತ ಚಿಗುರಿತಲೇ ಎಂದರೆ ಒಳ್ಳೆ ಮಳೆ ಆಗುತ್ತದೆ, ಬೇರು ಮುದ್ದಾಯಿತಲೇ ಎಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತದೆ, ಅದನ್ನು ಪಡೆಯುವ ಫಲಾನುಭವಿಗಳಿಗೂ ಒಳ್ಳೆದಾಗುತ್ತದೆ ಎಂದು ವಿವರಿಸಿದ್ದಾರೆ. ಒಳ್ಳೆ ಮಳೆ ಬೆಳೆಯ ಜೊತೆಗೆ ರೈತರಿಗೂ ಶುಭವಾಗಲಿದೆ ಎನ್ನುವುದು ಅದರ ಅರ್ಥ.

ಸಂತೋಷ್ ಭಟ್ ಗುರೂಜಿ ಅವರು ರಾಜಕೀಯ ಅನಾಹುತದ ಕುರಿತೂ ವಿವರಿಸಿದ್ದಾರೆ. ಕಾರ್ಣಿಕವನ್ನು ರಾಜಕೀಯಕ್ಕೆ ಹೇಳುವುದಾದರೆ, ಆಕಾಶದತ್ತ ಚಿಗರಿತಲೇ ಎಂದರೆ, ಪ್ರಸ್ತುತ ನಾಯಕತ್ವ ಆಕಾಶದತ್ತ ಚಿಗುರಿ ಬಿಟ್ಟಿದೆ. ಬೇರು ಮುದ್ದಾಯಿತಲೇ ಎಂದರೆ, ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರುವುದು ಯಾರೆಂಬುದು ನಿಮಗೆಲ್ಲಾ ಗೊತ್ತಿದೆ. ಕಾನೂನು ವ್ಯವಸ್ಥೆಯಲ್ಲಿ ಏನೇ ಬದಲಾದರೂ ಪ್ರಸ್ತುತ ನಾಯಕತ್ವ ಹೇಳಿದಂತೆ ಅವರು ಒಪ್ಪುತ್ತಾರೆ ಎನ್ನುವ ಅರ್ಥ ನೀಡುತ್ತದೆ. ಬೇರುಗಳೆಲ್ಲಾ ಮುದ್ದಾಯಿತಲೇ ಎಂದರೆ ಆಕಾಶದತ್ತ ಚಿಗುರಿರುವ ಗಿಡ ಹೇಳಿದಂತೆ ಬೇರುಗಳು‌ ಒಪ್ಪಿಕೊಳ್ಳುತ್ತವೆ ಎಂದು ಸಂತೋಷ ಭಟ್ಟ ಗುರೂಜಿ ಹೇಳಿದ್ದಾರೆ.

Whats_app_banner