Hubli Crime: ಜಾಗ ಕೊಡಿಸುವ ನೆಪದಲ್ಲಿ ಹುಬ್ಬಳ್ಳಿ ಪೊಲೀಸ್ ಅಧಿಕಾರಿಗೆ ಭಾರೀ ವಂಚನೆ
Hubli Crime News ಹುಬ್ಬಳ್ಳಿ ನಗರದಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಪೊಲೀಸ್ ಅಧಿಕಾರಿಯೊಬ್ಬರಿಂದ ಹಣ ಪಡೆದು ವ್ಯಕ್ತಿಯೊಬ್ಬ ವಂಚಿಸಿರುವ ಪ್ರಕರಣ ನಡೆದಿದೆ.
ಹುಬ್ಬಳ್ಳಿ: ಸಾಮಾನ್ಯರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ನಿವೇಶವ ಖರೀದಿ ವಿಚಾರದಲ್ಲಿ ವಂಚನೆಗೊಳಗಾದ ಪ್ರಕರಣವಿದು. ವಾಣಿಜ್ಯ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿಯೊಬ್ಬರು ಭಾರೀ ವಂಚನೆಗೊಳಗಾಗಿ ಠಾಣೆ ಮೆಟ್ಟಿಲು ಏರಿದ್ದಾರೆ.
ನಗರದ ಮಂಜುನಾಥ ಮಳಿಮಠ ಎಂಬುವವರೇ 14.38 ಲಕ್ಷ ರೂ.ವಂಚನೆಗೊಳಗಾದ ಪೊಲೀಸ್ ಅಧಿಕಾರಿಯಾಗಿದ್ದಾರೆ,
ಸಂತೋಷ ಹಾವೇರಿಶೆಟ್ಟರ ಎಂಬ ಹೆಸರು ಹೇಳಿಕೊಂಡು ಅಪರಿಚಿತ ವ್ಯಕ್ತಿ ಇವರಿಗೆ ವಾಟ್ಸ್‌ಆ್ಯಪ್ ಮೂಲಕ ಪರಿಚಯವಾಗಿದ್ದಾರೆ. ಬಳಿಕ ಕಡಿಮೆ ಬೆಲೆಗೆ ಖಾಲಿ ಜಾಗ ಕೊಡಿಸುವುದಾಗಿ ನಂಬಿಸಿದ್ದಾರೆ. ಇದಾದ ನಂತರ ಪೊಲೀಸ್ ಅಧಿಕಾರಿಯ ವಿವಿಧ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಬಗ್ಗೆ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಡೇಟ್ ನೆಪದಲ್ಲಿ ವಂಚನೆ
ಲಿಂಕ್ ಅಪಡೇಟ್ ಆಗಿಲ್ಲ ಎಂದು ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತರು, ಅಪಡೇಟ್ ಮಾಡುವ ನೆಪದಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿಸಿ ಅವರ ಬ್ಯಾಂಕ್ ಖಾತೆಯಿಂದ 56,678 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.
ಹೊಸೂರಿನ ವಿಕಾಸ ನಗರದ ನಿವಾಸಿ, ತ್ರಿಪುರಾದ ವೈದ್ಯ ರಾಜ್‌ದೇಬ್‌ಎಂಬುವರಿಗೆ ವಿದ್ಯುತ್ ಬಿಲ್ ಹೆಸರಿನಲ್ಲಿ ಅಪರಿಚಿತರು ವಂಚಿಸಿದ್ದಾನೆ. ರಾಜ್‌ಅವರ ಮೊಬೈಲ್‌ಸಂಖ್ಯೆಗೆ, ಕಳೆದ ತಿಂಗಳು ವಿದ್ಯುತ್‌ಬಿಲ್‌ಕಟ್ಟದ ಕಾರಣ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ತಕ್ಷಣ ಕಚೇರಿ ಸಂಖ್ಯೆ ಸಂಪರ್ಕಿಸಬೇಕು’ ಎಂಬ ಸಂದೇಶ ಬಂದಿದೆ. ಅವರು ಹೆಸ್ಕಾಂ ವೆಬ್‌ಸೈಟ್‌ಮೂಲಕ ಬಿಲ್‌ಪಾವತಿಸಿದ್ದಾರೆ.
ಕೆಲ ಸಮಯದ ನಂತರ ಬೇರೆ ಸಂಖ್ಯೆಯಿಂದ ಕರೆ ಮಾಡಿರುವ ವ್ಯಕ್ತಿ ನಿಮ್ಮ ಬಿಲ್‌ಪಾವತಿಯಾಗಿಲ್ಲ ಎಂದು ಲಿಂಕ್‌ಕಳಿಸಿದ್ದಾನೆ. ಅದನ್ನು ಕ್ಲಿಕ್‌ಮಾಡಿರುವ ರಾಜ್‌ಅವರು ಫಾರ್ಮ್‌ತುಂಬಿ 10 ರೂ. ಪಾವತಿಸಿದ್ದಾರೆ.
ಬಳಿಕ ಅವರ ಖಾತೆಯಿಂದ ಆನ್‌ಲೈನ್‌ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲಬಾಧೆ: ರೈತ ಆತ್ಮಹತ್ಯೆ
ಸಾಲಬಾಧೆಯಿಂದ ಮನನೊಂದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಹಿಂಡಸಗೇರಿ ಗ್ರಾಮದ ನಿವಾಸಿ ಕಲ್ಲಪ್ಪ ಮಾಚಾಪುರ (85) ಮೃತ ದುರ್ದೈವಿ. ಗಂಜಿಗಟ್ಟಿ ಗ್ರಾಮದ ಬರೋಡಾ ಬ್ಯಾಂಕಿನಲ್ಲಿ 8 ಲಕ್ಷ ಹಾಗೂ ಕೈಗಡ ಸಾಲ 3 ಲಕ್ಷ ಸಾಲ ಮಾಡಿದ್ದರು. ಈ ಬಾರಿ ಮಳೆ ಬಾರದ ಹಿನ್ನೆಲೆ ಬೆಳೆ ಕೈಕೊಟ್ಟಿದೆ. ಇದರಿಂದ ಮನನೊಂದು ರೈತ ತನ್ನ ಜಮೀನಿನ ಮರವೊಂದಕ್ಕೆ ನೇಣು ಹಾಕಿಕೊಂಡ ಮೃತಪಟ್ಟಿದ್ದಾನೆ.
ಈ ಕುರಿತು ಮೃತ ರೈತನ ಪುತ್ರ ಗುರುಸಿದ್ದಪ್ಪ ಮಾಚಾಪುರ ಕಲಘಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಪಘಾತದಲ್ಲಿ ಯುವಕ ಸಾವು
ಹುಬ್ಬಳ್ಳಿ ತಾಲೂಕಿನ ನೂಲ್ಲಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಟಾಟಾಏಸ್ ನಡುವೆ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಆಕಾಶ ಹಾಲಹರವಿ(21) ಮೃತ ದುರ್ದೈವಿ.
ಅರ್ಜುನ ನಂದೆನ್ನವರ ಎಂಬಾತ ಟಾಟಾಏಸ್ ವಾಹನ ಅತೀ ವೇಗವಾಗಿ ಓಡಿಸಿಕೊಂಡು ಹೋಗಿ ಹುಬ್ಬಳಿಯಿಂದ ಹಾವೇರಿ ಕಡೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಮೇಲೆ ಇದ್ದ ಸವಾರರಿಗೆ ಗಂಭೀರವಾಗಿ ಗಾಯವಾಗಿದ್ದು, ಚಿಕಿತ್ಸೆಗೆ ಕಿಮ್ಸ್‌ಗೆ ರವಾನಿಸುವಾಗ ಮಾರ್ಗ ಮಧ್ಯೆ ಆಕಾಶ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ರಾಜು ಅಂಬಿಗೇರ ಗಾಯಗೊಂಡಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.