ಬೆಂಗಳೂರು ಇರೋದು ಭಾರತದಲ್ಲೇ; ಹೊಸ ಸಿಲಿಕಾನ್ ವ್ಯಾಲಿ ಪ್ರಸ್ತಾಪಿಸಿದ ಪಿಯೂಷ್ ಗೋಯಲ್ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿ-industries minister mb patil slams piyush goyal on his new silicon valley claim says bengaluru is in india jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಇರೋದು ಭಾರತದಲ್ಲೇ; ಹೊಸ ಸಿಲಿಕಾನ್ ವ್ಯಾಲಿ ಪ್ರಸ್ತಾಪಿಸಿದ ಪಿಯೂಷ್ ಗೋಯಲ್ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿ

ಬೆಂಗಳೂರು ಇರೋದು ಭಾರತದಲ್ಲೇ; ಹೊಸ ಸಿಲಿಕಾನ್ ವ್ಯಾಲಿ ಪ್ರಸ್ತಾಪಿಸಿದ ಪಿಯೂಷ್ ಗೋಯಲ್ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿ

MB Patil on Piyush Goyal: ಉದ್ಯಾನ ನಗರಿ ಬೆಂಗಳೂರಿನಂತಹ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ದಶಕಗಳೇ ಬೇಕು ಎಂದ ಸಚಿವ ಎಂಬಿ ಪಾಟೀಲ್ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ. ಭಾರತದಲ್ಲಿ ಬೆಂಗಳೂರು ಇರುವಾಗ ಮತ್ತೊಂದು ಸಿಲಿಕಾನ್‌ ವ್ಯಾಲಿ ಬೇಕಿಲ್ಲ ಎಂದು ಹೇಳಿದ್ದಾರೆ.

ಹೊಸ ಸಿಲಿಕಾನ್ ವ್ಯಾಲಿ ಪ್ರಸ್ತಾಪಿಸಿದ ಪಿಯೂಷ್ ಗೋಯಲ್ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿ
ಹೊಸ ಸಿಲಿಕಾನ್ ವ್ಯಾಲಿ ಪ್ರಸ್ತಾಪಿಸಿದ ಪಿಯೂಷ್ ಗೋಯಲ್ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿ

ಕರ್ನಾಟಕದ ರಾಜಧಾನಿ ಬೆಂಗಳೂರು, ಜಾಗತಿಕ ಮಟ್ಟದಲ್ಲಿ ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಟಿ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮನ್ನಣೆ ಪಡೆದಿರುವ ಉದ್ಯಾನ ನಗರಿಗೆ ಸಿಲಿಕಾನ್‌ ವ್ಯಾಲಿ ಎಂಬ ಹೆಸರು ಅರ್ಥಪೂರ್ಣ. ಆದರೆ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಹೊಸ ರಾಗ ಎಳೆದಿದ್ದು ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ಹೊರತಾಗಿ ಭಾರತಕ್ಕೆ ಹೊಸ ಸಿಲಿಕಾನ್ ವ್ಯಾಲಿ ಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಆದರೆ, ಇದಕ್ಕೆ ಕರ್ನಾಟಕ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.ಕೇಂದ್ರ ಸಚಿವರ ಹೇಳಿಕೆಯನ್ನು ಖಂಡಿಸಿರುವ ಪಾಟೀಲ್, ಉದ್ಯಾನ ನಗರಿ ಬೆಂಗಳೂರಿನಂತಹ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಿಮಗೆ ಶಕಗಳೇ ಬೇಕು ಎಂದು ಟಾಂಗ್‌ ಕೊಟ್ಟಿದ್ದಾರೆ.

ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರವು ತನ್ನ ಪರಿಸರ ವ್ಯವಸ್ಥೆ ಹಾಗೂ ತಂಪಾದ ವಾತಾವರಣದಿಂದ ಹೆಸರುವಾಸಿ. ಬೆಂಗಳೂರಿನಂಥ ಸಮತೋಲಿತ ವಾತಾವರಣ ಹೊಂದಿದ ನಗರ ಭಾರತದಲ್ಲಿ ಬೇರೆ ಇಲ್ಲ. ಹೀಗಾಗಿ ಬೆಂಗಳೂರು ನಗರುವು ದಶಕಗಳ ಹಿಂದೆಯೇ ಸಿಲಿಕಾನ್‌ ಸಿಟಿಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಹೊಸದಾಗಿ ಸಿಲಿಕಾನ್‌ ವ್ಯಾಲಿ ನಿರ್ಮಿಸುವ ಬದಲಿಗೆ ಬೆಂಗಳೂರಿನ ಅಭಿವೃದ್ಧಿಗೆ ಕೈಜೋಡಿಸುವಂತೆ ಪಿಯೂಷ್ ಗೋಯಲ್ ಅವರಲ್ಲಿ ಪಾಟೀಲ್ ಒತ್ತಾಯಿಸಿದರು.

ಪಿಯೂಷ್ ಗೋಯಲ್ ಹೇಳಿದ್ದು ಹೀಗೆ

“ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ನನಗೆ ಗೊತ್ತಿದೆ. ಆದರೆ ಭಾರತಕ್ಕೆ ನಮ್ಮದೇ ಆದ ಸಿಲಿಕಾನ್ ವ್ಯಾಲಿಯನ್ನು ರಚಿಸುವ ಸಮಯ ಬಂದಿದೆ. ಉದ್ಯಮಿಗಳು, ನವೋದ್ಯಮಗಳು, ಆವಿಷ್ಕಾರಕರಗಳಿಗಾಗಿ ನಾವು ಹೊಸ ಟೌನ್‌ಶಿಪ್‌ಗಳನ್ನು ರಚಿಸಬೇಕು. ನವೀನ ಆಲೋಚನೆಗಳನ್ನು ಹೊಂದಿರುವ ಜನರು ಈ ಪಟ್ಟಣಕ್ಕೆ ಬಂದು ಬೆಳೆಯಲು ಸಾಧ್ಯವಾಗುತ್ತದೆ. ಅವರ ಆಲೋಚನೆಗಳ ಅನುಷ್ಠಾನಕ್ಕಾಗಿ ಹೊಸ ಸಂಪರ್ಕಗಳನ್ನು ನಿರ್ಮಿಸುವ ಮಾರ್ಗಗಳನ್ನು ಹುಡುಕಬೇಕು” ಎಂದು ಹೇಳಿದ್ದಾರೆ.

ಕೇಂದ್ರ ಸಚಿವರ ಹೇಳಿಕೆಯು ಕನ್ನಡಿಗರು ಮತ್ತು ಸಚಿವ ಎಂಬಿ ಪಾಟೀಲ್ ಅವರನ್ನು ಕೆರಳಿಸಿದೆ. ಭಾರತಕ್ಕೆ ನಮ್ಮದೇ ಆದ ಸಿಲಿಕಾನ್‌ ವ್ಯಾಲಿ ಬೇಕು ಎಂದಿರುವ ಕೇಂದ್ರ ಸಚಿವರು ಬೆಂಗಳೂರನ್ನು “ನಮ್ಮ ಸ್ವಂತ” ನಗರವೆಂದು ಏಕೆ ಪರಿಗಣಿಸುವುದಿಲ್ಲ ಎಂದು ಪಾಟೀಲ್ ಪ್ರಶ್ನಿಸಿದ್ದಾರೆ. ‌

ಈ ಕುರಿತು ಎಕ್ಸ್ ಪೋಸ್ಟ್‌ ಮಾಡಿರುವ ಪಾಟೀಲ್, "ಬೆಂಗಳೂರು ಭಾರತದಲ್ಲೇ ಇದೆ. ಭಾರತ ನಮ್ಮ ದೇಶ" ಎಂದು ಕೇಂದ್ರ ಸಚಿವರಿಗೆ ಮನದಟ್ಟು ಮಾಡಿದ್ದಾರೆ. “ಬೆಂಗಳೂರನ್ನು ದಿನಬೆಳಗಾಗುವುದರೊಳಗೆ ಕಟ್ಟಿದ್ದಲ್ಲ. ನಮ್ಮ ರಾಜಧಾನಿಯನ್ನು ಕಟ್ಟಿ ಬೆಳೆಸಲು ದಶಕಗಳು, ಶತಮಾನಗಳೇ ಬೇಕಾಯಿತು” ಎಂದು ವಿವರಿಸಿದ್ದಾರೆ.

ಕೆಎಚ್‌ಐಆರ್ ಅಭಿವೃದ್ಧಿಗೆ ಕೈಜೋಡಿಸಿ

ಇದೇ ವೇಳೆ ಬೆಂಗಳೂರಿನ ಆವರಣದಲ್ಲಿರುವ ಕೆಎಚ್‌ಐಆರ್ (ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆ) ನಗರಕ್ಕೆ ಸಹಾಯ ಮಾಡುವಂತೆ ಸಚಿವರು ಕೇಂದ್ರ ಸಚಿವರನ್ನು ವಿನಂತಿಸಿದ್ದಾರೆ. "ನೀವು ಹೊಸ ಕಟ್ಟಡಗಳು, ರಸ್ತೆ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಬಹುದು. ಆದರೆ ಬೆಂಗಳೂರಿನಿಂಥಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ದಶಕಗಳೇ ಬೇಕಾಗುತ್ತದೆ. ಬೆಂಗಳೂರು ಭಾರತದ ಜ್ಞಾನ ಮತ್ತು ಪರಿಸರ ವ್ಯವಸ್ಥೆಯ ಕೇಂದ್ರವಾಗಿದೆ. ನಮ್ಮ ಭಾರತದ ಸ್ವಂತ ನಗರ 'ನಮ್ಮ ಬೆಂಗಳೂರು' ಅನ್ನು ಜಾಗತಿಕ ನಗರವಾಗಿ ಬೆಳೆಸಲು ಸಹಾಯ ಮಾಡಿ. ಕೆಐಆರ್ ಅನ್ನು ಬೃಹತ್ ಜಾಗತಿಕ ತಾಣವನ್ನಾಗಿ ಮಾಡಲು ಸಾಧ್ಯವಾದಷ್ಟು ಸಹಾಯ ಮಾಡಲು ನಿಮ್ಮಲ್ಲಿ ವಿನಂತಿಸುತ್ತೇನೆ" ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

mysore-dasara_Entry_Point