IAS officers:10 ಐಎಎಸ್ ಅಧಿಕಾರಿಗಳ ವರ್ಗಾವಣೆ; ಬದಲಾದ್ರು ದಕ್ಷಿಣ ಕನ್ನಡ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬಾಗಲಕೋಟೆ ಜಿಲ್ಲಾಧಿಕಾರಿ
ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹ ಬದಲಾಗಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 10 ಮಂದಿ ಐಎಎಸ್ ಅಧಿಕಾರಿಗಳನ್ನು (IAS Officers)ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹ ಬದಲಾಗಿದ್ದಾರೆ.
5 ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಗಳು
- ರವೀಂದ್ರ ಪಿ.ಎನ್- ಚಿಕ್ಕಬಳ್ಳಾಪುರ
2. ಡಾ. ಕುಮಾರ - ಮಂಡ್ಯ
3. ಮುಲ್ಲೈ ಮುಹಿಲನ್ – ದಕ್ಷಿಣ ಕನ್ನಡ
4. ಜಾನಕಿ ಕೆ.ಎಂ - ಬಾಗಲಕೋಟೆ
5. ಶ್ರೀನಿವಾಸ್ ಕೆ. - ತುಮಕೂರು
ಉಳಿದಂತೆ ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು
6. ಪಲ್ಲವಿ ಆಕುರಾತಿ - ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್
7. ಡಾ. ವೆಂಕಟೇಶ್ ಎಂ.ವಿ - ಆಯುಕ್ತರು, ಪಶುಸಂಗೋಪನಾ ಇಲಾಖೆ
8. ಯೋಗೇಶ್ ಎ.ಎಂ - ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ
9. ನವೀನ್ ಕುಮಾರ್ ರಾಜು- ಇಡಿ ವಸತಿ ಶಿಕ್ಷಣ ಸೊಸೈಟಿ
10. ಪ್ರಭು ಜಿ -ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ಹಿಂದಿನ ಜಿಲ್ಲಾಧಿಕಾರಿಗಳು
ಚಿಕ್ಕಬಳ್ಳಾಪುರ - ನಾಗರಾಜ ಎನ್ ಎಂ
ಮಂಡ್ಯ- ಡಾ ಹೆಚ್ ಎನ್ ಗೋಪಾಲಕೃಷ್ಣ
ದಕ್ಷಿಣ ಕನ್ನಡ - ರವಿಕುಮಾರ್ ಎಂ ಆರ್
ಬಾಗಲಕೋಟೆ- ಪಿ ಸುನಿಲ್ ಕುಮಾರ್
ತುಮಕೂರು - ಪಾಟೀಲ್ ಯಲಗೌಡ ಶಿವನಗೌಡ
ರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ನಂದಿನಿ ವರ್ಸಸ್ ಅಮುಲ್ (Nandini vs Amul) ವಿವಾದ ಭುಗಿಲೆದ್ದಿತ್ತು. ಕರ್ನಾಟಕಕ್ಕೆ ಗುಜರಾತ್ನ ಅಮುಲ್ ಡೈರಿ ಬ್ರ್ಯಾಂಡ್ನ ಉತ್ಪನ್ನಗಳು ಲಗ್ಗೆ ಇಡುತ್ತಿರುವುದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಕೇರಳದಲ್ಲಿ ನಂದಿನಿ ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಕರ್ನಾಟಕದ ನಂದಿನಿ ಮತ್ತು ಕೇರಳದ ಮಿಲ್ಮಾ ವಿವಾದ (Nandini vs Milma) ಮತ್ತೆ ಮುನ್ನೆಲೆಗೆ ಬಂದಿದೆ. ಏನಿದು ವಿಚಾರ ಅಂತೀರಾ? ಈ ಸುದ್ದಿ ಓದಿ..
ವಿಭಾಗ