ಕನ್ನಡ ಸುದ್ದಿ  /  ಕರ್ನಾಟಕ  /  Karnataka Results: ಕರ್ನಾಟಕದಲ್ಲಿ ಸತತ 5ನೇ ಬಾರಿ ಬಿಜೆಪಿಗೆ ಮುನ್ನಡೆ, 25 ವರ್ಷ ಬಳಿಕವೂ ಕಾಂಗ್ರೆಸ್‌ ಎರಡಂಕಿ ಸಾಧನೆ ಆಗಲಿಲ್ಲ

Karnataka Results: ಕರ್ನಾಟಕದಲ್ಲಿ ಸತತ 5ನೇ ಬಾರಿ ಬಿಜೆಪಿಗೆ ಮುನ್ನಡೆ, 25 ವರ್ಷ ಬಳಿಕವೂ ಕಾಂಗ್ರೆಸ್‌ ಎರಡಂಕಿ ಸಾಧನೆ ಆಗಲಿಲ್ಲ

Karnataka Polics ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಭಿನ್ನ ಫಲಿತಾಂಶ ನೀಡುತ್ತಾ ಬಂದಿರುವ ಮತದಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು( Karnataka Bjp) ಕೈ ಬಿಟ್ಟಿಲ್ಲ. ಈ ಬಾರಿಯೂ ಬಿಜೆಪಿ ಹೆಚ್ಚು ಸ್ಥಾನ ಪಡೆದುಕೊಂಡಿದೆ.

ಕರ್ನಾಟಕದಲ್ಲಿ ಬಿಜೆಪಿಗೆ ಮತ್ತೆ ಅಗ್ರಸ್ಥಾನ
ಕರ್ನಾಟಕದಲ್ಲಿ ಬಿಜೆಪಿಗೆ ಮತ್ತೆ ಅಗ್ರಸ್ಥಾನ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದರೂ, ಗ್ಯಾರಂಟಿ ಯೋಜನೆಗಳನ್ನು ನೀಡಿದ್ದರೂ ಜನ ಬಿಜೆಪಿಗೆ ಹೆಚ್ಚಿನ ಸ್ಥಾನ ಕೊಟ್ಟಿದಾರೆ. ಸತತ ಐದನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಹಿಂದಿನ ಚುನಾವಣೆಗೆ ಹೋಲಿಸಿದರೆ ಒಂಬತ್ತು ಸ್ಥಾನ ಕುಸಿತಕಂಡಿದೆ. ಕಾಂಗ್ರೆಸ್‌ 25 ವರ್ಷಗಳಿಂದಲೂ ಎರಡಂಕಿಯನ್ನು ಕರ್ನಾಟಕದಲ್ಲಿ ದಾಟಿಯೇ ಇರಲಿಲ್ಲ. ಕೊನೆಗೂ ಕಾಂಗ್ರೆಸ್‌ ಸಾಧನೆ ಸುಧಾರಿಸಿದರೂ ಎರಡಂಟಿ ದಾಟಿಲ್ಲ. ಮತ್ತೊಂದು ಕಡೆ ಜೆಡಿಎಸ್‌ ಪ್ರತ್ಯೇಕವಾಗಿ ಕಣಕ್ಕಿಳಿದಿರೂ, ಮೈತ್ರಿ ಸಾಧಿಸಿದರೂ ಎರಡು ಸ್ಥಾನ ಪಡೆಯುವುದು ನಿಕ್ಕಿ ಎನ್ನುವುದನ್ನು ಈ ಚುನಾವಣೆಯೂ ದೃಢಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ಹಿಡಿಯುತ್ತಾ ಬಂದಿದ್ಧಾನೆ. ಈ ಕಾರಣದಿಂದಲೇ ಸತತ ಐದನೇ ಚುನಾವಣೆಯಲ್ಲೂ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುತ್ತಲೇ ಇದೆ. ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಕಾಂಗ್ರೆಸ್‌ ಮೈತ್ರಿ ಸರ್ಕಾರ, ಜನತಾದಳ ಬಿಜೆಪಿ ಮೈತ್ರಿ ಸರ್ಕಾರ, ಬಿಜೆಪಿ ಸರ್ಕಾರ, ಕಾಂಗ್ರೆಸ್‌ ಸರ್ಕಾರವಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗುತ್ತಿದೆ.

1999ರ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ ಎರಡಂಕಿ ದಾಟಿದ್ದನ್ನು ಬಿಟ್ಟರೆ ಆನಂತರ ಬಿಜೆಪಿಯೇ ತನ್ನ ಸ್ಥಾನ ಹೆಚ್ಚಿಸಿಕೊಳ್ಳುತ್ತಾ ಹೋಗಿದೆ. ಕಾಂಗ್ರೆಸ್‌ 6 ರಿಂದ 9 ಸ್ಥಾನ ಪಡೆದುಕೊಳ್ಳುತ್ತಲೇ ಬರುತ್ತಿದೆ. ಕಳೆದ ಬಾರಿ 1 ಸ್ಥಾನಕ್ಕೆ ಕುಸಿತ ಕಂಡಿತ್ತು. ಈ ಬಾರಿ ಮತ್ತೆ ಚೇತರಿಸಿಕೊಂಡಿರುವುದು ಮಾತ್ರ ಸತ್ಯವೇ.

1999ರ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ ಎರಡಂಟಿ ದಾಟಿತ್ತು. ಆಗ ಕಾಂಗ್ರೆಸ್‌ 18 ಸ್ಥಾನಗಳಲ್ಲಿ ಗೆದ್ದಿತ್ತು. ಬಹುತೇಕ ಎಲ್ಲಾ ಭಾಗಗಳಲ್ಲೂ ಕಾಂಗ್ರೆಸ್‌ನವರೇ ಹೆಚ್ಚು ಗೆದ್ದಿದ್ದರು. ಆ ಚುನಾವಣೆಯಲ್ಲಿ ಬಿಜೆಪಿಗೆ ಬಂದಿದ್ದು 7 ಸ್ಥಾನಗಳು. ರಾಮಕೃಷ್ಣ ಹೆಗಡೆ- ಜೆಎಚ್‌ಪಟೇಲ್‌ ಜೋಡಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಮೂರು ಸ್ಥಾನಗಳು ಜೆಡಿಯುಗೆ ಲಭಿಸಿದ್ದವು. ಜೆಡಿಎಸ್‌ಗೆ ಆಗಷ್ಟೇ ಹುಟ್ಟಿದ್ದ ಪಕ್ಷವಾಗಿದ್ದರಿಂದ ಗೆಲ್ಲಲು ಆಗಿರಲಿಲ್ಲ.

ಆದರೆ ಅಲ್ಲಿಂದ ಮುಂದೆ ಸತತ ಚುನಾವಣೆಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ.

2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಂದಿದ್ದು ಬರೋಬ್ಬರಿ 18 ಸ್ಥಾನಗಳು. ಆಗ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದು ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜತೆಗೂಡಿ ಕರ್ನಾಟಕದಲ್ಲಿ ಸರ್ಕಾರ ರಚಿಸಿದರೆ, ಎನ್‌ಡಿಎ ಅಧಿಕಾರಕ್ಕೆ ಬಂದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 8, ಜೆಡಿಎಸ್‌ಗೆ 2 ಸ್ಥಾನ ಬಂದಿದ್ದವು.

ಮುಂದೆ 2009ರ ಚುನಾವಣೆ ಹೊತ್ತಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆಗ ಯಡಿಯೂರಪ್ಪ ಸಿಎಂ ಆಗಿದ್ದರು. ಆ ಚುನಾವಣೆಯಲ್ಲಿ ಬಿಜೆಪಿಗೆ 19, ಕಾಂಗ್ರೆಸ್‌ಗೆ 6 , ಜೆಡಿಎಸ್‌ಗೆ‌ 3 ಸ್ಥಾನ ಲಭಿಸಿದ್ದವು.

2014ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ 17 ಪರ್ವ. ಆಗಲೂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರು. ಕಾಂಗ್ರೆಸ್‌ ಸರ್ಕಾರವೇ ಇದ್ದರೂ ಕಾಂಗ್ರೆಸ್‌ಗೆ 9 ಸ್ಥಾನ ಬಂದಿದ್ದವು. ಆಗ ಜೆಡಿಎಸ್‌ಗೆ 2 ಸ್ಥಾನ ಸಿಕ್ಕಿದ್ದವು.

ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವಿತ್ತು. ಆಗ ಹೀನಾಯವಾಗಿ ಮೈತ್ರಿ ಸೋಲು ಅನುಭವಿಸಿತ್ತು. ಬಿಜೆಪಿ 25 ಒಂದು ಸ್ಥಾನ ಪಡೆದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಲಾ ಒಂದು ಸ್ಥಾನ ಹಂಚಿಕೊಂಡಿದ್ದವು. ಒಂದು ಸ್ಥಾನ ಪಕ್ಷೇತರರು ಗೆದ್ದಿದ್ದರು.

ಈ ಬಾರಿಯ ಮತಗಟ್ಟೆ ಸಮೀಕ್ಷೆಗಳು 2009 ಇಲ್ಲವೇ 2014ರ ಲೋಕಸಭೆ ಚುನಾವಣೆ ಚುನಾವಣೆ ಫಲಿತಾಂಶವೇ ಮರುಕಳಿಸಿದೆ. ಬಿಜೆಪಿ ಸ್ಥಾನಗಳು ಕುಸಿತವಾದರೂ ಮುಂಚೂಣಿಯಲ್ಲಿಇರಬಹುದು. ಕಾಂಗ್ರೆಸ್‌ ಸ್ಥಾನಗಳು ಹೆಚ್ಚಬಹುದು ಎನ್ನುವ ನಿರೀಕ್ಷೆಗಳು ನಿಜವಾಗಿವೆ.

ಟಿ20 ವರ್ಲ್ಡ್‌ಕಪ್ 2024